For Quick Alerts
ALLOW NOTIFICATIONS  
For Daily Alerts

ಇಪಿಎಫ್ ವಿತ್ ಡ್ರಾ ನಿಯಮ: ಯಾವಾಗೆಲ್ಲ ಪಿಎಫ್ ಹಣ ಪಡೆಯಬಹುದು?

ಮದುವೆ, ಶಿಕ್ಷಣ, ಹೊಸ ಮನೆ ಖರೀದಿ ಅಥವಾ ಮನೆ ನಿರ್ಮಾಣ, ಮನೆ ಕಟ್ಟಲು ನಿವೇಶನ ಖರೀದಿ, ಮನೆ ನವೀಕರಣ, ಮನೆ ಸಾಲ ಪಾವತಿ ಹಾಗೂ ನಿವೃತ್ತಿಗೆ 12 ತಿಂಗಳು ಮುಂಚೆ ಹೀಗೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಇಪಿಎಫ್ ಮೊತ್ತವನ್ನು ಪಡೆಯಬಹುದು.

|

ಕಾರ್ಮಿಕರ ಭವಿಷ್ಯ ನಿಧಿಯಲ್ಲಿ ತೊಡಗಸಿದ ಹಣವನ್ನು ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅವಧಿಗೆ ಮುನ್ನ ಹಿಂಪಡೆಯಲು ಅವಕಾಶವಿದೆ. ಇಪಿಎಫ್ ನಿರ್ವಹಣೆ ಮಾಡುವ ಕಾರ್ಮಿಕರ ಭವಿಷ್ಯ ನಿಧಿ ಪ್ರಾಧಿಕಾರ (Employees' Provident Fund Organisation-EPFO), ಇದಕ್ಕಾಗಿ ರೂಪಿಸಿರುವ ನಿಯಮಾವಳಿಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಮದುವೆ, ಶಿಕ್ಷಣ, ಹೊಸ ಮನೆ ಖರೀದಿ ಅಥವಾ ಮನೆ ನಿರ್ಮಾಣ, ಮನೆ ಕಟ್ಟಲು ನಿವೇಶನ ಖರೀದಿ, ಮನೆ ನವೀಕರಣ, ಮನೆ ಸಾಲ ಪಾವತಿ ಹಾಗೂ ನಿವೃತ್ತಿಗೆ 12 ತಿಂಗಳು ಮುಂಚೆ ಹೀಗೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಭಾಗಶಃ ಇಪಿಎಫ್ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ.
ಭಾಗಶಃ ಇಪಿಎಫ್ ಮೊತ್ತ ಹಿಂಪಡೆಯುವ ನಿಯಮಗಳು ಇಲ್ಲಿವೆ.

1. ಮದುವೆ

1. ಮದುವೆ

ತನ್ನ ಸ್ವಂತ ಮದುವೆಗಾಗಿ, ಮಕ್ಕಳ ಮದುವೆಗಾಗಿ ಅಥವಾ ಸಹೋದರ, ಸಹೋದರಿಯರ ಮದುವೆಗಾಗಿ ಇಪಿಎಫ್ ಸದಸ್ಯನೋರ್ವ ತನ್ನ ಇಪಿಎಫ್ ಖಾತೆಯಲ್ಲಿ ಜಮೆಯಾಗಿರುವ ಮೊತ್ತದ ಶೇ.50 ರಷ್ಟನ್ನು ಹಿಂಪಡೆಯಬಹುದು. ಆದರೆ ಕನಿಷ್ಠ 7 ವರ್ಷಗಳವರೆಗೆ ಇಪಿಎಫ್ ವಂತಿಗೆ ಸಲ್ಲಿಸಿದ್ದರೆ ಮಾತ್ರ ಈ ಅವಕಾಶ ಲಭ್ಯ.

2. ಶಿಕ್ಷಣ

2. ಶಿಕ್ಷಣ

ತನ್ನ ಮಕ್ಕಳ ಮೆಟ್ರಿಕ್ ನಂತರದ ಶೈಕ್ಷಣಿಕ ಖರ್ಚು ನಿಭಾಯಿಸಲು ಕೆಲ ಷರತ್ತುಗಳಿಗೊಳಪಟ್ಟು ಇಪಿಎಫ್ ಮೊತ್ತ ಹಿಂಪಡೆಯಬಹುದಾಗಿದೆ. ಇದಕ್ಕೂ ಕನಿಷ್ಠ 7 ವರ್ಷಗಳವರೆಗೆ ಇಪಿಎಫ್ ಸದಸ್ಯರಾಗಿರಬೇಕಾಗಿರುವುದು ಕಡ್ಡಾಯ.

3. ಮನೆ ಖರೀದಿ ಅಥವಾ ನಿರ್ಮಾಣಕ್ಕೆ

3. ಮನೆ ಖರೀದಿ ಅಥವಾ ನಿರ್ಮಾಣಕ್ಕೆ

ಹೊಸ ಮನೆ ಕಟ್ಟಲು ಅಥವಾ ಖರೀದಿಸಲು ಅಥವಾ ನಿವೇಶನ ಖರೀದಿಸಲು ಇಪಿಎಫ್ ಮೊತ್ತ ಹಿಂಪಡೆಯಬಹುದು. ಕನಿಷ್ಠ 5 ವರ್ಷಗಳವರೆಗೆ ಇಪಿಎಫ್ ವಂತಿಗೆ ಸಲ್ಲಿಸಿರುವವರು ಮಾತ್ರ ಈ ಸೌಲಭ್ಯ ಪಡೆಯಬಹುದು.

4. ಮನೆ ನವೀಕರಣ

4. ಮನೆ ನವೀಕರಣ

ತನ್ನ ಒಡೆತನದ ಮನೆಯ ನವೀಕರಣಕ್ಕೆ ಇಪಿಎಫ್ ಮೊತ್ತ ಹಿಂಪಡೆಯಬಹುದು. ಇದು ಎರಡು ಸಂದರ್ಭಗಳಲ್ಲಿ ಮಾತ್ರ ಸಾಧ್ಯವಿದ್ದು, ಅವು ಹೀಗಿವೆ:
ಎ) ಮನೆ ಕಟ್ಟಿದ 5 ವರ್ಷಗಳ ನಂತರ
ಬಿ) ಮೇಲಿನ ಸೌಲಭ್ಯ ಪಡೆದ 10 ವರ್ಷಗಳ ನಂತರ

5. ವೈದ್ಯಕೀಯ ವೆಚ್ಚಕ್ಕಾಗಿ

5. ವೈದ್ಯಕೀಯ ವೆಚ್ಚಕ್ಕಾಗಿ

ವೈದ್ಯಕೀಯ ವೆಚ್ಚಕ್ಕಾಗಿ ಭಾಗಶಃ ಪಿಎಫ್ ಹಣ ಹಿಂಪಡೆಯಬಹುದು. ತನ್ನ ಸ್ವಂತಕ್ಕಾಗಿ, ಸಂಗಾತಿ, ಮಕ್ಕಳು ಹಾಗೂ ಪೋಷಕರ ವೈದ್ಯಕೀಯ ಚಿಕಿತ್ಸೆಗಳಿಗೆ ಹಣ ಪಡೆಯಲು ಅವಕಾಶವಿದೆ. ಹೀಗೆ ಹಣ ಹಿಂಪಡೆಯಲು ಯಾವುದೇ ನಿರ್ದಿಷ್ಟ ಅವಧಿಯ ಲಾಕ್ ಇನ್ ಅವಧಿಯನ್ನು ಗೊತ್ತುಪಡಿಸಲಾಗಿಲ್ಲ.

6. ಮನೆ ಸಾಲ ಪಾವತಿ

6. ಮನೆ ಸಾಲ ಪಾವತಿ

ಕೆಲವು ಷರತ್ತಿಗೊಳಪಟ್ಟು ಮನೆ ಸಾಲ ಹಾಗೂ ಅದರ ಬಡ್ಡಿಯ ಬಾಕಿ ಪಾವತಿಗೆ ಭಾಗಶಃ ಇಪಿಎಫ್ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಆದರೆ ಕನಿಷ್ಠ 10 ವರ್ಷಗಳ ಸೇವಾವಧಿ ಪೂರೈಸಿದ್ದರೆ ಮಾತ್ರ ಈ ರೀತಿ ಹಣ ಹಿಂಪಡೆಯಬಹುದು.

7. ನಿವೃತ್ತಿ

7. ನಿವೃತ್ತಿ

58 ವರ್ಷಗಳಾದ ನಂತರ ತನ್ನ ಇಪಿಎಫ್ ಖಾತೆಯಲ್ಲಿರುವ ಮೊತ್ತವನ್ನು ಹಿಂಪಡೆಯಬಹುದು. ಶೇ.90 ರಷ್ಟು ಮೊತ್ತವನ್ನು ಈ ರೀತಿ ಹಿಂಪಡೆಯಬಹುದು.
ಇಪಿಎಫ್ ಹಿಂಪಡೆಯುವ ವಿಧಾನ:
ಇಪಿಎಫ್‌ನಿಂದ ಹಣ ಹಿಂಪಡೆಯುವುದು ಈಗ ತುಂಬಾ ಸರಳ ಹಾಗೂ ಶೀಘ್ರವಾಗಿದೆ. ಎರಡು ವಿಧಾನಗಳಲ್ಲಿ ಈ ರೀತಿ ಹಣ ಪಡೆಯಬಹುದು.

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಕೆ

ಹಣ ಹಿಂಪಡೆಯಲು ನೇರ ಅರ್ಜಿ ವಿಧಾನ
ಯುಎಎನ್ ಸಂಖ್ಯೆ ಹೊಂದಿದವರು ಹಾಗೂ ತಮ್ಮ ಇಪಿಎಫ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿದ ಇಪಿಎಫ್ ಸದಸ್ಯರು ಈ ರೀತಿ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ಮೂಲಕ ಅರ್ಜಿ
ಈಗ ಒಂದೇ ಪುಟದಲ್ಲಿ ಅರ್ಜಿ ಭರ್ತಿ ಮಾಡಿ ಆನ್ಲೈನ್ ಮೂಲಕ ಸಲ್ಲಿಸಬಹುದು. ಫಾರ್ಮ 19, ಫಾರ್ಮ 10ಸಿ, ಫಾರ್ಮ 31 ಹೀಗೆ ಹಲವಾರು ಫಾರ್ಮಗಳನ್ನು ತುಂಬುವುದು ಈಗ ಅಗತ್ಯವಿಲ್ಲ. ಉದ್ಯೋಗ ನೀಡಿದ ಕಂಪನಿಯ ಮಧ್ಯಸ್ಥಿಕೆ ಇಲ್ಲದೆಯೇ ಈ ಪ್ರಕ್ರಿಯೆ ತನ್ನಿಂತಾನೇ ನಿರ್ವಹಿಸಲ್ಪಡುತ್ತದೆ.

English summary

EPF withdrawal rules: When can you withdraw your PF money?

Employees’ Provident Fund Organisation (EPFO), the retirement fund body allows subscribers to withdraw money from Employees’ Provident Fund for specific purposes.
Story first published: Thursday, June 20, 2019, 9:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X