For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸುರಕ್ಷಿತ ಇನ್‌ವೆಸ್ಟ್‌ಮೆಂಟ್‌ಗಾಗಿ 14 ಆಯ್ಕೆಗಳು

ನಾವು ಭಾರತದಲ್ಲಿರುವ ಸುರಕ್ಷಿತ ಹೂಡಿಕೆಗಳ ಪಟ್ಟಿಯನ್ನು ಈ ಕೆಳಗೆ ನೀಡಿದ್ದೇವೆ. ನಿಮಗೆ ಇಷ್ಟವಾದ, ದೀರ್ಘಾವಧಿಯ ದೃಷ್ಟಿಕೋನವನ್ನು ಇಟ್ಟುಕೊಂಡು ಯಾವುದಾದರೊಂದು ಹೆಚ್ಚಿನ ಬಡ್ಡಿದರವನ್ನು ನೀಡುವ ಸುರಕ್ಷಿತ ಹೂಡಿಕೆಯನ್ನು ಆಯ್ದು ಕೊಳ್ಳಬಹುದು.

By Siddu
|

ಸುರಕ್ಷಿತ ಹೂಡಿಕೆ ಎಂಬುದು ಒಂದು ಅಪಾಯದ ಅಂಶವಾಗಿದೆ. ಸುರಕ್ಷಿತ ಹೂಡಿಕೆಯು ನಿವೃತ್ತಿ ಹೊಂದಿದವರಿಗೆ ಮತ್ತು ಯಾರು ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸುವುದಿಲ್ಲವೊ ಅವರಿಗೆ ಉತ್ತಮವಾದುದ್ದಾಗಿದೆ. ವೈಯಕ್ತಿಕವಾಗಿ ರಿಸ್ಕ್ ತೆಗೆದುಕೊಳ್ಳಲು ಬಯಸದ ವ್ಯಕ್ತಿಗಳು ಕೆಲವು ಉತ್ತಮವಾದ ಸುರಕ್ಷಿತ ಹೂಡಿಕೆಗಳನ್ನು ಆರಿಸಿಕೊಳ್ಳುತ್ತಾರೆ.

ಹಲವರು ಹೂಡಿಕೆಗಳು ಸುರಕ್ಷಿತವಾಗಿದ್ದರೆ ಬರಬಹುದಾದ ಆದಾಯವು ಕಡಿಮೆ ಇರುತ್ತದೆ ಎಂದು ನಂಬುತ್ತಾರೆ. ಅನೇಕ ಹೂಡಿಕೆಗಳು ಸುರಕ್ಷಿತವಾಗಿದ್ದು, ಅದು ನಿಮಗೆ ಉತ್ತಮವಾದ ಆದಾಯವನ್ನು ನೀಡುತ್ತವೆ. ಈ ಆದಾಯವು ತೆರಿಗೆ ಸಹಿತ ಅಥವಾ ತೆರಿಗೆ ರಹಿತವಾಗಿರಬಹುದು. ಪ್ರತಿಯೊಬ್ಬರು ಸಹ ಪೂರ್ವಯೋಜಿತ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿರುತ್ತದೆ.

ಭಾರತದಲ್ಲಿನ ಸುರಕ್ಷಿತ ಹೂಡಿಕೆಯ ಪಟ್ಟಿ

ಭಾರತದಲ್ಲಿನ ಸುರಕ್ಷಿತ ಹೂಡಿಕೆಯ ಪಟ್ಟಿ

ನಾವು ಭಾರತದಲ್ಲಿರುವ ಸುರಕ್ಷಿತ ಹೂಡಿಕೆಗಳ ಪಟ್ಟಿಯನ್ನು ಈ ಕೆಳಗೆ ನೀಡಿದ್ದೇವೆ. ನಿಮಗೆ ಇಷ್ಟವಾದ, ದೀರ್ಘಾವಧಿಯ ದೃಷ್ಟಿಕೋನವನ್ನು ಇಟ್ಟುಕೊಂಡು ಯಾವುದಾದರೊಂದು ಹೆಚ್ಚಿನ ಬಡ್ಡಿದರವನ್ನು ನೀಡುವ ಸುರಕ್ಷಿತ ಹೂಡಿಕೆಯನ್ನು ಆಯ್ದು ಕೊಳ್ಳಬಹುದು.
ಭಾರತದಲ್ಲಿನ ಎಂಟು ಅತ್ಯುತ್ತಮ ಸುರಕ್ಷಿತ ಹೂಡಿಕೆಯ ಆಯ್ಕೆಗಳು ಇಂತಿವೆ ಓದಿ..

ಡಾಯ್ಚ ಬ್ಯಾಂಕ್ ಎಫ್.ಡಿ (Deutsche Bank FDs)

ಡಾಯ್ಚ ಬ್ಯಾಂಕ್ ಎಫ್.ಡಿ (Deutsche Bank FDs)

ಈ ಎಫ್ಡಿ(FD)ಗಳು ಸುರಕ್ಷಿತವಾಗಿದ್ದು, ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಈ ಠೇವಣಿಯು 5 ವರ್ಷದ ಅವಧಿಗೆ ಶೇ. 8 ಬಡ್ಡಿದರವನ್ನು ನೀಡುತ್ತದೆ. ಪ್ರಸ್ತುತ ಇರುವ ಬಡ್ಡಿದರಕ್ಕೆ ಹೋಲಿಸಿದರೆ ಇದು ಕಡಿಮೆಯಲ್ಲ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರವೇನು ಇರುವುದಿಲ್ಲ. ಅವರಿಗೂ ಸಹ 8% ಮಾತ್ರ ಸಿಗುತ್ತದೆ. 5 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆಗೆ ಬಡ್ಡಿದರವು ಶೇ. 6.90ರಷ್ಟಿದೆ. 5 ವರ್ಷದ ಅವಧಿಗೆ ಹೋಲಿಸಿದರೆ ಈ ಬಡ್ಡಿದರ ಉತ್ತಮವಾದುದಲ್ಲ. ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮತ್ತೊಂದು ಅಂಶವೆಂದರೆ ಬ್ಯಾಂಕಿನ ಬಡ್ಡಿದರದ ಆದಾಯಕ್ಕೆ ಹೂಡಿಕೆದಾರರು ಕೈಯಿಂದಲೆ ತೆರಿಗೆ ಕಟ್ಟಬೇಕಾಗುತ್ತದೆ. ನೀವು ಕೆಲವು ಸುರಕ್ಷಿತವಾದ ಸಣ್ಣ ಹಣಕಾಸು ಬ್ಯಾಂಕುಗಳನ್ನು ಆಯ್ಕೆ ಮಾಡಬಹುದು. ಅಲ್ಲಿ ನೀವು ಹೆಚ್ಚಿನ ಅಂದರೆ ಶೇ. 9.5ವರೆಗೂ ಬಡ್ಡಿದರ ಪಡೆಯಬಹುದು. ಇವುಗಳು ಹೂಡಿಕೆ ಮಾಡಲು ಸುರಕ್ಷಿತವಾಗಿದ್ದು, ಇತ್ತೀಚಿಗೆ ಭಾರತೀಯ ರಿಸರ್ವ ಬ್ಯಾಂಕಿನಿಂದ ಪರವಾನಗಿಯನ್ನು ಪಡೆದುಕೊಂಡಿವೆ.

ಮಾಸಿಕ ವರಮಾನ ಯೋಜನೆ

ಮಾಸಿಕ ವರಮಾನ ಯೋಜನೆ

ಅಂಚೆ ಕಚೇರಿಯ ಮಾಸಿಕ ವರಮಾನ ಯೋಜನೆಯು ಕಡಿಮೆ ರಿಸ್ಕ್ ತೆಗೆದುಕೊಳ್ಳುವ ಮತ್ತು ಸುರಕ್ಷಿತವಾದ ಹೂಡಿಕೆಯೊಂದಿಗೆ ಯೋಗ್ಯ ಆದಾಯವನ್ನು ಬಯಸುವ ವ್ಯಕ್ತಿಗಳಿಗೆ ಉಪಯುಕ್ತವಾಗಿದೆ. ಇದೊಂದು ಲಾಭದಾಯಕವಲ್ಲದ ಯೋಜನೆಯಾಗಿದೆ. ಏಕೆಂದರೆ ಇದು ನಿಮಗೆ ಕಡಿಮೆ ಬಡ್ಡಿದರವನ್ನು ನೀಡುತ್ತದೆ. ಇದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಂತೆ ಸಂಪೂರ್ಣ ತೆರಿಗೆ ರಹಿತವಾಗಿರುವುದಿಲ್ಲ. ಆದ್ದರಿಂದ ಈ ಯೋಜನೆಯಿಂದ ನಿಮ್ಮ ನಿಜವಾದ ಆದಾಯವು ತುಂಬಾ ಕಡಿಮೆ ಇರುತ್ತದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವಿರಾದರೆ ಬೇರೆ ಬೇರೆ ಆಯ್ಕೆಗಳನ್ನು ನೋಡಬಹುದು. ಪ್ರಸ್ತುತ ಅಂಚೆ ಕಚೇರಿಯ ಮಾಸಿಕ ವರಮಾನ ಯೋಜನೆಯು ನಿಮಗೆ ಶೇ. 7.6 ಬಡ್ಡಿದರವನ್ನು ನೀಡುತ್ತಿದೆ. ಆದರೆ ಇದು ಕಡಿಮೆ ಏನಲ್ಲ ಭಾರತ ಸರ್ಕಾರದಿಂದ ಖಾತರಿ ಪಡಿಸಿದ ಯೋಜನೆಯಾಗಿರುವುದರಿಂದ ಇದು ಭಾರತದಲ್ಲಿನ ಒಂದು ಉತ್ತಮ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸಂಬಳದ ವ್ಯಕ್ತಿಯ ಮೆಚ್ಚಿನ ಸಾಧನವಾಗಿದೆ. ಈ ಪಿಪಿಎಫ್ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಮೊದಲನೆಯದಾಗಿ ಬಡ್ಡಿಯ ಆದಾಯವು ತೆರಿಗೆ ರಹಿತವಾದದ್ದು. ಎರಡನೆಯದಾಗಿ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80 ಸಿ ಅಡಿಯಲ್ಲಿ ಬರುವ ತೆರಿಗೆ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ನಿವೃತ್ತಿಯ ನಂತರಕ್ಕೆ ಉಳಿತಾಯ ಮಾಡಲು ಉತ್ತಮ ಮಾರ್ಗವಾಗಿದೆ. ಆದರೆ ಕೆಲವು ವರ್ಷಗಳ ಹಿಂದೆ ಶೇ.9ರಷ್ಟಿದ್ದ ಬಡ್ಡಿದರ ಈಗ ಶೇ. 7.9ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಬಡ್ಡಿದರ ಮತ್ತಷ್ಟು ಕಡಿತಗೊಳ್ಳುವ ಸಾಧ್ಯತೆಗಳಿವೆ. ನೀವೆನಾದರೂ ದೀರ್ಘಕಾಲದ ಹೂಡಿಕೆದಾರರಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಸರ್ಕಾರ ಇತ್ತೀಚಿಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ನಿಮ್ಮ ಉಳಿತಾಯ ಮಾಡುವುದರ ಜೊತೆಗೆ ನಿವೃತಿಯ ಜೀವನಕ್ಕೆ ಇದು ಭಾರತದಲ್ಲಿನ ಅತ್ಯುತ್ತಮ ಸುರಕ್ಷಿತ ಉಳಿತಾಯ ಸಾಧನಗಳಲ್ಲಿ ಒಂದಾಗಿದೆ. ಲಾಕ್ ಇನ್ ಪಿರಿಯಡ್ ಮತ್ತು ಅವಧಿ ಪೂರ್ಣಗೊಳ್ಳುವ ಮುನ್ನ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲದಿರುವುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಪ್ರಯೋಜನಕ್ಕಾಗಿ ಭಾರತ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಂತಹ ಒಂದು ಪ್ರಯತ್ನವಾಗಿದೆ. ಸರ್ಕಾರವು ಪ್ರತಿ ತ್ರೈಮಾಸಿಕ ಅವಧಿಗೆ ಬಡ್ಡಿದರವನ್ನು ನಿರ್ಧರಿಸಿದ್ದು, ಹಿಂದೆ ಶೇ. 10ರಷ್ಟಿದ್ದ ಬಡ್ಡಿದರ ಶೇ. 8.4ಕ್ಕೆ ಇಳಿದಿದೆ. ಈ ಯೋಜನೆಯನ್ನು ಅಂಚೆ ಕಛೇರಿ ಮಾತ್ರವಲ್ಲದೆ ಐಸಿಐಸಿಐ, ಎಸ್ಬಿಐ ಮುಂತಾದ ಬ್ಯಾಂಕುಗಳಲ್ಲಿ ತೆರೆಯಬಹುದಾಗಿದೆ. ಪ್ರಮುಖ ಅಂಶವೆಂದರೆ ಈ ಉಳಿತಾಯ ಯೋಜನೆಗಳು ಕೇವಲ ಹಿರಿಯ ನಾಗರಿಕರಿಗೆ ಇದ್ದು, ಒಟ್ಟಾರೆ ಒಳ್ಳೆಯ ಯೋಜನೆಯಾಗಿದೆ. ಈ ಯೋಜನೆಯು ಹಿರಿಯ ನಾಗರಿಕರಿಗೆ ಸೀಮಿತ ವಾಗಿರುವುದರಿಂದ ತೆರಿಗೆ ರಹಿತವಾಗಿದೆ. ಹೇಗಾದರೂ ಇಲ್ಲಿ ಯಾವುದೇ ತೆರಿಗೆ ಪ್ರಯೋಜನಗಳಿಲ್ಲ. ಆದರೆ ಈ ಠೇವಣಿಗಳಿಗೆ ಟಿ.ಡಿ.ಎಸ್. ಅನ್ವಯವಾಗುತ್ತದೆ. ಹಿರಿಯ ನಾಗರಿಕರ ಯೋಜನೆಯಲ್ಲಿ ಸರ್ಕಾರ ನಿಯಮಿತ ಮೇಲ್ವಿಚಾರಣೆ ಮತ್ತು ಬಡ್ಡಿದರದಲ್ಲಿ ಬದಲಾವಣೆ ಮಾಡುವುದು ಈ ಯೋಜನೆಯ ಒಂದು ಸಮಸ್ಯೆಯಾಗಿದೆ.

ಬ್ಯಾಂಕಿನ ಸ್ಥಿರ ಠೇವಣಿಗಳು (Bank FDs)

ಬ್ಯಾಂಕಿನ ಸ್ಥಿರ ಠೇವಣಿಗಳು (Bank FDs)

ಬ್ಯಾಂಕಿನ ಸ್ಥಿರ ಠೇವಣಿಗಳು ಉತ್ತಮ ಆಯ್ಕೆಯ ಹಣಕಾಸಿನ ಸಾಧನವಾಗಿದ್ದು, ನೀವು ಹೂಡುವ ಬ್ಯಾಂಕಿಗೆ ಅನುಗುಣವಾಗಿ ಬಡ್ಡಿದರ ಶೇ. 6 ರಿಂದ ಶೇ. 7%ವರಗೆ ಇರುತ್ತದೆ. ಇತ್ತೀಚೆಗೆ ಹೆಚ್ಚಿನ ಬ್ಯಾಂಕುಗಳು ಬಡ್ಡಿದರವನ್ನು ಕಡಿತಗೊಳಿಸಿವೆ. ಇದೊಂದು ಅತ್ಯಂತ ಮಂದ ಬಂಡವಾಳ ಹೂಡಿಕೆಯಾಗಿದೆ. ಈ ರೀತಿಯ ಬ್ಯಾಂಕ್ ಠೇವಣಿಗಳು ಹೂಡಿಕೆದಾರರ ಕೈಯಿಂದ ಸಂಪೂರ್ಣ ತೆರಿಗೆ ಅಧಾರಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಅತ್ಯಧಿಕ ತೆರಿಗೆ ಪಾವತಿದಾರರಾದರೆ ನಿಮ್ಮ ಆದಾಯ ಕಡಿಮೆ ಇರುತ್ತದೆ ಎಂದು ಅಂದಾಜಿಸಲಾಗುತ್ತದೆ. ಅದ್ದರಿಂದ ಈ ಹೂಡಿಕೆಗಳು ಸುರಕ್ಷಿತವೆಂದು ಪರಿಗಣಿಸಿದರಾದರೂ ಇದರಿಂದ ಬರುವ ಆದಾಯ ಕಡಿಮೆಯಾಗಿರುತ್ತದೆ. ಅದ್ದರಿಂದ ನೀವು ಇತರ ಆಯ್ಕೆಯನ್ನು ನೋಡಲು ಬಯಸುವಿರಾದರೆ ಬ್ಯಾಂಕಿನ ಠೇವಣಿಗಳ ಮೇಲಿನ ಬಡ್ಡಿದರಗಳು ಸಂಪೂರ್ಣವಾಗಿ ತೆರಿಗೆ ಆಧಾರಿತವಾಗಬಹುದು ಮತ್ತು ಆದಾಯದ ದರವು ಕಡಿಮೆಯಾಗಬಹುದು. ಅಲ್ಲದೆ ಬಡ್ಡಿದರವನ್ನು ಊಹಿಸುವುದು ಕಷ್ಟವಾಗುತ್ತದೆ ಎಂಬುದು ದೊಡ್ಡ ಸಮಸ್ಯೆಯಾಗಿದೆ.

ರಿಕರಿಂಗ್ ಡಿಪಾಸಿಟ್ (ಮರುಕಳಿಸುವ ಠೇವಣಿ)

ರಿಕರಿಂಗ್ ಡಿಪಾಸಿಟ್ (ಮರುಕಳಿಸುವ ಠೇವಣಿ)

ರಿಕರಿಂಗ್ ಡಿಪಾಸಿಟ್ ಹೂಡಿಕೆ ನಿಯಮಿತ ಮಾಸಿಕ ಆದಾಯದ ಗಳಿಕೆಗೆ ಸುರಕ್ಷಿತ ಮಾರ್ಗವಾಗಿದೆ. ಇದು ಬ್ಯಾಂಕ್ ಠೇವಣಿಗಳಿಗಿಂತ ತುಂಬಾ ಭಿನ್ನವಾಗಿಲ್ಲ. ಇಲ್ಲಿರುವ ಒಂದೇ ವ್ಯತ್ಯಾಸವೆಂದರೆ ಪ್ರತಿ ತಿಂಗಳು ನಾವು ಸಣ್ಣ ಪ್ರಮಾಣದ ಮೊತ್ತವನ್ನು ವ್ಯವಸ್ಥಿತ ರೀತಿಯಲ್ಲಿ ಹೂಡಿಕೆ ಮಾಡಬೇಕು. ಇಲ್ಲಿನ ಆದಾಯವು ಪಿಕ್ಸೆಡ್ ಡಿಪಾಸಿಟ್‌ನ ರೀತಿಯಲ್ಲೆ ಹೆಚ್ಚಿನ ತೆರಿಗೆಯುಳ್ಳದ್ದು, ಅಕರ್ಷಕವಾದ ಆದಾಯವನ್ನು ನೀಡುವುದಿಲ್ಲ. ನೀವು ಸಾಮಾನ್ಯ ಉದ್ದೇಶಗಳಿಗಾಗಿ ಉಳಿಸಲು ಬಯಸಿದರೆ ಹೂಡಿಕೆ ಮಾಡಬಹುದು. ಆದರೆ ತೆರಿಗೆ ಉದ್ದೇಶಗಳಿಗಾಗಿ ಇದು ಉತ್ತಮ ಹೂಡಿಕೆಯಲ್ಲ. ಆದಾಗ್ಯೂ ನೀವು ಹೂಡಿಕೆ ಮಾಡುವ ಮೊದಲು ಬಡ್ಡಿದರವನ್ನು ಹೋಲಿಸಿ ನೋಡುವುದು ಅಗತ್ಯವಾಗಿದೆ. ಏಕೆಂದರೆ ಇತ್ತೀಚೆಗೆ ಇವು ಭಾರಿ ಬದಲಾವಣೆಗೆ ಒಳಗಾಗಿವೆ. ಪುನರಾವರ್ತಿತ ಠೇವಣಿಗಳ ಮೇಲಿನ ಬಡ್ಡಿದರವು ಸಂಪೂರ್ಣ ತೆರಿಗೆಯನ್ನು ಹೊಂದಿದೆ ಎಂಬುದು ಈ ಠೇವಣಿಯ ಮತ್ತೊಂದು ನ್ಯೂನ್ಯತೆಯಾಗಿದೆ. ಆದರೂ ಇದು ಭಾರತದಲ್ಲಿಯೇ ಅತ್ಯುತ್ತಮ ಮತ್ತು ಸುರಕ್ಷಿತ ಹೂಡಿಕೆಯ ಆಯ್ಕೆ ಎಂದು ಒಪ್ಪಿಕೊಳ್ಳಲೆಬೇಕು.

ಯೆಸ್ ಬ್ಯಾಂಕ್ ಉಳಿತಾಯ

ಯೆಸ್ ಬ್ಯಾಂಕ್ ಉಳಿತಾಯ

ಯೆಸ್ ಬ್ಯಾಂಕ್ ಉಳಿತಾಯ ಖಾತೆ ಆಯ್ಕೆ ತೆಗೆದುಹಾಕುವಂತದ್ದಲ್ಲ. ಉದಾಹರಣೆಗೆ ಬ್ಯಾಂಕ್ ಠೇವಣಿಗಳು ಈಗ ಶೇ. 6 ವರಗೆ ಬಡ್ಡಿದರವನ್ನು ನೀಡುತ್ತಿವೆ. ಆದರೆ ಯೆಸ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿನ ಹಣಕ್ಕೆ ಶೇ. 6 ಬಡ್ಡಿದರವನ್ನು ನೀಡುತ್ತಿದೆ. ಇದು ಎಸ್ಬಿಐ ಬ್ಯಾಂಕಿನ ಠೇವಣಿಗಳಿಗೆ ಸಮಾನವಾಗಿದೆ. ಈ ಬ್ಯಾಂಕಿನ ಪಿಕ್ಸೆಡ್ ಡಿಪಾಸಿಟ್‌ಗಳು ತೆರಿಗೆಗೆ ಒಳಪಟ್ಟಿರುತ್ತದೆ. ಆದರೆ ಉಳಿತಾಯ ಬ್ಯಾಂಕ್ ಬಡ್ಡಿಯು ರೂ. 10,000ವರೆಗೆ ತೆರಿಗೆ ಮುಕ್ತವಾಗಿರುತ್ತದೆ. ಆದ್ದರಿಂದ ಬಡ್ಡಿದರವು ಒಂದೇ ಆಗಿರುವಾಗ ಸೇವೆ ಮತ್ತು ಇತರ ವಿಷಯಗಳಿಗೆ ಹಾಗೂ ದೀರ್ಘಾವಧಿ ಹೂಡಿಕೆಗೆ ಸುರಕ್ಷಿತವಾದುದಾಗಿದೆ. ಬ್ಯಾಂಕಿನ ಮೂಲಭೂತ ಅಂಶಗಳು ಪ್ರಬಲವಾಗಿದ್ದು ಇದು ದೀರ್ಘಾವಧಿ ಹೂಡಿಕೆಗೆ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮಲ್ಲಿ ಹೆಚ್ಚಿನ ಹಣವಿದ್ದಲ್ಲಿ ನೀವು ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು ಹೊರಡಬಹುದು.

ಸುಕನ್ಯಾ ಸಮೃದ್ಧಿ ಖಾತೆ

ಸುಕನ್ಯಾ ಸಮೃದ್ಧಿ ಖಾತೆ

ಸುಕನ್ಯಾ ಸಮೃದ್ಧಿ ಖಾತೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಅವರಿಗೆ ಮಾತ್ರ ಇರುವ ಯೋಜನೆಯಾಗಿದೆ. ಅಂಚೆ ಕಛೇರಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಹಣವನ್ನು ಇಡುವುದರಿಂದ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80 ಸಿ ಅಡಿಯಲ್ಲಿ ನೀವು ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಎರಡನೆಯದಾಗಿ ನೀವು ನಿಮ್ಮ ಹೆಣ್ಣು ಮಗುವಿನ ಕಾರ್ಪಸ್ ಬಿಲ್ಡ್ ಮಾಡಬಹುದು. ನೀವು ದೀರ್ಘಾವಾಧಿಯ ಹೂಡಿಕೆದಾರರಾದರೆ ಇದು ಒಂದು ಉತ್ತಮ ಆಯ್ಕೆಯಾಗಿದೆ. ಇದು ಹೆಚ್ಚು ದೀರ್ಘಾವಾಧಿಯ ಯೋಜನೆ ಎಂಬುದೊಂದೆ ಯೋಚಿಸುವ ವಿಷಯವಾಗಿದೆ. ಯೋಜನೆಯ ಮೇಲಿನ ಬಡ್ಡಿದರವು ಪ್ರಸ್ತುತ ವಾರ್ಷಿಕ ಶೇ. 8.4ರಷ್ಟಿದೆ. ಮತ್ತೆ ಅಂಚೆ ಕಛೇರಿಯ ಇತರ ಯೋಜನೆಯ ರೀತಿಯಲ್ಲೆ ಈ ಯೋಜನೆಯ ಮೇಲಿನ ಬಡ್ಡಿದರವು ಆಗಾಗ ಬದಲಾವಣೆ ಹೊಂದುತ್ತಿರುತ್ತದೆ.

ಡೆಬಿಟ್ ಮ್ಯೂಚುವಲ್ ಫಂಡ್

ಡೆಬಿಟ್ ಮ್ಯೂಚುವಲ್ ಫಂಡ್

ಡೆಬಿಟ್ ಮ್ಯೂಚುವಲ್ ಫಂಡ್‌ಗಳು ಬ್ಯಾಂಕ್ ಠೇವಣಿಗಳಿಗಿಂತ ನಿಮಗೆ ಹೆಚ್ಚಿನ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. ಏಕೆಂದರೆ ಅವರು ಹಣವನ್ನು ಇಕ್ವಿಟಿಗಳಲ್ಲಿ ಇಡಲು ಪ್ರಯತ್ನಿಸುತ್ತಾರೆ. ಡೆಬಿಟ್ ಮ್ಯೂಚುವಲ್ ಫಂಡ್ ಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ ಅವುಗಳ ಹೆಚ್ಚಿನ ಹಣವು ಕಾರ್ಪೊರೇಟ್ ಬಾಂಡ್‌ಗಳು. ಈ ಹಣವನ್ನು ಸರ್ಕಾರಿ ಭದ್ರತೆಗಳಿರುವ ಕಡೆ, ಬ್ಯಾಂಕಿನ ಪಿಕ್ಸೆಡ್ ಡಿಪಾಸಿಟ್ ಗಳಾಗಿ, ಹಣದ ಮಾರುಕಟ್ಟೆ ಸಲಕರಣೆಯಲ್ಲಿ ಇನ್ನು ಮುಂತಾದ ಕಡೆ ಹೂಡಿಕೆ ಮಾಡುತ್ತವೆ. ಈ ಯೋಜನೆಗಳನ್ನು ಸಾಮಾನ್ಯವಾಗಿ ಸಾಲ ಮುಕ್ತವಾಗಿ ಪರಿಗಣಿಸಲಾಗುತ್ತದೆ. ದೀರ್ಘಾಕಾಲದ ಇಲ್ಲವೆ ಅಲ್ಪಕಾಲದ ಉದ್ದೇಶಗಳಿಗೆ ಹಣ ಹೂಡಿಕೆ ಮಾಡಬಹುದು.

ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು (ಟ್ಯಾಕ್ಸ್ ಸೇವಿಂಗ್ ಪಿಕ್ಸೆಡ್ ಡಿಪಾಸಿಟ್)

ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು (ಟ್ಯಾಕ್ಸ್ ಸೇವಿಂಗ್ ಪಿಕ್ಸೆಡ್ ಡಿಪಾಸಿಟ್)

ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಬದಗಿಸುತ್ತದೆ. ನೀವು ಹೂಡಿಕೆ ಮಾಡಿದ ಹಣವನ್ನು ಸ್ವಲ್ಪ ಪ್ರಮಾಣದಲ್ಲಿ ನಿಮ್ಮ ತೆರಿಗೆ ಆದಾಯದಿಂದ ಕಡಿತಗೊಳಿಸಿಕೊಳ್ಳಬಹುದು. ಬಡ್ಡಿಯ ಆದಾಯ ಆಯಾ ಆರ್ಥಿಕ ವರ್ಷದಲ್ಲಿ 10,000 ಮೀರಿದ್ದರೆ ಅದಕ್ಕೆ ಟಿ.ಡಿ.ಎಸ್ ಅನ್ವಯವಾಗುತ್ತದೆ. ನಿಮ್ಮ ಖಾತೆಯಲ್ಲಿ ನೀವು ನಿಮ್ಮ ಪ್ಯಾನ್ ಅನ್ನು ನವೀಕರಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದಲ್ಲಿ ಶೇ. 10 ಟಿ,ಡಿ.ಎಸ್ ಗೆ ಬದಲಾಗಿ ಶೇ. 20 ಟಿಡಿಎಸ್ ಅನ್ವಯವಾಗುತ್ತದೆ. ಬಡ್ಡಿದರಗಳು ಶೇ. 6 ರಿಂದ 7 ವರಗೆ ಬದಲಾಗುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗಿದೆ.

ಕಂಪನಿ ಠೇವಣಿಗಳ ಆಯ್ಕೆ

ಕಂಪನಿ ಠೇವಣಿಗಳ ಆಯ್ಕೆ

ನೀವು ಎಎಎ ರೇಟೆಡ್ ಠೇವಣಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಕಂಪನಿ ಠೇವಣಿಗಳು ಸುರಕ್ಷಿತವಾಗಿರುತ್ತವೆ. ಉದಾಹರಣೆಗೆ ಬಜಾಜ್ ಫೈನಾನ್ಸ್ ಮತ್ತು ಮಹೇಂದ್ರ ಫೈನಾನ್ಸ್ ಎ ರೇಟೆಡ್ ಠೇವಣಿಗಳಾಗಿದ್ದು, ಬ್ಯಾಂಕಿನ ಡಿಪಾಸಿಟ್ ಗಳಿಗಿಂತಲೂ ಹೆಚ್ಚಿನ ಬಡ್ಡಿದರವನ್ನು ಗಳಿಸಲು ಅವಕಾಶ ನೀಡುತ್ತವೆ. ಇವುಗಳಲ್ಲಿ ಹೆಚ್ಚಿನವು ನಿಮಗೆ ಶೇ. 1 ವರೆಗೂ ಹೆಚ್ಚಿನ ಬಡ್ಡಿದರವನ್ನು ನೀಡಬಹುದು. ಹೇಗಾದರೂ ಇವುಗಳು ದೀರ್ಘಾವಾಧಿ ಹೂಡಿಕೆಗೆ ಉತ್ತಮ, ಸುರಕ್ಷಿತವಾಗಿವೆ. ಕೆಲವು ತೊಂದರೆಯ ಅಂಶಗಳು ಈ ಠೇವಣಿಯನ್ನು ಅಸುರಕ್ಷಿತ ಎಂಬ ಭಾವನೆ ಉಂಟುಮಾಡಿದೆ.

ಅಂಚೆ ಕಚೇರಿ ಮರುಕಳಿಸುವ ಠೇವಣಿಗಳು (ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ಸ್)

ಅಂಚೆ ಕಚೇರಿ ಮರುಕಳಿಸುವ ಠೇವಣಿಗಳು (ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ಸ್)

ನೀವು ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ನೋಡುತ್ತಿದ್ದರೆ ನೀವು ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಸಿಟ್ಸ್ ಅನ್ನು ಪರಿಗಣಿಸಬಹುದು. ಬಡ್ಡಿದರಗಳು ಇತ್ತೀಚಿಗೆ ಇಳಿದಿದೆ. ಆದರೆ ಹೂಡಿಕೆದಾರರೂ ದೀರ್ಘಕಾಲದವರಗೆ ಕಾರ್ಪಸ್ ಅನ್ನು ನಿರ್ಮಿಸಲು ಇದು ಒಂದು ಉತ್ತಮ ಆಯ್ಕೆಯಾಗಿದೆ. ಇದರ ಒಂದು ಅನಾನುಕೂಲವೆಂದರೆ ಈ ಠೇವಣಿಯು ಹೂಡಿಕೆದಾರರ ಕೈಯಿಂದ ಹೆಚ್ಚಿನ ತೆರಿಗೆಯನ್ನು ಅಪೇಕ್ಷಿಸುತ್ತದೆ. ಆದರೆ ದೀರ್ಘಾವಧಿಯ ದೃಷ್ಟಿಕೋನವನ್ನು ನಿಮ್ಮ ಮನಸ್ಸಿನಲ್ಲಿ ಹೊಂದಿದ್ದರೆ ಇದು ಸುರಕ್ಷಿತ. ಉನ್ನತ ಮಟ್ಟದಲ್ಲಿ ಬಡ್ಡಿದರವನ್ನು ಲಾಕ್ ಮಾಡುವಂತೆ ನೀವು ಕನಿಷ್ಟ 5 ವರ್ಷ ಕಾಲದ ವರಗೆ ಹೂಡಿಕೆ ಮಾಡಲು ನಾವು ಸೂಚಿಸುತ್ತೇವೆ. ಸಂಬಳ ವರ್ಗದವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಡೆಬಿಟ್ ಮ್ಯೂಚುವಲ್ ಫಂಡ್ ಯೋಜನೆಗಳು

ಡೆಬಿಟ್ ಮ್ಯೂಚುವಲ್ ಫಂಡ್ ಯೋಜನೆಗಳು

ನಿಮ್ಮ ಆಯ್ಕೆಯ ಡೆಬಿಟ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪರಿಗಣಿಸಬಹುದು. ಇವು ನಿಮಗೆ ದೀರ್ಘಾವಧಿ ಮತ್ತು ಮಧ್ಯಮಾವಧಿ ಹೂಡಿಕೆಗೆ ಉತ್ತಮ ಅವಕಾಶವನ್ನು ನೀಡುತ್ತವೆ. ಡೆಬಿಟ್ ಮ್ಯೂಚುವಲ್ ಫಂಡ್ ಪಾರ್ಕ್ ನಿಮ್ಮ ಹಣವನ್ನು ಸುರಕ್ಷಿತ ಸರ್ಕಾರಿ ಬಾಂಡುಗಳು, ಡಿಬೆನ್ಚರಸ್, ವಾಣಿಜ್ಯಾತ್ಮಕವಾಗಿ ಸುರಕ್ಷಿತವಾಗಿರಿಸುತ್ತದೆ. ರಿಸ್ಕ್ ಇರುವುದರಿಂದ ನೀವು ನಿರ್ಲಕ್ಷ ತೋರಬಾರದು. ಒಂದು ನಿರ್ದಿಷ್ಟ ಡೆಬಿಟ್ ಫಂಡ್ ಗೆ ಪೂರ್ವ ನಿಯೋಜಿತವಾಗಿ ರಿಸ್ಕ್ ಇದ್ದೆ ಇರುತ್ತದೆ. ಅದ್ದರಿಂದ ಡೆಬಿಟ್ ಮ್ಯೂಚುವಲ್ ಫಂಡ್ ಗಳಲ್ಲಿ ಯಾವಾಗಲೂ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ. ಅದರೂ ಇದನ್ನು ಸುರಕ್ಷಿತ ಎಂದು ಪರಿಗಣಿಸಲಾಗಿದೆ.

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ

ನೀವು ನಿವೃತ್ತಿ ಹೊಂದಿದ ವ್ಯಕ್ತಿಯಾಗಿದ್ದರೆ ಹೂಡಿಕೆಯ ಆಯ್ಕೆಯಾಗಿ ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆಯನ್ನು ಪರಿಗಣಿಸಬಹುದು. ಇಲ್ಲಿಯವರೆಗೂ ಸರ್ಕಾರದಿಂದ ಬೆಂಬಲಿತವಾಗಿರುವುದರಿಂದ ಅವು ಸುರಕ್ಷಿತವಾಗಿರುತ್ತವೆ. ವಾಸ್ತವವಾಗಿ ಇದೊಂದೆ ಸುರಕ್ಷಿತವಾದದ್ದು ಎಂದು ನಾವು ಹೇಳುತ್ತಿಲ್ಲ. ಆದರೆ ಹೂಡಿಕೆಗೆ ಇದು ಒಂದು ಸುರಕ್ಷಿತ ಆಯ್ಕೆ. ನೀವು ಹೂಡಿದ ಠೇವಣಿ ಹಣವನ್ನು ಅವಧಿಗೆ ಮೊದಲೆ ಹಿಂಪಡೆದರೆ ಸ್ವಲ್ಪ ಪ್ರಮಾಣದ ದಂಡ ಅನ್ವಯವಾಗುತ್ತದೆ. ಉದಾಹರಣೆಗೆ ಅದೇ ದರದಲ್ಲಿ ಅನ್ವಯವಾಗುವಂತೆ ಶೇ. 2 ಶುಲ್ಕವಿರುತ್ತದೆ. ಅದಾಗ್ಯೂ ನೀವು ನಿವೃತ್ತಿ ಹೊಂದಿದ ವ್ಯಕ್ತಿಯಾಗಿದ್ದರೆ ಈ ಯೋಜನೆಯಲ್ಲಿ ಹಣ ಹೂಡುವುದರಲ್ಲಿ ಅರ್ಥವಿರುತ್ತದೆ. ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆಯ ಪ್ರಸ್ತುತ ಸಮಸ್ಯೆಯೆಂದರೆ ಬಡ್ಡಿದರ ಕುಸಿದಿರುವುದರಿಂದ, ಅದರಿಂದ ಬರುವ ಆದಾಯದಲ್ಲೂ ಕಡಿತವಾಗಿದೆ.
ಇನ್ನೇಕೆ ತಡ ನಿಮ್ಮ ನೆಚ್ಚಿನ ಆಯ್ಕೆಯನ್ನು ಮಾಡಿಕೊಂಡು ಹಣವನ್ನು ಉಳಿತಾಯ ಮಾಡಿ.

English summary

Best Safe Investment Options in India

Safe investments are one in which the element of risk is almost zero. Safe investments are good for those who are retired and would not like to take risk. There are many individuals who also do not have the ability to take risk, which is why they opt for some of the best safe investments in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X