For Quick Alerts
ALLOW NOTIFICATIONS  
For Daily Alerts

ಏನಿದು ಅಪರೇಷನ್ ಕ್ಲೀನ್ ಮನಿ? ನಿಮಗೆ ಗೊತ್ತಿರಲೇಬೇಕಾದ 7 ಸಂಗತಿಗಳೇನು?

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿದೆ. ಆ ಮೂಲಕ ಹೊಸ ನಿಯಮ, ಕಾನೂನುಗಳನ್ನು ಜಾರಿ ಮಾಡುತ್ತಿದೆ. ಅದರಲ್ಲಿ ಅಪರೇಷನ್ ಕ್ಲೀನ್ ಮನಿ ಯೋಜನೆ ಕೂಡ ಪ್ರಮುಖವಾದದ್ದು.

By Siddu
|

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದಿದೆ. ಆ ಮೂಲಕ ಹೊಸ ನಿಯಮ, ಕಾನೂನುಗಳನ್ನು ಜಾರಿ ಮಾಡುತ್ತಿದೆ. ಅದರಲ್ಲಿ ಅಪರೇಷನ್ ಕ್ಲೀನ್ ಮನಿ ಯೋಜನೆ ಕೂಡ ಪ್ರಮುಖವಾದದ್ದು.

ಅಪರೇಷನ್ ಕ್ಲೀನ್ ಮನಿ ಅಭಿಯಾನ ಉದ್ದೇಶವೇನು? ಯಾರ ವಿರುದ್ಧ? ವಂಚಕರ, ಕಾಳಧನಿಕರ ವಿರುದ್ಧ ಸರ್ಕಾರ ಕೈಗೊಳ್ಳಲಿರುವ ಕ್ರಮಗಳೇನು? ಜನಸಾಮಾನ್ಯರಿಗೆ ಗೊತ್ತಿರಬೇಕಾದ ಸಂಗತಿಗಳೇನು? ಇತ್ಯಾದಿಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಯಾಕೆ ಅಪರೇಷನ್ ಕ್ಲೀನ್ ಮನಿ?

ಯಾಕೆ ಅಪರೇಷನ್ ಕ್ಲೀನ್ ಮನಿ?

ಕಪ್ಪುಹಣವನ್ನು ಹೊರತರಲು ಮತ್ತು ತೆರಿಗೆ ವಂಚಿಸಿದ ವಿರುದ್ಧ ಹಣದ ಜಾಗೃತಿ ಮೂಡಿಸಲು ಆದಾಯ ತೆರಿಗೆ ಇಲಾಖೆ ಅಪರೇಷನ್ ಕ್ಲೀನ್ ಮನಿ ಅಭಿಯಾನ ಆರಂಭಿಸಿದೆ. ಕಪ್ಪುಹಣ, ಭ್ರಷ್ಟರ ವಿರುದ್ಧ ಹೋರಾಟದ ಉದ್ದೇಶಕ್ಕಾಗಿ ಈ ವೆಬ್ಸೈಟ್ ಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಸರ್ಕಾರ ಯಾರ ಮೇಲೆಲ್ಲಾ ದಾಳಿ ನಡೆಸಿದೆಯೋ ಆ ಎಲ್ಲಾ ವಿವರಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಿದೆ.

ನಾಲ್ಕು ರೇಟಿಂಗ್ ನಲ್ಲಿ ವರ್ಗೀಕರಣ

ನಾಲ್ಕು ರೇಟಿಂಗ್ ನಲ್ಲಿ ವರ್ಗೀಕರಣ

ಅತಿ ಅಪಾಯಕಾರಿ, ಮಧ್ಯಮ ಅಪಾಯಕಾರಿ, ಕಡಿಮೆ ಅಪಾಯಕಾರಿ, ತುಂಬಾ ಕಡಿಮೆ ಅಪಾಯಕಾರಿ ಹೀಗೆ ಎಂದು ನಾಲ್ಕು ರೇಟಿಂಗ್ ಗಳಲ್ಲಿ ತೆರಿಗೆ ವಂಚಕರನ್ನು ವರ್ಗೀಕರಿಸಲಾಗುತ್ತದೆ ನೀಡಲಾಗುತ್ತದೆ. ಈ ಮಾಹಿತಿಯನ್ನು ಅಪರೇಷನ್ ಕ್ಲೀನ್ ಮನಿ ವೆಬ್ಸೈಟ್ ನಲ್ಲಿ ಪ್ರಕಟಿಸಿ, ಬೇರೆ ಬೇರೆ ಕಾನೂನು ಉಲ್ಲಂಘನೆಗಳಿಗೆ ಶಿಕ್ಷೆಯ ಪ್ರಮಾಣಗಳನ್ನೂಸಹ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಗಂಭೀರವಲ್ಲದ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದಿಲ್ಲ.

ಪ್ರಾಮಾಣಿಕರಿಗೆ ನೆರವು

ಪ್ರಾಮಾಣಿಕರಿಗೆ ನೆರವು

ಸ್ವಚ್ಛ ಹಣ ಅಭಿಯಾನ ವೆಬ್ಸೈಟ್ ದೇಶದ ಪ್ರಾಮಾಣಿಕ ತೆರಿಗೆದಾರರಿಗೆ ನೆರವಾಗಲಿದೆ. ಇನ್ನುಮುಂದೆ ಕಪ್ಪುಹಣ, ವಂಚನೆಯಂತ ವ್ಯವಹಾರಗಳು ಸುರಕ್ಷಿತವಲ್ಲ ಎಂದು ವೆಬ್ಸೈಟ್ ಉದ್ಘಾಟನಾ ಸಂದರ್ಭದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಹೊಸ ವೆಬ್ಸೈಟ್ ನಲ್ಲಿ ಏನಿದೆ?

ಹೊಸ ವೆಬ್ಸೈಟ್ ನಲ್ಲಿ ಏನಿದೆ?

ವಿವಿಧ ಹಂತಗಳ ಮಾಹಿತಿ, ಪದೇ ಪದೇ ಕೇಳಲಾಗುವ ಪ್ರಶ್ನೆಗಳು(FAQs), ಬಳಕೆದಾರರ ಮಾಹಿತಿ, ತತ್ ಕ್ಷಣದ ರೆಫರೆನ್ಸ್ ಮಾಹಿತಿ. ಪರಿಶೀಲನಾ ಸಂಬಂಧಿತ ತರಬೇತಿ ಪರಿಕರಗಳು ಹೀಗೆ ಎಲ್ಲವುದರ ಸಮಗ್ರ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಒದಗಿಸುತ್ತದೆ.

ನಾಗರಿಕರ ಪಾತ್ರ

ನಾಗರಿಕರ ಪಾತ್ರ

ಪ್ರತಿಯೊಬ್ಬ ಭಾರತೀಯ ನಾಗರಿಕ ತೆರಿಗೆಗಳನ್ನು ಪಾವತಿಸುವುದು ಹೆಮ್ಮೆ ಎಂದು ಪರಿಭಾವಿಸುವ ಸಮಾಜದ ನಿರ್ಮಾಣ ಮಾಡುವುದು. ಪ್ರತಿಜ್ಞೆ, ಸಹ ನಾಗರಿಕರನ್ನು ಆಕರ್ಷಿಸುವುದು, ಶಿಕ್ಷಣದ ಅರಿವು ಮೂಡಿಸುವುದು, ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಫೀಡ್ ಬ್ಯಾಕ್ ಒದಗಿಸುವುದುರ ಮೂಲಕ ಅಪರೇಷನ್ ಕ್ಲೀನ್ ಮನಿ ಅಭಿಯಾನವನ್ನು ಬೆಂಬಲಿಸಬೇಕು.

ಪಾರದರ್ಶಕ ತೆರಿಗೆ

ಪಾರದರ್ಶಕ ತೆರಿಗೆ

ಪಾರದರ್ಶಕ ವರದಿಗಳನ್ನು ಹಂಚಿಕೊಳ್ಳುವುದರ ಮೂಲಕ(ಪರಿಶುದ್ಧಗೊಳಿಸಿದ ಪ್ರಕರಣಗಳು ಮತ್ತು ಪರಿಶೀಲನೆ ಸಮಸ್ಯೆಗಳ ವಿವರಣೆಯನ್ನು ಒಳಗೊಂಡಂತೆ)ಮತ್ತು ವಿಷಯಾಧಾರಿತ ವಿಶ್ಲೇಷಣೆ ವರದಿಗಳನ್ನು(ಉದಾ. ನಗದು ಠೇವಣಿ ಡೇಟಾದ ತೆರಿಗೆದಾರರ ವಿಭಾಗ ವಿಶ್ಲೇಷಣೆ)ವರದಿಗಳನ್ನು ಹಂಚಿಕೊಳ್ಳುವ ಮೂಲಕ ಪಾರದರ್ಶಕ ತೆರಿಗೆ ಆಡಳಿತ ಸಕ್ರಿಯಗೊಳಿಸುವುದು.

ವಾಸ್ತವ ಪತ್ತೆಹಚ್ಚುವುದು

ವಾಸ್ತವ ಪತ್ತೆಹಚ್ಚುವುದು

ದೊಡ್ಡ ಪ್ರಮಾಣದ ನಗದು ಠೇವಣಿ ಡೇಟಾವನ್ನು ವಿಶ್ಲೇಷಿಸುವಲ್ಲಿ ಇಲಾಖೆ ಸಾಮರ್ಥ್ಯವನ್ನು ಹೆಚ್ಚಿಸಲು 'ಎರಡು ವಿಶೇಷ ಡೇಟಾ ವಿಶ್ಲೇಷಣಾ ಏಜೆನ್ಸಿ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣಾ ಸಂಸ್ಥೆ'ಗಳನ್ನು ಆದಾಯ ತೆರಿಗೆ ಇಲಾಖೆ ನಿಯೊಜಿಸಿದೆ. ಈ ಮೂಲಕ ತೆರಿಗೆದಾರರ ಮತ್ತು ವರದಿ ಮಾಡುವ ಘಟಕಗಳ ವಾಸ್ತವ ಸ್ಥಿತಿಗಳನ್ನು ಪತ್ತೆ ಹಚ್ಚಲಾಗುವುದು.

ಇ-ಪರಿಶೀಲನೆ

ಇ-ಪರಿಶೀಲನೆ

ತಮ್ಮ ಹಿಂದಿನ ಪ್ರತಿಕ್ರಿಯೆಗಳಲ್ಲಿ ಖಾತೆಯನ್ನು/ ಮೊತ್ತವನ್ನು ಭಾಗಶಃ ಘೋಷಣೆ ಮಾಡಿರುವ 1.71 ಲಕ್ಷ ತೆರಿಗೆದಾರರಿಗೆ ಸಂಬಂಧಿಸಿದ 3.71 ಲಕ್ಷ ಹೊಸ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ. ಹಿಂದಿನ 18 ಲಕ್ಷ ಪ್ರಕರಣಗಳ ಜೊತೆಗೆ ಇ-ಪರಿಶೀಲನೆ ಪ್ರಕ್ರಿಯೆಗಾಗಿ 5.68 ಲಕ್ಷ ಹೊಸ ಪ್ರಕರಣಗಳನ್ನು ಗುರುತಿಸಲಾಗಿದೆ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?

English summary

What is Operation Clean Money Portal: Here are 7 things to know

To bring illicit wealth in the books, Finance Minister launched the new portal 'Operation Clean Money' on the backs of the Operation Clean Money drive initiated by the Income Tax Department.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X