For Quick Alerts
ALLOW NOTIFICATIONS  
For Daily Alerts

ತೆರಿಗೆ ಲಾಭ ತಂದು ಕೊಡುವ ವೈಯಕ್ತಿಕ ಸಾಲದ ಮೂರು ವಿಧಾನ

|

ಸಾಲ ಎನ್ನುವುದು ಬಂಗಾರದ ಶೂಲ ಇದ್ದ ಹಾಗೆ. ಅದು ಎಂದಿಗೂ ನಮಗೆ ನೋವನ್ನು ಕೊಡುತ್ತಲೇ ಇರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಅನಾನುಕೂಲತೆ ಇದ್ದಾಗ ಅಥವಾ ತೊಂದರೆ ಇದ್ದಾಗ ಹಣದ ನೆರವನ್ನು ಬ್ಯಾಂಕಿಲ್ಲಿ ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತೇವೆ. ಆದರೆ ಅದರ ಬಡ್ಡಿ ಮತ್ತು ಅಸಲನ್ನು ಕಟ್ಟ ಬೇಕಾದರೆ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುವುದು.

 

ಹಾಗಾಗಿ ಸಾಲವನ್ನು ಪಡೆಯುವಾಗ ಸಾವಿರ ಬಾರಿ ಚಿಂತಿಸಬೇಕು. ಮಾನಸಿಕ ಒತ್ತಡವನ್ನು ಅನುಭವಿಸುತ್ತೇನೆ ಅಥವಾ ಎಂಥದೇ ಸಮಸ್ಯೆ ಎದುರಾದರೂ ಧೈರ್ಯವಾಗಿ ಸ್ವೀಕರಿಸುತ್ತೇನೆ ಎನ್ನುವಂತಹ ದೃಢ ಚಿಂತನೆ ಇದ್ದರೆ ಮಾತ್ರ ಸಾಲವನ್ನು ಪಡೆದುಕೊಳ್ಳಬೇಕು. ಇಲ್ಲವಾದರೆ ಆದಷ್ಟು ಸಾಲದಿಂದ ದೂರ ಇರುವದು ಹಿತಕರ.

 

ಅದೇ ಸಾಲವನ್ನು ಪಡೆದುಕೊಳ್ಳುವುದರ ಮೂಲಕವೂ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವ ಸಂಗತಿ ಅನೇಕರಿಗೆ ತಿಳಿದಿಲ್ಲ. ಹೌದು, ನಾವು ತೆಗೆದು ಕೊಳ್ಳುವ ಸಾಲವು ಕೆಲವು ಮಹತ್ತರ ಉಪಯೋಗವನ್ನು ತಂದುಕೊಡುವುದು. ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದರ ಮೂಲಕ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಸಾಲ ಕೈಗೊಳ್ಳುವುದರ ಮೂಲಕ ನಾವು ತೆರಿಗೆಯನ್ನು ಕಟ್ಟುವ ಹೊರೆಯನ್ನು ಸ್ವಲ್ಪ ಕಡಿಮೆಮಾಡಿಕೊಳ್ಳಬಹುದು. ಅಂದರೆ ಸಾಲ ಪಡೆದುಕೊಳ್ಳುವುದರ ಮೂಲಕ ತೆರಿಗೆ ಕಟ್ಟುವ ಹಣವನ್ನು ಉಳಿಸಬಹುದು ಎಂದು ಸಹ ಹೇಳಲಾಗುತ್ತದೆ.

ತೆರಿಗೆ ಲಾಭ ತಂದು ಕೊಡುವ ವೈಯಕ್ತಿಕ ಸಾಲದ ಮೂರು ವಿಧಾನ

ನಿಜ, ಕೆಲವು ಸಾಲಗಳನ್ನು ಪಡೆದುಕೊಳ್ಳುವುದರ ಮೂಲಕ ತೆರಿಗೆಯ ಹಣವನ್ನು ಉಳಿಸಬಹುದು. ಉದಾಹರಣೆಗೆ ಗೃಹ ಸಾಲ ಪಡೆದುಕೊಂಡರೆ ತೆರಿಗೆ ನೀಡುವುದರಲ್ಲಿ ಒಂದಿಷ್ಟು ಹಣವನ್ನು ಉಳಿಸಬಹುದು. ಹಾಗಾಗಿಯೇ ಬಹುತೇಕ ಜನರು ಗೃಹ ನಿರ್ಮಾಣಕ್ಕೆ ಸಾಲ ಪಡೆದುಕೊಳ್ಳಲು ಮುಂದಾಗುತ್ತಾರೆ. ಹಾಗೆಯೇ ಕೆಲವು ಸಂಗತಿಗಳಿಗಾಗಿಯೂ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳಬಹುದು. ಅವುಗಳಿಂದಲೂ ತೆರಿಗೆಯ ಹಣವನ್ನು ಉಳಿಸಬಹುದು.

ನಿಮಗೆ ಹೆಚ್ಚು ಹಣದ ಅಗತ್ಯವಿದೆ ಅಥವಾ ಕೆಲವು ನಿರ್ದಿಷ್ಟ ಸಂಗತಿಗಳಿಗೆ ಒಂದಿಷ್ಟು ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ ಇದೆ ಎಂದಾಗ ಏನು ಮಾಡುವಿರಿ? ಆಗ ವೈಯಕ್ತಿಕ ಸಾಲದ ಪಟ್ಟಿಗಳನ್ನು ಅಥವಾ ವಿವರಣೆಯನ್ನು ಪರಿಶೀಲಿಸುವುದು ಸಹಜ. ಅಗತ್ಯವಾದ ಮಾಹಿತಿ ಪತ್ರಗಳನ್ನು ನೀಡುವುದರ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಅಂತೆಯೇ ಅದಕ್ಕೆ ಅನುಗುಣವಾಗಿ ಬಡ್ಡಿ ಹಾಗೂ ಅಸಲನ್ನು ತೀರಿಸುತ್ತಾ ಬರಬೇಕಾಗುವುದು. ಈ ವಿಷಯದಲ್ಲಿ ಯಾರು ತೆರಿಗೆ ನೀಡುವುದರ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಇತರ ಸಾಲಗಳಂತೆಯೇ ಈ ವಿಧಾನದಲ್ಲೂ ತೆರಿಗೆಯ ಲಾಭದ ಪಟ್ಟಿ ಸರಳವಾದದ್ದು. ವೈಯಕ್ತಿಕ ಸಾಲ ಪಡೆದು, ಅದರ ಉಪಯೋಗವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಗಮನಾರ್ಹ ವಿಷಯವಾಗಿರುತ್ತದೆ.

ವೈಯಕ್ತಿಕ ಸಾಲಗಳ ಮೇಲೆ ತೆರಿಗೆಯ ಪ್ರಯೋಜನವನ್ನು ನೀವು ಹೇಗೆ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

1. ವ್ಯವಹಾರದ ಖುರ್ಚು-ವೆಚ್ಚಗಳಿಗೆ ಅವುಗಳನ್ನು ಬಳಸಿ

ವೈಯಕ್ತಿಕ ಸಾಲದ ಹಣವನ್ನು ವ್ಯವಹಾರ ಮತ್ತು ವ್ಯಾಪಾರದ ಸಲಕರಣೆಗಳನ್ನು ಖರೀದಿಸಲು, ವ್ಯವಹಾರದಲ್ಲಿ ನಿಮ್ಮ ಬಂಡವಾಳದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅಥವಾ ನಿಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಿಕೊಳ್ಳಲು ಹಣವನ್ನು ವಿನಿಯೋಗಿಸಬಹುದು. ಹೀಗೆ ಅಗತ್ಯ ಉದ್ದೇಶಗಳಿಗೆ ತೆಗೆದುಕೊಳ್ಳುವ ವೈಯಕ್ತಿಕ ಸಾಲವು ತೆರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅನುವುಮಾಡಿಕೊಡುತ್ತದೆ. ಜೊತೆಗೆ ತೆರಿಗೆ ನೀಡುವುದರ ವಿಷಯದಲ್ಲಿ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ. ಏಕೆಂದರೆ ನೀವು ಬಡ್ಡಿಯನ್ನು ಪಾವತಿಸುವ ಮೊತ್ತವನ್ನು ವ್ಯಾಪಾರದ ಖರ್ಚು ಎಂದು ಹೇಳಬಹುದು. ಇದು ನಿಮ್ಮ ತೆರಿಗೆಯ ಲಾಭದ ಪ್ರಮಾಣ ಮತ್ತು ತೆರಿಗೆಯ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ.

2. ಮನೆಯ ಅಗತ್ಯ ವಸ್ತುಗಳ ಖರೀದಿಗೆ ಬಳಸಿ

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 24ರ ಪ್ರಕಾರ ನೀವು ನಿಮ್ಮ ಆಸ್ತಿಯನ್ನು ಖರೀದಿಸಲು, ನಿರ್ಮಿಸಲು ಅಥವಾ ನವೀಕರಿಸಲು ವೈಯಕ್ತಿಕ ಸಾಲವನ್ನು ಬಳಸಬಹುದು. ಇದರೊಟ್ಟಿಗೆ ತೆರಿಗೆ ವಿನಾಯತಿಯಾಗಿ ಸಾಲದ ಮರುಪಾವತಿಯ ಕೆಲವು ಹಕ್ಕು ಬಾಧ್ಯತೆಗಳನ್ನು ಪಡೆದುಕೊಳ್ಳಬಹುದು. ಮನೆಯ ಮೇಲ್ಛಾವಣಿ ನಿರ್ಮಿಸಲು 2,00,000 ರೂಪಾಯಿಗಳ ಮಿತಿ ಇರುತ್ತದೆ. ಅದೇ ಲೆಟ್‌ ಔಟ್‌ ಆಸ್ತಿಗೆ ಅಂತಹ ಯಾವುದೇ ಮಿತಿಯ ಗಡಿ ಇರುವುದಿಲ್ಲ.

3. ಕೆಲವು ಸ್ವತ್ತುಗಳನ್ನು ಖರೀದಿಸಲು ವೈಯಕ್ತಿಕ ಸಾಲವನ್ನು ಪಡೆಯಬಹುದು

ನಿಮ್ಮ ಮನೆಯ ನವೀಕರಣ ಅಥವಾ ಯಾವುದೇ ವಸ್ತುಗಳ ಖರೀದಿಸುವ ಅಗತ್ಯತೆ ಇಲ್ಲ, ವ್ಯವಹಾರದಲ್ಲೂ ಯಾವುದೇ ಹಣದ ಹೂಡಿಕೆ ಅಥವಾ ಯಾವುದೇ ಹಣದ ವಿನಿಯೋಗ ಮಾಡುವ ಅಗತ್ಯವಿಲ್ಲ. ಹಾಗಾದರೆ ಯಾವ ಸಂಗತಿಗಾಗಿ ಅಥವಾ ಉದ್ದೇಶಕ್ಕಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕು? ಎನ್ನುವುದರ ಕುರಿತು ಚಿಂತಿಸುತ್ತಿದ್ದರೆ, ಈ ಆಯ್ಕೆಗಳನ್ನು ನೀವು ಪರಿಗಣಿಸಬಹುದು. ಮೌಲ್ಯಯುತವಾದ ಆಸ್ತಿಯನ್ನು ನೀವು ಖರೀದಿಸಲು ಬಯಸುತ್ತಿದ್ದೀರಿ ಅಥವಾ ಸಂಗತಿಗಳನ್ನು ಪರಿಗಣಿಸುತ್ತೀರಿ ಎಂದಾದರೆ ನಿಮಗೆ ಉತ್ತರ ಆಭರಣಗಳ ಖರೀದಿ, ಕಾರು ಖರೀದಿ, ಷೇರುಗಳ ಖರೀದಿಗೆ ಆಗಬಹುದು. ನೀವು ಸ್ವಾಧೀನದ ವೆಚ್ಚದ ಭಾಗವಾಗಿ ಪಾವತಿಸುವ ಬಡ್ಡಿಯನ್ನು ಪರಿಗಣಿಸಬಹುದು. ನಿಮಗೆ ಆಸಕ್ತಿ ಇದ್ದ ವರ್ಷದಲ್ಲಿಯೇ ಪ್ರಯೋಜನವನ್ನು ಅಥವಾ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇದ್ದರೂ ಆಸ್ತಿಯನ್ನು ಮಾರಾಟ ಮಾಡಿದ ವರ್ಷದಲ್ಲಿ ಸಾಕಷ್ಟು ಪ್ರಯೋಜನ ಮತ್ತು ಲಾಭವನ್ನು ಪಡೆದುಕೊಳ್ಳಬಹುದು. ಸ್ವಾಧೀನದ ವೆಚ್ಚದ ಭಾಗವಾಗಿ ನೋಡಿದಾಗ ವೈಯಕ್ತಿಕ ಸಾಲದ ಆಸ್ತಿಯ ಭಾಗವು ಸ್ವತ್ತಿನ ಮಾರಾಟದಿಂದ ಗಳಿಸಿದ ಬಂಡವಾಳದ ಲಾಭಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನೀವು ನಿಮ್ಮ ತೆರಿಗೆಯ ಮೊತ್ತವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ ತೆರಿಗೆ ಕಡಿಮೆಯಾಗುವ ಮೊತ್ತವನ್ನು ಸಹ ಪಾವತಿಸಬಹುದು.

ಮುಂದಿನ ಬಾರಿ ನೀವೇನಾದರೂ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಯೋಜನೆಯನ್ನು ಹೊಂದುವಿರಿ ಎಂದಾಗ ಅದನ್ನು ಹೇಗೆ ಬಳಸಿಕೊಳ್ಳುವುದು ಹಾಗೂ ಪಡೆದುಕೊಳ್ಳುವುದು ಎನ್ನುವುದರ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಿ. ಈ ಬಗೆಯ ಸಾಲವು ಅದ್ಭುತ ವೈಯಕ್ತಿಕ ಸಾಲ ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಅಲ್ಲದೆ ನಿಮ್ಮ ಹಣಕಾಸಿನ ವೆಚ್ಚವನ್ನು ಸಹ ಕಡಿಮೆಗೊಳಿಸುವುದು.

ಏನೇ ಆದರೂ ನೀವು ಮೂರು ಪ್ರಮುಖ ಉದ್ದೇಶಗಳಿಗೆ ಸಾಲವನ್ನು ಬಳಸಿಕೊಳ್ಳಬಹುದು ಅಥವಾ ಪಡೆದುಕೊಳ್ಳಬಹುದು. ಆದರೆ ನೀವು ಪಡೆದುಕೊಂಡ ಸಾಲಕ್ಕೆ ಸೂಕ್ತ ರೀತಿಯಲ್ಲಿ ಬಡ್ಡಿ ಹಾಗೂ ಅಸಲನ್ನು ಮರುಪಾವತಿಸುತ್ತಾ ಬಂದಾಗ ಮಾತ್ರ ಅದರ ಉಪಯೋಗದ ಪರಿಣಾಮ ಅಥವಾ ಫಲಿತಾಂಶ ನಿಮಗೆ ಅದ್ಭುತವಾಗಿರುತ್ತದೆ. ಸೂಕ್ತ ಬಡ್ಡಿ ಹಾಗೂ ಅಸಲಿನ ಹಣವನ್ನು ತುಂಬುತ್ತಾ ಬಂದರೆ ಸಾಲದ ಹೊರೆ ನಿಮ್ಮ ಮೇಲೆ ಕಠಿಣ ಸಮಸ್ಯೆಯವನ್ನು ತಂದುಕೊಡದು. ಬದಲಿಗೆ ಬಹುಬೇಗ ಸಾಲ ತೀರುವಂತೆ ಮಾಡುವುದು.

ವೈಯಕ್ತಿಕ ಸಾಲವನ್ನು ಪಡೆದುಕೊಂಡಾಗ ನೀವು ಪ್ರಮುಖವಾಗಿ ಮೂರು ಮುಖ್ಯ ಪ್ರಯೋಜನಗಳನ್ನು ಪರಿಗಣಿಸಬಹುದು:

* ಹೆಚ್ಚಿನ ಸಾಲದ ಮಿತಿ:

ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದರಿಂದ ನಿಮ್ಮ ವ್ಯವಹಾರವನ್ನು ವಿಸ್ತರಿಸಬಹುದು. ನಿಮ್ಮ ಮನೆಯನ್ನು ನವೀಕರಿಸಬಹುದು. ಆಯಾ ಕಾಲಕ್ಕೆ ಅನುಗುಣವಾಗಿ ಇರುವ ಮೌಲ್ಯಯುತವಾದ ಆಭರಣವನ್ನು ಖರೀದಿಸಬಹುದು. ಅಲ್ಲದೆ ಷೇರುಗಳಂತಹ ಹೂಡಿಕೆಯಲ್ಲಿ ಮುಂದಾಗಬಹುದು. ಈ ಎಲ್ಲಾ ದುಬಾರಿ ವೆಚ್ಚಗಳನ್ನು ನಿಮ್ಮ ವೈಯಕ್ತಿಕ ಸಾಲವು ಭರಿಸುವುದು. ಜೊತೆಗೆ ಒಂದಿಷ್ಟು ಲಾಭವನ್ನು ತಂದುಕೊಡುವುದು.

* ಫ್ಲೆಕ್ಸಿಬಲ್ ಟೆನರ್/ಅನುಕೂಲಕರ ಸ್ಥಿತಿ:

ನಿಮ್ಮ ಹಣಕಾಸಿನ ಸಾಮರ್ಥ್ಯದ ಪ್ರಕಾರ ನಿಮ್ಮ ಸಾಲದ ಮರುಪಾವತಿಯನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಇದು ನೀಡುತ್ತದೆ. ವಾಸ್ತವವಾಗಿ ಕೆಲವು ಸಾಲದಾತರು ವೈಯಕ್ತಿಕ ಸಾಲವನ್ನು ನೀಡುತ್ತಾರೆ. ಆ ಸಂದರ್ಭದಲ್ಲಿ ಬಡ್ಡಿಯ ಮೊತ್ತವನ್ನು ಇಎಮ್‍ಐಗಳಂತೆ ಪಾವತಿಸುವ ಆಯ್ಕೆಯನ್ನು ನೀಡುತ್ತಾರೆ. ನಂತರ ಪ್ರಧಾನ ಹಣವನ್ನು ಪಾವತಿಸಬಹುದು.

* ತ್ವರಿತ ಪ್ರಕ್ರಿಯೆ:

ವೈಯಕ್ತಿಕ ಸಾಲವು ತುರ್ತು ಅಗತ್ಯಗಳಿಗೆ ಹಣಕಾಸು ಒದಗಿಸುವ ಒಂದು ಉತ್ತಮ ವಿಧಾನವಾಗಿದೆ. ಆದರೆ ಈ ಹಂತದಲ್ಲಿ ಸುದೀರ್ಘವಾದ ಅರ್ಜಿ ಪ್ರಕ್ರಿಯೆಯನ್ನು ಹೊಂದಬೇಕಾಗುವುದು. ಸುಲಭ ಅರ್ಹತೆ ಮತ್ತು ದಾಖಲಾತಿಯ ಅವಶ್ಯಕತೆಯನ್ನು ಹೊಂದಿರುವ ಸಾಲದಾತರನ್ನು ಆಯ್ಕೆ ಮಾಡಿ. ಅಲ್ಲದೆ ಶೀಘ್ರವಾಗಿ ನೀಡುವ ಆನ್‍ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆಯ್ಕೆ ಮಾಡಿ.

ನಿಮ್ಮ ವೈಯಕ್ತಿಕ ಅಗತ್ಯತೆಗಳಿಗೆ ಅಥವಾ ವೃತ್ತಿಪರ ಅಗತ್ಯಗಳಿಗೆ ತುರ್ತಾಗಿ ಪೂರೈಸುವ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಯೋಜನೆಯನ್ನು ಹೊಂದಿದ್ದರೆ ಬಜಾಜ್ ಫೈನಾನ್ಸ್ ನಿಂದ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳಿ. ಇದರಲ್ಲಿ ವೈಯಕ್ತಿಕ ಸಾಲದ ಮಿತಿಯು 25 ಲಕ್ಷ ರೂಪಾಯಿಗಳ ಮಿತಿಯನ್ನು ನೀಡುವುದು. ಐದು ನಿಮಿಷದಲ್ಲಿ ಆನ್‍ಲೈನ್ ಅನುಮೋದನೆಯಡಿಯಲ್ಲಿ ಪರಿಶೀಲನೆ ಹಾಗೂ ಪರಿಷ್ಕರಣೆಯ ಕ್ರಮ ನಡೆಯುವುದು. 24 ಗಂಟೆಯ ಒಳಗೆ ಹಣವು ನಿಮ್ಮ ಕೈ ಸೇರುವುದು. ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲವು ನಿಮಗೆ ಒತ್ತಡ ಮುಕ್ತ ಅನುಭವವನ್ನು ನೀಡುವುದು.

English summary

Three Occasions Where A Personal Loan Can Give You Tax Benefits

Three Occasions Where A Personal Loan Can Give You Tax Benefits. If you need a personal loan to meet your personal or professional needs urgently, Bajaj Finserv Personal Loans are a great choice.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X