Englishहिन्दी മലയാളം தமிழ் తెలుగు

7ನೇ ವೇತನ ಆಯೋಗ: ಕೇಂದ್ರ ಸಂಪುಟ ಅಸ್ತು, ನೌಕರರಿಗೆ ಬಂಪರ್..!

Written By: Siddu
Subscribe to GoodReturns Kannada

ಕೇಂದ್ರ ಸರ್ಕಾರಿ ನೌಕರರ ಭಾರೀ ನಿರೀಕ್ಷೆಯ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

ಬರುವ ಜುಲೈ 1ರಿಂದ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಲಿದ್ದು, ಕೇಂದ್ರ ನೌಕರರು ತಮ್ಮ ನಗರಗಳ ಆಧಾರದ ಮೇಲೆ ಶೇ. 45ರ ವರೆಗೆ ಹೆಚ್ಚಿನ ವೇತನ ಪಡೆಯಲಿದ್ದಾರೆ. 34 ಲಕ್ಷ ಕೇಂದ್ರ ನೌಕರರು, ಸೇನಾ ವಲಯದ 14 ಲಕ್ಷ ನೌಕರರು ಪ್ರಯೋಜನ ಪಡೆಯಲಿದ್ದು, ವಾರ್ಷಿಕವಾಗಿ ಕೇಂದ್ರದ ಬೊಕ್ಕಸಕ್ಕೆ ರೂ. 30,748 ಕೋಟಿ ಹೊರೆ ಬೀಳಲಿದೆ.

ಅರುಣ್‌ ಜೇಟ್ಲಿ ಏನಂತಾರೆ?

7ನೇ ವೇತನ ಆಯೋಗದ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ವೇತನದ ವಿವಿಧ ಭತ್ಯೆಗಳು ಕೂಡ ಹೆಚ್ಚಾಗಲಿವೆ. ವೇತನ ಆಯೋಗದ ಶಿಫಾರಸುಗಳಲ್ಲಿ ಮನೆ ಬಾಡಿಗೆ ಭತ್ಯೆ(HRA) ಅತಿ ಹೆಚ್ಚು ಚರ್ಚೆಯಾಗಿದೆ. ಪಿಂಚಣಿದಾರರಿಗೆ ವೈದ್ಯಕೀಯ ಭತ್ಯೆ ಹಾಗೂ ಉನ್ನತ ಅಧಿಕಾರಿಗಳ ಭತ್ಯೆ ಕೂಡ ಹೆಚ್ಚಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಸೈನಿಕರ ಭತ್ಯೆ

ಸೈನಿಕರ ಸಿಯಾಚಿನ್ ಭತ್ಯೆ ರೂ. 14-30 ಸಾವಿರಕ್ಕೆ ಏರಿಕೆಯಾಗಲಿದೆ. ಸೇನಾಧಿಕಾರಿಗಳ ಭತ್ಯೆ ರೂ. 21 ಸಾವಿರದಿಂದ ರೂ. 42,500ಕ್ಕೆ ಹೆಚ್ಚಳ ಆಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಎಚ್ಆರ್ ಎ(HRA) ಭತ್ಯೆ

ಕೇಂದ್ರ ಸರ್ಕಾರಿ ನೌಕರರು ವಾಸವಾಗಿರುವ ನಗರಗಳನ್ನು X, Y, Z ಕೆಟಗರಿಗಳಲ್ಲಿ ವಿಂಗಡಿಸಲಾಗಿದೆ. ಪ್ರಸ್ತುತ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ) ಭತ್ಯೆಯನ್ನು X ಕೆಟಗರಿಗೆ ಶೇ. 30ರಷ್ಟು( 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ), Y ಕೆಟಗರಿಗೆ ಶೇ. 20ರಷ್ಟು (5-50 ಲಕ್ಷ), Z ಕೆಟಗರಿಗೆ ಶೇ. 10ರಷ್ಟು (5 ಲಕ್ಷಕ್ಕಿಂತ ಕಡಿಮೆ) ಪಾವತಿಸಲಾಗುತ್ತದೆ. X,Y,Z ಆಯಾ ವಿಭಾಗಗಳಿಗೆ ಅನುಗುಣವಾಗಿ ಶೇ. 24, ಶೇ. 16, ಶೇ. 8ರಷ್ಟು ಕಡಿತ ಮಾಡಲಾಗಿದೆ.

ಹಿರಿಯ ನಾಗರಿಕರ ಭತ್ಯೆ

ಕೇಂದ್ರ ಸರ್ಕಾರದ ಮಾಜಿ ನೌಕರರಿಗೆ ಇದು ಖುಷಿಯ ವಿಚಾರವಾಗಿದ್ದು, ಪಿಂಚಣಿಯಲ್ಲಿ ನೀಡಲಾಗುತ್ತಿದ್ದ ವೈದ್ಯಕೀಯ ಭತ್ಯೆಯನ್ನು ಮಾಸಿಕ ರೂ. 500-1,000ಕ್ಕೆ ಹೆಚ್ಚಿಸಲಾಗಿದೆ. ರೋಗಿಗಳ ಶುಶ್ರೂಷಾ ಭತ್ಯೆಯನ್ನು ಮಾಸಿಕವಾಗಿ ರೂ. 2,100-5,300ವರೆಗೆ ಏರಿಸಲಾಗಿದೆ. ಅಂದರೆ ಹಿರಿಯ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆ ಭತ್ಯೆ ರೂಪದಲ್ಲಿ ರೂ. 6,300 ಹೆಚ್ಚುವರಿ ಮೊತ್ತ ಸಿಗಲಿದೆ.

English summary

7th Pay Commission: Cabinet okays hike in allowances for central govt staff

The Union cabinet approved on Wednesday the new allowance structure for 34 lakh central government and 14 lakh defence staffers, giving their pay cheques a significant bump from next month.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC