For Quick Alerts
ALLOW NOTIFICATIONS  
For Daily Alerts

ಅತಿ ಹೆಚ್ಚು ವೇತನ ಪಾವತಿಸುವ ಟಾಪ್ 10 ಉದ್ಯೋಗಗಳು

|

ಪ್ರತಿಯೊಬ್ಬರಿಗೂ ಹೆಚ್ಚು ಆಕರ್ಷಕ ಸಂಬಳ ಗಳಿಸುವ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಮಾನ, ಗೌರವ ಕೊಡುವಂತಹ ಉದ್ಯೋಗಗಳಿಗೆ ಸೇರಬೇಕೆನ್ನುವುದು ಕನಸಾಗಿರುತ್ತದೆ.

ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

ವಿವಿಧ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಅರ್ಹ ಜನರಿಗೆ ಅತ್ಯಂತ ಉನ್ನತ ಸಂಬಳ ಪಾವತಿ ಮಾಡುತ್ತವೆ. ಲಾಭದಾಯಕ ಕೆಲಸ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಇಚ್ಛೆಯಾಗಿರುತ್ತದೆ. ಅರ್ಹತೆ, ಜ್ಞಾನ, ಸಂಸ್ಥೆ ಮತ್ತು ಅಭ್ಯರ್ಥಿಯ ನಡವಳಿಕೆ ಇತ್ಯಾದಿಗಳೆಲ್ಲವೂ ಹೆಚ್ಚು ಸಂಬಳ ಪಡೆಯುವ ಮಾನದಂಡಗಳಾಗಿವೆ.

ಆದರಿಂದ ಭಾರತದಲ್ಲಿ ಅತಿಹೆಚ್ಚು ಸಂಬಳ ಕೊಡುವ ಆಕರ್ಷಕ ಉದ್ಯೋಗಗಳು ಯಾವವು ಎಂಬುದನ್ನು ನೋಡೋಣ...

ಮ್ಯಾನೇಜ್‍ಮೆಂಟ್ ಪ್ರೊಫೆಷನಲ್ಸ್
 

ಮ್ಯಾನೇಜ್‍ಮೆಂಟ್ ಪ್ರೊಫೆಷನಲ್ಸ್

ವೇಗವಾಗಿ ಬೆಳೆಯುತ್ತಿರುವ ಜಾಗತಿಕತೆ ಮತ್ತು ತಂತ್ರಜ್ಞಾನದ ಯುಗದಲ್ಲಿ ನಿರ್ವಹಣಾ ಕ್ಷೇತ್ರ ತನ್ನ ವ್ಯಾಪಕ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ.

ಮ್ಯಾನೇಜ್‍ಮೆಂಟ್ ಕ್ಷೇತ್ರದ ನಿರ್ಧಾರ ತೆಗೆದುಕೊಳ್ಳುವ ಜವಾಬ್ಧಾರಿಗಳನ್ನು ನಿರ್ವಹಣೆ ಮಾಡುವುದರಿಂದ ಅದ್ಬುತ ಸಂಭಾವನೆ ಪಡೆಯಬಹುದು.

ಆದರೆ ಕಾರ್ಪೋರೇಟ್ ವಲಯದಲ್ಲಿ ಪ್ರವೇಶ ಪಡೆಯಲು ಕಠಿಣ ಶ್ರಮ, ಸಮರ್ಪಣೆ ಬೇಕಾಗುತ್ತದೆ. ಒಮ್ಮೆ ನೀವು ಹೆಚ್ಚಿನ ನಿರ್ವಹಣಾ ಮಟ್ಟದ ಕೆಲಸಕ್ಕೆ ಸೇರಿಕೊಂಡರೆ ಸಂಬಳವು ನಿಮ್ಮಿಷ್ಟದಂತೆ ಪಡೆಯಬಹುದು. ಹೆಸರಾಂತ ಸಂಸ್ಥೆಯಿಂದ ಮ್ಯಾನೇಜ್ಮೆಂಟ್ ಪದವಿ ಪಡೆದಲ್ಲಿ ನಿಮ್ಮನ್ನು ತಡೆಯುವವರು ಯಾರು ಇಲ್ಲ. ಪ್ರಸ್ತುತ ಜಾಯಮಾನದಲ್ಲಿ ಯುವ ಸಿಇಒ ಮತ್ತು ಆಡಳಿತ ಮಂಡಳಿ ನಿರ್ವಹಣೆಯಲ್ಲಿ ವ್ಯಾಪಕ ಅವಕಾಶಗಳಿದ್ದು, ಬಾಗಿಲುಗಳು ಸದಾ ತೆರೆದಿರುತ್ತವೆ.

ವೈದ್ಯಕೀಯ ವೃತ್ತಿಪರರು

ವೈದ್ಯಕೀಯ ವೃತ್ತಿಪರರು

ನಿರಂತರ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ಯಾವಾಗಲೂ ಬೇಡಿಕೆಯಿದ್ದು, ಈ ಸೇವೆ ಗೌರವಾನ್ವಿತ ಬೃಹತ್ ವೇತನವನ್ನು ಒದಗಿಸುತ್ತದೆ.

ವೈದ್ಯರು ಖಾಸಗಿಯಾಗಿ ವೃತ್ತಿ ಮಾಡಬಹುದು. ಇಲ್ಲವೇ ಹೆಸರುವಾಸಿಯಾದ ಹಾಗೂ ವಿಶೇಷ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು. ಸಮಾಜದಲ್ಲಿ ವೈದ್ಯರಿಗೆ ಉನ್ನತ ಸ್ಥಾನಮಾನ, ಗೌರವಗಳ ಜತೆಗೆ ಈ ವೃತ್ತಿಯಲ್ಲಿ ಆಕರ್ಷಕ ಸಂಬಳ ಲಭ್ಯವಿರುತ್ತದೆ. ದಂತ ವೈದ್ಯರು, ಆಹಾರ ತಜ್ಞರಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಬೇಡಿಕೆಯಿದೆ. ಈ ಉದ್ಯೋಗದಲ್ಲಿ ಕನಿಷ್ಠ ವೇತನ ವರ್ಷಕ್ಕೆ ರೂ. 4.5 ದಿಂದ 6 ಲಕ್ಷ ಪಡೆಯಬಹುದು. ವಿಶೇಷ ಶಸ್ತ್ರಚಿಕಿತ್ಸಕರು, ವೈದ್ಯಕೀಯ ವೃತ್ತಿಪರರು, ಸಾಮಾನ್ಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಕರು, ಮನೋವೈದ್ಯರು ಮತ್ತು gynecologists ಹೆಚ್ಚಿನ ಆದಾಯ ಗಳಿಸಬಹುದು.

ಐಟಿ ಮತ್ತು ಸಾಪ್ಟವೇರ್ ವೃತ್ತಿಪರರು

ಐಟಿ ಮತ್ತು ಸಾಪ್ಟವೇರ್ ವೃತ್ತಿಪರರು

ಐಟಿ-ಬಿಟಿ ಎಲ್ಲ ಯುವಕರ ನೆಚ್ಚಿನ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಬಹುಬೇಡಿಕೆಯ ಉದ್ಯಮವಾಗಿದೆ. ಕಾಲೇಜು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ವಾರ್ಷಿಕವಾಗಿ ರೂ. 1.5 ರಿಂದ 2.5 ಲಕ್ಷದವರೆಗೆ ಸಂಬಳ ನೀಡಲಾಗುತ್ತದೆ. ವೇತನ ಕ್ರಮೇಣ ಹೆಚ್ಚಾಗುತ್ತ ಸಾಪ್ಟವೇರ್ ಇಂಜಿನೀಯರುಗಳಿಗೆ ವಾರ್ಷಿಕವಾಗಿ ರೂ. 4-5 ರಿಂದ 10 ಲಕ್ಷ, ಪ್ರೊಜೆಕ್ಟ್ ಸಂಯೋಜಕರಿಗೆ ರೂ. 6 ರಿಂದ 13 ಲಕ್ಷ, ಪ್ರೋಗ್ರಾಮ್ ಮ್ಯಾನೆಜರ್ ಗೆ 8 ರಿಂದ 19 ಲಕ್ಷ ವಾರ್ಷಿಕ ವೇತನ ಪಾವತಿಸಲಾಗುತ್ತದೆ.

ನಿರಂತರವಾಗಿ ಹೊಸ ಕೌಶಲ್ಯ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ತನ್ನನ್ನು ತೆರೆದುಕೊಳ್ಳುತ್ತ ಹೋಗುತ್ತಾರೊ ಅಂತವರಿಗೆ ಸದಾ ಉತ್ತಮ ಅವಕಾಶಗಳು ಇರುತ್ತವೆ.

ಚಾರ್ಟರ್ಡ್ ಅಕೌಂಟೆಂಟ್ಸ್
 

ಚಾರ್ಟರ್ಡ್ ಅಕೌಂಟೆಂಟ್ಸ್

ವೈಯಕ್ತಿಕ ಸಾಮರ್ಥ್ಯ ಮತ್ತು ಆಕಾಂಕ್ಷೆಗಳನ್ನು ಆಧರಿಸಿ ಹಲವಾರು ಅವಕಾಶಗಳನ್ನು ಆಯ್ಕೆ ಮಾಡಬಹುದು. ಅದರಲ್ಲಿ ಚಾರ್ಟಡ್ ಅಕೌಂಟೆಂಟ್ ಕೂಡ ಒಂದು. ಚಾರ್ಟರ್ಡ್ ಅಕೌಂಟೆಂಟ್ ಹಣಕಾಸು ಲೆಕ್ಕಪತ್ರ , ತೆರಿಗೆ ನಿರ್ವಹಣೆ, ಲೆಕ್ಕ ಪರಿಶೋಧನೆ, ಕಾಸ್ಟ್ ಅಕೌಂಟಿಂಗ್, ಬ್ಯಾಂಕಿಂಗ್ ಮತ್ತು ಸಲಹಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು.

ಇವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ದೃಢೀಕೃತ ಸದಸ್ಯರಾಗಿರಬೇಕು. ಭಾರತದಲ್ಲಿ ಇ & ವೈ, ಡಿಯೋಲಾಯ್ಟ್, PwC ಮತ್ತು ಐಸಿಐಸಿಐ ಬ್ಯಾಂಕ್ ಸಿಎ ಉದ್ಯೋಗಗಳಿಗೆ ಉತ್ತಮ ವೇತನ ನೀಡುತ್ತಿದೆ. ಹೊಸಬರು ವಾರ್ಷಿಕವಾಗಿ ರೂಪಾಯಿ 5-7 ಲಕ್ಷ ರೂ. ಗಳಿಸಬಹುದು. ಅನುಭವ ಹೆಚ್ಚಾದಂತೆ ವೇತನ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಇದರ ಜತೆಗೆ ಹಣಕಾಸಿನಲ್ಲಿ MBA ಪದವಿ ಹೊಂದಿರುವವರಿಗೆ ವರ್ಷಕ್ಕೆ 18-24 ಲಕ್ಷ ಹೆಚ್ಚಿನ ವೇತನ ಇರುತ್ತದೆ.

ಹೂಡಿಕೆ ಬ್ಯಾಂಕರ್

ಹೂಡಿಕೆ ಬ್ಯಾಂಕರ್

ಹೂಡಿಕೆ ಬ್ಯಾಂಕರ್ ಕೆರಿಯರ್ ನಲ್ಲಿ ಸಾಮಾನ್ಯವಾಗಿ ವಿಶ್ಲೇಷಕ, ಅಸೋಸಿಯೆಟ್, ಉಪಾಧ್ಯಕ್ಷ, ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂಬ 5 ಹಂತಗಳಿವೆ. ಈ ಎಲ್ಲಾ ಹಂತಗಳಿಗೆ ಬೇರೆ ಬೇರೆ ವೇತನಗಳಿದ್ದು, ವಿಶ್ಲೇಷಕರಿಗೆ ವಾರ್ಷಿಕವಾಗಿ 5-10 ಲಕ್ಷ, ಅಸೋಸಿಯೆಟ್ ವಾರ್ಷಿಕವಾಗಿ 7-13 ಲಕ್ಷ, ಉಪಾಧ್ಯಕ್ಷರಿಗೆ ವಾರ್ಷಿಕವಾಗಿ 10-40 ಲಕ್ಷ ವೇತನ ಪಾವತಿಸಲಾಗುತ್ತದೆ.

ತೈಲ ಮತ್ತು ನೈಸರ್ಗಿಕ ಅನಿಲ ವಲಯದ ವೃತ್ತಿಪರರು

ತೈಲ ಮತ್ತು ನೈಸರ್ಗಿಕ ಅನಿಲ ವಲಯದ ವೃತ್ತಿಪರರು

ಈ ಕ್ಷೇತ್ರದಲ್ಲಿ ಪ್ರವೇಶದ ಹಂತದಲ್ಲಿಯೇ ಸುಮಾರು 3.5 ರಿಂದ 6 ಲಕ್ಷದವರೆಗೆ ವಾರ್ಷಿಕ ಸಂಬಳ ಪಡೆಯಬಹುದು. ಕೆಲಸದ ಸುಭದ್ರತೆ ನೋಡುವವರಿಗೆ ಭಾರತದಲ್ಲಿ ವ್ಯಾಪಕ ಅವಕಾಶಗಳಿದ್ದು, ಒಎನ್ಜಿಸಿ, ಐಒಸಿಎಲ್ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆಗಳಲ್ಲಿ ಬಹಳಷ್ಟು ಉದ್ಯೋಗಗಳಿರುತ್ತವೆ. ಐದಾರು ವರ್ಷಗಳ ಅನುಭವ ಇರುವವರು ವಾರ್ಷಿಕವಾಗಿ 15 ರಿಂದ 20 ಲಕ್ಷ ವಾರ್ಷಿಕ ವೇತನ ಪಡೆಯಬಹುದಾಗಿದೆ.

ವಿಮಾನಯಾನ ವೃತ್ತಿಪರರು

ವಿಮಾನಯಾನ ವೃತ್ತಿಪರರು

ವಾಣಿಜ್ಯ ವಿಮಾನಯಾನ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ತುಂಬಾ ಉತ್ತೇಜನ ಇದೆ. ಅರ್ಹ ಚಾಲಕರು, ಮೂಲ ಸಿಬ್ಬಂದಿ, ಮೇಲ್ವಿಚಾರಕರು, ಏರ್ ಹಾಸ್ಟೆಸಸ್ ಗಳಿಗೆ ನಿರಂತರ ಬೇಡಿಕೆ ಇದೆ.

ಪೈಲಟ್ ಗಳಿಗೆ ವಾರ್ಷಿಕವಾಗಿ 7 ರಿಂದ 9.5 ಲಕ್ಷದವರೆಗೆ ಸಂಬಳ ಇದೆ. ಏರ್ ಹಾಸ್ಟೆಸಸ್ ಮತ್ತು ಮೇಲ್ವಿಚಾರಕರಿಗೆ 4 ರಿಂದ 6 ಲಕ್ಷ ಹಾಗೂ ಏರ್ ಟ್ರಾಫಿಕ್ ಕಂಟ್ರೋಲರ್ 5 ರಿಂದ 6 ಲಕ್ಷ ವಾರ್ಷಿಕ ವೇತನ ಪಡೆಯಬಹುದು.

ಮನರಂಜನಾ ಉದ್ಯಮ (ನಟನೆ/ಮಾಡೆಲಿಂಗ್)

ಮನರಂಜನಾ ಉದ್ಯಮ (ನಟನೆ/ಮಾಡೆಲಿಂಗ್)

ಮೀಡಿಯಾ, ಈವೆಂಟ್ಸ್ ಮತ್ತು ಮನರಂಜನಾ ಉದ್ಯಮಗಳಲ್ಲಿ ಹೆಚ್ಚು ಹೂಡಿಕೆ ಹಾಗೂ ಹೆಚ್ಚು ಗಳಿಕೆ ಇರುತ್ತದೆ. ನಟರು ಮತ್ತು ಮಾಡೆಲ್ ಗಳಿಗೆ ಉತ್ತಮ ಸಂಭಾವನೆ ಇದ್ದು, ಇವರು ದಿನದ ಅಥವಾ ಪ್ರೊಜೆಕ್ಟ್ ಗಳ ಆಧಾರದ ಮೇಲೆ ಸಂಭಾವನೆ ಪಡೆಯುತ್ತಾರೆ.

ಮಾಡುವ ಪಾತ್ರಗಳ ಆಧಾರದ ಮೇಲೆ ಸಾವಿರ, ಲಕ್ಷ, ಕೋಟಿ ಹಣವನ್ನು ಗಳಿಸಬಹುದು. ಹೊಸಬರಿಗೂ ಉತ್ತಮ ಸಂಭಾವನೆ ಸಿಗುತ್ತದೆ.

ಚಲನಚಿತ್ರದ ಬಂಡವಾಳದ ಆಧಾರದ ಮೇಲೆ 5 ರಿಂದ 50 ಲಕ್ಷ ಹಾಗೂ ಕೋಟಿ ಕೋಟಿ ಸಂಭಾವನೆ ಪಡೆಯಬಹುದು. ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ಯಾಷನ್ ಷೋ, ನಿಯತಕಾಲಿಕೆ ಜಾಹಿರಾತು, ಟಿವಿ ಜಾಹೀರಾತು ಮೂಲಕ ಹಣ ಗಳಿಸಬಹುದು.

ಕಾನೂನು ವೃತ್ತಿಪರರು

ಕಾನೂನು ವೃತ್ತಿಪರರು

ಕಾನೂನು ವೃತ್ತಿಪರರು ಅವರ ತಜ್ಞತೆ, ಉತ್ತಮ ಮಾತುಗಾರಿಕೆ ಆಧಾರದ ಮೇಲೆ ವೇತನ ಪಡೆಯುತ್ತಾರೆ. ಖಾಸಗಿ ವಲಯದ ಉದ್ಯಮಗಳಲ್ಲಿ ಸೇವೆ ಸಲ್ಲಿಸುವವರು ವಾರ್ಷಿಕವಾಗಿ 6-10 ಲಕ್ಷದವರೆಗೆ ವೇತನ ಪಡೆಯುತ್ತಾರೆ. ನಾಲ್ಕೈದು ವರ್ಷ ಅನುಭವವಿರುವವರು 10-15 ಲಕ್ಷ ಸಂಬಾವನೆ ಇರುತ್ತದೆ.

ಶಿಕ್ಷಣ

ಶಿಕ್ಷಣ

ಶಿಕ್ಷಣ ಒಂದು ಮೂಲಭೂತ ಆದ್ಯತೆಯಾಗಿದ್ದು, ಈ ಕ್ಷೇತ್ರದಲ್ಲಿ ಅಭೂತಪೂರ್ವವಾದ ಅವಕಾಶ ಮತ್ತು ಆಕರ್ಷಕ ವೇತನ ಇರುತ್ತದೆ.

ಶಾಲಾ ಕಾಲೇಜು, ತಾಂತ್ರಿಕ ಸಂಸ್ಥೆಗಳಲ್ಲಿ ಪ್ರತಿಭಾವಂತ ವೃತ್ತಿಪರ ಶಿಕ್ಷಕರ ಅಗತ್ಯ ಇರುತ್ತದೆ. ಬೋಧನೆ ಹೆಚ್ಚಿನ ಜನರ ನೆಚ್ಚಿನ ವಲಯವಾಗಿದ್ದು, ಆಕರ್ಷಕ ಸಂಬಳ ಕೊಡಲಾಗುತ್ತದೆ.

English summary

Top 10 Highest Paying Jobs in India

We often read news about people getting high package jobs in lacks and crores from different esteemed companies. Have you ever thought what makes them eligible for this and what are those jobs which have high pay scales. The qualification, knowledge, Institute and the attitude of the candidate are the things
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more