For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ ನಿಂದ ಭಾರೀ ಬೇಡಿಕೆಯಲ್ಲಿರುವ ಈ ಉದ್ಯಮ ಆರಂಭಿಸಿ ಪ್ರತಿ ತಿಂಗಳು ಲಕ್ಷ ಗಳಿಸಿ

ಪ್ಲಾಸ್ಟಿಕ್ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಿದೆ. ಒಮ್ಮೆ ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್‌ ವಸ್ತುಗಳ ಮೇಲಿನ ನಿಷೇಧದ ಬಗ್ಗೆ ಉದ್ಯಮದಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ.

|

ಪ್ಲಾಸ್ಟಿಕ್ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಿದೆ. ಒಮ್ಮೆ ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್‌ ವಸ್ತುಗಳ ಮೇಲಿನ ನಿಷೇಧದ ಬಗ್ಗೆ ಉದ್ಯಮದಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ.
ಆದಾಗ್ಯೂ, ಅಕ್ಟೋಬರ್ 2 ರಿಂದ ಕೆಲವು ಪ್ಲಾಸ್ಟಿಕ್‌ಗಳ ನಿಷೇಧವು ಹಬ್ಬದ ಋತುವಿನ ಕೆಲವೇ ವಾರಗಳ ಮುಂಚೆಯೇ ಬರಲಿದೆ. ಇದಕ್ಕಾಗಿ ವ್ಯಾಪಾರ ಯೋಜನೆಗಳನ್ನು ಬಹಳ ಮುಂಚಿತವಾಗಿಯೇ ನಿಗದಿಪಡಿಸಲಾಗಿದೆ.

ಯಾವುದು ನಿಷೇಧ?

ಯಾವುದು ನಿಷೇಧ?

ಪರಿಸರ ಮಾಲಿನ್ಯ ಉಂಟುಮಾಡುವ ಸಿಂಗಲ್ ಬಳಕೆಯ ಪ್ಲಾಸ್ಟಿಕ್ ನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಭಾಗವಾಗಿ ಭಾರತ ಮುಂದಿನ ತಿಂಗಳು ಪ್ಲಾಸ್ಟಿಕ್ ಚೀಲಗಳು, ಕಪ್, ಸಣ್ಣ ಬಾಟಲಿಗಳು, ಸ್ಟ್ರಾಗಳು ಮತ್ತು ಕೆಲವು ರೀತಿಯ ಸ್ಯಾಚೆಟ್‌ಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರುವ ಸಾಧ್ಯತೆಯಿದೆ.
ಸರ್ಕಾರದ ಈ ಯೋಜನೆಯು ಗ್ರಾಹಕ ಸಂಸ್ಥೆಗಳಲ್ಲಿ ಭಯವನ್ನುಂಟು ಮಾಡಿದೆ. ಇಂದು ಸೋಡಾ, ಬಿಸ್ಕೆಟ್ ಗಳಿಂದ ಹಿಡಿದು ಶಾಂಪೂವರೆಗಿನ ಪ್ಯಾಕೇಜಿಂಗ್ ವರೆಗೂ ಪ್ಲಾಸ್ಟಿಕ್ ಬಳಸಲಾಗುತ್ತದೆ.

ಪೇಪರ್ ಬ್ಯಾಗ್, ಪೇಪರ್ ವಸ್ತುಗಳಿಗೆ ಬೇಡಿಕೆ

ಪೇಪರ್ ಬ್ಯಾಗ್, ಪೇಪರ್ ವಸ್ತುಗಳಿಗೆ ಬೇಡಿಕೆ

ಸಾಮಾನ್ಯವಾಗಿ ಪ್ಲಾಸ್ಟಿಕ್ ನಿಷೇಧಿಸುವುದರಿಂದ ಪೇಪರ್ ಬ್ಯಾಗ್, ಪೇಪರ್ ಹಾಗೂ ಬಟ್ಟೆ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಈ ಉದ್ಯಮ ಆರಂಭಿಸುವ ಯೋಜನೆಯಲ್ಲಿದ್ದರೆ ಕಡಿಮೆ ಬಂಡವಾಳದಲ್ಲಿ ಪೇಪರ್ ಬ್ಯಾಗ್ ತಯಾರಿಕೆ ಘಟಕ ಆರಂಭಿಸಿ.

ಪೇಪರ್ ಬ್ಯಾಗ್ ಘಟಕ

ಪೇಪರ್ ಬ್ಯಾಗ್ ಘಟಕ

ದಿನದಿಂದ ದಿನಕ್ಕೆ ಪ್ಲಾಸಟಿಕ್ ನಿಷೇಧಕ್ಕೆ ಒಳಗಾಗುತ್ತಾ ಸಾಗಿದ್ದು, ಪೇಪರ್ ಬ್ಯಾಗ್ ಮುಂಚೂಣಿಗೆ ಬರುತ್ತಿದೆ. ಭಾರತ ಸರ್ಕಾರವು ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ನಿಷೇಧಿಸುವುದರಿಮದ ಮುಂದಿನ ದಿನಗಳಲ್ಲಿ ಬೇಡಿಕೆ ದುಪ್ಪಟ್ಟಾಗಲಿದೆ. ನೀವು ಪೇಪರ್ ಬ್ಯಾಗ್ ತಯಾರಿಸುವ ಘಟಕ ಆರಂಭಿಸಲು ಯೋಜಿಸಿದ್ದರೆ ಮುನ್ನಡೆಯಿರಿ.

ಉದ್ಯಮಿ ಮಿತ್ರ ಸಹಾಯ

ಉದ್ಯಮಿ ಮಿತ್ರ ಸಹಾಯ

ಉದ್ಯಮಿ ಮಿತ್ರ ಯೋಜನೆಯಡಿ ಸರ್ಕಾರವು ರೂ. 1 ಕೋಟಿಯವರೆಗೆ ಸಾಲ ನೀಡಲಿದೆ. ಉದ್ಯಮಿ ಮಿತ್ರ ಸರ್ಕಾರಿ ಯೋಜನೆಯಡಿ www.udyamimitra.in ವೆಬ್ಸೈಟ್ ನಲ್ಲಿ ನಿಮಗೆ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
ಪೇಪರ್ ಬ್ಯಾಗ್ ಲಾಭದಾಯಕ ಉದ್ಯಮ ಆಗಿದೆ.

ತಿಂಗಳ ಗಳಿಕೆ

ತಿಂಗಳ ಗಳಿಕೆ

ಪೇಪರ್ ಬ್ಯಾಗ್ ಘಟಕ ಆರಂಭಿಸಿದರೆ ತಜ್ಞರ ಪ್ರಕಾರ ಒಂದು ತಿಂಗಳಿಗೆ 1 ಲಕ್ಷದವರೆಗೆ ಆದಾಯ ಗಳಿಸಬಹುದು. ಇದಕ್ಕಾಗಿ ಸರ್ಕಾರ ರೂ. 1 ಕೋಟಿಯವರೆಗೆ ಸಾಲ ನೀಡಲಿದೆ. ದೊಡ್ಡ ಮಟ್ಟದಲ್ಲಿ ಘಟಕ ಸ್ಥಾಪಿಸಲು ಬಯಸಿದರೆ ರೂ. 45 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ.

ಪೇಪರ್ ಬ್ಯಾಗ್ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಪಟ್ಟಿ:

ಪೇಪರ್ ಬ್ಯಾಗ್ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಪಟ್ಟಿ:

Eyelid
Laces and tags
Paper rolls colors and white
Paper sheets
Polyester stereo
Printing chemicals, ink etc

ಪೇಪರ್ ಬ್ಯಾಗ್ ತಯಾರಿಕೆಯ ಉಪಯೋಗ

ಪೇಪರ್ ಬ್ಯಾಗ್ ತಯಾರಿಕೆಯ ಉಪಯೋಗ

ಕಾಗದದ ಚೀಲ ತಯಾರಿಕೆಯ ಪ್ರಮುಖ ಅಂಶವೆಂದರೆ ಅದರ ಪರಿಸರ ಸ್ನೇಹಪರತೆ. ಕಾಗದದ ಚೀಲಗಳು ಮರುಬಳಕೆ ಮಾಡಬಹುದಾದ ಮತ್ತು ಜೈವಿಕ ವಿಘಟನೀಯ ವಸ್ತುಗಳಾಗಿದ್ದು, ಉತ್ಪನ್ನಗಳನ್ನು ಪ್ಯಾಕೇಜಿಂಗ್ ಮಾಡಲು ಪ್ರತಿ ವಾಣಿಜ್ಯ ಬಳಕೆಗೆ ಕಾಗದದ ಚೀಲಗಳು ಅವಶ್ಯಕ. ಪ್ಲಾಸ್ಟಿಕ್ ಚೀಲಗಳು ಪರಿಸರಕ್ಕೆ ಹಾನಿಕಾರಕ ಪರಿಣಾಮವನ್ನು ಉಂಟುಮಾಡುತ್ತವೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರವು ನಿಷೇಧಿಸಿದೆ. ಪರಿಸರ ಸ್ನೇಹಿ ಅಪಾಯಕಾರಿಯಲ್ಲದ ವಸ್ತುಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದ್ದು, ವಿಕಸನಕ್ಕೆ ಕಾಗದದ ಚೀಲಗಳು ಪರಿಸರ ಸ್ನೇಹಿ ದೃಷ್ಟಿಯ ಕೊಡುಗೆಯಾಗಿದೆ.

 

 

<strong>ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಈ ಬಿಸಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ಗಳಿಸಿ</strong>ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಈ ಬಿಸಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ಗಳಿಸಿ

English summary

Ban on single-use plastic: How to Start Paper Bag Business

The important factor about the paper bag making is its Eco-friendliness, paper bags are recyclable and biodegradable items.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X