For Quick Alerts
ALLOW NOTIFICATIONS  
For Daily Alerts

ಮನೆಯಿಂದಲೇ ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ?

ಡಿಜಿಟಲ್ ಯುಗದಲ್ಲಿ ಜೀವಿಸುತ್ತಿರುವ ನಮಗೆ ಆನ್ಲೈನ್ ಮೂಲಕ ಬೆರಳ ತುದಿಯಲ್ಲಿ ಎಲ್ಲವೂ ಲಭ್ಯವಿದೆ! ಮನೆಯಿಂದಲೇ ದುಡಿದು ಕೈತುಂಬಾ ಹಣ ಗಳಿಸಲು ನೂರಾರು ಮಾರ್ಗಗಳಿವೆ.

|

ಡಿಜಿಟಲ್ ಯುಗದಲ್ಲಿ ಜೀವಿಸುತ್ತಿರುವ ನಮಗೆ ಆನ್ಲೈನ್ ಮೂಲಕ ಬೆರಳ ತುದಿಯಲ್ಲಿ ಎಲ್ಲವೂ ಲಭ್ಯವಿದೆ! ಮನೆಯಿಂದಲೇ ದುಡಿದು ಕೈತುಂಬಾ ಹಣ ಗಳಿಸಲು ನೂರಾರು ಮಾರ್ಗಗಳಿವೆ. ಇಂಟರ್ನೆಟ್ ಎಂಬ ಮಾಧ್ಯಮವು ಉದ್ಯೋಗ ಮಾಡುವ ಕೈಗಳಿಗೆ ಬೃಹತ್ ವೇದಿಕೆಯಾಗಿ ಮಾರ್ಪಟ್ಟಿದೆ! ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವುದು ಹೊಸ ಟ್ರೆಂಡ್. ಮನೆಯಿಂದಲೇ ಆನ್ಲೈನ್ ಮೂಲಕ ಕೆಲಸ ಮಾಡಲು ಇಂದಿನ ಅಂತರ್ಜಾಲ ವ್ಯವಸ್ಥೆ ಸಾವಿರಾರು ಅವಕಾಶಗಳನ್ನು ಒದಗಿಸುತ್ತಿರುವುದು ನಿಮಗೆಲ್ಲಾ ತಿಳಿದಿದೆ. ನೀವು ಆನ್ಲೈನ್ ಮೂಲಕ ಮಾಡಬಹುದಾದ ಕೆಲ ಪ್ರಮುಖ ಕೆಲಸಗಳ ಪಟ್ಟಿಯನ್ನು ಇಲ್ಲಿ ನಿಡಲಾಗಿದೆ.

ಇ-ಟ್ಯೂಶನ್, ವೆಬಿನಾರ್ಸ್

ಇ-ಟ್ಯೂಶನ್, ವೆಬಿನಾರ್ಸ್

ಇಂದು ಅಂತರ್ಜಾಲದ ಮೂಲಕ ಟ್ಯೂಶನ್ ನೀಡುವವರಿಗೆ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ನಿಮ್ಮಲ್ಲಿ ಕಲಿಸುವ ಪ್ರತಿಭೆಯಿದ್ದು, ಇನ್ನೊಬ್ಬರಿಗೆ ನೆರವಾಗಬಯಸಿದರೆ ಇ-ಶಿಕ್ಷಣ ನಿಮಗೆ ಉತ್ತಮ ಸಂಭಾವನೆಯನ್ನು ತಂದು ಕೊಡಬಲ್ಲುದು. ಇ-ಟ್ಯೂಶನ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬೈಜುಸ್ (BYJU'S) ಸಂಸ್ಥೆ ಬಗ್ಗೆ ನೀವು ಕೇಳಿರುತ್ತಿರಿ. ಇದಕ್ಕಾಗಿ ನಿಮಗೆ ಒಂದು ವಿಷಯದಲ್ಲಿ ಪರಿಣಿತಿ ಹಾಗೂ ವಾರದಲ್ಲಿ ಕೆಲವು ಗಂಟೆಗಳಾದರೂ ಇದಕ್ಕಾಗಿ ಮೀಸಲಿಡಬೇಕಾಗುತ್ತದೆ ಅಷ್ಟೇ. ಟ್ಯೂಟರ್ ವೀಸಾ, ಇ-ಟ್ಯೂಟರ್, ಸ್ಮಾರ್ಟ್ ಥಿಂಕಿಂಗ್, ಟ್ಯೂಟರ್. ಕಾಂ ಮೊದಲಾದ ತಾಣಗಳಲ್ಲಿ ನೀವು ನಿಮ್ಮ ಪರಿಣಿತಿಯನ್ನು ವಿವರಿಸಿ ದಾಖಲಿಸಿಕೊಳ್ಳಬೇಕು. ಒಂದು ವೇಳೆ ನೀವು ಅರ್ಹರು ಎಂದು ತಿಳಿದರೆ ನಿಮ್ಮ ಪರಿಣಿತಿಗೆ ಸೂಕ್ತವಾದ ಪಾಠಗಳು, ವೆಬಿನಾರ್ ಅಥವಾ ಅಂತರ್ಜಾಲದ ಮೂಲಕ ನೀವು ಪಾಠ ನೀಡಬೇಕಾಗಿ ಬರುವ ಅವಕಾಶಗಳು ದೊರಕುತ್ತವೆ. ನಿಮ್ಮ ಪಾಠಗಳಿಗೆ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಹಕರಾಗಿದ್ದು ನಿಮ್ಮ ವೆಬಿನಾರ್ ಉಪಯುಕ್ತವೇ ಆಗಿದ್ದರೆ ನಿಮಗೆ ಹೆಚ್ಚಿನ ಆದಾಯ ಖಚಿತವಾಗಿದೆ. ಆನ್ಲೈನ್ ಮೂಲಕ ಕೆಲಸ ಮಾಡಿ ಪ್ರತಿ ಗಂಟೆಗೆ 3,000 ಸಂಪಾದಿಸುವುದು ಹೇಗೆ?

ಬ್ಲಾಗಿಂಗ್

ಬ್ಲಾಗಿಂಗ್

ಪ್ರತಿಯೊಬ್ಬರಲ್ಲೂ ಲೇಖಕನಿರುತ್ತಾನೆ. ಆದರೆ ನಮ್ಮಲ್ಲಿ ಹೆಚ್ಚಿನವರು ಆ ಲೇಖಕನಿಗೆ ಕೆಲಸ ಕೊಡುವುದೇ ಇಲ್ಲ. ಒಂದು ವೇಳೆ ನಿಮ್ಮಲ್ಲಿಯೂ ನಿಮ್ಮ ಭಾವನೆ, ಅನುಭವ ಅಥವಾ ಪಯಣಕಥನವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂದಿದ್ದರೆ ಹಾಗೂ ಇದನ್ನು ಹೇಗೆ ಮಾಡಬೇಕೆಂದು ಗೊತ್ತಿಲ್ಲದೇ ಇದ್ದರೆ ನಿಮ್ಮದೇ ಸ್ವಂತ ಬ್ಲಾಗ್ ಒಂದನ್ನು ಹೊಂದಬಹುದು. ಇದನ್ನು ಪ್ರಾರಂಭಿಸಲು ಹೆಚ್ಚಿನ ಕೌಶಲ್ಯವಾಗಲೀ ಹಣವಾಗಲೀ ಬೇಕಾಗಿಲ್ಲ. ಆದರೆ ನೀವು ಯಾವ ವಿಷಯದಲ್ಲಿ ಬರೆಯುವವರಿದ್ದೀರೋ, ಅದನ್ನು ಓದಬಯಸುವವರ ಸಂಖ್ಯೆ ತುಂಬಾ ಹೆಚ್ಚಿರುವಂತೆ ನೋಡಿಕೊಳ್ಳಬೇಕಿವುದು ಅಗತ್ಯ. ಇದರಿಂದ ನಿಮ್ಮ ಬ್ಲಾಗ್ ಬರಹಗಳನ್ನು ಹೆಚ್ಚು ಓದುಗರು ಸಿಗುತ್ತಾರೆ. ನಿಮ್ಮ ತಾಣಕ್ಕೆ ಎಷ್ಟು ಹೆಚ್ಚು ಜನರು ಭೇಟಿ ನೀಡುತ್ತಾರೋ, ಅದನ್ನು ಪರಿಗಣಿಸಿ ಜಾಹೀರಾತು, ಸಂಭಾವನೆ ಇರುವ ಲೇಖನ ಬರೆಯುವ ಅವಕಾಶ, ಇತರ ವ್ಯಕ್ತಿಗಳ ಉತ್ಪನ್ನಗಳ ಬಗ್ಗೆ ವಿವರಿಸಿ ಸಂಪಾದಿಸುವ ಅವಕಾಶವೂ ದೊರಕುತ್ತದೆ.

ಯೂಟ್ಯೂಬ್ ಚಾನೆಲ್

ಯೂಟ್ಯೂಬ್ ಚಾನೆಲ್

ಒಂದು ವೇಳೆ ನಿಮ್ಮಲ್ಲಿ ಅಪಾರ ಪ್ರತಿಭೆಯಿದ್ದರೆ ಇದನ್ನು ನಾಲ್ಕು ಜನರ ಮುಂದೆ ಪ್ರದರ್ಶಿಸುವ ಮೂಲಕ ಹಣವನ್ನು ಗಳಿಸಬಹುದು. ಮೊದಲಿಗೆ ನಿಮ್ಮ ಅಪ್ಪಟ ಪ್ರತಿಭೆಯನ್ನು ಅನಾವರಣಗೊಳಿಸುವ ವೀಡಿಯೋವನ್ನು ಉತ್ತಮ ಗುಣಮಟ್ಟದಲ್ಲಿ ರೆಕಾರ್ಡ್ ಮಾಡಿಕೊಂಡು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಬೇಕು. ಇದು ನಿಮ್ಮಿಂದ ತಯಾರಾದ ಕಿರುಚಲನಚಿತ್ರವಿರಬಹುದು, ನೀವು ಹಾಡುವ ಹಾಡಾಗಿರಬಹುದು, ಎಲ್ಲರನ್ನು ನಗಿಸುವ ಹಾಸ್ಯಪ್ರಸಂಗವಾಗಿರಬಹುದು, ನೋಡುವವರು ಭಲೇ ಎನ್ನುವಂತಹ ಚಾಕಚಕ್ಯತೆ ಇರಬಹುದು ಅಥವಾ ಯಾರೂ ಮಾಡದ ಸಾಧನೆಯನ್ನು ಸಾಧಿಸುವಂತಹ ಕಾರ್ಯವಿರಬಹುದು, ಒಟ್ಟಾರೆ ಈ ವೀಡಿಯೋವನ್ನು ಒಬ್ಬರು ನೋಡಿದರೆ ಇನ್ನೊಬ್ಬರಿಗೆ ನೋಡಲು ಮುಂದೆ ಕಳಿಸುವಂತಿರಬೇಕು. ಆಗ ಈ ವೀಡಿಯೋವನ್ನು ಮೊದಲು ನೋಡಿ ಮೆಚ್ಚಿದವರು ಇನ್ನಷ್ಟು ಜನರು ಮೆಚ್ಚಲೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಾ ಹೋಗುತ್ತಾರೆ. ಪ್ರತಿ ಬಾರಿ ಈ ವೀಡಿಯೋ ನೋಡಲ್ಪಟ್ಟಾಗ ನಿಮ್ಮ ವೀಡಿಯೋ ಇರುವ ಪುಟದಲ್ಲಿರುವ ಜಾಹೀರಾತುಗಳ ಮೂಲಕ ನಿಮಗೆ ಸಂಭಾವನೆ ಹರಿದು ಬರುತ್ತದೆ. ನಿಮ್ಮ ಪ್ರತಿಭೆ ಲಕ್ಷಾಂತರ ಜನರೆದುರು ಪ್ರದರ್ಶಿಸಲ್ಪಟ್ಟಂತೆಯೂ ಆಯಿತು, ನಿಮಗೆ ಹಣವೂ ಸಂದಾಯವಾದಂತಾಯ್ತು. ಇದೇ ರೀತಿ ಪ್ರತಿ ಬಾರಿ ಕ್ಲಿಕ್ಕಿಸಿದಾಗ ಹಣ ಹರಿದು ಬರುವ ಇತರ ತಾಣಗಳೆಂದರೆ Flixya ಹಾಗೂ Mediaflix. ಇಂಟರ್ನೆಟ್ ಮೂಲಕ ಕೈತುಂಬ ಹಣ ಗಳಿಸುವ 3 ವಿಧಾನ

ಜಾಹೀರಾತು

ಜಾಹೀರಾತು

ನಿಮ್ಮ ಜಾಲತಾಣ ಅಥವಾ ಬ್ಲಾಗ್ ತಾಣದಲ್ಲಿ ಜಾಹೀರಾತು ನೀಡಲು ಸ್ಥಳಾವಕಾಶ ಒದಗಿಸುವ ಮೂಲಕ ಸಂಭಾವನೆಯನ್ನು ಪಡೆಯಬಹುದು. ಈ ಜಾಹೀರಾತುಗಳನ್ನು ಎಷ್ಟು ಹೆಚ್ಚು ಗ್ರಾಹಕರು ಕ್ಲಿಕ್ ಮಾಡುತ್ತಾರೋ ಅಷ್ಟು ಹೆಚ್ಚು ಸಂಭಾವನೆ ದೊರಕುತ್ತದೆ. ಜಾಹೀರಾತುಗಳ ಸ್ಥಳವನ್ನು ಮೇಲೆ ಕೆಳಗಾಗಿಸುವುದು ಹಾಗೂ ಪ್ರಕಟಿಸುವುದು ಉಚಿತ. ಪ್ರತಿ ಕ್ಲಿಕ್ ಗೆ ಪಡೆಯುವ ಸಂಭಾವನೆ ಆ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ, ಹಾಗೂ ಎಷ್ಟು ಬೇಗನೇ ಎಷ್ಟು ಹೆಚ್ಚು ಕ್ಲಿಕ್ ಪಡೆದಿವೆ ಹಾಗೂ ಪ್ರತಿ ಕ್ಲಿಕ್ ಗೆ ಎಷ್ಟು ಸಂಭಾವನೆ ಎಂಬ ಮಾಹಿತಿಗಳನ್ನು ಅನುಸರಿಸುತ್ತದೆ. Google AdSense ಅತ್ಯಂತ ಜನಪ್ರಿಯ ತಾಣವಾಗಿದೆ. BidVertiser, Text Link Ads ಹಾಗೂ Blogads ಸಹಾ ಉತ್ತಮ ಆಯ್ಕೆಗಳಾಗಿವೆ. ಅಲ್ಲದೇ ನಿಮ್ಮ ತಾಣದಲ್ಲಿ RSS ಹಾಗೂ ಜಾಹೀರಾತಿನ ಬ್ಯಾನರುಗಳನ್ನು ಪ್ರಕಟಿಸುವುದೂ ಇನ್ನೊಂದು ಆಯ್ಕೆಯಾಗಿದೆ.

ಆನ್ಲೈನ್ ಮಾರ್ಕೆಟಿಂಗ್

ಆನ್ಲೈನ್ ಮಾರ್ಕೆಟಿಂಗ್

ಯಾವುದೇ ತಾಣವನ್ನು ಪ್ರಾರಂಭಿಸುವಾಗ ಇದಕ್ಕೆ ಮೊದಲ ಆದ್ಯತೆಯನ್ನು ಇದನ್ನು ಇತರರು ಹುಡುಕುವಂತಿರಬೇಕು ಎಂದೇ ನಿರ್ಮಿಸಲಾಗುತ್ತದೆ. ಅಂದರೆ ಗೂಗಲ್ ಮೊದಲಾದ ಸರ್ಚ್ ಇಂಜಿನ್ ನಲ್ಲಿ ಈ ತಾಣಕ್ಕೆ ಸಂಬಂಧಿಸಿದ ಕೆಲವು ಪದಗಳನ್ನು ಬಳಸಿದರೂ ಈ ತಾಣ ಸುಲಭವಾಗಿ ಗ್ರಾಹಕ ಪಡೆಯುವಂತಿರಬೇಕು. SEO/SEM ಎಕ್ಸ್ಪರ್ಟ್ ಎಂಬ ಪರಿಣಿತರು ಈ ಮಾರ್ಕೆಟಿಂಗ್ ತಾಣಗಳನ್ನು ನಿರ್ಮಿಸುವ ಹೊಣೆ ಹೊತ್ತಿರುತ್ತಾರೆ. ಈ ತಾಣಗಳ ಮೂಲಕ ಲೇಖನಗಳು, ಮಾಹಿತಿ ಸಂಗ್ರಹ, ಫೋರಂ ಪೋಸ್ಟಿಂಗ್, ಬ್ಲಾಗ್ ಪೋಸ್ಟಿಂಗ್, ನಿಮ್ಮ ತಾಣದ ಬಗ್ಗೆ ಡೈರೆಕ್ಟರಿ, ಸರ್ಜ್ ಇಂಜಿನ್, ಸಾಮಾಜಿಕ ಜಾಲತಾಣ ಮೊದಲಾದವುಗಳಲ್ಲಿ ದಾಖಲಿಸಲು ನೆರವಾಗುತ್ತಾರೆ. ಹೆಚ್ಚಿನ ಸಂಸ್ಥೆಗಳು ತಮ್ಮ ಉತ್ಪನ್ನವನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ತಾವೇ ಸ್ವತಃ ತೊಡಗ್ದೇ ಇದನ್ನು ಬೇರೆಯವರಿಗೆ ವಹಿಸುತ್ತಾರೆ. ಹಾಗೂ ಈ ಕೆಲಸವನ್ನು ನೀವು ನಿರ್ವಹಿಸಿದರೆ ನಿಮಗೆ ಸೂಕ್ತ ಸಂಭಾವನೆಯನ್ನೂ ನೀಡುತ್ತಾರೆ.

ಫೋಟೋಗಳನ್ನು ಮಾರುವುದು

ಫೋಟೋಗಳನ್ನು ಮಾರುವುದು

ಒಂದು ವೇಳೆ ಪೋಟೋಗ್ರಪಿ ನಿಮ್ಮ ಹವ್ಯಾಸವಾಗಿದ್ದು ಎಲ್ಲರೂ ಮೆಚ್ಚುವಂತಹ ಚಿತ್ರಗಳನ್ನು ತೆಗೆಯಬಲ್ಲ ಪರಿಣಿತಿ ನೀವು ಹೊಂದಿದ್ದರೆ ನಿಮಗೆ ನಿಮ್ಮ ಪ್ರತಿಭೆ ಉತ್ತಮ ಆದಾಯ ತಂದು ಕೊಡಬಲ್ಲುದು. ಇದಕ್ಕಾಗಿ ನೀವು ವಿವಿಧ ವಿಷಯಗಳಲ್ಲಿ ಸಾವಿರಾರು ಚಿತ್ರಗಳನ್ನು ತೆಗೆದಿರಬೇಕಾಗಿರುತ್ತದೆ. ಈ ಚಿತ್ರಗಳನ್ನು ಗುಂಪುಗಳಾಗಿ ವಿಂಗಡಿಸಿ ನೀಡಿದರೆ ಇದರ ಬಗ್ಗೆ ಉತ್ಸುಕರಾಗಿರುವ ಜನರಿದ್ದಾರೆ. ಇವರು ಕೆಲವು ತಾಣಗಳಲ್ಲಿ ಈ ವಿಶಿಷ್ಟ ಚಿತ್ರಗಳನ್ನು ಪಡೆಯಲು ಹಣ ನೀಡಲು ತಯಾರಾಗಿರುತ್ತಾರೆ. Fotolia, Dreamstime ಹಾಗೂ Shutterstock ಮೊದಲಾದ ತಾಣಗಳಲ್ಲಿ ನಿಮ್ಮ ಚಿತ್ರಗಳನ್ನು ಒದಗಿಸಿದರೆ ಪ್ರತಿ ಚಿತ್ರ ಮಾರಾಟವಾದಾಗಲೂ ನಿಮಗೆ ಸಂಭಾವನೆ ಹರಿದು ಬರುತ್ತದೆ.

ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆ ಯಾವಾಗಲೂ ಡೋಲಾಯಮಾನ ಸ್ಥಿತಿಯಲ್ಲಿಯೇ ಇರುವ ಕಾರಣ ಈ ವಿಭಾಗವನ್ನು ಪ್ರವೇಶಿಸುವುದು ರಿಸ್ಕ್ ನಿಂದ ಹೊರತಾಗಿಲ್ಲ. ಆದರೂ ಚಿಕ್ಕ ಬಂಡವಾಳದೊಂದಿಗೆ ಈ ಮಾರುಕಟ್ಟೆಯನ್ನು ಪ್ರವೇಶಿಸಿ ಈ ವಿಭಾಗದಲ್ಲಿ ನೀವು ಪರಿಣಿತಿಯನ್ನು ಸಾಧಿಸುವವರೆಗೆ ನಿಮ್ಮ ಪ್ರಯತ್ನವನ್ನು ಮುಂದುವರೆಸಬಹುದು. ಈ ಪರಿಣಿತಿ ಪಡೆದ ಬಳಿಕ ವಿದೇಶೀ ವಿನಿಮಯ ಹಾಗೂ ಶೇರುಗಳ ವಿಲೇವಾರಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ವಿನಿಮಯದ ದರಗಳು ಬೇಡಿಕೆ ಹಾಗೂ ಮಾರಾಟವನ್ನು ಅವಲಂಬಿಸಿ ಸದಾ ಹೆಚ್ಚು ಕಡಿಮೆಯಾಗುತ್ತಲೇ ಇರುತ್ತವೆ. ಅಷ್ಟೇ ಅಲ್ಲ, ವಿಶ್ವದ ಆರ್ಥಿಕ ಸ್ಥಿತಿ ಹಾಗೂ ರಾಜಕೀಯ ಕಾರಣಗಳಿಂದಲೂ ದರ ಏರುಪೇರಾಗಬಹುದು. ಉತ್ತಮ ಶೇರು ವ್ಯವಹಾರದಾರ ಈ ಏರುಪೇರುಗಳನ್ನು ಸದಾ ಅಭ್ಯಸಿಸುತ್ತಾ ವಿಶ್ವದ ಆಗುಹೋಗುಗಳ ಮೇಲೆ ಸದಾ ಒಂದು ಕಣ್ಣಿಟ್ಟಿದ್ದು ಮುಂದಾಗುವ ಏರುಪೇರುಗಳನ್ನು ಊಹಿಸಿ ಅದರಂತೆ ತಮ್ಮ ನಡೆಗಳನ್ನು ನಡೆಸುವ ಮೂಲಕ ಲಾಭ ಪಡೆಯಬಹುದು. ಇದಕ್ಕೆ ಎಷ್ಟು ಹೆಚ್ಚು ಸಮಯ ನೀಡುತ್ತೀರೋ ಅಷ್ಟೇ ಹೆಚ್ಚು ಅನುಭವ ಹಾಗೂ ಲಾಭ ಪಡೆಯಬಹುದು.

ಡೊಮೈನ್ ಕೊಳ್ಳುವಿಕೆ/ಮಾರುವಿಕೆ

ಡೊಮೈನ್ ಕೊಳ್ಳುವಿಕೆ/ಮಾರುವಿಕೆ

ತಾಣಗಳ ಮೂಲಕ ಮಾರಾಟ ಮಾಡಬಹುದಾದ ಡೊಮೈನುಗಳನ್ನು ಕೊಳ್ಳುವ ಅಥವಾ ಮಾರಾಟ ಮಾಡುವುದೂ ಅಂತರ್ಜಾಲದ ಮೂಲಕ ಸಂಪಾದನೆ ಮಾಡುವ ಇನ್ನೊಂದು ಅವಕಾಶವಾಗಿದೆ. ಇದಕ್ಕೆ ಕೊಂಚ ಬಂಡವಾಳ ಅಗತ್ಯ. ಲಭ್ಯವಿರುವ ಡೊಮೈನುಗಳನ್ನು ಕೊಂಚ ಹಣ ನೀಡಿ ಖರೀದಿಸಬೇಕು ಹಾಗೂ ಹೆಚ್ಚಿನ ಮೊತ್ತಕ್ಕೆ ಮಾರಬಹುದು. ಆದರೆ ಇದಕ್ಕೆ ಕೊಂಚ ಪರಿಣಿತಿ ಪಡೆಯುವುದು ಅಗತ್ಯ. ಈ ಪರಿಣಿತಿಯನ್ನು sedo.co.uk, afternic.com, ebay.com ಮೊದಲಾದ ತಾಣಗಳಲ್ಲಿ ಪಡೆದುಕೊಳ್ಳಬಹುದು. ಈ ತಾಣಗಳಲ್ಲಿ ಈ ಡೊಮೈನುಗಳನ್ನು ಹರಾಜು ಹಾಕಲಾಗುತ್ತದೆ ಹಾಗೂ ಅತಿ ಆಕರ್ಷಕವಾಗಿರುವ ಹೆಸರುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಇನ್ನೊಂದು ಸುಲಭ ವಿಧಾನವೆಂದರೆ ಈಗಾಗಲೇ ಮುಚ್ಚಿಹೋಗಿರುವ ಡೊಮೈನ್ ಲಿಸ್ಟ್ ಗಳಿಂದ ಹೆಸರನ್ನು ಆಯ್ದು ಮರುಜೀವ ನೀಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆಯಬಹುದು.

ಮರು ಮಾರಾಟಗಾರ/ಈಬೇ

ಮರು ಮಾರಾಟಗಾರ/ಈಬೇ

ಯಾವುದೇ ವಸ್ತು ಅಥವಾ ಸೇವೆ ಆಗಲಿ, ಇದು ಮಾರಾಟವಾದಾಗ ಮಾತ್ರವೇ ಲಾಭ ಪಡೆಯಲು ಸಾಧ್ಯ. ಹೆಚ್ಚುವರಿ ಹಣವನ್ನು ಸಂಪಾದಿಸಲು ಉತ್ತಮ ಮಾರ್ಗವೆಂದರೆ ಅಫಿಲಿಯೇಟ್/ಮರುಮಾರಾಟಗಾರನಾಗುವುದು. ಅಫಿಲಿಯೇಟ್ ಅಂದರೆ ಇತರರಿಗೆ ಸೇರಿದ ಯಾವುದಾದರೊಂದು ವಸ್ತು ಅಥವಾ ಸೇವೆಯ ಬಗ್ಗೆ ಮೂರನೆಯ ವ್ಯಕ್ತಿಗೆ ವಿವರಿಸಿ ಅವರು ಕೊಳ್ಳುವಂತೆ ಮಾಡುವ ಮಧ್ಯವರ್ತಿ. ಈ ಕೆಲಸವನ್ನು ಸಾಮಾಜಿಕ ಜಾಲತಾಣದ ವೆಬ್ ಸೈಟ್ ಅಥವಾ ಈಬೇ ಮೊದಲಾದ ತಾಣಗಳ ಮೂಲಕವೂ ನಿರ್ವಹಿಸಬಹುದು. ಇದಕ್ಕಾಗಿ ನೀವು ಈ ವಸ್ತುವಿನ ಮಾಲಿಕರಾಗಿರಬೇಕಿಲ್ಲ. ಕೇವಲ ಅಫಿಲಿಯೇಟ್ ಕಾರ್ಯಕ್ರಮವೊಂದಕ್ಕೆ ದಾಖಲಿಸಿಕೊಂಡು ನಿಮ್ಮ ರೆಫರಲ್ ಕೊಂಡಿಯನ್ನು ಬಳಸಿ ಅವರ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಕಮಿಶನ್ ಜಂಕ್ಷನ್ ಅಥವಾ ಕ್ಲಿಕ್ ಬ್ಯಾಂಕ್ ಮೊದಲಾದ ತಾಣಗಳಲ್ಲಿ ಈ ಉದ್ಯೋಗಕ್ಕೆ ವಿಪುಲ ಅವಕಾಶವಿದೆ.

ವೃತ್ತಿಪರರಿಗೆ ಫ್ರೀಲ್ಯಾಂನ್ಸಿಂಗ್

ವೃತ್ತಿಪರರಿಗೆ ಫ್ರೀಲ್ಯಾಂನ್ಸಿಂಗ್

ಫ್ರೀ ಲ್ಯಾಂನ್ಸಿಂಗ್ ಅಥವಾ ಸಂಪಾದಕರ ಹಂಗಿಲ್ಲದೇ ತಮ್ಮ ಪ್ರತಿಭೆಯನ್ನು ಬಳಸಬಹುದಾದ ಆಯ್ಕೆ ಹಲವಾರು ಪರಿಣಿತರಿಗೆ ಲಭ್ಯವಿದೆ. ತಮ್ಮ ಗ್ರಾಹಕರ ಅಗತ್ಯವನ್ನು ಪೂರೈಸುವುದು ಹೇಗೆ ಎಂದು ಇವರಿಗೆ ಗೊತ್ತಿದ್ದು ಕೆಲವಾರು ಪ್ರಾಜೆಕ್ಟ್ ಆಧಾರಿತ ತಾಣಗಳು ಅವಕಾಶವನ್ನು ಒದಗಿಸುತ್ತವೆ. ತಮ್ಮ ಪ್ರಾಜೆಕ್ಟುಗಳನ್ನು ವಿವರಿಸಲು ಈ ಸೇವೆಯನ್ನು ಪಡೆಯಲು ಉತ್ತಮ ಸಂಭಾವನೆಯನ್ನೂ ನೀಡಲಾಗುತ್ತದೆ. ಫ್ರೀಲ್ಯಾನ್ಸರ್ ಗಳು ಹಾಗೂ ಚಿಕ್ಕ ಉದ್ದಿಮೆದಾರರು ಗ್ರಾಹಕರಿಗೆ ಹರಾಜು, ಉಪಾಯಗಳು ಅಥವಾ ಪ್ರಸ್ತಾಪಗಳನ್ನು ನೀಡುವ ಮೂಲಕ ಗ್ರಾಹಕರು ತಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಯಾನ್ಸ್ ಮೊದಲಾದ ತಾಣಗಳು ಬರವಣಿಗೆ, ಡೇಟಾ ಎಂಟ್ರಿ, ವಿನ್ಯಾಸ ಮೊದಲಾದವುಗಳಲ್ಲಿ ಅವಕಾಶ ನೀಡಿದರೆ RentACoder ಎಂಬ ತಾಣ ಸಾಫ್ಟ್ ವೇರ್ ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಒದಗಿಸುತ್ತದೆ.

ಸ್ವಂತ ಬ್ರಾಂಡ್ ಮಾರುವುದು

ಸ್ವಂತ ಬ್ರಾಂಡ್ ಮಾರುವುದು

ಒಂದು ವೇಳೆ ನಿಮಗೆ ಲಾಂಛನಗಳನ್ನು ವಿನ್ಯಾಸಗೊಳಿಸುವ ಕಲೆ ಸಿದ್ಧಿಸಿದ್ದರೆ ನಿಮ್ಮ ಪ್ರತಿಭೆಯನ್ನು ಸುಮ್ಮನೇ ಸ್ನೇಹಿತರ ವ್ಯಂಗ್ಯಚಿತ್ರಕ್ಕೆ ಮೀಸಲಾಗಿರಿಸದಿರಿ. ಬದಲಿಗೆ ಉತ್ತಮ ವಿನ್ಯಾಸದ ಲಾಂಛನಗಳನ್ನು ನಿರ್ಮಿಸಲು ಯತ್ನಿಸಿ. ಈ ಲಾಂಛನಗಳನ್ನು ಯಾವುದಾದರೂ ಉತ್ಪನ್ನದ ಮೇಲೆ ಮುದ್ರಿಸಿದಾಗ ಇದು ಗ್ರಾಹಕನನ್ನು ಕ್ಷಣಮಾತ್ರದಲ್ಲಿ ಸೆರೆಹಿಡಿಯುವಂತಿರಬೇಕು. ಹಾಗಿದ್ದರೆ CafePress ಮೊದಲಾದ ತಾಣಗಳಲ್ಲಿ ಈ ವಿನ್ಯಾಸಗಳನ್ನು ಅಪ್ ಲೋಡ್ ಮಾಡಿ ಮಾರಾಟಕ್ಕಿರಿಸಬಹುದು. ಒಂದು ವೇಳೆ ಯಾರಾದರೂ ಈ ವಿನ್ಯಾಸಗಳಲ್ಲಿ ಉತ್ಸುಕರಾಗಿದ್ದರೆ ಸಂಸ್ಥೆ ಈ ಲಾಂಛನವನ್ನು ಮುದ್ರಿಸಿ ಅವರಿಗೆ ಮಾರಾಟ ಮಾಡುತ್ತದೆ ಹಾಗೂ ನಿಮಗೆ ಸಂಭಾವನೆ ದೊರಕುತ್ತದೆ. ಉದಾಹರಣೆಗೆ ಟೀ-ಶರ್ಟ್ ಮೇಲಿನ ಬರಹಗಳ ವಿನ್ಯಾಸ, ಟೊಪ್ಪಿ, ಪುಸ್ತಕ, ಪೋಸ್ಟರ್, ಕ್ಯಾಲೆಂಡರು ಗ್ರೀಟಿಂಗ್ ಕಾರ್ಡ್ ಮೊದಲಾದ ಉತ್ಪನ್ನಗಳ ಮೇಲೆ ಮುದ್ರಿಸುವ ಚಿತ್ರಗಳೂ ಸರಿ. ಪ್ರತಿ ವಿನ್ಯಾಸದ ಮಾರಾಟದಿಂದ ನಿಮಗೆ ಸಂಭಾವನೆ ದೊರಕುತ್ತದೆ. ಈ ಸೇವೆ ಒದಗಿಸುವ ಇತರ ತಾಣಗಳೆಂದರೆ Lulu ಹಾಗೂ Zazzle.

ಮನೆಯಲ್ಲಿದ್ದು ನಡೆಸುವ ಕಾಲ್ ಸೆಂಟರ್

ಮನೆಯಲ್ಲಿದ್ದು ನಡೆಸುವ ಕಾಲ್ ಸೆಂಟರ್

ಹಲವು ಸಂಸ್ಥೆಗಳಿಗೆ ನಗರದ ಪ್ರಮುಖ ಸ್ಥಳದಲ್ಲಿ ಕಛೇರಿ ಸಿಗುವುದು ದುಸ್ತರವಾಗಿದ್ದು ಹೆಚ್ಚಿನ ಉದ್ಯೋಗಿಗಳಿಗೆ ಸ್ಥಳಾವಕಾಶ ಒದಗಿಸಲು ವಿಫಲವಾಗುತ್ತವೆ. ಇವರು ತಮ್ಮ ಸೇವೆಗಳನ್ನು ಒದಗಿಸಲು ತಮ್ಮ ಸಂಸ್ಥೆಯಿಂದ ಹೊರಗಿರುವ ವ್ಯಕ್ತಿಗಳ ಸಹಾಯವನ್ನು ಪಡೆಯುತ್ತಾರೆ. ಈ ಅವಕಾಶವನ್ನು ನೀವು ನಿಮ್ಮ ಮನೆಯ ಲ್ಯಾಂಡ್ ಲೈನ್ ಫೋನ್ ಮೂಲಕ ಒದಗಿಸಿದರೆ ಕೆಲವಾರು ಕೆಲಸಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ನಿಮ್ಮ ಸುತ್ತಮುತ್ತಲಿರುವ ಪ್ರದೇಶದಲ್ಲಿನ ವಿವಿಧ ಸಂಸ್ಥೆಗಳು ಈ ಬಗೆಯ ಸೇವೆಯನ್ನು ಒದಗಿಸುತ್ತಿವೆಯೇ ಎಂದು ಗಮನಿಸಿ ಇದು ದಿನದ ಕೆಲವು ಘಂಟೆಗಳಿಗೆ ಅಥವಾ ಪೂರ್ಣಾವಧಿಯ ಕೆಲಸಕ್ಕಾಗಿಯೇ ಎಂದು ಪರಿಶೀಲಿಸಿ ನಿಮ್ಮ ಲಭ್ಯತೆಯ ಪ್ರಕಾರ ಕೆಲಸ ಮಾಡಿ ಹಣ ಗಳಿಸಿ.

ಸಂಭಾವನೆಯ ಬರವಣಿಗೆ

ಸಂಭಾವನೆಯ ಬರವಣಿಗೆ

ಒಂದು ವೇಳೆ ನಿಮಗೆ ಬ್ಲಾಗ್ ನಿರ್ವಹಿಸಲು ಕಷ್ಟವಾಗುತ್ತಿದ್ದರೆ ಹಾಗೂ ನಿಮಗೆ ಬರೆಯುವ ಹೆಚ್ಚು ಉತ್ಸುಕತೆ ಇದ್ದರೆ ನೀವು ನಿಮ್ಮ ಬರವಣಿಗೆಗಳನ್ನು ಬೇರೆ ತಾಣಗಳಿಗೆ ಬರೆದು ಅವರಿಂದ ಸಂಭಾವನೆಯನ್ನು ಪಡೆಯಬಹುದು. ವಿಬ್ಲಾಗ್ಸ್, ಹೀಲಿಯಂ ಅಥವಾ ಪೇ ಪರ್ ಪೋಸ್ಟ್ ಎಂಬ ತಾಣಗಳು ಈ ಅವಕಾಶವನ್ನು ಒದಗಿಸುತ್ತವೆ. ಇಂದು ಜನಪ್ರಿಯವಾಗುತ್ತಿರುವ ಇ-ಪುಸ್ತಕಗಳನ್ನ್ ಬರೆದು ಪ್ರಕಟಿಸುವುದೂ ಇನ್ನೊಂದು ಆಯ್ಕೆಯಾಗಿದೆ. ಈ ಪುಸ್ತಕ ಪ್ರಕಟಿಸಲು ಬಂಡವಾಳವೇ ಬೇಕಾಗಿಲ್ಲ. ಮುದ್ರಣ, ಸಾಗಾಟವೆಚ್ಚವೂ ಇಲ್ಲ. ಒಂದು ವೇಳೆ ನಿಮಗೆ ಭಾಷೆಯ ಮೇಲೆ ಉತ್ತಮ ಹಿಡಿತವಿದ್ದು ಇತರರ ಬರವಣಿಗೆಗಳನ್ನು ತಿದ್ದುವಂತಹ ಪ್ರತಿಭೆಯಿದ್ದರೆ ನಿಮಗೆ ಕಾಪಿ ರೈಟರ್ ಎಂಬ ಉದ್ಯೋಗಾವಕಾಶವೂ ದೊರಕುತ್ತದೆ. ಇದರಲ್ಲಿ ವೆಬ್ ಮಾಸ್ಟರ್ ಗಳು ನಿಮಗೆ ಇತರರ ಬರವಣಿಗೆಗಳನ್ನು ನೋಡಿ ವ್ಯಾಕರಣ, ವಾಕ್ಯಗಳನ್ನು ತಿದ್ದಿ ಪ್ರಕಟಿಸಲು ಯೋಗ್ಯವಾಗುವಂತೆ ಮಾಡಲು ಕೇಳಿ ಇದಕ್ಕೆ ತಕ್ಕನಾದ ಸಂಭಾವನೆಯನ್ನೂ ನೀಡುತ್ತಾರೆ.

ಮೊಬೈಲ್ ಆಪ್ ರಚಿಸುವುದು

ಮೊಬೈಲ್ ಆಪ್ ರಚಿಸುವುದು

ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ನಂತರ ಇದರಲ್ಲಿ ಪ್ರತಿಷ್ಠಾಪಿಸಬಹುದಾದ ಆಪ್ (appications or apps) ಗಳಿಗೂ ಭಾರೀ ಬೇಡಿಕೆ ಬಂದಿದೆ. ಇದುವರೆಗೆ ಕಂಪ್ಯೂಟರಿನಲ್ಲಿ ಸ್ಥಾಪಿಸಲಾಗುತ್ತಿದ್ದ ಪ್ರೋಗ್ರಾಂಗಳಿಗೆ ಸರಿಸಮನಾದ ಆಪ್ ತಯಾರಿಸುವುದು ಒಂದು ಕಲೆ. ಪ್ರಸ್ತುತ ಐಫೋನ್ ನಲ್ಲಿ ಮೂವತ್ತು ಲಕ್ಷ ಆಪ್ ಗಳು ಲಭ್ಯವಿವೆ. ಗೂಗಲ್ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಹತ್ತು ಲಕ್ಷದಷ್ಟು ಆಪ್ ಗಳಿವೆ. ಇವೆಲ್ಲವೂ ಬಿಸಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ನಿಮ್ಮದೇ ಆದ ಸ್ಮಾರ್ಟ್ ಫೋನ್ ಆಪ್ ಗಳನ್ನು ನಿರ್ಮಿಸಿ ಮಾರಾಟ ಮಾಡುವ ಮೂಲಕ ಕನಿಷ್ಟ ಸಮಯದಲ್ಲಿ ಹೆಚ್ಚು ಗಳಿಸಬಹುದು. ಆಪ್ ನಿರ್ಮಿಸಲು ಹಣವೇ ಬೇಕಾಗಿಲ್ಲ. ಬೇಕಾಗಿರುವುದೇನೆಂದರೆ ಒಂದು ಲ್ಯಾಪ್ ಟಾಪ್ ಹಾಗೂ ಆಪ್ ನಿರ್ಮಿಸುವ ಚಾಕಚಕ್ಯತೆ. ಉತ್ಪನ್ನವನ್ನು ಸಂಗ್ರಹಿಸಿಡಲು ಉಗ್ರಾಣವೂ ಬೇಕಾಗಿಲ್ಲ, ಸಾಗಾಟವೆಚ್ಚವೂ ಇಲ್ಲ. ಪರಿಣಾಮವಾಗಿ ಯಾವುದೇ ಕಿರಿಕಿರಿ ಇಲ್ಲದೇ ಹಣ ಗಳಿಸುವ ಅವಕಾಶ.

ಟ್ರಾನ್ಸ್ಕ್ರಿಪ್ಷನ್ (Transcription)

ಟ್ರಾನ್ಸ್ಕ್ರಿಪ್ಷನ್ (Transcription)

ಟ್ರಾನ್ಸ್ಕ್ರಿಪ್ಷನ್ ಅಂದರೆ ಮೆಡಿಕಲ್ ಅಥವಾ ವೈದ್ಯಕೀಯ ಭಾಷೆಯನ್ನು ಸರಳಗೊಳಿಸುವ ಕೆಲಸವಾಗಿದೆ. ಸಾಮಾನ್ಯವಾಗಿ ವೈದ್ಯರಿಗೆ ವಿವರವಾಗಿ ಎಲ್ಲವನ್ನೂ ಬರೆಯುವಷ್ಟು ತಾಳ್ಮೆ ಇರುವುದಿಲ್ಲ. ಹಾಗಾಗಿ ಇವರು ತಮ್ಮ ಬರವಣಿಗೆಯನ್ನು ಸಂಕೇತಾಕ್ಷರಗಳಲ್ಲಿ ಅಥವಾ ಆ ಕ್ಷಣದಲ್ಲಿ ಆಡಿಯೋ ರೆಕಾರ್ಡ್ ಮಾಡಿ ಮಾಹಿತಿಯನ್ನು ಒದಗಿಸುತ್ತಾರೆ. ಇದರಲ್ಲಿ ಕೈಬರಹದ ವಿವರ, ರೋಗಿಯ ಆರೋಗ್ಯದ ವಿವರಗಳಿರುವ ಮಾಹಿತಿ, ಯಾವ ವೈದ್ಯರು ಈಗಾಗಲೇ ನೋಡಿ ಏನು ಸಲಹೆ ಮಾಡಿದ್ದಾರೆ ಎಂಬ ವರದಿ, ಇತರ ವೈದ್ಯರ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲು ಅಗತ್ಯವಿರುವ ಪತ್ರ, ಮನೋವೈಜ್ಞಾನಿಕ ಸಮೀಕ್ಷೆಯ ವಿವರ ಮೊದಲಾದ ವಿವರಗಳಿರುತ್ತವೆ. ಈ ಮಾಹಿತಿಗಳನ್ನು ಇತರರಿಗೆ ಸುಲಭವಾಗಿ ಹಾಗೂ ತಪ್ಪಿಲ್ಲದಂತೆ ಓದಲು ಸಾಧ್ಯವಾಗುವಂತೆ ಒಪ್ಪ ಓರಣವಾಗಿಸಿ ನೀಡುವುದೇ ಈ ಕೆಲಸದ ಮಹತ್ವವಾಗಿದೆ. ಈ ಕೆಲಸದಲ್ಲಿ ತಪ್ಪಿಗೆ ಅವಕಾಶವಿಲ್ಲ, ಹಾಗಾಗಿ ಅತ್ಯಂತ ಸರಿಯಾದ ಮಾಹಿತಿ ಒದಗಿಸುವುದು ಮೊದಲ ಆದ್ಯತೆಯಾಗಿರುತ್ತದೆ. ಈ ಕೆಲಸ ಕೈಗೊಳ್ಳುವ ಮೊದಲು ನಿಮಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಪರಿಣಿತಿ ಇರುವುದು ಅಗತ್ಯ ಹಾಗೂ ವೈದ್ಯರು ಹೇಳುವುದನ್ನು ವೇಗವಾಗಿ ಬೆರಳಚ್ಚು ಮಾಡಲು ಹಾಗೂ ತಪ್ಪಿಲ್ಲದಂತೆ ಮಾಹಿತಿ ನೀಡಲು ಶಕ್ತರಾಗಿರಬೇಕು.

Read more about: online money finance news savings
English summary

How to Make Money Online From Home

Money you earn depends on the time and effort invested online. Go through these 20 options and find out which ones work for you.
Story first published: Thursday, February 28, 2019, 11:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X