For Quick Alerts
ALLOW NOTIFICATIONS  
For Daily Alerts

2019 ರಲ್ಲಿ ಕಡಿಮೆ ಬಡ್ಡಿದರಕ್ಕೆ ಗೃಹ ಸಾಲ ಒದಗಿಸುವ ಬ್ಯಾಂಕುಗಳು

ಮನೆ ಸಾಲ ಪಡೆಯುವುದೆಂದರೆ ದೊಡ್ಡ ಮೊತ್ತದ ಹಣ ಪಡೆಯುವುದಾಗಿದೆ. ಮನೆ ಸಾಲದ ಮೊತ್ತ ಯಾವಾಗಲೂ ಹೆಚ್ಚಿರುವುದರಿಂದ, ಇದಕ್ಕೆ ಹೆಚ್ಚಿನ ಇಎಂಐ ಬರುತ್ತದೆ. ಮನೆ ಸಾಲದ ಅವಧಿಯ ದೀರ್ಘಾವಧಿಯದ್ದಾಗಿರುತ್ತದೆ.

|

ಮನೆ ಸಾಲ ಪಡೆಯುವುದೆಂದರೆ ದೊಡ್ಡ ಮೊತ್ತದ ಹಣ ಪಡೆಯುವುದಾಗಿದೆ. ಮನೆ ಸಾಲದ ಮೊತ್ತ ಯಾವಾಗಲೂ ಹೆಚ್ಚಿರುವುದರಿಂದ, ಇದಕ್ಕೆ ಹೆಚ್ಚಿನ ಇಎಂಐ ಬರುತ್ತದೆ. ಮನೆ ಸಾಲದ ಅವಧಿಯ ದೀರ್ಘಾವಧಿಯದ್ದಾಗಿರುತ್ತದೆ. ಅಲ್ಲದೇ ಸಾಲಗಾರರಿಗೆ ಅನುಗುಣವಾಗಿ 20 ರಿಂದ 30 ವರ್ಷಗಳವರೆಗೆ ಇರುತ್ತದೆ.

ಹಾಗಾಗಿ, ಮನೆ ಸಾಲ ಪಡೆಯುವಾಗ ಅಥವಾ ಸಾಲ ಪಡೆಯುವ ಸಂಸ್ಥೆಯನ್ನು ಆಯ್ಕೆ ಮಾಡುವಾಗ ಸಲ್ಪ ಯಡವಟ್ಟಾದರೂ ಜೀವನಪೂರ್ತಿ ಕಷ್ಟಪಡಬೇಕಾಗುತ್ತದೆ. ಆದ್ದರಿಂದ, ಮನೆ ಸಾಲ ಆಯ್ಕೆ ಮಾಡುವಾಗ ನೀವು ಅನೇಕ ಸಂಗತಿಗಳನ್ನು ಪರಿಗಣಿಸಬೇಕು.
ಯಾವುದೋ ಒಬ್ಬ ಸಾಲದಾತನ ಬಳಿ ಹೋಗಲು ನಿರ್ಧರಿಸುವುದಕ್ಕಿಂತ ಮುಂಚಿತವಾಗಿ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲವನ್ನು ನೀಡುವ ಸಾಲದಾತರನ್ನು ಪರಿಗಣಿಸುವುದು ಮುಖ್ಯ. ಸಾಲ ನೀಡುವಾಗ ಮರುಪಾವತಿಯ ಸಾಮರ್ಥ್ಯ, ಮರುಪಾವತಿಯ ನಿಯಮಗಳು ಮತ್ತು ಸಾಲದಾತರು, ನಿಮ್ಮ ವಾರ್ಷಿಕ ಆದಾಯ, ಕ್ರೆಡಿಟ್ ಹಿಸ್ಟರಿ ಮತ್ತು ಅಗತ್ಯವಾದ ಸಮಯ ಇಲ್ಲಿ ಪರಿಗಣಿಸಲ್ಪಡುತ್ತದೆ.

ಗೃಹ ಸಾಲ ಒದಗಿಸುವ ಪ್ರಮುಖ ಬ್ಯಾಂಕುಗಳ ವಿವರ ಇಲ್ಲಿದೆ ನೋಡಿ..

ಆಕ್ಸಿಸ್ ಬ್ಯಾಂಕ್ ಗೃಹ ಸಾಲ

ಆಕ್ಸಿಸ್ ಬ್ಯಾಂಕ್ ಗೃಹ ಸಾಲ

ವಿವರಗಳು:
ಬಡ್ಡಿ ದರ: 8% -11% ವರ್ಷಕ್ಕೆ
ಪ್ರೋಸೆಸಿಂಗ್ ಶುಲ್ಕ ಮತ್ತು ಚಾರ್ಜ್: ಶೇ. 1ರವರೆಗೆ(₹ 10,000 ಕನಿಷ್ಟ) + GST ಅನ್ವಯ
ಕನಿಷ್ಠ ಸಾಲದ ಅವಧಿ: 1 ವರ್ಷ
ಗರಿಷ್ಠ ಅವಧಿ: 30 ವರ್ಷಗಳು
ಕನಿಷ್ಠ ಸಾಲದ ಮೊತ್ತ: ₹ 300,000
ಗರಿಷ್ಠ ಸಾಲದ ಮೊತ್ತ: ₹ 50,000,000
ಪೂರ್ವಪಾವತಿ / ಹಕ್ಕು ನಿರಾಕರಣೆ ಶುಲ್ಕಗಳು: NIL

ಎಚ್ಡಿಎಫ್ಸಿ ಬ್ಯಾಂಕ್ ಗೃಹ ಸಾಲ

ಎಚ್ಡಿಎಫ್ಸಿ ಬ್ಯಾಂಕ್ ಗೃಹ ಸಾಲ

ವಿವರಗಳು:
ಬಡ್ಡಿ ದರ: 8.80% - 9.55%
ಪ್ರೋಸೆಸಿಂಗ್ ಶುಲ್ಕ ಮತ್ತು ಚಾರ್ಜ್: ಶೇ. 0.50ರವರೆಗೆ (₹ 3000) + GST ಅನ್ವಯ
ಕನಿಷ್ಠ ಸಾಲದ ಅವಧಿ: 1 ವರ್ಷ
ಗರಿಷ್ಠ ಅವಧಿ: 20 ವರ್ಷಗಳು
ಕನಿಷ್ಠ ಸಾಲದ ಮೊತ್ತ: ₹ 100,000
ಗರಿಷ್ಠ ಸಾಲದ ಮೊತ್ತ: ₹ 100,000,000
ಪೂರ್ವಪಾವತಿ / ಹಕ್ಕು ನಿರಾಕರಣೆ ಶುಲ್ಕಗಳು: NIL

ಡಿಎಚ್ಎಫ್ಎಲ್ ಗೃಹ ಸಾಲ

ಡಿಎಚ್ಎಫ್ಎಲ್ ಗೃಹ ಸಾಲ

ವಿವರಗಳು:
ಬಡ್ಡಿ ದರ: 10% - 19.07% ವರ್ಷಕ್ಕೆ
ಪ್ರೋಸೆಸಿಂಗ್ ಶುಲ್ಕ ಮತ್ತು ಚಾರ್ಜ್: ರೂ. 2500 + GST ಅನ್ವಯ
ಕನಿಷ್ಠ ಸಾಲದ ಮೊತ್ತ: ₹ 100,000
ಗರಿಷ್ಠ ಸಾಲದ ಮೊತ್ತ: ₹ 3,000,000
ಕನಿಷ್ಠ ಸಾಲದ ಅವಧಿ: 1 ವರ್ಷ
ಗರಿಷ್ಠ ಅವಧಿ: 30 ವರ್ಷಗಳು
ಪೂರ್ವಪಾವತಿ / ಹಕ್ಕು ನಿರಾಕರಣೆ ಶುಲ್ಕಗಳು: NIL

ಬಜಾಜ್ ಫೈನ್ಸರ್ವ್ ಗೃಹ ಸಾಲ

ಬಜಾಜ್ ಫೈನ್ಸರ್ವ್ ಗೃಹ ಸಾಲ

ವಿವರಗಳು:
ಬಡ್ಡಿ ದರ: ವೇತನದಾರರಿಗೆ: 8.85% - 10.30% ವರ್ಷಕ್ಕೆ
ಸ್ವಯಂ ಉದ್ಯೋಗಿಗಳಿಗೆ: 9.25% - 11.15% ವರ್ಷಕ್ಕೆ
ವೇತನದಾರರಿಗೆ ಪ್ರೋಸೆಸಿಂಗ್ ಶುಲ್ಕ ಮತ್ತು ಚಾರ್ಜ್: ಶೇ.0.80 ವರೆಗೆ + GST ಅನ್ವಯ
ಸ್ವಯಂ ಉದ್ಯೋಗಿಗಳಿಗೆ ಪ್ರೋಸೆಸಿಂಗ್ ಶುಲ್ಕ ಮತ್ತು ಚಾರ್ಜ್: ಶೇ.1.20 ವರೆಗೆ + GST ಅನ್ವಯ
ಕನಿಷ್ಠ ಸಾಲದ ಮೊತ್ತ: ₹ 2,000,000
ಗರಿಷ್ಠ ಸಾಲದ ಮೊತ್ತ: ₹ 35,000,000
ಕನಿಷ್ಠ ಅವಧಿ: 10 ವರ್ಷಗಳು
ಗರಿಷ್ಠ ಅವಧಿ: 20 ವರ್ಷಗಳು
ಪೂರ್ವಪಾವತಿ / ಹಕ್ಕು ನಿರಾಕರಣೆ ಶುಲ್ಕಗಳು: NIL

ಐಸಿಐಸಿಐ ಗೃಹ ಸಾಲ

ಐಸಿಐಸಿಐ ಗೃಹ ಸಾಲ

ವಿವರಗಳು:
ಬಡ್ಡಿ ದರ: 8.35% - 9.10% ವರ್ಷಕ್ಕೆ
ಪ್ರೋಸೆಸಿಂಗ್ ಶುಲ್ಕ ಮತ್ತು ಚಾರ್ಜ್: ಶೇ. 0.5 + ಜಿಎಸ್ಟಿ ಅನ್ವಯ
ಕನಿಷ್ಠ ಸಾಲದ ಮೊತ್ತ: ₹ 500,000
ಗರಿಷ್ಠ ಸಾಲದ ಮೊತ್ತ: ₹ 30,000,000
ಕನಿಷ್ಠ ಸಾಲದ ಅವಧಿ: 1 ವರ್ಷ
ಗರಿಷ್ಠ ಸಾಲದ ಅವಧಿ: 30 ವರ್ಷಗಳು
ಪೂರ್ವಪಾವತಿ / ಹಕ್ಕು ನಿರಾಕರಣೆ ಶುಲ್ಕಗಳು: NIL

English summary

2019 Best Home Loans with Low Interest Rate

A home loan is one of the biggest financial commitments. The loan amount of a home loan is always high and hence it comes with a higher EMIs.
Story first published: Friday, April 19, 2019, 13:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X