For Quick Alerts
ALLOW NOTIFICATIONS  
For Daily Alerts

ಹೊಸ ನಿಯಮ: ಆದಾಯ ತೆರಿಗೆ ಸ್ಲ್ಯಾಬ್ ಹಾಗೂ ದರಗಳ ಪ್ರಸ್ತುತ ನಿಯಮಗಳ ಪಟ್ಟಿ ಇಲ್ಲಿದೆ..

ಕೇಂದ್ರದಲ್ಲಿ ಪ್ರಥಮ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ 2014 ರ ಬಜೆಟ್ನಲ್ಲಿ ಆದಾಯ ತೆರಿಗೆ ಮಿತಿಯನ್ನು 50 ರೂ.ಗಳಿಗೆ ಹೆಚ್ಚಿಸಿತ್ತು.

|

ಕೇಂದ್ರದಲ್ಲಿ ಪ್ರಥಮ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ 2014 ರ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು 50 ರೂ.ಗಳಿಗೆ ಹೆಚ್ಚಿಸಿತ್ತು. ಅದಾದ ನಂತರ ತೆರಿಗೆ ನಿಯಮಗಳಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಆದರೆ ಈಗ ಮತ್ತೊಮ್ಮೆ ಮೋದಿ ನೇತೃತ್ವದ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬಂದಿದ್ದು, ಬರುವ ದಿನಗಳಲ್ಲಿ ಆದಾಯ ತೆರಿಗೆ ದರಗಳು ಅಥವಾ ಆದಾಯ ತೆರಿಗೆಯ ಸ್ಲ್ಯಾಬ್ ಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆಯಾ ಎಂಬುದು ಕುತೂಹಲದ ವಿಷಯವಾಗಿದೆ.

ಆದಾಗ್ಯೂ 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ 2019 ರಲ್ಲಿ ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರ ಸರಕಾರ ತೆರಿಗೆ ನಿಯಮಗಳಲ್ಲಿ ಕೆಲ ಬದಲಾವಣೆ ತಂದಿತ್ತು. ಹಾಗಾದರೆ ಪ್ರಸ್ತುತ ಜಾರಿಯಲ್ಲಿರುವ ಆದಾಯ ತೆರಿಗೆ ದರಗಳು ಹಾಗೂ ಸ್ಲ್ಯಾಬ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

ಆದಾಯ ತೆರಿಗೆ ಪ್ರಮುಖ ಬದಲಾವಣೆಗಳು

ಆದಾಯ ತೆರಿಗೆ ಪ್ರಮುಖ ಬದಲಾವಣೆಗಳು

2019ರ ಮಧ್ಯಂತರ ಬಜೆಟ್ ನ ಘೋಷಣೆಗಳು ಏಪ್ರಿಲ್ 1, 2019 ರಿಂದ ಜಾರಿಗೆ ಬಂದವು. ಈ ಘೋಷಣೆಯ ಪ್ರಕಾರ ತೆರಿಗೆಗೊಳಪಟ್ಟ 5 ಲಕ್ಷ ಆದಾಯ ಹೊಂದಿದವರಿಗೆ ರೂ. 12,500 ಡಿಸ್ಕೌಂಟ್ ನೀಡಲಾಯಿತು. ಆದಾಯ ತೆರಿಗೆ ಕಾಯ್ದೆ 87ಎ ಪ್ರಕಾರ ಈ ಡಿಸ್ಕೌಂಟ್ ನೀಡಲಾಗಿದೆ. ಆದಾಗ್ಯೂ 2019-20 ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ದರಗಳು ಹಾಗೂ ಸ್ಲ್ಯಾಬ್ ಗಳು ಮಾತ್ರ ಬದಲಾಗಿಲ್ಲ.
ಇನ್ನು ಬಜೆಟ್ ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಟ್ಟವನ್ನು ಮೊದಲಿದ್ದ ರೂ. 40000 ಗಳಿಂದ ರೂ. 50000ಕ್ಕೆ ಅಂದರೆ 10000 ರೂ. ಹೆಚ್ಚಿಸಲಾಯಿತು.

ದರಗಳು ಅನ್ವಯ

ದರಗಳು ಅನ್ವಯ

2018-19ನೇ ಸಾಲಿಗೆ (ಲೆಕ್ಕದ ವರ್ಷ 2019-20) ಅನ್ವಯವಾಗುವ ಆದಾಯ ತೆರಿಗೆ ದರಗಳು ಹಾಗೂ ವಿವಿಧ ಸ್ಲ್ಯಾಬ್ ಗಳನ್ನು ಇಲ್ಲಿ ತಿಳಿದುಕೊಳ್ಳೋಣ. ಬಜೆಟ್ ನ ಈ ಘೋಷಣೆಗಳು ಒಂದು ಬಾರಿ ಸಂಸತ್ತಿನಲ್ಲಿ ಅನುಮೋದನೆಗೊಂಡ ನಂತರ ಹಣಕಾಸು ವರ್ಷ 2019-20 ಕ್ಕೆ ಇವೇ ದರಗಳು ಅನ್ವಯವಾಗುತ್ತವೆ.

ವಯಸ್ಸು ಆಧರಿಸಿದ 3 ವಿಭಾಗ

ವಯಸ್ಸು ಆಧರಿಸಿದ 3 ವಿಭಾಗ

ಆದಾಯ ತೆರಿಗೆಯ ಮೂಲ ವಿನಾಯಿತಿಗಳು ವ್ಯಕ್ತಿಯ ವಯಸ್ಸು ಹಾಗೂ ಭಾರತದಲ್ಲಿ ವಾಸಿಸುವಿಕೆಯನ್ನು ಆಧರಿಸಿರುತ್ತವೆ. ವಯಸ್ಸನ್ನು ಆಧರಿಸಿ ಭಾರತೀಯ ಆದಾಯ ತೆರಿಗೆ ಪಾವತಿದಾರರನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
1. 60 ವರ್ಷಕ್ಕೂ ಕಡಿಮೆ ವಯಸ್ಸಿನ ಭಾರತೀಯ ನಿವಾಸಿ
2. 60 ವರ್ಷ ಮೇಲ್ಪಟ್ಟ ಹಾಗೂ 80 ವರ್ಷಕ್ಕೂ ಕಡಿಮೆ ವಯಸ್ಸಿನ ಹಿರಿಯ ಭಾರತೀಯ ನಿವಾಸಿಗಳು.
3. 80 ವರ್ಷಕ್ಕೂ ಮೇಲ್ಪಟ್ಟ ಅತಿ ಹಿರಿಯ ಭಾರತೀಯ ನಿವಾಸಿಗಳು.

ಹೊಸ ಆದಾಯ ತೆರಿಗೆ ಸ್ಲ್ಯಾಬ್ ಗಳ ಸಂಪೂರ್ಣ ಪಟ್ಟಿ ಹೀಗಿದೆ:

ಹೊಸ ಆದಾಯ ತೆರಿಗೆ ಸ್ಲ್ಯಾಬ್ ಗಳ ಸಂಪೂರ್ಣ ಪಟ್ಟಿ ಹೀಗಿದೆ:

60ಕ್ಕೂ ಕಡಿಮೆ ವಯಸ್ಸಿನ ಭಾರತೀಯ ನಿವಾಸಿಗಳಿಗೆ ಅನ್ವಯಿಸುವ ಆದಾಯ ತೆರಿಗೆ ಮಿತಿಯ ಸ್ಲ್ಯಾಬ್ ಗಳು ಇಲ್ಲಿ ನೀಡಲಾಗಿದೆ.

ಸಿನಿಯರ್ ಸಿಟಿಜನ್

ಸಿನಿಯರ್ ಸಿಟಿಜನ್

60 ರಿಂದ 80 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಆದಾಯ ತೆರಿಗೆ ಸ್ಲ್ಯಾಬ್ ಗಳು ಹೀಗಿವೆ. (ಹಿರಿಯ ನಾಗರಿಕ)

ಸೂಪರ್ ಸಿನಿಯರ್ ಸಿಟಿಜನ್

ಸೂಪರ್ ಸಿನಿಯರ್ ಸಿಟಿಜನ್

80 ವರ್ಷಕ್ಕಿಂತ ಮೇಲ್ಪಟ್ಟ ನಿವಾಸಿ ವ್ಯಕ್ತಿಗೆ ಆದಾಯ ತೆರಿಗೆ ಸ್ಲ್ಯಾಬ್ ಗಳು ಹೀಗಿವೆ. (ಸೂಪರ್ ಹಿರಿಯ ನಾಗರಿಕ)

ಎನ್ನಾರೈ ನಿಯಮ

ಎನ್ನಾರೈ ನಿಯಮ

ಎನ್ನಾರೈ (Non-resident individuals) ಅಥವಾ ಅನಿವಾಸಿ ಭಾರತೀಯರಿಗೆ ಮೂಲ ಆದಾಯ ತೆರಿಗೆ ವಿನಾಯಿತಿಯ ಮಿತಿಯು ವಯಸ್ಸಿನ ಯಾವುದೇ ನಿರ್ಬಂಧವಿಲ್ಲದೆ ಪ್ರತಿ ಹಣಕಾಸು ವರ್ಷಕ್ಕೆ 2.5 ಲಕ್ಷ ರೂ. ಗಳಾಗಿದೆ.
ನಿವ್ವಳ ಆದಾಯವು ರೂ. 50 ಲಕ್ಷ ಮೀರಿದಲ್ಲಿ ಹಾಗೂ ರೂ. 1 ಕೋಟಿಗೆ ಕಡಿಮೆ ಇದ್ದಲ್ಲಿ ಶೇ. 10 ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತದೆ. ಇದೇ ಆದಾಯಕ್ಕೆ ವಿಧಿಸಲಾಗುವ ಶೇ.4 ರಷ್ಟು ಸೆಸ್ಗೂ ಮೊದಲು ಪಾವತಿಸಬೇಕಿರುವ ಆದಾಯ ತೆರಿಗೆಗೆ ಈ ಸರ್ಚಾರ್ಜ್ ಅನ್ವಯವಾಗುತ್ತದೆ. ಒಂದು ವೇಳೆ ನಿವ್ವಳ ಆದಾಯ 1 ಕೋಟಿ ರೂ. ಮೀರಿದಲ್ಲಿ ಶೇ. 15 ರಷ್ಟು ಸರ್ಚಾರ್ಜ್ ಕಟ್ಟಬೇಕಾಗುತ್ತದೆ.

ಸೆಸ್ ಹೆಚ್ಚಳ

ಸೆಸ್ ಹೆಚ್ಚಳ

ಕಳೆದ ವರ್ಷದ ಬಜೆಟ್ ನಲ್ಲಿ ಆದಾಯ ತೆರಿಗೆ ಮೇಲಿನ ಸೆಸ್ ಅನ್ನು ಎಲ್ಲಾ ಹಂತದ ತೆರಿಗೆಗಳಿಗೂ ಅನ್ವಯಿಸುತ್ತಿದ್ದ ಶೇ. 3 ರಿಂದ 4 ಕ್ಕೆ ಹೆಚ್ಚಿಸಲಾಯಿತು. ಸೆಸ್ ಹೆಚ್ಚಳದಿಂದ ಗರಿಷ್ಠ ಆದಾಯ ತೆರಿಗೆ ಪಾವತಿ ಸ್ಲ್ಯಾಬ್ ಗೆ ಒಳಪಡುವವರ (ರೂ. 15 ಲಕ್ಷ ಆದಾಯ) ತೆರಿಗೆ ಪಾವತಿಯು 2,625 ರೂ. ಗಳಷ್ಟು ಹೆಚ್ಚಳ ಕಂಡಿತು. ಇನ್ನು ಮಧ್ಯಮ ಆದಾಯ ತೆರಿಗೆ ಸ್ಲ್ಯಾಬ್ ನವರು ರೂ. 1,125 ಹೆಚ್ಚುವರಿ ತೆರಿಗೆ ಹಾಗೂ ಕನಿಷ್ಠ ಆದಾಯ ತೆರಿಗೆ ಸ್ಲ್ಯಾಬ್ ನವರು 125 ರೂ.ಯಷ್ಟು ಕನಿಷ್ಠ ಹೆಚ್ಚುವರಿ ತೆರಿಗೆ ಪಾವತಿಸಬೇಕಿದೆ.

ಇತ್ತೀಚಿನ ಬದಲಾವಣೆಗಳ ಪ್ರಕಾರ ನಿಮ್ಮ ಆದಾಯ ತೆರಿಗೆ ಎಷ್ಟಾಗುತ್ತದೆ ಎಂಬುದರ ಪಟ್ಟಿ ಹೀಗಿದೆ:

ಇತ್ತೀಚಿನ ಬದಲಾವಣೆಗಳ ಪ್ರಕಾರ ನಿಮ್ಮ ಆದಾಯ ತೆರಿಗೆ ಎಷ್ಟಾಗುತ್ತದೆ ಎಂಬುದರ ಪಟ್ಟಿ ಹೀಗಿದೆ:

ಈ ಆದಾಯ ತೆರಿಗೆ ಬದಲಾವಣೆಗಳು 2019-20 ರ ಮೌಲ್ಯಮಾಪನ ವರ್ಷದಿಂದ ಜಾರಿಗೆ ಬರಲಿವೆ. ಹಣಕಾಸು ವರ್ಷದ ಮುಂದಿನ ವರ್ಷವನ್ನು ಮೌಲ್ಯಮಾಪನ ವರ್ಷ ಎಂದು ಕರೆಯಲಾಗುತ್ತದೆ.

 

ಪ್ರಸ್ತುತ ಆದಾಯ ತೆರಿಗೆ ಲೆಕ್ಕಾಚಾರ

ಪ್ರಸ್ತುತ ಆದಾಯ ತೆರಿಗೆ ಲೆಕ್ಕಾಚಾರ

ಸದ್ಯದ ಆದಾಯ ತೆರಿಗೆ ಸ್ಲ್ಯಾಬ್ ಗಳ ಪ್ರಕಾರ 60 ವರ್ಷಕ್ಕೂ ಕಡಿಮೆ ವಯಸ್ಸಿನ ನಿವಾಸಿ ಭಾರತೀಯರ ಆದಾಯ ತೆರಿಗೆ ಲೆಕ್ಕಾಚಾರ ಹೀಗಿರುತ್ತದೆ:
ರೂ. 2.5 ಲಕ್ಷಗಳವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ರೂ. 2,50,001 ರಿಂದ 5 ಲಕ್ಷ ರೂ. ಗಳವರೆಗಿನ ಆದಾಯಕ್ಕೆ ಶೇ. 5 ರಷ್ಟು, 5,00,001 ರಿಂದ 10 ಲಕ್ಷ ರೂ.ಗಳವರೆಗೆ ಶೇ. 20 ರಷ್ಟು ತೆರಿಗೆ ಹಾಗೂ ರೂ. 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ. 30 ರಷ್ಟು ತೆರಿಗೆ.

60 ವರ್ಷ ಮೇಲ್ಪಟ್ಟ ಹಾಗೂ 80 ವರ್ಷಕ್ಕೂ ಕಡಿಮೆ ವಯಸ್ಸಿನ ಹಿರಿಯ ನಾಗರಿಕರಿಗೆ 3 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ರೂ.300,001 ರಿಂದ 5 ಲಕ್ಷ ರೂ. ಆದಾಯಕ್ಕೆ ಶೇ.5 ರಷ್ಟು ತೆರಿಗೆ ಹಾಗೂ 5,00,001 ರಿಂದ 10 ಲಕ್ಷ ರೂ. ಗಳವರೆಗೆ ಶೇ.20 ಹಾಗೂ 10 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಲಾಗುತ್ತದೆ.
80 ವರ್ಷ ಮೇಲ್ಪಟ್ಟ ಅತಿ ಹಿರಿಯ ನಾಗರಿಕರಿಗೆ ೫ ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. 5,00,001 ರಿಂದ 10 ಲಕ್ಷ ರೂ.ಗಳವರೆಗೆ ಶೇ.20 ಹಾಗೂ 10 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಲಾಗಿದೆ.

ಶಿಕ್ಷಣ ಸೆಸ್

ಶಿಕ್ಷಣ ಸೆಸ್

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ಗಳಾದ 80 (ಸಿ) ರಿಂದ 80 (ಯು) ಗಳ ಅನ್ವಯ ಎಲ್ಲ ವಿನಾಯಿತಿಗಳನ್ನು ಕಳೆದು ಅನ್ವಯವಾಗುವ ಸೆಸ್ ಹಾಗೂ ಸರ್ಚಾರ್ಜ್ ಗಳನ್ನು ಸೇರಿಸಿದಾಗ ಪಾವತಿಸಬೇಕಿರುವ ಆದಾಯ ತೆರಿಗೆಯ ಮೊತ್ತ ಸಿಗುತ್ತದೆ.
ಪಾವತಿಸಬೇಕಾಗಿರುವ ಆದಾಯ ತೆರಿಗೆಯ ಮೇಲೆ ಶೇ. 2 ರಷ್ಟು ಶಿಕ್ಷಣ ಸೆಸ್ ಹಾಗೂ ಶೇ. 1 ರಷ್ಟು ಸೆಕೆಂಡರಿ ಸೆಸ್ ಅನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಲಾಗುತ್ತದೆ. ಈ ಎರಡೂ ಸೆಸ್ ಮೊತ್ತಗಳನ್ನು ಸೇರಿಸಿದಾಗ ಒಟ್ಟು ಪಾವತಿಸಬೇಕಾದ ಆದಾಯ ತೆರಿಗೆಯ ಮೊತ್ತ ಸಿಗುತ್ತದೆ.

ಸರ್ಚಾರ್ಜ್, ನಿವ್ವಳ ಆದಾಯ ಲೆಕ್ಕಾಚಾರ

ಸರ್ಚಾರ್ಜ್, ನಿವ್ವಳ ಆದಾಯ ಲೆಕ್ಕಾಚಾರ

ನಿವ್ವಳ ಆದಾಯ ರೂ. 1 ಕೋಟಿ ಮೀರಿದಲ್ಲಿ ಶೇ. 15 ರಷ್ಟು ಸರ್ಚಾರ್ಜ್, ನಿವ್ವಳ ಆದಾಯ ರೂ. 50 ಲಕ್ಷ ಮೀರಿದಲ್ಲಿ ಹಾಗೂ ರೂ. 1 ಕೋಟಿಗಳಿಗೂ ಕಡಿಮೆ ಇದ್ದಲ್ಲಿ ಶೇ. 10 ರಷ್ಟು ಸರ್ಚಾರ್ಜ್ ಹಾಕಲಾಗುತ್ತದೆ. ಸರ್ಚಾರ್ಜ್ ವಿಧಿಸುವ ಸಂದರ್ಭಗಳಲ್ಲಿ, ತೆರಿಗೆ ಮೊತ್ತ ಹಾಗೂ ಸರ್ಚಾರ್ಜ್ ಎರಡನ್ನೂ ಸೇರಿಸಿ ಸಿಗುವ ಮೊತ್ತದ ಮೇಲೆ ಸೆಸ್ ಲೆಕ್ಕ ಹಾಕಲಾಗುತ್ತದೆ.

3.5 ಲಕ್ಷ ರೂ. ಅಥವಾ ಅದಕ್ಕೂ ಕಡಿಮೆ ನಿವ್ವಳ ಆದಾಯ ಹೊಂದಿರುವ ನಿವಾಸಿ ಭಾರತೀಯರು ಸೆಕ್ಷನ್ 87 (ಎ) ಅನ್ವಯ ಆದಾಯ ತೆರಿಗೆ ವಿನಾಯಿತಿಯನ್ನು ಕ್ಲೇಮ್ ಮಾಡಬಹುದು. ಇದರನ್ವಯ ಶೇ. 100 ರಷ್ಟು ತೆರಿಗೆ ವಿನಾಯಿತಿ ಅಥವಾ ರೂ. 2500 ಇವುಗಳಲ್ಲಿ ಯಾವುದು ಕಡಿಮೆಯೋ ಅದು ಅನ್ವಯವಾಗುತ್ತದೆ. ಸೆಸ್ ಲೆಕ್ಕಾಚಾರ ಹಾಕುವ ಮುಂಚೆಯೇ ಇದನ್ನು ಕಡಿತಗೊಳಿಸಲಾಗುತ್ತದೆ.

 

Read more about: income tax money savings budget 2019
English summary

Here are the new income tax slabs and rates

The Interim Budget 2019 proposals came into effect from April 1, 2019. According to the proposals, a rebate of Rs 12,500 will be available for taxpayers with taxable income up to Rs 5 lakh.
Story first published: Monday, June 3, 2019, 11:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X