For Quick Alerts
ALLOW NOTIFICATIONS  
For Daily Alerts

ಬಾಡಿಗೆ ಕರಾರುಪತ್ರ(Rental Agreement) ಬಗ್ಗೆ ನಿಮಗೆಷ್ಟು ಗೊತ್ತು?

ಉದ್ಯೋಗ ಅರಸುತ್ತಾ ನಗರಗಳ ಕಡೆ ಹೊರಟಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಬಾಡಿಗೆ ಮನೆ ಹುಡುಕಿಕೊಳ್ಳುವುದೇ ದೊಡ್ಡ ಸವಾಲು. ಬಾಡಿಗೆ ಮನೆ ಪಡೆದುಕೊಳ್ಳುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

By Siddu
|

ಉದ್ಯೋಗ ಅರಸುತ್ತಾ ನಗರಗಳ ಕಡೆ ಹೊರಟಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಬಾಡಿಗೆ ಮನೆ ಹುಡುಕಿಕೊಳ್ಳುವುದೇ ದೊಡ್ಡ ಸವಾಲು. ಬಾಡಿಗೆ ಮನೆ ಪಡೆದುಕೊಳ್ಳುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲದಕ್ಕಿಂತ ಬಾಡಿಗೆ ಕರಾರುಪತ್ರ(Rental Agreement) ಮುಖ್ಯವಾಗುತ್ತದೆ. ನಿಮ್ಮ ಬಳಿ ಒಂದು ಮನೆಯ ಮಾಲೀಕನ ಬಳಿ ಒಂದು ರೆಂಟಲ್ ಅಗ್ರಿಮೆಂಟ್ ಪ್ರತಿಗಳು ಇರುತ್ತವೆ. ಬಾಡಿಗೆ ಪಡೆಯುವ ಮುನ್ನ ನಿಮ್ಮ ಹಸ್ತಾಕ್ಷರ ಹಾಕಿ ನೀಡುವುದು ಕಡ್ಡಾಯವಾಗಿರುತ್ತದೆ.

ಹಾಗಾದರೆ ರೆಂಟಲ್ ಅಗ್ರಿಮೆಂಟ್ ನಲ್ಲಿ ಗಮನ ಹರಿಸಬೇಕಾದ ಸಂಗತಿಗಳು ಯಾವವು, ಜಾಗ್ರತೆ ವಹಿಸಬೇಕಾದ ಸಂಗತಿಗಳೇನು ನೋಡೋಣ...

1. ನೋಟಿಸ್ ಪಿರಿಯಡ್

1. ನೋಟಿಸ್ ಪಿರಿಯಡ್

ಬಾಡಿಗೆ ಮನೆಯನ್ನು ತೆರವು ಮಾಡುವ ಸಂಬಂಧ ನೋಟಿಸ್ ಪಿರಿಯಡ್ ನ್ನು ಹೇಳಲಾಗಿದೆಯೇ ಎಂಬುದನ್ನು ಗಮನವಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಇದು ಮನೆ ಮಾಲೀಕ ನಿಗೂ ಅಷ್ಟೆ ಮುಖ್ಯವಾಗಿರುತ್ತದೆ. ನೀವು ಒಂದು ವೇಳೆ ನೋಟಿಸ್ ಅವಧಿ ಮುಗಿಸದೇ ಮನೆ ಖಾಲಿ ಮಾಡಿದರೆ ಅಡ್ವಾನ್ಸ್ ಹಣದಲ್ಲಿ ಕಡಿತ ಮಾಡಿಕೊಳ್ಳುವ ಆಯ್ಕೆ ಮಾಲೀಕರಿಗೆ ಇರುತ್ತದೆ.

2. ಬಾಡಿಗೆ ಏರಿಸುವುದು

2. ಬಾಡಿಗೆ ಏರಿಸುವುದು

ಮನೆ ಬಾಡಿಗೆ ಏರಿಯಾ, ಸೌಲಭ್ಯ, ಆದ್ಯತೆ ಮುಂತಾದವುಗಳ ಆಧಾರದ ಮೇಲೆ ಇದು ಬದಲಾಗುತ್ತಿರುತ್ತದೆ. ಸಾಮಾನ್ಯವಾಗಿ 11 ತಿಂಗಳ ಅವಧಿಗೆ ಒಂದು ಮೊತ್ತದ ಬಾಡಿಗೆ ನಿಗದಿ ಮಾಡಲಾಗಿರುತ್ತದೆ. ಕರಾರು ಪತ್ರ ಪಡೆಯುವಾಗ ಎಷ್ಟು ತಿಂಗಳ ಅವಧಿಗೆ ಬಾಡಿಗೆ ನಿರ್ಧರಿಸಲಾಗಿದೆ ಎಂಬುದನ್ನು ಗಮನವಿಟ್ಟು ನೋಡಿಕೊಳ್ಳಬೇಕಾಗುತ್ತದೆ.

3. ಡಿಪಾಸಿಟ್ ಮೊತ್ತ
 

3. ಡಿಪಾಸಿಟ್ ಮೊತ್ತ

ಸಾಮಾನ್ಯವಾಗಿ 11 ತಿಂಗಳ ಬಾಡಿಗೆಯ ಒಟ್ಟು ಮೊತ್ತವನ್ನು ಡಿಪಾಸಿಟ್ ಆಗಿ ಪಡೆದುಕೊಳ್ಳಲಾಗುತ್ತದೆ. ಇದು ಸಹ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ನೆನಪಿಡಿ, ನೀವು ನೀಡಿದ ಮುಂಗಡ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಅದಕ್ಕೆ ಮಾಲೀಕ ಬಡ್ಡಿ ಪಡೆದುಕೊಳ್ಳುತ್ತಾನೆ. ಆದಷ್ಟೂ ಕಡಿಮೆ ಡಿಪಾಸಿಟ್ ನೀಡುವುದು ಒಳಿತು.

4. ಡಿಪಾಸಿಟ್ ಹಿಂದಕ್ಕೆ ನೀಡುವುದು

4. ಡಿಪಾಸಿಟ್ ಹಿಂದಕ್ಕೆ ನೀಡುವುದು

ಸಾಮಾನ್ಯವಾಗಿ ಮಾಲೀಕರು ಮನೆ ಖಾಲಿ ಮಾಡಿದ ನಂತರ ಮುಂಗಡ ಹಣವನ್ನು ಹಿಂದಕ್ಕೆ ನೀಡುತ್ತಾರೆ. ಮನೆ ಬಣ್ಣ, ಡ್ಯಾಮೇಜ್, ವಿದ್ಯುತ್ ಬಾಕಿ ಸೇರಿದಂತೆ ಹಲವಾರು ಕಾರಣ ನೀಡಿ ಹಣದಲ್ಲಿ ಕಡಿತ ಮಾಡಬಹುದು.

5. ಪೀಠೋಪಕರಣಗಳು ಮತ್ತು ಉಳಿದ ವಸ್ತುಗಳು

5. ಪೀಠೋಪಕರಣಗಳು ಮತ್ತು ಉಳಿದ ವಸ್ತುಗಳು

ಬಾಡಿಗೆ ನಿಡುವ ವೇಳೆ ಮನೆಯಲ್ಲಿನ ಪೀಠೋಪಕರಣಗಳು ಮತ್ತು ಉಳಿದ ವಸ್ತುಗಳನ್ನು ಸಹ ಅಗ್ರಿಮೆಂಟ್ ನಲ್ಲಿ ಉಲ್ಲೇಖ ಮಾಡಲಾಗಿರುತ್ತದೆ. ಕರಾರು ಉಲ್ಲೇಖ ಮಾಡಿರುವಂತೆ ಎಲ್ಲ ಅಂಶ/ವಸ್ತುಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ. ನೀವು ಮನೆ ಒಳಗೆ ಪ್ರವೇಶ ಮಾಡುವಾಗ ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ.

ಕೊನೆ ಮಾತು

ಕೊನೆ ಮಾತು

2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

English summary

Important Things To Look For In A Rental Agreement In India?

Many a times we fail to take a careful look at the rental agreement and then encounter long standing disputes, arguments and even legal action. It is therefore extremely important before signing any rental agreement to have a careful look at the same.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X