For Quick Alerts
ALLOW NOTIFICATIONS  
For Daily Alerts

  ಹಣ ಹೂಡಿಕೆ ಮಾಡಲು ಅತ್ಯುತ್ತಮ ಆಯ್ಕೆಗಳು ಯಾವುವು?

  |

  ಜೀವನದಲ್ಲಿ ಬಹುತೇಕರು ಒಂದಿಲ್ಲೊಂದು ಹಣಕಾಸು ಗುರಿಯ ಸಾಧನೆಗೆ ಪ್ರಯತ್ನ ಪಡುತ್ತಿರುತ್ತಾರೆ. ಇದಕ್ಕಾಗಿ ತಾವು ದುಡಿದು ಉಳಿಸಿದ ಹಣವನ್ನು ವಿವಿಧ ಯೋಜನೆಗಳಲ್ಲಿ ಉಳಿತಾಯ ಮಾಡುತ್ತಾರೆ. ಹೀಗೆ ಹಣಕಾಸು ಗುರಿ ಸಾಧನೆಗೆ ಉಳಿತಾಯ ಅಥವಾ ಹೂಡಿಕೆ ಮಾಡಲು ಹಲವಾರು ವಿಧದ ಯೋಜನೆಗಳು ಲಭ್ಯವಿವೆ. ಆದರೆ ಯಾವ ರೀತಿಯ ಯೋಜನೆ ನಿಮಗೆ ಸರಿಹೊಂದುವುದು ಎಂಬುದನ್ನು ಸರಿಯಾಗಿ ನಿರ್ಧರಿಸಿ ಅದರಲ್ಲಿ ಹೂಡಿಕೆ ಮಾಡಬೇಕು.

  ಉಳಿತಾಯ ಹಾಗೂ ಹೂಡಿಕೆಯ ಕೆಲ ಪ್ರಮುಖ ವಿಧಾನಗಳನ್ನು ಈ ಅಂಕಣದಲ್ಲಿ ವಿವರಿಸಲಾಗಿದ್ದು, ನಿಮಗೆ ಸರಿಹೊಂದುವ ಯೋಜನೆ ಯಾವುದು ಎಂಬುದನ್ನು ನೀವೇ ನಿರ್ಧರಿಸಿ. ಅಟಲ್ ಪಿಂಚಣಿ ಯೋಜನೆ ಮಾಡಿಸಿ, ತಿಂಗಳಿಗೆ 5000 ಪಡೆಯೋದು ಹೇಗೆ?

  ಹಣ ಹೂಡಿಕೆ ಮಾಡಲು ಅತ್ಯುತ್ತಮ ಆಯ್ಕೆಗಳು ಯಾವುವು ಎಂಬುದು ನೋಡೋಣ ಬನ್ನಿ..

  1. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)

  ಸರಕಾರಿ ಪ್ರಾಯೋಜಿತ ಪಿಪಿಎಫ್ ಯೋಜನೆ ಅತ್ಯಂತ ಸುರಕ್ಷಿತ ಹೂಡಿಕೆ ವಿಧಾನವಾಗಿದೆ. ಇದರಲ್ಲಿ ಮೂರು ರೀತಿಯ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ. ಆದಾಯ ತೆರಿಗೆ ಕಾಯ್ದೆ 80ಸಿ ಅನ್ವಯ ಹೂಡಿಕೆಯ ಮೊತ್ತ, ಅದಕ್ಕೆ ಸಿಗುವ ಬಡ್ಡಿ ಹಾಗೂ ಪಕ್ವತಾ ಮೊತ್ತ ಈ ಎಲ್ಲವೂ ಆದಾಯ ತೆರಿಗೆಯಿಂದ ಮುಕ್ತವಾಗಿವೆ. ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಶಾಖೆಯಲ್ಲಿ ಪಿಪಿಎಫ್ ಖಾತೆ ಆರಂಭಿಸಬಹುದಾಗಿದೆ.

  ಪಿಪಿಎಫ್ ಖಾತೆ ಆರಂಭಿಸಿದ ಆರ್ಥಿಕ ವರ್ಷದ ಕೊನೆಯಿಂದ ಮುಂದಿನ ೧೫ ವರ್ಷಗಳವರೆಗೆ ಈ ಖಾತೆ ಲಾಕ್ ಇನ್ ಅವಧಿ ಹೊಂದಿರುತ್ತದೆ. ವರ್ಷಕ್ಕೆ ಒಂದು ಬಾರಿ ಅಥವಾ ಗರಿಷ್ಠ ೧೨ ಕಂತುಗಳಲ್ಲಿ ಖಾತೆಗೆ ವಂತಿಗೆ ಜಮಾ ಮಾಡಬಹುದು. ಕೆಲ ಷರತ್ತುಗಳಿಗೆ ಒಳಪಟ್ಟು ಈ ಖಾತೆಯನ್ನು ಅವಧಿ ಪೂರ್ವ ಬಂದ್ ಮಾಡಬಹುದು ಅಥವಾ ಖಾತೆಯಲ್ಲಿನ ಅಂಶಿಕ ಮೊತ್ತವನ್ನು ಹಿಂಪಡೆಯಬಹುದು. ಪ್ರತಿ ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರೂ. ಹಾಗೂ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಈ ಖಾತೆಗೆ ವಂತಿಗೆಯಾಗಿ ಜಮಾ ಮಾಡಬಹುದು. ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಯಾವುದೇ ವಂತಿಗೆ ಕಟ್ಟದಿದ್ದಲ್ಲಿ ದಂಡ ಭರಿಸಬೇಕಾಗುತ್ತದೆ. ತಿಂಗಳಿಗೆ ಕೇವಲ 500 ಹೂಡಿಕೆ ಮಾಡಿ ಶ್ರೀಮಂತರಾಗುವ 5 ವಿಧಾನಗಳು

  2. ಫಿಕ್ಸೆಡ್ ಡಿಪಾಸಿಟ್

  ಫಿಕ್ಸೆಡ್ ಡಿಪಾಸಿಟ್ ಇದು ಮತ್ತೊಂದು ರೀತಿಯ ನಿಶ್ಚಿತ ಆದಾಯದ ಹೂಡಿಕೆ ಯೋಜನೆಯಾಗಿದೆ. ಬ್ಯಾಂಕ್ ಎಫ್‌ಡಿ, ಕಂಪನಿಗಳ ಎಫ್‌ಡಿಗಳಲ್ಲಿ ಯಾವುದಾದರೊಂದು ಅಥವಾ ಎರಡೂ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ ಹಾಗೂ ಕಂಪನಿಗಳ ಎಫ್‌ಡಿ ಯೋಜನೆಯ ಕನಿಷ್ಠ ಹೂಡಿಕೆ ಮೊತ್ತ, ಅವಧಿ ಮತ್ತು ಬಡ್ಡಿ ದರಗಳು ಬೇರೆ ಬೇರೆಯಾಗಿವೆ. ಆದರೂ ಇದರಲ್ಲಿ ಹೂಡಬಹುದಾದ ಗರಿಷ್ಠ ಮೊತ್ತಕ್ಕೆ ಮಿತಿಯನ್ನು ವಿಧಿಸಲಾಗಿಲ್ಲ. ಕಂಪನಿ ಎಫ್‌ಡಿ ಯೋಜನೆಗಳಲ್ಲಿ ಬ್ಯಾಂಕಿಗಿಂತ ಬಡ್ಡಿ ದರ ಹೆಚ್ಚು ಸಿಗುತ್ತದಾದರೂ, ರಿಸ್ಕ್ ಅಂಶವೂ ಹೆಚ್ಚಾಗಿರುತ್ತದೆ.

  ಡಿಪಾಸಿಟ್ ಇನ್ಸೂರೆನ್ಸ್ ಆಂಡ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ವೆಬ್ ಸೈಟ್ ಪ್ರಕಾರ, ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ (ಪ್ರಾಥಮಿಕ ಸಹಕಾರಿ ಸಂಸ್ಥೆಗಳನ್ನು ಹೊರತುಪಡಿಸಿ) ೧ ಲಕ್ಷ ರೂ. ವರೆಗಿನ ಎಫ್‌ಡಿಗೆ ವಿಮಾ ಸುರಕ್ಷತೆ ನೀಡಲಾಗಿದೆ. ಇದು ಪ್ರತಿ ಬ್ಯಾಂಕಿನಲ್ಲಿ ಇಟ್ಟ ಎಫ್‌ಡಿಗೆ ಅನ್ವಯಿಸುತ್ತದೆ. ಇದಲ್ಲದೆ ಬ್ಯಾಂಕಿನ ಎಫ್‌ಡಿ ಯೋಜನೆಗಳು ರಿಸರ್ವ ಬ್ಯಾಂಕ್ ನಿಯಮಾವಳಿಗಳಿಗೆ ಒಳಪಟ್ಟಿರುತ್ತವೆ. ಆದರೆ ಕಂಪನಿಗಳಲ್ಲಿಟ್ಟ ಎಫ್‌ಡಿ ಹೆಚ್ಚು ರಿಸ್ಕ್‌ಗೆ ಒಳಪಟ್ಟಿದ್ದು, ಕಂಪನಿ ನಷ್ಟಕ್ಕೀಡಾದಲ್ಲಿ ಅಸಲು ಹಾಗೂ ಬಡ್ಡಿ ಪಾವತಿಯ ಯಾವುದೇ ಖಾತರಿ ಇರುವುದಿಲ್ಲ.

  3. ಶೇರು ಹಾಗೂ ಸ್ಟಾಕ್‌ಗಳು

  ಶೇರುಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂಬುದು ಗೊತ್ತಿರುವ ಸಂಗತಿಯೇ ಆಗಿದೆ. ಹೂಡಿಕೆ ಮಾಡುವ ಮುನ್ನ ನಿರ್ದಿಷ್ಟ ಶೇರಿನ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿರುವುದು ಅಗತ್ಯ. ಕಂಪನಿಗಳು ಆರಂಭದಲ್ಲಿ ಐಪಿಓ ಮೂಲಕ ಶೇರು ಬಿಡುಗಡೆ ಮಾಡಿದಾಗ ಅಥವಾ ನಂತರ ಸ್ಟಾಕ್ ಎಕ್ಸಚೇಂಜ್‌ಗಳ ಮೂಲಕ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
  ಶೇರುಗಳ ಬೆಲೆಗಳು ನಿರಂತರವಾಗಿ ಬದಲಾಗುವುದರಿಂದ ನೀವು ಹೂಡಿದ ಬಂಡವಾಳ ಹಾಗೂ ಅದರಿಂದ ಸಿಗುವ ಪ್ರತಿಫಲದ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ ಎಂಬುದು ಗೊತ್ತಿರಲಿ. ಶೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯವರೆಗೆ ಅಂದರೆ 5 ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಹೂಡಿಕೆ ಮಾಡುವುದು ಸೂಕ್ತ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಇದರಲ್ಲಿನ ಕೆಲ ಹೂಡಿಕೆ ವಿಧಾನಗಳು ಹಣದುಬ್ಬರವನ್ನು ಮೀರಿ ಆದಾಯ ನೀಡಬಲ್ಲವು.

  4. ಮ್ಯೂಚುವಲ್ ಫಂಡ್ಸ್

  ಶೇರು ಮಾರುಕಟ್ಟೆಯ ಆಳವಾದ ಜ್ಞಾನ ಇರದವರು ಹಾಗೂ ಇದರ ಬಗ್ಗೆ ಅಧ್ಯಯನ ಕೈಗೊಳ್ಳಲು ಸಮಯ ಇರದವರು ಮ್ಯೂಚುವಲ್ ಫಂಡ್‌ಗಳ ಮೂಲಕ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್‌ಗಳಲ್ಲಿ ಕೇವಲ ಶೇರು, ಇಕ್ವಿಟಿ ಮಾತ್ರವಲ್ಲದೆ ಬಾಂಡ್‌ಗಳು, ಚಿನ್ನ ಮುಂತಾದುವುಗಳ ಮೇಲೆ ಹಣ ಹೂಡಲಾಗುತ್ತದೆ. ಸೂಕ್ತ ಹೂಡಿಕೆಯೊಂದಿಗೆ ಲಾಭ ಪಡೆಯುವ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಫಂಡ್ ಮ್ಯಾನೇಜರಗಳು ಮ್ಯೂಚುವಲ್ ಫಂಡ್‌ಗಳನ್ನು ನಿರ್ವಹಿಸುತ್ತಾರೆ.
  ನೀವು ಬಯಸಿದ ಹೂಡಿಕೆ ಅವಧಿ ಹಾಗೂ ರಿಸ್ಕ್‌ಗಳ ಆಧಾರದ ಮೇಲೆ ಇಕ್ವಿಟಿ, ಡೆಬ್ಟ್ ಅಥವಾ ಬ್ಯಾಲೆನ್ಸಡ್ ಫಂಡ್‌ಗಳನ್ನು ಆಯ್ಕೆ ಮಾಡಬಹುದು. ಏಕಕಂತಿನಲ್ಲಿ ಅಥವಾ ಮಾಸಿಕ ಸಿಪ್ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಅವಕಾಶವಿದೆ.

  5. ರೆಕರಿಂಗ್ ಡಿಪಾಸಿಟ್

  ನಿಯಮಿತ ಕಂತುಗಳಲ್ಲಿ ಹೂಡಿಕೆ ಮಾಡಲು ಬಯಸುವಿರಾದರೆ ರೆಕರಿಂಗ್ ಡಿಪಾಸಿಟ್ ಯೋಜನೆ ಸುರಕ್ಷಿತ ಹಾಗೂ ಉತ್ತಮ ಹೂಡಿಕೆ ವಿಧಾನವಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ರೆಕರಿಂಗ್ ಡಿಪಾಸಿಟ್ ಖಾತೆ ಆರಂಭಿಸಬಹುದು. ಆರ್‌ಡಿ ಖಾತೆ ಅವಧಿಯು ವಿವಿಧ ಬ್ಯಾಂಕುಗಳಲ್ಲಿ ಬೇರೆ ತೆರನಾಗಿದೆ. ಅಂಚೆ ಕಚೇರಿಯಲ್ಲಿ ೫ ವರ್ಷದ ಆರ್‌ಡಿ ಯೋಜನೆ ಲಭ್ಯವಿದೆ. ಅದೇ ರೀತಿ ಸ್ಟೇಟ್ ಬ್ಯಾಂಕಿನಲ್ಲಿ 12 ರಿಂದ 120 ತಿಂಗಳ ಕಾಲಾವಧಿಯ ಆರ್‌ಡಿ ಮಾಡಿಸಬಹುದು.

  6. ಅಂಚೆ ಕಚೇರಿ ಉಳಿತಾಯ ಯೋಜನೆಗಳು

  ಪಿಪಿಎಫ್ ಹಾಗೂ ಆರ್‌ಡಿ ಹೊರತು ಪಡಿಸಿ ಇನ್ನೂ ಕೆಲ ಹೂಡಿಕೆ ಯೋಜನೆಗಳು ಅಂಚೆ ಕಚೇರಿಗಳಲ್ಲಿ ಲಭ್ಯವಿವೆ. ನಿಶ್ಚಿತ ಠೇವಣಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ, ಕಿಸಾನ ವಿಕಾಸ ಪತ್ರ ಮತ್ತು ರಾಷ್ಟ್ರೀಯ ಉಳಿತಾಯ ಪತ್ರ ಇವು ಇತರ ಅಂಚೆ ಕಚೇರಿ ಉಳಿತಾಯ ಯೋಜನೆಗಳಾಗಿವೆ. ಇವುಗಳ ಅವಧಿ, ಹೂಡಿಕೆ ಮೊತ್ತ, ಬಡ್ಡಿ ದರಗಳು ವಿಭಿನ್ನವಾಗಿವೆ. ಅಂಚೆ ಕಚೇರಿಯ ಎಲ್ಲ ಹೂಡಿಕೆ ಯೋಜನೆಗಳು ಸಂಪೂರ್ಣ ಸುರಕ್ಷಿತವಾಗಿವೆ.

  7. ಯುನಿಟ್ ಆಧರಿತ ವಿಮಾ ಯೋಜನೆ (ಯುಲಿಪ್)

  ಯುಲಿಪ್ ಇವು ವಿಮೆ ಹಾಗೂ ಹೂಡಿಕೆ ಎರಡನ್ನೂ ಏಕಕಾಲಕ್ಕೆ ನೀಡುವ ಯೋಜನೆಗಳಾಗಿವೆ. ಇವುಗಳಲ್ಲಿನ ಮೊತ್ತವನ್ನು ಡೆಬ್ಟ್ ಹಾಗೂ ಇಕ್ವಿಟಿ ಎರಡರಲ್ಲಿಯೂ ಹೂಡಿಕೆ ಮಾಡಲಾಗುತ್ತದೆ. ಆದರೆ ಇವುಗಳಲ್ಲಿ ಹಲವಾರು ಶುಲ್ಕಗಳನ್ನು ವಿಧಿಸಲಾಗುತ್ತಿದ್ದು, ಇವುಗಳ ಬಗ್ಗೆ ಹೂಡಿಕೆದಾರರು ಮೊದಲು ಅರಿತುಕೊಳ್ಳಬೇಕು. ಪ್ರಸ್ತುತ ಈ ಯೋಜನೆಗಳ ಮ್ಯಾಚುರಿಟಿ ಮೊತ್ತವು ತೆರಿಗೆಯಿಂದ ಮುಕ್ತವಾಗಿದೆ. ೫ ವರ್ಷಗಳ ಲಾಕ್ ಇನ್ ಅವಧಿಯ ನಂತರವೇ ಹೂಡಿಕೆಯನ್ನು ಹಿಂಪಡೆಯಬಹುದು.

  8. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)

  ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸ ಹಾಗೂ ವಿವಾಹದ ಖರ್ಚು ನಿಭಾಯಿಸಲು ಮಕ್ಕಳ ಪಾಲಕರು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಬೇಟಿ ಬಚಾವೊ ಬೇಟಿ ಪಢಾವೊ ಅಭಿಯಾನದ ಅಂಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಅಂಚೆ ಕಚೇರಿ ಶಾಖೆ ಅಥವಾ ನಿರ್ದಿಷ್ಟ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಬಹುದಾಗಿದೆ. ಎಸ್‌ಎಸ್‌ವೈ ಖಾತೆಯು 21 ವರ್ಷಗಳ ಲಾಕ್ ಇನ್ ಅವಧಿ ಹೊಂದಿದ್ದು, ಕೆಲ ಷರತ್ತುಗೊಳಪಟ್ಟು ಅವಧಿಪೂರ್ವ ಹಣ ಹಿಂಪಡೆಯಬಹುದಾಗಿದೆ. ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 1000 ರೂ. ಹಾಗೂ ಗರಿಷ್ಠ 1.5 ಲಕ್ಷ ರೂ. ಗಳನ್ನು ಖಾತೆಗೆ ಹೂಡಿಕೆ ಮಾಡಬಹುದು.

  9. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)

  ತಮ್ಮ ನಿವೃತ್ತಿ ಜೀವನದಲ್ಲಿ ಪಿಂಚಣಿ ಪಡೆಯಲು ಬಯಸುವವರು ಎನ್‌ಪಿಎಸ್ ಪಡೆದುಕೊಳ್ಳಬಹುದು. 18 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ಈ ಯೋಜನೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

  ವರ್ಷಕ್ಕೆ ಕನಿಷ್ಠ 1000 ರೂ. ವಂತಿಗೆ ಪಾವತಿಸಬೇಕಿದ್ದು, ಇದಕ್ಕೆ ಗರಿಷ್ಠ ಮಿತಿಯನ್ನು ವಿಧಿಸಲಾಗಿಲ್ಲ. ಇದು ಮಾರುಕಟ್ಟೆ ಆಧರಿತ ಯೋಜನೆಯಾಗಿರುವುದರಿಂದ ಪಕ್ವತಾ ಅವಧಿಯ ನಂತರ ಸಂಗ್ರಹವಾಗುವ ಒಟ್ಟು ಮೊತ್ತದ ಆಧಾರದಲ್ಲಿ ಪಿಂಚಣಿ ಮೊತ್ತ ನಿರ್ಧರಿಸಲ್ಪಡುತ್ತದೆ. 60 ವರ್ಷ ವಯಸ್ಸಾದ ನಂತರ ಯೋಜನೆ ಮುಕ್ತಾಯವಾಗುತ್ತದೆ. ಪಕ್ವತಾ ಅವಧಿಯ ನಂತರ ಸಂಗ್ರಹವಾಗಿರುವ ಒಟ್ಟು ಮೊತ್ತದಲ್ಲಿ ಶೇ. 40 ರಷ್ಟನ್ನು ಪಿಂಚಣಿಗಾಗಿ ಬಿಡಬೇಕಾಗುತ್ತದೆ ಹಾಗೂ ಉಳಿದ ಮೊತ್ತವನ್ನು ಏಕಗಂಟಿನಲ್ಲಿ ಹಿಂಪಡೆಯಬಹುದು. ಕೆಲ ಷರತ್ತುಗೊಳಪಟ್ಟು ಅವಧಿ ಪೂರ್ವ ಹಣ ಹಿಂಪಡೆಯಬಹುದು.

  10. ಚಿನ್ನದ ಮೇಲೆ ಹೂಡಿಕೆ

  ಫಿಕ್ಸೆಡ್ ಡಿಪಾಸಿಟ್ ರೀತಿ ಚಿನ್ನದ ಮೇಲಿನ ಹೂಡಿಕೆಯು ಸ್ಥಿರ ಆದಾಯವನ್ನು ನೀಡುವುದಿಲ್ಲವಾದರೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಭಾರತೀಯರಿಗೆ ಅತಿ ಇಷ್ಟದ ಹೂಡಿಕೆ ವಿಧಾನಗಳಲ್ಲೊಂದಾಗಿದೆ. ಕೆಲ ತುರ್ತು ಸಂದರ್ಭಗಳಲ್ಲಿ ಸುರಕ್ಷತೆ ಹಾಗೂ ಸ್ಥಿರತೆಯನ್ನು ನೀಡುವ ಕಾರಣದಿಂದ ಚಿನ್ನದ ಮೇಲೆ ಹೂಡಿಕೆ ಮಾಡಲು ಜನ ಬಯಸುತ್ತಾರೆ.
  ಚಿನ್ನದ ಆಭರಣ, ಬಿಸ್ಕೆತ್, ಚಿನ್ನದ ಗಟ್ಟಿ, ಚಿನ್ನದ ಬಾಂಡ್‌ಗಳು, ಗೋಲ್ಡ ಮ್ಯೂಚುವಲ್ ಫಂಡ್ಸ್ ಮುಂತಾದ ವಿಧಾನಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

  11. ಬಾಂಡ್‌ಗಳು

  ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಜಿರೋ ಕೂಪನ್ ಬಾಂಡ್, ಟ್ಯಾಕ್ಸ್ ಫ್ರೀ ಬಾಂಡ್, ಟ್ಯಾಕ್ಸೇಬಲ್ ಬಾಂಡ್, ಪಿಎಸ್‌ಯು ಬಾಂಡ್, ಶೇ. ೭.೭೫ರ ಆರ್‌ಬಿಐ ಬಾಂಡ್ ಇವು ವಿವಿಧ ರೀತಿಯ ಬಾಂಡ್‌ಗಳಾಗಿವೆ. ಇವೆಲ್ಲವುಗಳ ಕಾರ್ಯವಿಧಾನ ವಿಭಿನ್ನವಾಗಿರುವುದರಿಂದ ಹೂಡಿಕೆಗೂ ಮುನ್ನ ಕನಿಷ್ಠ ಹೂಡಿಕೆ ಮೊತ್ತ, ಅವಧಿ, ತೆರಿಗೆ, ಪಕ್ವತಾ ಮೊತ್ತ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬೇಕು. ಪ್ರಥಮ ಬಾರಿಗೆ ಸರಕಾರ ಅಥವಾ ಕಂಪನಿಗಳು ಬಾಂಡ್‌ಗಳನ್ನು ಮಾರುಕಟ್ಟೆಗೆ ತಂದಾಗ ಇವುಗಳನ್ನು ಖರೀದಿಸಬಹುದು. ಹಾಗೆಯೇ ಮಾರುಕಟ್ಟೆಯಲ್ಲಿಯೂ ಬಾಂಡ್‌ಗಳನ್ನು ಖರೀದಿಸಬಹುದು.

  12. ರಿಯಲ್ ಎಸ್ಟೇಟ್

  ರಿಯಲ್ ಎಸ್ಟೇಟ್ ಇದು ಕಟ್ಟಡ, ಜಾಗಗಳ ಮೇಲೆ ಹೂಡಿಕೆ ಮಾಡುವ ವಿಧಾನವಾಗಿದೆ. ನೀವು ವಾಸಿಸಲು ಅಥವಾ ಬಾಡಿಗೆ ಆದಾಯ ಗಳಿಸಲು ಮನೆ ಖರೀದಿಸಬಹುದು. ಅದೇ ರೀತಿ ಕಾಲಾವಧಿಯಲ್ಲಿ ಆಸ್ತಿ ಮೌಲ್ಯ ಹೆಚ್ಚಳವಾದಾಗ ಅದನ್ನು ಮಾರಿ ಲಾಭ ಗಳಿಸಬಹುದು. ಮನೆಯ ಅಳತೆ, ಬಡಾವಣೆ, ಸ್ಥಳ ಹಾಗೂ ಅಂದಿನ ರಿಯಲ್ ಎಸ್ಟೇಟ್ ಉದ್ಯಮವನ್ನು ಆಧರಿಸಿ ಮನೆಯ ಬೆಲೆಗಳು ನಿರ್ಧರಿಸಲ್ಪಡುತ್ತವೆ. ಹಲವಾರು ಜನ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಭಾರಿ ಲಾಭ ಗಳಿಸಿದ್ದು ಸತ್ಯವಾದರೂ, ಇದರಲ್ಲಿನ ರಿಸ್ಕ್‌ಗಳನ್ನು ಅರಿಯದೆ ಹೂಡಿಕೆ ಮಾಡುವಂತಿಲ್ಲ. ಬೇಗನೆ ಮಾರಾಟ ಅಥವಾ ಖರೀದಿ ಆಗದಿರುವುದು, ಹೇಳಿದ ಸಮಯಕ್ಕೆ ಕಟ್ಟಡ ನಿರ್ಮಾಣ ಆಗದಿರುವುದು, ಭಾಗಶಃ ಮಾರಾಟ ಮಾಡಲು ಸಾಧ್ಯವಾಗದಿರುವುದು ಮುಂತಾದ ಅಪಾಯಗಳು ಈ ಉದ್ಯಮದಲ್ಲಿ ಅಡಕವಾಗಿವೆ. ಮೊದಲಿನಂತೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಲಾಭ ಗಳಿಸುವುದು ಸಾಧ್ಯವಿಲ್ಲವಾದರೂ, ಕೆಲ ಪ್ರದೇಶಗಳಲ್ಲಿ ಈಗಲೂ ಬೆಲೆಗಳು ಉತ್ತಮವಾಗಿವೆ.

  English summary

  What are the Best Options for Investing Money?

  People have various financial goals and to help achieve them there is a plethora of investment options available in the market.
  Story first published: Monday, October 1, 2018, 8:52 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more