ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಮೂರನೇ ಬಾರಿಗೆ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಪ್ರಸ್ತುತ ರೆಪೋ ದರವು ಶೇಕಡ 6.5ರಷ್ಟಿದೆ. ಇದಾದ ಬಳಿಕ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರದಲ್ಲಿ ಪರಿಷ್ಕರಣೆಯನ್ನು ಆರಂಭ ಮಾಡುತ್ತಾ ಬಂದಿದೆ. ಬಡ್ಡಿದರವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ 10 ಆಗಸ್ಟ್ 2023 ರಂದು ಘೋಷಿಸಿದ್ದಾರೆ.
ಈ ವಾರದಲ್ಲಿ ದೇಶದಲ್ಲಿರುವ ಎರಡು ಪ್ರಮುಖ ಬ್ಯಾಂಕ್‌ಗಳು ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಆಕ್ಸಿಸ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ತಮ್ಮ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ.

ಆಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿ ದರ ಪರಿಷ್ಕರಣೆ
ಆಕ್ಸಿಸ್ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಬಡ್ಡಿ ದರಗಳು ಆಗಸ್ಟ್ 14, 2023 ರಿಂದ ಜಾರಿಗೆ ಬರುತ್ತವೆ ಎಂದು ಹೇಳಿದೆ. ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡಿದ ನಂತರ, ಬ್ಯಾಂಕ್ ಈಗ ಏಳು ದಿನಗಳಿಂದ 10 ವರ್ಷಗಳ ಅವಧಿಯಲ್ಲಿ ಮೆಚ್ಯೂರಿಟಿ ನೀಡುವ ಡೆಪಾಸಿಟ್‌ಗಳ ಮೇಲೆ ಶೇಕಡ 3.5 ರಿಂದ ಶೇಕಡ 7.3 ರವರೆಗಿನ ಬಡ್ಡಿದರಗಳನ್ನು ನೀಡುತ್ತದೆ ಎಂದು ಹೇಳಿದೆ. ಹಿರಿಯ ನಾಗರಿಕರಿಗೆ ಶೇಕಡ 3.50 ರಿಂದ ಶೇಕಡ 8.05ರಷ್ಟು ಬಡ್ಡಿದರ ನೀಡಲಾಗುತ್ತದೆ.
ಆಕ್ಸಿಸ್ ಬ್ಯಾಂಕ್ ನೂತನ ಬಡ್ಡಿದರ
7-14 ದಿನ: ಶೇಕಡ 3.50
15-29 ದಿನ: ಶೇಕಡ 3.50
30-45 ದಿನ: ಶೇಕಡ 3.50
46-60 ದಿನ: ಶೇಕಡ 4.00
61 ದಿನದಿಂದ 3 ತಿಂಗಳಿಗಿಂತ ಕಡಿಮೆ: ಶೇಕಡ 4.50
3 ತಿಂಗಳಿನಿಂದ 4 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 4.75
4 ತಿಂಗಳಿನಿಂದ 5 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 4.75
5 ತಿಂಗಳಿನಿಂದ 6 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 4.75
6 ತಿಂಗಳಿನಿಂದ 7 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 5.75
7 ತಿಂಗಳಿನಿಂದ 8 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 5.75
8 ತಿಂಗಳಿನಿಂದ 9 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 5.75
9 ತಿಂಗಳಿನಿಂದ 10 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 6.00
10 ತಿಂಗಳಿನಿಂದ 11 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 6.00
11 ತಿಂಗಳಿನಿಂದ 11 ತಿಂಗಳು 25 ದಿನಕ್ಕಿಂತ ಕಡಿಮೆ ಅವಧಿ: ಶೇಕಡ 6.00
11 ತಿಂಗಳು 25 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.00
1 ವರ್ಷದಿಂದ 1 ವರ್ಷ 4 ದಿನಗಳಿಗಿಂತ ಕಡಿಮೆ: ಶೇಕಡ 6.75
1 ವರ್ಷ 5 ದಿನದಿಂದ 1 ವರ್ಷ 11 ದಿನಕ್ಕಿಂತ ಕಡಿಮೆ: ಶೇಕಡ 6.80
1 ವರ್ಷ 11 ದಿನದಿಂದ 1 ವರ್ಷ 24 ದಿನಕ್ಕಿಂತ ಕಡಿಮೆ: ಶೇಕಡ 6.80
1 ವರ್ಷ 25 ದಿನದಿಂದ 13 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 6.80
13 ತಿಂಗಳಿನಿಂದ 14 ತಿಂಗಳಿಗೂ ಕಡಿಮೆ ಅವಧಿ: ಶೇಕಡ 7.10
14 ತಿಂಗಳಿನಿಂದ 15 ತಿಂಗಳಿಗೂ ಕಡಿಮೆ ಅವಧಿ: ಶೇಕಡ 7.10
15 ತಿಂಗಳಿನಿಂದ 16 ತಿಂಗಳವರೆಗಿನ ಅವಧಿ: ಶೇಕಡ 7.10
16 ತಿಂಗಳಿನಿಂದ 17 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 7.30
17 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ ಅವಧಿ: ಶೇಕಡ 7.10
18 ತಿಂಗಳಿನಿಂದ 2 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 7.10
2 ವರ್ಷದಿಂದ 30 ತಿಂಗಳಿಗೂ ಕಡಿಮೆ ಅವಧಿ: ಶೇಕಡ 7.20
30 ತಿಂಗಳಿನಿಂದ 3 ವರ್ಷಕ್ಕೂ ಕಡಿಮೆ ಅವಧಿ: ಶೇಕಡ 7.00
3 ವರ್ಷದಿಂದ 5 ವರ್ಷಕ್ಕೂ ಕಡಿಮೆ ಅವಧಿ: ಶೇಕಡ 7.00
5-10 ವರ್ಷ: ಶೇಕಡ 7.00
ಕೆನರಾ ಬ್ಯಾಂಕ್ ಎಫ್‌ಡಿ ಬಡ್ಡಿದರ ಪರಿಷ್ಕರಣೆ
ಹೊಸ ಬಡ್ಡಿದರಗಳು ಆಗಸ್ಟ್ 12, 2023 ರಿಂದ ಜಾರಿಗೆ ಬರುತ್ತವೆ ಎಂದು ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಬ್ಯಾಂಕ್ ಈಗ ಏಳು ದಿನ ಹತ್ತು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಹೂಡಿಕೆ ಮೇಲೆ ಶೇಕಡ 4 ರಿಂದ ಶೇಕಡ 7.25 ರವರೆಗೆ ಬಡ್ಡಿದರವನ್ನು ನೀಡುವುದಾಗಿ ತಿಳಿಸಿದೆ. ಹಿರಿಯ ನಾಗರಿಕರಿಗೆ ಶೇಕಡ 4ರಿಂದ 7.75 ರವರೆಗೆ ಬಡ್ಡಿದರ ನೀಡಲಾಗುತ್ತದೆ.
ಕೆನರಾ ಬ್ಯಾಂಕ್ ಎಫ್‌ಡಿ ಬಡ್ಡಿದರ
7-45 ದಿನ: ಶೇಕಡ 4.00
46-90 ದಿನ: ಶೇಕಡ 5.25
91- 179 ದಿನ: ಶೇಕಡ 5.50
180- 269 ದಿನ: ಶೇಕಡ 6.25
270 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.50
1 ವರ್ಷದ ಅವಧಿ: ಶೇಕಡ 6.90
444 ದಿನಗಳು: ಶೇಕಡ 7.25
1 ವರ್ಷಕ್ಕಿಂತ ಮೇಲ್ಪಟ್ಟು 2 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.90
2 ವರ್ಷಕ್ಕಿಂತ ಮೇಲ್ಪಟ್ಟು 3 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.85
3 ವರ್ಷಕ್ಕಿಂತ ಮೇಲ್ಪಟ್ಟು 5 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.80
5 ವರ್ಷಕ್ಕಿಂತ ಮೇಲ್ಪಟ್ಟು 10 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 6.70


Click it and Unblock the Notifications