ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಈ 5 ಸಂಗತಿ ನೆನಪಿರಲಿ..

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳು ಕಡಿಮೆ ಅಪಾಯದೊಂದಿಗೆ ಅಲ್ಪಾವಧಿಯಲ್ಲಿ ಉತ್ತಮ ಆದಾಯ ನೀಡಬಲ್ಲವು. ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ ಎಂದರೇನು ಹಾಗೂ ಅವು ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಹೆಚ್ಚು ವರಮಾನ ಒದಗಿಸುವ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಿ ಸಂಪತ್ತು ವೃದ್ಧಿಸಿಕೊಳ್ಳುವುದು ಬಹುತೇಕ ಎಲ್ಲರ ಗುರಿಯಾಗಿರುತ್ತದೆ. ಆದರೆ ಅದೇ ಕಾಲಕ್ಕೆ ಹೂಡಿಕೆಗೆ ಸಂಪೂರ್ಣ ಸುರಕ್ಷತೆ ಇರಬೇಕಾಗಿದ್ದು ಸಹ ಪ್ರಮುಖವಾಗುತ್ತದೆ. ಹೀಗೆ ಸುರಕ್ಷಿತವಾಗಿ ಹೂಡಿಕೆ ಮಾಡಿ ಬ್ಯಾಂಕ್ ನಿಶ್ಚಿತ ಠೇವಣಿಗಿಂತಲೂ ಹೆಚ್ಚಿನ ಆದಾಯ ಪಡೆಯಲು ಬಯಸಿದರೆ 'ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್' (MMMF) ಗಳು ನಿಮಗೆ ಹೇಳಿ ಮಾಡಿಸಿದ ಯೋಜನೆಯಾಗಿವೆ. ಬ್ಯಾಂಕ್ ನಿಶ್ಚಿತ ಠೇವಣಿ ಯೋಜನೆಗಳು ಸುರಕ್ಷತೆಯೊಂದಿಗೆ ಉತ್ತಮ ಆದಾಯ ನೀಡುತ್ತವೆ ಎಂಬುದು ನಿಜವಾದರೂ ಇದರಲ್ಲಿ ಪ್ರತಿಫಲ ಪಡೆಯಲು ದೀರ್ಘಕಾಲ ಕಾಯಬೇಕಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳು ಕಡಿಮೆ ಅಪಾಯದೊಂದಿಗೆ ಅಲ್ಪಾವಧಿಯಲ್ಲಿ ಉತ್ತಮ ಆದಾಯ ನೀಡಬಲ್ಲವು. ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ ಎಂದರೇನು ಹಾಗೂ ಅವು ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ. ಕೇವಲ 10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಹೇಗೆ?

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳು ಒಂದು ಹಂತದ ನಿಶ್ಚಿತ ಆದಾಯದ ಹಾಗೂ ಉತ್ತಮ ಸುರಕ್ಷಿತ ಯೋಜನೆಗಳೆಂದು ಹೆಸರಾಗಿವೆ. ಇವುಗಳಲ್ಲಿನ ಏರಿಳಿತ ಅತ್ಯಂತ ಕನಿಷ್ಠ ಮಟ್ಟದ್ದಾಗಿರುತ್ತದೆ. ಮೂಲ ಬಂಡವಾಳವು ಯಾವಾಗಲೂ ಸುರಕ್ಷಿತವಾಗಿರುವಂತೆ ಎಚ್ಚರಿಕೆಯಿಂದ ಹೂಡಿಕೆ ಮಾಡಲಾಗುತ್ತದೆ. ಇವುಗಳಿಂದ ದೊರಕುವ ಆದಾಯ ತೆರಿಗೆಗೆ ಒಳಪಡಬಹುದು ಅಥವಾ ತೆರಿಗೆ ರಹಿತವೂ ಆಗಿರಬಹುದು. ಯಾವ ವಿಧದ ಸೆಕ್ಯೂರಿಟಿಗಳಲ್ಲಿ ಬಂಡವಾಳವನ್ನು ಹೂಡಲಾಗಿದೆ ಎಂಬುದರ ಮೇಲೆ ತೆರಿಗೆ ವಿಧಿಸುವಿಕೆ ಅಥವಾ ವಿಧಿಸದಿರುವಿಕೆ ನಿರ್ಧರಿಸಲ್ಪಡುತ್ತದೆ. ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳಿಂದ ದೊರಕುವ ಆದಾಯ ಇಕ್ವಿಟಿಗಳ ಆದಾಯಕ್ಕಿಂತ ಕಡಿಮೆ ಇದ್ದರೂ ಬಹುತೇಕ ಅವುಗಳಷ್ಟೇ ಇರುತ್ತದೆ. ಬಂಡವಾಳ ಹೂಡಿಕೆಯಲ್ಲಿ ಸಮತೋಲನ ಕಾಪಾಡಲು ಹಾಗೂ ನಿಶ್ಚಿತ ಆದಾಯ ಪಡೆಯಲು ಬಹುತೇಕರು ಎಂಎಂಎಂಎಫ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ.

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳು ಅಲ್ಪಾವಧಿಗೆ ಬಂಡವಾಳ ಹೂಡುವುದರಿಂದ ಸುಲಭ ನಗದೀಕರಣ ಸಾಧ್ಯ. ಇದೊಂದು ಓಪನ್ ಎಂಡೆಡ್ ಡೆಬ್ಟ್ ಫಂಡ್ ಆಗಿದ್ದು, ಇವುಗಳಲ್ಲಿನ ಮೊತ್ತವನ್ನು ಹಣಕಾಸು ಭದ್ರತೆಗಳಲ್ಲಿ ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಮಾತ್ರ ಹೂಡಿಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಂಎಂಎಂಎಫ್‌ಗಳ ಹೂಡಿಕೆ ಅವಧಿ ಒಂದು ವರ್ಷದ್ದಾಗಿರುವುದರಿಂದ ನಗದೀಕರಣ ಸರಳವಾಗಿದೆ. ಕೇವಲ 500 ಹೂಡಿಕೆ ಮಾಡಬಹುದಾದ ಬೆಸ್ಟ್ ಸಿಪ್ ಪ್ಲಾನ್

ಮನಿ ಮಾರ್ಕೆಟ್ ಹೂಡಿಕೆ ವಿಧಾನಗಳು

ಮನಿ ಮಾರ್ಕೆಟ್ ಹೂಡಿಕೆ ವಿಧಾನಗಳು

ಎಂಎಂಎಂಎಫ್‌ಗಳು ಸಾಮಾನ್ಯವಾಗಿ ನಾಲ್ಕು ರೀತಿಯ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ. ಅತ್ಯಂತ ಸುರಕ್ಷಿತ ಹಾಗೂ ಸುಲಭವಾಗಿ ನಗದೀಕರಿಸಬಹುದಾದ ಟ್ರೆಜರಿ ಬಿಲ್ಸ್ (T-Bills), ಮರುಖರೀದಿ ಒಪ್ಪಂದಗಳು (Repurchase Agreements-Repos), ಕಮರ್ಶಿಯಲ್ ಪೇಪರ್ಸ್ ಹಾಗೂ ಡಿಪಾಸಿಟ್ ಸರ್ಟಿಫಿಕೇಟುಗಳಲ್ಲಿ ಎಂಎಂಎಂಎಫ್ ಬಂಡವಾಳದ ಹೂಡಿಕೆ ಮಾಡಲಾಗುತ್ತದೆ.

ಸರ್ಟಿಫಿಕೇಟ್ ಆಫ್ ಡಿಪಾಸಿಟ್ (Certificate of Deposit-CD)

ಸರ್ಟಿಫಿಕೇಟ್ ಆಫ್ ಡಿಪಾಸಿಟ್ (Certificate of Deposit-CD)

ಸರ್ಟಿಫಿಕೇಟ್ ಆಫ್ ಡಿಪಾಸಿಟ್ ಇದು ಬ್ಯಾಂಕ್ ನಿಶ್ಚಿತ ಠೇವಣಿಯಂತೆಯೇ ಕೆಲಸ ಮಾಡುತ್ತದೆ. ಶೆಡ್ಯೂಲ್ಡ್ ಕಮರ್ಶಿಯಲ್ ಬ್ಯಾಂಕ್‌ಗಳು ಸರ್ಟಿಫಿಕೇಟ್ ಆಫ್ ಡಿಪಾಸಿಟ್ ಯೋಜನೆಗಳನ್ನು ಒದಗಿಸುತ್ತವೆ. ಪಕ್ವತಾ ಅವಧಿಯ ಮುನ್ನ ಸರ್ಟಿಫಿಕೇಟ್ ಆಫ್ ಡಿಪಾಸಿಟ್ ಹಿಂಪಡೆಯಲು ಸಾಧ್ಯವಿಲ್ಲ. ಮನೆಯಿಂದಲೇ ಹಣ ಗಳಿಸುವುದು ಹೇಗೆ?

ಕಮರ್ಶಿಯಲ್ ಪೇಪರ್ (Commercial Paper-CPs)

ಕಮರ್ಶಿಯಲ್ ಪೇಪರ್ (Commercial Paper-CPs)

ಉನ್ನತ ಮಟ್ಟದ ಕ್ರೆಡಿಟ್ ರೇಟಿಂಗ್ ಹೊಂದಿರುವ ಕಂಪನಿಗಳು ಮಾತ್ರ ಕಮರ್ಶಿಯಲ್ ಪೇಪರ್ ಹೊರಡಿಸುತ್ತವೆ. ಕಮರ್ಶಿಯಲ್ ಪೇಪರ್‌ಗಳನ್ನು ಪ್ರಾಮಿಸರಿ ನೋಟ್ ಎಂದೂ ಕರೆಯಲಾಗುತ್ತದೆ. ಡಿಸ್ಕೌಂಟ್ ದರದಲ್ಲಿ ಕಮರ್ಶಿಯಲ್ ಪೇಪರ್‌ಗಳನ್ನು ನೀಡಲಾಗುತ್ತದೆ ಹಾಗೂ ಫೇಸ್ ವ್ಯಾಲ್ಯು ಆಧರಿಸಿ ಅವುಗಳನ್ನು ನಗದೀಕರಣ ಮಾಡಲಾಗುತ್ತದೆ.

ಟ್ರೆಜರಿ ಬಿಲ್ಸ್ (Treasury Bills : T-bills)

ಟ್ರೆಜರಿ ಬಿಲ್ಸ್ (Treasury Bills : T-bills)

ಮರು ಖರೀದಿ ಒಪ್ಪಂದಗಳು (Repurchase Agreements-Repos)

ಮರು ಖರೀದಿ ಒಪ್ಪಂದಗಳು (Repurchase Agreements-Repos)

ಎಂಎಂಎಂಎಫ್‌ಗಳು ಹೂಡಿಕೆ ಮಾಡುವ ಮತ್ತೊಂದು ವಿಧಾನ ರಿಪರ್ಚೇಸ್ ಅಗ್ರೀಮೆಂಟ್ಸ್ ಆಗಿವೆ. ಕಮರ್ಶಿಯಲ್ ಬ್ಯಾಂಕುಗಳು ತಮಗೆ ಆರ್‌ಬಿಐ ನೀಡುವ ಸಾಲದ ಹಣದಿಂದ ಈ ಮರುಖರೀದಿ ಒಪ್ಪಂದಗಳನ್ನು ಜಾರಿ ಮಾಡುತ್ತವೆ. ಇವುಗಳ ಖರೀದಿ ಹಾಗೂ ಮಾರಾಟದ ಒಪ್ಪಂದವನ್ನು ಏಕಕಾಲಕ್ಕೆ ಮಾಡಲಾಗುತ್ತದೆ.

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗೆ ಮುನ್ನ ಪರಿಶೀಲಿಸಬೇಕಾದ ಅಂಶಗಳು

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗೆ ಮುನ್ನ ಪರಿಶೀಲಿಸಬೇಕಾದ ಅಂಶಗಳು

ಪ್ರತಿಫಲ

ಯಾವುದೇ ವಿಧಾನದಲ್ಲಿ ಹೂಡಿಕೆ ಮಾಡಿದರೂ ಅದರಲ್ಲಿ ಆದಾಯದ ಪಾತ್ರ ಮುಖ್ಯವಾಗಿರುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿನ ನೆಟ್ ಅಸೆಟ್ ವ್ಯಾಲ್ಯು (NAV) ಸತತವಾಗಿ ಏರಿಳಿತವಾಗುವುದರಿಂದ ನಿಶ್ಚಿತ ಆದಾಯ ಎಂಬುದು ಒಂದು ರೀತಿ ಮಿಥ್ಯೆ ಎಂಬುದು ಸದಾ ಗಮನದಲ್ಲಿರಲಿ.

 

ಶುಲ್ಕಗಳು

ಶುಲ್ಕಗಳು

ಸಂಪತ್ತು ನಿರ್ವಹಣಾ ಕಂಪನಿಗೆ ಹೂಡಿಕೆದಾರನು ನಿಶ್ಚಿತ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗುವುದರಿಂದ ಇದು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಸಂಪತ್ತು ನಿರ್ವಹಣೆಗಾಗಿ ಕಂಪನಿಗೆ ಖರ್ಚು ಅನುಪಾತ ಶುಲ್ಕವನ್ನು ನೀಡಬೇಕಾಗುತ್ತದೆ. ದೊಡ್ಡ ಮಟ್ಟದ ಆದಾಯದ ನಿರೀಕ್ಷೆ ಇಟ್ಟುಕೊಂಡಲ್ಲಿ ಮೊದಲಿಗೆ ಕಂಪನಿಯ ವಾರ್ಷಿಕ ಖರ್ಚು ಅನುಪಾತ ಶುಲ್ಕಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.

ಹೂಡಿಕೆಯ ಉದ್ದೇಶ

ಹೂಡಿಕೆಯ ಉದ್ದೇಶ

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್‌ಗಳು ಅಲ್ಪಾವಧಿಯ ಹೂಡಿಕೆ ಸಾಧನಗಳಾಗಿವೆ. ಅಲ್ಪಾವಧಿ ಹಾಗೂ ಕಿರು ಅವಧಿಗೆ ಹೂಡಿಕೆ ಮಾಡಲು ಮಾತ್ರ ಇವು ಸೂಕ್ತವಾಗಿವೆ. ಇವುಗಳಲ್ಲಿನ ಹೂಡಿಕೆ ಅವಧಿ 3 ತಿಂಗಳಿನಿಂದ ಒಂದು ವರ್ಷದ್ದಾಗಿರುತ್ತದೆ.

ಹೂಡಿಕೆಯ ವಿಭಿನ್ನತೆ

ಹೂಡಿಕೆಯ ವಿಭಿನ್ನತೆ

ನಿಮ್ಮ ಹೂಡಿಕೆಯಲ್ಲಿ ವಿಭಿನ್ನತೆ ತರಲು ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್ ಅತ್ಯಂತ ಸೂಕ್ತವಾಗಿವೆ. ನಿಮ್ಮ ಬಳಿಯ ಹೆಚ್ಚುವರಿ ಬಂಡವಾಳವನ್ನು ಅಲ್ಪಾವಧಿಗೆ ಹೂಡಲು ಬಯಸಿದ್ದಲ್ಲಿ ಹಾಗೂ ಸುದೀರ್ಘ ಲಾಕ್ ಇನ್ನ ಬೇಡವೆಂದಾದಲ್ಲಿ ಇವುಗಳನ್ನು ಪರಿಗಣಿಸಬಹುದು.

ಕೊನೆ ಮಾತು

ಕೊನೆ ಮಾತು

ಕಡಿಮೆ ಅವಧಿಗೆ ಹಾಗೂ ಅತ್ಯಂತ ಸುರಕ್ಷಿತ ವಿಧಾನದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್ ಉತ್ತಮ ಹೂಡಿಕೆ ಸಾಧನಗಳಾಗಿವೆ. ಆದಾಗ್ಯೂ ಯಾವುದೇ ರೀತಿಯ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಸಾಧಕ, ಬಾಧಕಗಳ ಬಗ್ಗೆ ಅರಿವು ಇರಲೇಬೇಕು. ಹಾಗಾಗಿ ಎಲ್ಲ ವಿಷಯಗಳನ್ನು ಮೊದಲೇ ತಿಳಿದುಕೊಂಡು ಹೂಡಿಕೆ ಮಾಡಿದಲ್ಲಿ ನಿರೀಕ್ಷಿತ ಆದಾಯ ಪಡೆಯಲು ಸಾಧ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+