ಸಾಮಾನ್ಯವಾಗಿ ವಿಕೆಂಡ್ ಗಳಲ್ಲಿ ಅಥವಾ ಫ್ರೀಯಾಗಿರುವ ಸಂದರ್ಭಗಳಲ್ಲಿ ಸ್ವಲ್ಪ ಸಮಯ ಲಭಿಸುತ್ತದೆ. ಒಂದು ವೇಳೆ ಹೆಚ್ಚುವರಿ ಆದಾಯ ಪಡೆಯಲು ಬಯಸುವವರು ನೀವಾದರೆ ಈ ವಾರಾಂತ್ಯದ ಸಮಯವನ್ನು ಖಂಡಿತವಾಗಿಯೂ ಸದುಪಯೋಗಪಡಿಸಿಕೊಳ್ಳಬಹುದು.
ವಾರಾಂತ್ಯಗಳಲ್ಲಿ ಸಿಗುವ ಸಮಯದಲ್ಲಿ ಸ್ವಲ್ಪ ಹೆಚ್ಚು ದುಡಿದು ಇನ್ನೂ ಸ್ವಲ್ಪ ಹೆಚ್ಚು ಹಣ ಗಳಿಸುವುದು ಬಹುತೇಕರ ಆಸೆಯಾಗಿರುತ್ತದೆ. ಸಾಮಾನ್ಯವಾಗಿ ವಿಕೆಂಡ್ ಗಳಲ್ಲಿ ಅಥವಾ ಫ್ರೀಯಾಗಿರುವ ಸಂದರ್ಭಗಳಲ್ಲಿ ಸ್ವಲ್ಪ ಸಮಯ ಲಭಿಸುತ್ತದೆ. ಒಂದು ವೇಳೆ ಹೆಚ್ಚುವರಿ ಆದಾಯ ಪಡೆಯಲು ಬಯಸುವವರು ನೀವಾದರೆ ಈ ವಾರಾಂತ್ಯದ ಸಮಯವನ್ನು ಖಂಡಿತವಾಗಿಯೂ ಸದುಪಯೋಗಪಡಿಸಿಕೊಳ್ಳಬಹುದು. ಕೆಲವು ಹಳೆ ಸಾಲ ತೀರಿಸಲು, ಯಾವುದೋ ಪ್ರಯಾಣ ಕೈಗೊಳ್ಳಲು ಅಥವಾ ಮತ್ತಾವುದೋ ಯೋಜನೆಯಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಹಣ ಬೇಕಾದಾಗ ಹೀಗೆ ಹೆಚ್ಚುವರಿ ಸಮಯ ಕೆಲಸ ಮಾಡಿ ತುಸು ಹೆಚ್ಚು ದುಡ್ಡು ಸಂಪಾದನೆ ಮಾಡುವುದು ಅನಿವಾರ್ಯ.
ವಾರಾಂತ್ಯದಲ್ಲಿ ಕೆಲಸ ಮಾಡಿ ದುಡ್ಡು ಗಳಿಸಲು ಕೆಲ ಪ್ರಮುಖ ಮಾರ್ಗಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ವಾರಾಂತ್ಯದಲ್ಲಿ ಕೆಲಸ ಮಾಡಲು 8 ಪ್ರಮುಖ ವಿಧಾನಗಳು ಇಲ್ಲಿವೆ ನೋಡಿ..
1. ವಾರಾಂತ್ಯ ನಿಮ್ಮ ಕಾರ್ ಬಾಡಿಗೆ ಓಡಿಸಿ
ವಾರಾಂತ್ಯದಲ್ಲಿ ನಿಮ್ಮ ಕಾರಿಗೆ ನೀವೇ ಡ್ರೈವರ್ ಆಗುವ ಮೂಲಕ ಕೆಲಸ ಮಾಡಬಹುದು. ಇದಕ್ಕೆಂದೇ ಇರುವ ಕೆಲವು ಆಪ್‌ಗಳಲ್ಲಿ ನೀವು ಸೈನ್ ಅಪ್ ಮಾಡಿಕೊಂಡಲ್ಲಿ ವಾರಾಂತ್ಯದಲ್ಲಿ ಪ್ರಯಾಣ ಹೊರಡುವವರು ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮದೇ ಸಮಯದಲ್ಲಿ ಅವರಿಗೆ ನಿಮ್ಮ ಕಾರಿನ ಬಾಡಿಗೆ ಸೇವೆ ನೀಡಿ ಹಣ ಗಳಿಸಬಹುದು.
2. ಕರಕುಶಲ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡಿ
ಕರಕುಶಲ ವಸ್ತುಗಳನ್ನು ತಯಾರಿಸುವ ನೈಪುಣ್ಯತೆ ನಿಮ್ಮಲ್ಲಿದ್ದಲ್ಲಿ ಅದು ನಿಮ್ಮ ಅದೃಷ್ಟವೆಂದೇ ತಿಳಿಯಿರಿ. ವಾರಾಂತ್ಯದಲ್ಲಿ ಸಿಗುವ ಬಿಡುವಿನ ವೇಳೆಯಲ್ಲಿ ಸುಂದರವಾದ ಕರಕುಶಲ ವಸ್ತುಗಳನ್ನು ತಯಾರಿಸಿ ಅವುಗಳ ಮಾಹಿತಿಯನ್ನು ನಿಮ್ಮ ಬಂಧು ಮಿತ್ರರಲ್ಲಿ ಹಂಚಿಕೊಳ್ಳಿ. ಒಬ್ಬರಿಂದೊಬ್ಬರಿಗೆ ಮಾಹಿತಿ ರವಾನೆಯಾಗುತ್ತ ನಿಮ್ಮಲ್ಲಿಗೆ ಗ್ರಾಹಕರು ಆಗಮಿಸಲಾರಂಭಿಸುತ್ತಾರೆ.
ಇನ್ನು ಒಂದು ಇನಸ್ಟಾಗ್ರಾಂ ಅಕೌಂಟ್ ಮಾಡಿ ಅದರಲ್ಲಿ ನೀವು ತಯಾರಿಸಿದ ವಸ್ತುಗಳ ಚಿತ್ರಗಳನ್ನು ಪೋಸ್ಟ್ ಮಾಡಿದಲ್ಲಿ ಬೇಗನೆ ನಿಮ್ಮ ವ್ಯವಹಾರ ವೃದ್ಧಿಯಾಗುತ್ತದೆ.
ನಿಮಗೆ ಪ್ರತಿದಿನವೂ ಕೆಲಸ ಮಾಡಲು ಸಾಧ್ಯವಿಲ್ಲವಾದಲ್ಲಿ ಹಾಗಂತ ನೇರವಾಗಿ ತಿಳಿಸಿ, ವಾರಾಂತ್ಯಗಳಲ್ಲಿ ಮಾತ್ರ ವಸ್ತುಗಳನ್ನು ತಯಾರಿಸಿ ಕೊಡುವುದಾಗಿ ಹೇಳಿ. ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..
3. ಬಾರ್ ಅಥವಾ ಹೊಟೇಲುಗಳಲ್ಲಿ ಕೆಲಸ
ವಾರದ ಕೊನೆಯಲ್ಲಿ ಸಿಗುವ ಬಿಡುವಿನ ವೇಳೆಯಲ್ಲಿ ಪಟ್ಟಣದ ಬಾರ್ ಅಥವಾ ರೆಸ್ಟುರಾಂಟ್‌ಗಳಲ್ಲಿ ಕೆಲಸ ಮಾಡಬಹುದು. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಬಾರ್ ಹಾಗೂ ಹೊಟೇಲುಗಳಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿರುವುದರಿಂದ ಅವರಿಗೆ ಹೆಚ್ಚುವರಿ ಕೆಲಸಗಾರರ ಅವಶ್ಯಕತೆಯೂ ಇರುತ್ತದೆ. ಇಂಥ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಹೆಚ್ಚುವರಿ ದುಡಿಮೆ ಸಾಧ್ಯ.
ಇನ್ನು ಬಾರ್‌ಗಳಲ್ಲಿ ಬಾರ ಟೆಂಡರ್ ಕೆಲಸ ಮಾಡುವವರಿಗೆ ಯಾವಾಗಲೂ ಬೇಡಿಕೆ ಇದ್ದೇ ಇದೆ. ನಿಮಗೆ ಡ್ರಿಂಕ್ಸ್‌ಗಳ ಬಗ್ಗೆ ಪರಿಚಯವಿದ್ದಲ್ಲಿ ಹಾಗೂ ಕೆಲಸದಲ್ಲಿ ನೈಪುಣ್ಯತೆ ಇದ್ದಲ್ಲಿ ವಾರಾಂತ್ಯ ಬಾರ ಟೆಂಡರ್ ಆಗಿ ಕೆಲಸ ಮಾಡಬಹುದು. ಒಂದೊಮ್ಮೆ ಈ ಕೆಲಸವನ್ನು ಕಲಿಯಲು ಬಯಸುವಿರಾದರೆ ಅದಕ್ಕಾಗಿಯೇ ಯೂಟ್ಯೂಬ್‌ನಲ್ಲಿ ಸಾಕಷ್ಟು ವಿಡಿಯೋಗಳಿದ್ದು ಅವನ್ನು ನೋಡಿ ಅಧ್ಯಯನ ಮಾಡಿ.
4. ಡಿಜಿಟಲ್ ಉತ್ಪನ್ನಗಳನ್ನು ತಯಾರಿಸಿ
ಅನ್ಲೈನ್ ಮೂಲಕ ಮಾರಾಟ ಮಾಡಬಹುದಾದ ಕೋರ್ಸ್‌ಗಳು ಹಾಗೂ ಇ-ಬುಕ್ ಗಳನ್ನು ಪ್ರಕಟಿಸುವುದು ಮತ್ತೊಂದು ಬಗೆಯ ವ್ಯಾಪಾರವಾಗಿದೆ. ಜನರಿಗೆ ಅಗತ್ಯವಾಗಿರುವ ಯಾವುದಾದರೂ ನಿರ್ದಿಷ್ಟ ವಿಷಯದ ಬಗ್ಗೆ ನಿಮಗೆ ಪರಿಣತಿ ಇದ್ದಲ್ಲಿ ನೀವು ಈ ಡಿಜಿಟಲ್ ಉತ್ಪನ್ನ ತಯಾರಿಕೆಗೆ ಕೈ ಹಾಕಬಹುದು. ಎಲ್ಲೂ ಹೋಗದೆ ಯಾವುದೇ ವಸ್ತುವನ್ನು ಸಾಗಾಟ ಮಾಡದೆ ವ್ಯವಹಾರ ಆರಂಭಿಸುವುದು ಈ ಡಿಜಿಟಲ್ ಜ್ಞಾನ ಪ್ರಕಟಣೆಯಾಗಿದೆ. ವಾರಾಂತ್ಯದಲ್ಲಿ ಮನೆಯಲ್ಲೇ ಕುಳಿತು ಇದನ್ನು ನೀವು ಮಾಡಬಹುದು. ಆನ್ಲೈನ್ ಮೂಲಕ ಕೆಲಸ ಮಾಡಿ ಪ್ರತಿ ದಿನ 3,000 ಸಂಪಾದಿಸುವುದು ಹೇಗೆ?
5. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಕೆಲಸ ಮಾಡಿ
ಮದುವೆ ಮುಂಜಿ, ಬರ್ತಡೇ ಪಾರ್ಟಿ ಸೇರಿದಂತೆ ಪಾರ್ಟಿಗಳನ್ನು ಆಯೋಜನೆ ಮಾಡುವ ಇವೆಂಟ್ ಮ್ಯಾನೇಜಮೆಂಟ್ ಕಂಪನಿಗಳೊಂದಿಗೆ ನೀವು ವಾರಾಂತ್ಯ ಕೆಲಸ ಮಾಡಬಹುದು. ನಿಮಗೆ ಹಾಡುಗಾರಿಕೆ ಅಥವಾ ಇನ್ನಾವುದೇ ಸೂಕ್ತ ಕಲೆಯಲ್ಲಿ ಪರಿಣತಿ ಇದ್ದಲ್ಲಿ ಶುಕ್ರವಾರ ಅಥವಾ ಶನಿವಾರಗಳ ಸಂಜೆ ಇವೆಂಟ್ ಮ್ಯಾನೇಜಮೆಂಟ್ ಕಂಪನಿಗಲ್ಲಿ ಕೆಲಸ ಮಾಡಬಹುದು.
6. ಭಾಷಾಂತರ ಕೆಲಸ
ನಿಮಗೆ ಒಂದಕ್ಕಿಂತ ಹೆಚ್ಚು ಭಾಷೆಗಳ ಮೇಲೆ ಪ್ರಭುತ್ವವಿದ್ದಲ್ಲಿ ನೀವು ಭಾಷಾಂತರಕಾರರಾಗಿ ಕೆಲಸ ಮಾಡಬಹುದು. ಕನ್ನಡ, ಇಂಗ್ಲಿಷ್, ಹಿಂದಿ ಹೀಗೆ ಹಲವಾರು ಭಾಷೆಗಳು ನಿಮಗೆ ಬರುತ್ತಿದ್ದರೆ ವಾರಾಂತ್ಯದಲ್ಲಿ ಭಾಷೆ ಅನ್ಯ ಭಾಷಿಕರಿಗೆ ಭಾಷೆ ಕಲಿಸುವ ಕೆಲಸ ಮಾಡಬಹುದು ಅಥವಾ ಅವಶ್ಯಕತೆ ಇರುವವರಿಗೆ ಅವರ ಮಾಹಿತಿಯನ್ನು ಭಾಷಾಂತರ ಮಾಡಿ ಕೊಡಬಹುದು. ಅಷ್ಟೇ ಏಕೆ ಈಗ ಹಲವಾರು ಭಾಷಾಂತರ ಕೆಲಸಗಳು ಆನ್ಲೈನ್‌ನಲ್ಲೆ ಲಭ್ಯವಿದ್ದು ಅಂಥ ಕೆಲಸಗಳನ್ನು ಹುಡುಕಿಕೊಡಿ.
ಎಷ್ಟೋ ಜನರಿಗೆ ಇನ್ನೊಂದು ಭಾಷೆಯನ್ನು ಕಲಿಯುವ ಅಗತ್ಯವಿರುತ್ತದೆ. ಆದರೆ ಅವರು ಇದನ್ನು ವಾರಾಂತ್ಯದಲ್ಲಿಯೇ ಮಾಡಲು ಬಯಸುವುದರಿಂದ ವಾರಾಂತ್ಯ ಕೆಲಸ ಮಾಡಲು ಬಯಸುವವರಿಗೆ ಇದು ಅನುಕೂಲವೇ ಆಗಿದೆ.
ಡೇಟಾ ಎಂಟ್ರಿ ಮಾಡಿ
ನಿಮ್ಮ ಬಿಡುವಿನ ವೇಳೆಯಲ್ಲಿ ಮನೆಯಿಂದ ಡೇಟಾ ಎಂಟ್ರಿ ಅಥವಾ ನಕಲು ಮಾಡಲು ನಿಮಗೆ ಅವಕಾಶ ನೀಡುವ ಉದ್ಯೋಗಾವಕಾಶಗಳಿವೆ. ನೀವು ಸೈನ್ ಅಪ್ ಮಾಡಿಕೊಳ್ಳುವ ಕಂಪನಿಯ ಬಗ್ಗೆ ತಿಳಿದುಕೊಳ್ಳಿ. ಬೆಟರ್ ಬಿಸಿನೆಸ್ ಬ್ಯೂರೋದೊಂದಿಗೆ ಪರಿಶೀಲಿಸಿ ಅಥವಾ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಿ.
ಟ್ಯೂಶನ್ ಕ್ಲಾಸ್ ತೆಗೆದುಕೊಳ್ಳಿ
ನಿಮಗೆ ವಿಶೇಷ ಕ್ಷೇತ್ರದಲ್ಲಿ ಕೌಶಲ್ಯ, ಪ್ರತಿಭೆ ಅಥವಾ ಶಿಕ್ಷಣವನ್ನು ಹೊಂದಿದ್ದರೆ, ಸ್ಥಳೀಯ ಜನರಿಗೆ ತರಗತಿಗಳನ್ನು ತೆಗೆದುಕೊಳ್ಳಬಹುದು. ಪ್ರವೇಶ ಶುಲ್ಕವಾಗಿ ನಿರ್ದಿಷ್ಟ ಮೊತ್ತ ಚಾರ್ಜ್ ಮಾಡಿ. ಇಂಗ್ಲಿಶ್ ಗ್ರಾಮರ್- ಸ್ಪೋಕನ್, ಗಣಿತ-ವಿಜ್ಞಾನ, ಕರಕುಶಲ, ಡ್ಯಾನ್ಸ್, ಯೋಗ, ಕಂಪ್ಯೂಟರ್ ಕೌಶಲಗಳು ಅಥವಾ ವಿದೇಶಿ ಭಾಷೆ ಹೀಗೆ ಯಾವುದೇ ವಿದ್ಯೆಗಳನ್ನು ಕಲಿಸಬಹುದು. ಅತಿ ಹೆಚ್ಚು ವೇತನ ಪಾವತಿಸುವ ಟಾಪ್ 10 ಉದ್ಯೋಗ
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications