For Quick Alerts
ALLOW NOTIFICATIONS  
For Daily Alerts

20-35 ವಯೋಮಾನದ ಕೆಲಸಕ್ಕೆ ಹೋಗುತ್ತಿರುವ ಮಹಿಳೆಯರು ಇದನ್ನು ಓದಲೇಬೇಕು..

ಜೀವನದಲ್ಲಿ ನಿಭಾಯಿಸಬೇಕಾಗುವ ಹಲವಾರು ಜವಾಬ್ದಾರಿಗಳು ಕೆಲ ಬಾರಿ ವಿಪರೀತ ಹೊರೆಯಾಗುತ್ತಿವೆ ಎನಿಸುತ್ತದೆ. ಆದರೆ ಹಣಕಾಸು ಯೋಜನೆ ಹಾಗೂ ನಿರ್ವಹಣೆ ಸಮರ್ಪಕವಾಗಿದ್ದಲ್ಲಿ ಈಗಿನ ಹಾಗೂ ಭವಿಷ್ಯದ ಜವಾಬ್ದಾರಿಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ.

|

ಜೀವನದಲ್ಲಿ ನಿಭಾಯಿಸಬೇಕಾಗುವ ಹಲವಾರು ಜವಾಬ್ದಾರಿಗಳು ಕೆಲ ಬಾರಿ ವಿಪರೀತ ಹೊರೆಯಾಗುತ್ತಿವೆ ಎನಿಸುತ್ತದೆ. ಆದರೆ ಹಣಕಾಸು ಯೋಜನೆ ಹಾಗೂ ನಿರ್ವಹಣೆ ಸಮರ್ಪಕವಾಗಿದ್ದಲ್ಲಿ ಈಗಿನ ಹಾಗೂ ಭವಿಷ್ಯದ ಜವಾಬ್ದಾರಿಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ ಎಂಬುದು ಕೂಡ ಸತ್ಯ.
ಅದರಲ್ಲೂ 20 ರಿಂದ 30 ವರ್ಷ ವಯೋಮಾನದ ಉದ್ಯೋಗಸ್ಥ ಮಹಿಳೆಯರು ಯಾವೆಲ್ಲ ಹಣಕಾಸು ಶಿಸ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವ 9 ಯೋಜನೆಗಳು

20 ರಿಂದ 30 ವರ್ಷ ವಯಸ್ಸಿನ ಉದ್ಯೋಗಸ್ಥ ಮಹಿಳೆಯರಿಗಾಗಿ 10 ಹಣಕಾಸು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

1. ನಿಮ್ಮ ಬಜೆಟ್ ನ್ನು ಮರು ನಿಯೋಜಿಸಿ

1. ನಿಮ್ಮ ಬಜೆಟ್ ನ್ನು ಮರು ನಿಯೋಜಿಸಿ

ಈ ವಯಸ್ಸಿನಲ್ಲಿ ನಿಮ್ಮ ಹಣಕಾಸು ಬಜೆಟ್ ಅನ್ನು ಮರು ಪರಿಶೀಲನೆಗೆ ಒಳಪಡಿಸುವುದು ಸೂಕ್ತ. 20ರ ವಯೋಮಾನದ ಕೊನೆಯಲ್ಲಿನ ಅವಶ್ಯಕತೆಗಳಿಗಿಂತ ಈಗಿನ ಅಗತ್ಯಗಳು ಭಿನ್ನವಾಗಿರುತ್ತವೆ. ಮನೆ ಕೊಳ್ಳುವುದು ಇರಬಹುದು ಅಥವಾ ಯಾವುದೋ ಬಿಸಿನೆಸ್ ಆರಂಭಿಸಲು ಹಣ ಕೂಡಿಸುವುದಿರಬಹುದು ಅಥವಾ ವಿವಾಹವಾಗುವುದು ಹೀಗೆ ಹಲವಾರು ವಿಷಯಗಳನ್ನು ಆಧರಿಸಿ ಬಜೆಟ್ ಅನ್ನು ತಯಾರಿಸಬೇಕಾಗುತ್ತದೆ. ಹೊಸ ಗ್ಯಾಜೆಟ್‌ಗಳ ಮೇಲೆ ಸುಮ್ಮನೆ ಹಣ ಖರ್ಚು ಮಾಡುವುದು ಅಥವಾ ಮನೆ ಸಿಂಗಾರಕ್ಕೆ ಹಣ ಸುರಿಯುವುದು ಇವುಗಳ ಬಗ್ಗೆ ಯೋಚನೆ ಮಾಡುವುದು ಅಗತ್ಯ. ಇಂಥ ಅನಗತ್ಯ ಖರ್ಚುಗಳ ಬದಲು ಇದೇ ಹಣವನ್ನು ಭವಿಷ್ಯದ ಅಗತ್ಯತೆಗಳಿಗಾಗಿ ಶೇಖರಿಸುತ್ತ ಹೋಗುವುದು ಅತಿ ಅವಶ್ಯಕ.

2. ವಿಮಾ ಸುರಕ್ಷೆ ಹೆಚ್ಚಿಸಿ

2. ವಿಮಾ ಸುರಕ್ಷೆ ಹೆಚ್ಚಿಸಿ

ನಿಮ್ಮನ್ನು ಅವಲಂಬಿಸಿದ ಮಕ್ಕಳಿರಬಹುದು ಅಥವಾ ವೃದ್ಧ ಪಾಲಕರಿರಬಹುದು. ವಿಮೆ ಎಂಬುದು ಇವರೆಲ್ಲರಿಗೂ ಹಣಕಾಸು ಸುರಕ್ಷತೆ ನೀಡುವ ಅಸ್ತ್ರವಾಗಿದೆ. ಸಮಯ ಕಳೆದಂತೆ ಮನೆಯ ಎಲ್ಲ ಸದಸ್ಯರಿಗೂ ವಿಮೆಯ ಸುರಕ್ಷತೆ ಸಿಗುವಂತೆ ವಿಮೆ ವಿಸ್ತರಿಸುತ್ತ ಹೋಗಬೇಕು. ಇನ್ನು ವೃತ್ತಿ ಜೀವನದ ಆರಂಭದಲ್ಲಿ ಅಂದರೆ ಸಣ್ಣ ವಯಸ್ಸಿನಲ್ಲಿಯೇ ವಿಮಾ ಪಾಲಿಸಿ ಕೊಳ್ಳುವುದು ಸೂಕ್ತ. ವಯಸ್ಸು ಹೆಚ್ಚಾದಂತೆ ವಿಮಾ ಪಾಲಿಸಿಗಳೂ ತುಟ್ಟಿಯಾಗುತ್ತವೆ. ನಿಮ್ಮ ವಾರ್ಷಿಕ ಆದಾಯದ 10 ಪಟ್ಟು ಹೆಚ್ಚು ವಿಮಾ ಸುರಕ್ಷೆ ಹೊಂದಿರುವುದು ಸರಿಯಾದ ಹಣಕಾಸು ಯೋಜನೆಯಾಗಿದೆ.

3. ಆರೋಗ್ಯ ವಿಮೆ

3. ಆರೋಗ್ಯ ವಿಮೆ

ಈಗಿನ ಕಾಲದಲ್ಲಿ ಆರೋಗ್ಯ ವಿಮೆ ಇಲ್ಲದಿದ್ದರೆ ನಿಮ್ಮ ಯಾವುದೇ ವೈಯಕ್ತಿಕ ಹಣಕಾಸು ಬಜೆಟ್ ಸಂಪೂರ್ಣವಾಗಲಾರದು. ಸೂಕ್ತವಾದ ಆರೋಗ್ಯ ವಿಮಾ ಪಾಲಿಸಿ ತುರ್ತು ಚಿಕಿತ್ಸೆ, ಆಸ್ಪತ್ರೆ ವೆಚ್ಚ, ಔಷಧಿ ಖರ್ಚು ಹಾಗೂ ಹೊರ ರೋಗಿ ವಿಭಾಗದ ಖರ್ಚುಗಳನ್ನು ಭರಿಸುತ್ತದೆ. ವಯಸ್ಸಾದಂತೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತವೆ ಎಂಬುದು ತಿಳಿದ ಸಂಗತಿಯೇ ಆಗಿದೆ. ಹೀಗಾಗಿ ಆರೋಗ್ಯವಂತರಾಗಿರುವಾಗಲೇ ಮುಂದಿನ ದಿನಗಳ ಆರೋಗ್ಯದ ಸುರಕ್ಷತೆಯ ವ್ಯವಸ್ಥೆ ಮಾಡಿಕೊಳ್ಳುವುದು ಜಾಣತನವಾಗಿದೆ.

4. ಜೀವ ವಿಮೆ

4. ಜೀವ ವಿಮೆ

ಯೌವನದಲ್ಲಿರುವಾಗ ಅತಿ ಕಡಿಮೆ ಖರ್ಚಿನಲ್ಲಿ ಹಾಗೂ ಸುಲಭವಾಗಿ ಜೀವವಿಮಾ ಪಾಲಿಸಿ ಕೊಳ್ಳಬಹುದು. ಜೀವ ವಿಮೆ ಎಂಬುದನ್ನು ಹೂಡಿಕೆ ವಿಷಯವಾಗಿ ನೋಡುವಂತಿಲ್ಲ. ಇದೇನಿದ್ದರೂ ನಿಮ್ಮ ಅವಲಂಬಿತರಿಗೆ ಕಷ್ಟ ಕಾಲದಲ್ಲಿ ಹಣಕಾಸು ರಕ್ಷಣೆ ನೀಡುವ ಸಾಧನ ಎಂಬುದು ಗೊತ್ತಿರಲಿ. ಒಂದೊಮ್ಮೆ ಯಾವುದೋ ಆಕಸ್ಮಿಕ ಘಟನೆಯಿಂದ ಮನೆಯ ದುಡಿಯುವ ಸದಸ್ಯ ಮೃತನಾದಲ್ಲಿ ಆತ ಪಡೆದ ಜೀವ ವಿಮೆ ಇಡೀ ಸಂಸಾರಕ್ಕೆ ಹಣಕಾಸು ಭದ್ರತೆ ನೀಡುತ್ತದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

5. ಸಾಲಗಳನ್ನು ತೀರಿಸಿ

5. ಸಾಲಗಳನ್ನು ತೀರಿಸಿ

ಪ್ರತಿ ತಿಂಗಳು ಇಎಂಐ ರೂಪದಲ್ಲಿ ಹಣ ನುಂಗುತ್ತಿರುವ ಸಾಲಗಳನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಬೇಗ ಸಾಲ ತೀರಿಸುವುದರಿಂದ ಬಡ್ಡಿ ಪಾವತಿಗಳೂ ಕಡಿಮೆಯಾಗಿ ಸಾಕಷ್ಟು ಹಣ ಉಳಿತಾಯ ಮಾಡಬಹುದು.

6. ತುರ್ತು ನಿಧಿಗಾಗಿ ಹಣ ಮೀಸಲಿಡಿ

6. ತುರ್ತು ನಿಧಿಗಾಗಿ ಹಣ ಮೀಸಲಿಡಿ

ಜೀವನ ಎಂಬುದು ಅದೃಷ್ಟದ ಆಟವಾಗಿದೆ. ಯಾವಾಗ ಎಂಥ ಕಷ್ಟದ ಸಂದರ್ಭ ಎದುರಾಗಬಹುದು ಎಂಬುದನ್ನು ಹೇಳಲಾಗದು. ಇರುವ ಕೆಲಸ ಹೋಗಬಹುದು ಅಥವಾ ಗಂಭೀರ ಕಾಯಿಲೆ ಬರಬಹುದು. ಇಂಥ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಯಾವಾಗಲೂ ತುರ್ತುನಿಧಿಯೊಂದನ್ನು ಕಾಯ್ದಿಟ್ಟುಕೊಳ್ಳುವುದು ಅತಿ ಅಗತ್ಯ. 6 ತಿಂಗಳು ಕಾಲ ಜೀವನೋಪಾಯಕ್ಕೆ ಬೇಕಾಗುವಷ್ಟು ಹಣವನ್ನು ತುರ್ತುನಿಧಿಯಾಗಿ ಇಟ್ಟುಕೊಳ್ಳಬೇಕು. ಬೇಗನೆ ನಗದಾಗಿ ಹಿಂಪಡೆಯುವ ಹಾಗೆ ಬೇರೊಂದು ಖಾತೆಯಲ್ಲಿ ಈ ಹಣ ಇಡಬೇಕಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಈ ಮೊತ್ತ ಪಡೆದು ಜೀವನವನ್ನು ಸುಗಮವಾಗಿ ನಡೆಸಬಹುದು.

7. ನಿವೃತ್ತಿ ಜೀವನಕ್ಕೂ ಗಳಿಕೆ ಮೀಸಲಿಡಿ

7. ನಿವೃತ್ತಿ ಜೀವನಕ್ಕೂ ಗಳಿಕೆ ಮೀಸಲಿಡಿ

ನಿವೃತ್ತಿ ಜೀವನ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಮುಂದೆ ಏನು ಮಾಡುವುದು ಎಂದು ಚಿಂತಿಸುವುದು ಜಾಣತನವಾಗಲಾರದು. ವೃತ್ತಿ ಜೀವನದ ಆರಂಭದಿಂದಲೇ ನಿವೃತ್ತ ಜೀವನಕ್ಕಾಗಿ ಹೂಡಿಕೆ ಮಾಡುತ್ತ ಹೋಗಬೇಕು. ಆದರೆ ಹೀಗೆ ನಿವೃತ್ತಿ ಜೀವನದ ಯೋಜನೆ ತಯಾರಿಸುವಾಗ ಹಣದುಬ್ಬರದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಹಣದುಬ್ಬರವನ್ನು ಲೆಕ್ಕ ಹಾಕಿದಲ್ಲಿ ಭವಿಷ್ಯದ ದಿನಗಳು ಅಂದರೆ ನಿವೃತ್ತಿ ಜೀವನದಲ್ಲಿ ಎಷ್ಟು ದೊಡ್ಡ ಮೊತ್ತ ಬೇಕಾಗಬಹುದು ಎಂಬುದು ನಿಮಗೆ ಅರಿವಾಗುತ್ತದೆ. ಮಹಿಳೆಯರ ಜೀವನಾವಧಿ ಪುರುಷರ ಜೀವನಾವಧಿಗಿಂತ ಹೆಚ್ಚಾಗಿರುವುದರಿಂದ ನೀವು ತುಸು ಹೆಚ್ಚಿನ ಪ್ರಮಾಣದ ನಿವೃತ್ತಿ ಜೀವನ ಮೊತ್ತ ಸಂಗ್ರಹಿಸಬೇಕಾಗುತ್ತದೆ. ಆದರೆ ಪುರುಷರಿಗಿಂತ ಮಹಿಳೆಯರ ಉದ್ಯೋಗ ಜೀವನ ಕಡಿಮೆಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಮ್ಯೂಚುವಲ್ ಫಂಡಗಳು ಹಾಗೂ ಸಿಪ್ ಯೋಜನೆಗಳಲ್ಲಿ ಹೂಡಿಕೆ ಆರಂಭಿಸಿ ನಿವೃತ್ತಿ ಜೀವನಕ್ಕಾಗಿ ಸುಭದ್ರ ಅಡಿಪಾಯ ಹಾಕಲು ಆರಂಭಿಸಲು ಸಾಧ್ಯ.

8. ಹೂಡಿಕೆಗೆ ಮುನ್ನ ಎಚ್ಚರಿಕೆ ಇರಲಿ

8. ಹೂಡಿಕೆಗೆ ಮುನ್ನ ಎಚ್ಚರಿಕೆ ಇರಲಿ

ಕಾಲಾವಧಿಯಲ್ಲಿ ಸಣ್ಣ ಸಣ್ಣ ಹೂಡಿಕೆಗಳ ಮೂಲಕ ಸಂಪತ್ತು ಸೃಷ್ಟಿಸಲು ಸಾಧ್ಯ. ಆದರೆ ವಿಪರೀತ ಬಡ್ಡಿದರ ನೀಡುತ್ತೇವೆ ಎಂದು ಹೇಳಿ ಟೋಪಿ ಹಾಕುವ ಸ್ಕೀಂಗಳಲ್ಲಿ ಹಣ ಹೂಡಿಕೆ ಮಾಡಲೇಕೂಡದು. ಇಂಥ ಟೋಪಿವಾಲಾ ಕಂಪನಿಗಳಿಂದ ಯಾವಾಗಲೂ ದೂರವಿರಿ. "ತಕ್ಷಣ ಹಣ ದುಪ್ಪಟ್ಟು ಮಾಡಿಕೊಡುವೆ ಎಂದು ಯಾರಾದರೂ ಹೇಳಿದಲ್ಲಿ ಅಂಥವರಿಗೆ ತಕ್ಷಣ 'ನೋ' ಎಂದು ಹೇಳಿ" ಎಂದು ಖ್ಯಾತ ಹೂಡಿಕೆ ತಜ್ಞ ವಾರೆನ್ ಬಫೆಟ್ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇನ್ನು ಬೇರೆ ಬೇರೆ ವಲಯಗಳಲ್ಲಿ ಹೂಡಿಕೆ ಮಾಡಿದಲ್ಲಿ ರಿಸ್ಕ್ ಕಡಿಮೆಯಾಗಿರುತ್ತದೆ. ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ

9. ಸಂಪತ್ತು ಸೃಷ್ಟಿಗೆ ಯತ್ನಿಸಿ, ಸಾಲವನ್ನಲ್ಲ

9. ಸಂಪತ್ತು ಸೃಷ್ಟಿಗೆ ಯತ್ನಿಸಿ, ಸಾಲವನ್ನಲ್ಲ

ಈಗಿನ ದಿನಮಾನಗಳಲ್ಲಿ ಸಾಲ ಪಡೆಯುವುದು ಅತಿ ಸುಲಭವಾಗಿದೆ. ಆದರೆ ನಿಮ್ಮ ಸಾಲಗಳಿಗೆ ಒಂದು ಮಿತಿ ಹಾಕಿಕೊಳ್ಳಿ. ತೀರಿಸಲಾಗದಷ್ಟು ಸಾಲ ಪಡೆದು ನಂತರ ಒದ್ದಾಡಬೇಡಿ. ಯಾವುದೋ ಮೊಬೈಲ್ ಕೊಳ್ಳಲು, ಒಂದು ಪರ್ಸ್ ಕೊಳ್ಳಲು ಕ್ರೆಡಿಟ್ ಕಾರ್ಡ ಬಳಸುವುದು ಖಂಡಿತ ಜಾಣತನವಾಗಲಾರದು. ಇದರ ಬದಲು ಭವಿಷ್ಯದಲ್ಲಿ ಮೌಲ್ಯವರ್ಧನೆಯಾಗುವಂಥ ಆಸ್ತಿಗಳ ಮೇಲೆ ಹಣ ಹೂಡಿಕೆ ಮಾಡಲು ಯತ್ನಿಸಿ. ಹಲವಾರು ಬ್ಯಾಂಕುಗಳು ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತವೆ ಎಂಬುದು ಗೊತ್ತಿರಲಿ. ಇನ್ನು ಹಲವಾರು ರಾಜ್ಯಗಳಲ್ಲಿ ಮಹಿಳೆಯರಿಗೆ ಆಸ್ತಿ ನೋಂದಣಿ ಫೀಯನ್ನು ಶೇ.2 ರಷ್ಟು ಕಡಿಮೆ ಆಕರಿಸಲಾಗುತ್ತದೆ.

10. ಸಂಗಾತಿಯೊಂದಿಗೆ ಚರ್ಚಿಸಿ

10. ಸಂಗಾತಿಯೊಂದಿಗೆ ಚರ್ಚಿಸಿ

ನೀವು ವಿವಾಹಿತರಾಗಿದ್ದಲ್ಲಿ ನಿಮ್ಮ ಹಣಕಾಸು ಸ್ಥಿತಿಗತಿಯ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿ. ಹೀಗೆ ಚರ್ಚೆ ಮಾಡಿದಲ್ಲಿ ಇಬ್ಬರ ಆದಾಯ ಹಾಗೂ ಖರ್ಚುಗಳನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಇಬ್ಬರೂ ನಿಮ್ಮ ಹಣಕಾಸು ಗುರಿಗಳನ್ನು ತಿಳಿದುಕೊಂಡು ಅವುಗಳ ಸಾಧನೆಗೆ ಒಟ್ಟಾಗಿ ಪ್ರಯತ್ನಿಸಬಹುದು. ಯಾವುದೇ ಹಣಕಾಸು ನಿರ್ಧಾರವನ್ನು ಜೊತೆಯಾಗಿಯೇ ಮಾಡಿ.

11. ನಿಮ್ಮ ಹೂಡಿಕೆಗಳನ್ನು ಪರಿಶೀಲನೆ ಮಾಡುತ್ತಿರಿ

11. ನಿಮ್ಮ ಹೂಡಿಕೆಗಳನ್ನು ಪರಿಶೀಲನೆ ಮಾಡುತ್ತಿರಿ

ಸೂಕ್ತ ಆದಾಯ ಪಡೆಯಬೇಕಾದರೆ ಕಾಲಕಾಲಕ್ಕೆ ನಿಮ್ಮ ಹೂಡಿಕೆಗಳನ್ನು ಮರು ಪರಿಶೀಲನೆ ಮಾಡುತ್ತಿರಬೇಕಾಗುತ್ತದೆ. ತ್ರೈಮಾಸಿಕಕ್ಕೊಮ್ಮೆಯಾದರೂ ಹೂಡಿಕೆಗಳನ್ನು ಪರಿಶೀಲಿಸಿ. ಹೂಡಿಕೆ ಮಾಡಿದ ಮೊದಲ ಕೆಲ ತಿಂಗಳಲ್ಲಿ ಯಾವುದೇ ಆದಾಯ ಬಂದಿಲ್ಲವೆಂದು ಆತಂಕ ಪಡಬೇಡಿ. ಮ್ಯೂಚುವಲ್ ಫಂಡಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ ತಾಳ್ಮೆ ಇರಲಿ.

12. ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ

12. ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ

ನಿಮಗಾಗಿ ಮಾತ್ರವಲ್ಲದೆ ನಿಮ್ಮ ಮಗಳ ಭವಿಷ್ಯದ ಬಗ್ಗೆಯೂ ನೀವು ಯೋಜನೆ ರೂಪಿಸಬಹುದು. ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿಯೇ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಿ ಶೇ. 8.6 ರಷ್ಟು ಬಡ್ಡಿ ಆದಾಯ ಗಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲಾದ ಮೊತ್ತ, ಬಡ್ಡಿ ಆದಾಯ ಹಾಗೂ ಪಕ್ವತಾ ಮೊತ್ತ ಹೀಗೆ ಎಲ್ಲದಕ್ಕೂ ಆದಾಯ ತೆರಿಗೆ ಕಾಯ್ದೆ 80ಸಿ ಅನ್ವಯ ತೆರಿಗೆ ವಿನಾಯಿತಿ ಪಡೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

English summary

Financial tips for working women in their 20-35s

Here are some financial tips, especially if you are a working woman in your 20-30.
Story first published: Monday, February 18, 2019, 10:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X