ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

Posted By: Siddu
Subscribe to GoodReturns Kannada

ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಹಲವು ಪ್ರಮುಖ ಯೋಜನೆಗಳಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ ಕೂಡ ಒಂದು. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಾಗಿ ಈ ಯೋಜನೆಯನ್ನು ಮೀಸಲಿರಿಸಲಾಗಿದೆ. ಪ್ರಧಾನ ಮಂತ್ರಿ ವಯ ವಂದನ ಯೋಜನೆಯಡಿ ತಿಂಗಳಿಗೆ ರೂ. 10 ಸಾವಿರ ಪಡೆಯಿರಿ..

ಯೋಜನೆಯ ಉದ್ದೇಶ

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ಯಾವುದೇ ಬ್ಯಾಂಕಿನ ಸಾಲಗಳಲ್ಲಿ ರೂ. 10 ಲಕ್ಷದಿಂದ 1 ಕೋಟಿವರೆಗಿನ ಸಾಲಗಳಲ್ಲಿ ಒಂದು ಸಾಲವನ್ನು ಮಹಿಳಾ ಉದ್ಯೋಗದಾತರಿಗೆ ಇಲ್ಲವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಲೇಬೇಕೆಂದು ನಿರ್ಧರಿತವಾಗಿರುತ್ತದೆ. ಇದು ಉತ್ಪಾದನೆ, ಸೇವೆ, ವ್ಯಾಪಾರ ಈ ಮೂರೂ ಕ್ಷೇತ್ರಕ್ಕೆ ಅನ್ವಯಿಸಲಾಗಿರುತ್ತದೆ. ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿದ್ದರೆ ಶೇ. 51 ರಷ್ಟು ಪಾಲುದಾರಿಕೆಯನ್ನು ಮಹಿಳೆ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕಾಗುತ್ತದೆ. ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ. ಕೇಂದ್ರದಿಂದ ಸಿಗುವ ಧನಸಹಾಯ-ಸೌಲಭ್ಯಗಳೇನು?

 

ಅರ್ಹತೆ

1. ಮಹಿಳೆ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
2. ಈ ಸಾಲಕ್ಕೆ ಒಳಪಡುವವರು ಹಸಿರು ಕ್ಷೇತ್ರ ಯೋಜನೆಯೊಳಗಿರಬೇಕು. ಇಲ್ಲಿ ಹಸಿರು ಕ್ಷೇತ್ರವೆಂದರೆ ಉತ್ಪಾದನೆ, ಸೇವೆ, ಇಲ್ಲವೇ ವ್ಯಾಪಾರ ಹೊಸದಾಗಿ ಆರಂಭಿಸುವುದಾಗಿರಬೇಕು.
3. ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿದ್ದರೆ ಶೇ. 51 ರಷ್ಟು ಪಾಲುದಾರಿಕೆಯನ್ನು ಮಹಿಳೆ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕಾಗುತ್ತದೆ.
4. ಸಾಲಗಾರ ಯಾವುದೇ ಬ್ಯಾಂಕಿನ ಸದಸ್ಯ ಆಗಿರಬಾರದು.

ಸಾಲದ ಸ್ವರೂಪ

ರೂ. 10 ಲಕ್ಷದಿಂದ 1 ಕೋಟಿವರೆಗೆ ಇದು ಕಾಂಪೋಸಿಟ್ ಸಾಲವಾಗಿರುತ್ತದೆ. ಅಂದರೆ ಕರಾರು ಸಾಲ ಮತ್ತು ಕಾರ್ಯವಾಹಿ ಬಂಡವಾಳ ಎರಡೂ ಅನ್ವಯವಾಗುತ್ತದೆ.

ಸಾಲದ ಉದ್ದೇಶ
ಮಹಿಳೆ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿಗಳಿಂದ ಹೊಸ ಸಂಸ್ಥೆಗಳನ್ನು ಹುಟ್ಟು ಹಾಕುವುದು ಮತ್ತು ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.

ಸಾಲದ ಗಾತ್ರ

ಆರಂಭಿಸಲು ಬಯಸುವ ಯೋಜನೆಯ ಶೇ. 75ರಷ್ಟನ್ನು ಸಾಲದ ರೂಪದಲ್ಲಿ ಪಡೆಯಬಹುದು. ಆದರೆ ಈ ಷರತ್ತು ಎಲ್ಲರಿಗೂ ಅನ್ವಯವಾಗುವುದಿಲ್ಲ. ಒಂದು ವೇಳೆ ಯೋಜನೆ ಆರಂಭಿಸುವ ವ್ಯಕ್ತಿ ಶೇ. 25ಕ್ಕಿಂತ ಹೆಚ್ಚು ಬಂಡವಾಳ ಹೂಡಲು ಯೋಗ್ಯನಾಗಿದ್ದು ಮತ್ತು ಆತ ಬಯಸುತ್ತಿದ್ದಲ್ಲಿ ಇಲ್ಲವೇ ಇತರೆಡೆಯಿಂದ ಆತ ಸಹಾಯ ಪಡೆದಿದ್ದಲ್ಲಿ ಶೇ. 75 ರಷ್ಚು ಸಾಲ ನೀಡಬೇಕೆಂದೇನೂ ಇಲ್ಲ.

ಬಡ್ಡಿದರ

ಬ್ಯಾಂಕಿನ ಅತ್ಯಂತ ಕಡಿಮೆ ಬಡ್ಡಿದರವನ್ನು ಇದು ಒಳಗೊಂಡಿರುತ್ತದೆ. (base rate (MCLR) + 3%+ tenor premium).

ಭದ್ರತೆ

ಪ್ರಾಥಮಿಕ ಭದ್ರತೆ ಹೊರತು ಪಡಿಸಿ ಇತರೆ ಬ್ಯಾಂಕ್ ನ ಸಹಕಾರದ ಭದ್ರತೆ ಇಲ್ಲವೇ ಭದ್ರತಾ ಖಾತರಿ ನಿಧಿ ಯೋಜನೆಯ (Credit Guarantee Fund Scheme for Stand-Up India Loans) ಸಹಕಾರದಿಂದಲೂ ಭದ್ರತೆ ಪಡೆಯಬಹುದಾಗಿದೆ.

ಮರುಪಾವತಿ

ಸಾಲ ಪಡೆದ ದಿನದಿಂದ ಕಡಿಮೆ ಎಂದರೆ 18 ತಿಂಗಳಿನಿಂದ 7 ನೇ ವರ್ಷದ ಅಂತ್ಯದೊಳಗೆ ಬಡ್ಡಿ ಸಹಿತ ಸಂಪೂರ್ಣ ಸಾಲ ಮರುಪಾವತಿಯಾಗಬೇಕು.

ಕಾರ್ಯವಾಹಿ ಬಂಡವಾಳ

ರು. 10 ಲಕ್ಷದ ವರೆಗಿನ ಸಾಲವನ್ನು ಒವರ್ ಡ್ರಾಫ್ಟ್ ರೂಪದಲ್ಲಿಯೂ ಅದಕ್ಕಿಂತ ಹೆಚ್ಚಿನ ಸಾಲವನ್ನು ಕ್ಯಾಷ್ ಕ್ರೆಡಿಟ್ ಲಿಮಿಟ್ ಆಧಾರದಲ್ಲಿ ನೀಡಲಾಗುತ್ತದೆ. ರುಪೇ ಕ್ರೆಡಿಟ್ ಕಾರ್ಡ್ ನ್ನು ಸಾಲ ಪಡೆದ ವ್ಯಕ್ತಿಗೆ ಸುಲಭದ ವ್ಯವಹಾರಕ್ಕಾಗಿ ನೀಡಲಾಗುತ್ತದೆ.

ಸ್ವಂತ ಬಂಡವಾಳ

ಯೋಜನೆಯ ಲಾಭ ಪಡೆಯಬೇಕೆಂದರೆ ಬಂಡವಾಳ ಬೇಕೇ ಬೇಕು. ತಾನು ಆರಂಭಿಸುವ ಕೆಲಸದಿಂದ ಲಾಭ ಗಳಿಸಿ ಸಾಲ ಮರುಪಾವತಿಯ ಬಗ್ಗೆ ಬ್ಯಾಂಕಿನ ಸೂಕ್ತ ವಿವರಗಳನ್ನು ನೀಡಬೇಕಾಗುತ್ತೆ. ನಿಮ್ಮ ಹೊಸ ಕೆಲಸಕ್ಕೆ ಶೇಕಡಾ 10 ರಷ್ಟು ಬಂಡವಾಳ ನೀವು ಹೂಡಲೇಬೇಕು. ಉಳಿದ ಮಾರ್ಜಿನ್ ಹಣಕ್ಕಾಗಿ ನೀವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯ ಪಡೆಯಬಹುದು.

English summary

Things to know about Stand up India Scheme

Things to know about Stand up India Scheme
Story first published: Monday, May 14, 2018, 13:32 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns