ಪ್ರಧಾನ ಮಂತ್ರಿ ವಯ ವಂದನ ಯೋಜನೆಯಡಿ ತಿಂಗಳಿಗೆ ರೂ. 10 ಸಾವಿರ ಪಡೆಯಿರಿ..

Written By: Siddu
Subscribe to GoodReturns Kannada

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ವಯ ವಂದನ ಯೋಜನೆಯ(ಪಿಎಂವಿವಿವೈ)ಹೂಡಿಕೆ ಮಿತಿಯನ್ನು ದುಪ್ಪಟ್ಟುಗೊಳಿಸಿದೆ.

ವಯಸ್ಸಾದ ಸಮಯದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಲು ಮತ್ತು ಅನಿಶ್ಚಿತ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ರಕ್ಷಿಸಲು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ವ್ಯಕ್ತಿಗಳಿಗಾಗಿ ಪಿಎಂವಿವಿವೈ ಯೋಜನೆಯನ್ನು ಲೈಫ್ ಇನ್ಶುರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೊಳಿಸಲಾಗಿದೆ.

ತಿಂಗಳಿಗೆ ರೂ. 10,000 ಪಿಂಚಣಿ

ಪ್ರಸ್ತುತ ಇದ್ದ ಹೂಡಿಕೆ ಮಿತಿಯನ್ನು ರೂ. 7.5 ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಹಿರಿಯ ನಾಗರಿಕರು ತಿಂಗಳಿಗೆ ರೂ. 10,000 ಪಿಂಚಣಿ ಪಡೆಯಲು ನೆರವಾಗಲಿದೆ. ಪ್ರಧಾನಮಂತ್ರಿ ವಯ ವಂದನ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ಚಂದಾದಾರಿಕೆ ಅವಧಿ ವಿಸ್ತಾರ

ಈ ಯೋಜನೆಯ ಚಂದಾದಾರಿಕೆಯ ಅವಧಿಯನ್ನು ಎರಡು ವರ್ಷಗಳವರೆಗೆ (ಮೇ 4, 2018 ರಿಂದ ಮಾರ್ಚ್ 31, 2020)ವಿಸ್ತರಿಸಲಾಗಿದೆ. ಈ ಹಿಂದೆ ಪ್ರಧಾನಮಂತ್ರಿ ವಯ ವಂದನ ಯೋಜನೆ(PMVVY)ಯನ್ನು ಮೇ 14 2017ರಿಂದ, ಮೇ 3 2018ರವರೆಗಿನ ಒಂದು ವರ್ಷದ ಅವಧಿ ಒಳಗಾಗಿ ಖರೀದಿಸಬೇಕಾಗಿತ್ತು.

ನಿಯಮಿತ ಆದಾಯ

2018ರ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ಬಂಡವಾಳ ಮಿತಿಯನ್ನು ರೂ. 15 ಲಕ್ಷಕ್ಕೆ ಹೆಚ್ಚಿಸುವುದಾಗಿ ಹೇಳಿದ್ದರು. ಸ್ಥಿರ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರಗಳು ಆಕರ್ಷಕವಾಗಿರದ ಸಮಯದಲ್ಲಿ ನಿಯಮಿತ ಆದಾಯ ಗಳಿಸಲು ಈ ಯೋಜನೆ ಸಹಕಾರಿಯಾಗಲಿದೆ.

ಶೇ. 8 ಬಡ್ಡಿದರ

ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯಡಿ ಶೇ. 8 ರಷ್ಟು ಬಡ್ಡಿದರವನ್ನು ನೀಡಲಾಗುವುದು. ಹಿರಿಯ ನಾಗರಿಕರು ಮಾಸಿಕ 10,000 ರೂ.ವರೆಗೂ ಪಿಂಚಣಿ ಪಡೆಯಬಹುದಾಗಿದೆ. ವಾರ್ಷಿಕ, ಅರ್ಧ-ವಾರ್ಷಿಕ, ತ್ರೈಮಾಸಿಕ, ಅಥವಾ ಮಾಸಿಕ ಆಧಾರದ ಮೇಲೆ ಪಿಂಚಣಿ ಆಯ್ಕೆ ಮಾಡುವ ಮೂಲಕ ವಾರ್ಷಿಕವಾಗಿ ಶೇ. 8ರಷ್ಟು ಬಡ್ಡಿದರ ನೀಡಲಿದೆ.

2.23 ಲಕ್ಷ ಹಿರಿಯ ನಾಗರಿಕರು ಲಾಭ

ಮಾರ್ಚ್ 2018ರ ವೇಳೆಗೆ, ಒಟ್ಟು 2.23 ಲಕ್ಷ ಹಿರಿಯ ನಾಗರಿಕರು ಪ್ರಧಾನ ಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಅಡಿಯಲ್ಲಿ ನಿಯಮಿತ ಪಿಂಚಣಿ ಪಡೆಯುತ್ತಿದ್ದಾರೆ. ಪಿಎಂವಿವಿವೈ ಅನ್ನು ಆಫ್ಲೈನ್ ನಲ್ಲಿ ಮತ್ತು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಲ್ಐಸಿ) ಮೂಲಕ ಆನ್ಲೈನ್ ನಲ್ಲಿ ಖರೀದಿಸಬಹುದು.

10 ವರ್ಷಗಳ ಪಾಲಿಸಿ ಅವಧಿ ನಂತರ?

10 ವರ್ಷಗಳ ಪಾಲಿಸಿ ಅವಧಿಯ ಕೊನೆಯಲ್ಲಿ, ಪಿಂಚಣಿದಾರರು ಅಂತಿಮ ಪಿಂಚಣಿ ಕಂತುಗಳೊಂದಿಗೆ ಖರೀದಿ ದರವನ್ನು (ಪಿಂಚಣಿಗಾಗಿ ಹೂಡಿಕೆ ಮಾಡಲಾದ ಹಣ) ಹಿಂಪಡೆಯುತ್ತಾರೆ. 10 ವರ್ಷಗಳ ಪಾಲಿಸಿಯ ಅವಧಿಯಲ್ಲಿ ಪಿಂಚಣಿದಾರನ ಮರಣದ ನಂತರ ಅವರ ಫಲಾನುಭವಿಗೆ ಮೊತ್ತವನ್ನು ಪಾವತಿಸಲಾಗುವುದು.

ಆದಾಯ ಮತ್ತು ಉಳಿತಾಯ

ಆದಾಯ ಮತ್ತು ಉಳಿತಾಯಕ್ಕಾಗಿ ಹೆಚ್ಚಿನ ಲೇಖನಗಳನ್ನು ಇಲ್ಲಿ ನೀಡಲಾಗಿದೆ.

ಆರಂಕಿಯ (ಕನಿಷ್ಟ ಲಕ್ಷ) ವೇತನ ಪಡೆಯಬೇಕೆ? ಇಲ್ಲಿ ನೋಡಿ...

ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ತಪ್ಪದೇ ಇಲ್ಲಿ ನೋಡಿ..

ಅಟಲ್ ಪಿಂಚಣಿ ಯೋಜನೆ ಮೂಲಕ ತಿಂಗಳಿಗೆ 5,000 ರೂ ಪಡೆಯಿರಿ..

English summary

Pradhan Mantri Vaya Vandan Yojana (PMVVY): Now Get Rs. 10,000 Per Month Pension

Financial planners say PMVVY offers more avenues to senior citizens to earn a steady regular income at a time when FD rates are not that attractive.
Story first published: Thursday, May 3, 2018, 14:35 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns