For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿಯ ಮೇಲಿನ ಬಡ್ಡಿದರ ಪರಿಷ್ಕರಣೆ: ಪ್ರಸ್ತುತ ದರವೆಷ್ಟು?

|

ಆಗಸ್ಟ್ 1, 2021 ರಿಂದ ಜಾರಿಗೆ ಬರುವಂತೆ, ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಶ್ಚಿತ ಠೇವಣಿಗಳ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರವನ್ನು ರೂ 2 ಕೋಟಿಗಿಂತ ಕಡಿಮೆ ಪರಿಷ್ಕರಿಸಿದೆ. 7 ದಿನಗಳಿಂದ 45 ದಿನಗಳಲ್ಲಿ ಮೆಚ್ಯುರಿಂಗ್‌ ಠೇವಣಿಗಳಿಗೆ, ಬ್ಯಾಂಕ್ ಇತ್ತೀಚಿನ ಪರಿಷ್ಕರಣೆಯ ನಂತರ 2.85% ಬಡ್ಡಿದರವನ್ನು ನೀಡುತ್ತಿದೆ.

 

ಬ್ಯಾಂಕ್ ಈಗ 46 ದಿನಗಳಿಂದ 179 ದಿನಗಳವರೆಗೆ ಮೆಚ್ಯೂರಿಂಗ್‌ ಠೇವಣಿಗಳಿಗೆ ಶೇ. 3.85 ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕ್‌ ಆಫ್‌ ಇಂಡಿಯಾ ಈಗ 180 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಶೇ. 4.35 ಬಡ್ಡಿದರವನ್ನು ನೀಡುತ್ತಿದೆ.

 ಚಿನ್ನದ ಬೆಲೆ ಏರಿಳಿತ ಆಗುವುದರ ಹಿಂದೆ ಏನಿದೆ ಕಾರಣ?: ಇಲ್ಲಿದೆ ಮಾಹಿತಿ ಚಿನ್ನದ ಬೆಲೆ ಏರಿಳಿತ ಆಗುವುದರ ಹಿಂದೆ ಏನಿದೆ ಕಾರಣ?: ಇಲ್ಲಿದೆ ಮಾಹಿತಿ

ಆದರೆ 1 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ. ಆದರೆ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬ್ಯಾಂಕ್ ಈಗ ಶೇ. 5.00 ಬಡ್ಡಿದರವನ್ನು ನೀಡುತ್ತಿದೆ. 2 ವರ್ಷದಿಂದ 10 ವರ್ಷಕ್ಕಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳಿಗೆ, ಬ್ಯಾಂಕ್‌ ಆಫ್‌ ಇಂಡಿಯಾ ಈಗ ಶೇ. 5.05 ಬಡ್ಡಿ ದರವನ್ನು ಸಾಮಾನ್ಯ ಜನರಿಗೆ ನೀಡುತ್ತಿದೆ.

 ಸಾಮಾನ್ಯ ಜನರಿಗೆ ಎಫ್‌ಡಿ ಬಡ್ಡಿದರ

ಸಾಮಾನ್ಯ ಜನರಿಗೆ ಎಫ್‌ಡಿ ಬಡ್ಡಿದರ

ತೀರಾ ಇತ್ತೀಚಿನ ಪರಿಷ್ಕರಣೆಯ ನಂತರ, ಬ್ಯಾಂಕ್‌ ಆಫ್‌ ಇಂಡಿಯಾ ಈಗ ಸಾಮಾನ್ಯ ಜನರಿಗೆ ರು. 2 ಕ್ಕಿಂತ ಕಡಿಮೆ ಇರುವ ಸ್ಥಿರ ಠೇವಣಿಗಳ ಮೇಲೆ ನಿಗದಿತ ಬಡ್ಡಿದರಗಳನ್ನು ನೀಡುವ ಭರವಸೆ ನೀಡುತ್ತಿದೆ. 7 ರಿಂದ 14 ದಿನಗಳವರೆಗಿನ ಎಫ್‌ಡಿ ಮೇಲೆ ಶೇ. 2.85 ಬಡ್ಡಿದರವನ್ನು ಬ್ಯಾಂಕ್‌ ನೀಡುತ್ತದೆ. ಹಾಗೆಯೇ 15 ರಿಂದ 30 ದಿನಗಳವರೆಗಿನ ಎಫ್‌ಡಿ ಮೇಲೆ ಶೇ. 2.85 ಬಡ್ಡಿದರವನ್ನು ನೀಡಿದರೆ, 31 ರಿಂದ 45 ದಿನಗಳವರೆಗಿನ ಎಫ್‌ಡಿ ಮೇಲೆ ಶೇ. 2.85 ಬಡ್ಡಿ ವಿಧಿಸುತ್ತದೆ. ಇನ್ನು 46 ರಿಂದ 90 ದಿನ ಹಾಗೂ 91 ರಿಂದ 179 ದಿನಗಳವರೆಗಿನ ಎಫ್‌ಡಿ ಮೇಲೆ ಶೇ 3.85 ಬಡ್ಡಿದರವನ್ನು ಬ್ಯಾಂಕ್‌ ನೀಡುತ್ತದೆ. 180 ರಿಂದ 269 ದಿನ ಹಾಗೂ 270 ದಿನದಿಂದ 1 ವರ್ಷದವರೆಗಿನ ಎಫ್‌ಡಿ ಮೇಲೆ ಬ್ಯಾಂಕ್‌ ಶೇ. 4.35 ಬಡ್ಡಿ ದರ ನೀಡುತ್ತದೆ.

ಇನ್ನು ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಸಮಯದಲ್ಲಿನ ಎಫ್‌ಡಿಗೆ ಬ್ಯಾಂಕ್‌ ಶೇ. 5.00 ಬಡ್ಡಿ ದರವನ್ನು ವಿಧಿಸುತ್ತದೆ. ಹಾಗೆಯೇ 2 ವರ್ಷಗಳಿಗಿಂತ ಮೇಲ್ಪಟ್ಟು 3 ವರ್ಷಗಳಿಗಿಂತ ಕಡಿಮೆ ಅವಧಿಯ, 3 ವರ್ಷ ಮೇಲ್ಪಟ್ಟ 5 ವರ್ಷಕ್ಕಿಂತ ಕಡಿಮೆ ಅವಧಿಯ, 5 ವರ್ಷ ಮೇಲ್ಪಟ್ಟ 8 ವರ್ಷಗಳಿಗಿಂತ ಕಡಿಮೆ ಅವಧಿಯ, 8 ವರ್ಷಗಳು ಮತ್ತು 10 ವರ್ಷಕ್ಕಿಂತ ಮೇಲ್ಪಟ್ಟ ಅವಧಿಯ ಎಫ್‌ಡಿಗೆ ತನ್ನ ಪರಿಷ್ಕೃತ ಎಫ್‌ಡಿಯ ಮೇಲಿನ ಬಡ್ಡಿದರದ ಪ್ರಕಾರವಾಗಿ ಬ್ಯಾಂಕ್‌ 5.05 ನೀಡುತ್ತದೆ.

  ಭಾರತದಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ, ಹೂಡಿಕೆದಾರರಿಗೆ ಏನಿದೆ ಲಾಭ?, ಇಲ್ಲಿದೆ ಪ್ರಮುಖ ಮಾಹಿತಿ  ಭಾರತದಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ, ಹೂಡಿಕೆದಾರರಿಗೆ ಏನಿದೆ ಲಾಭ?, ಇಲ್ಲಿದೆ ಪ್ರಮುಖ ಮಾಹಿತಿ

 ಹಿರಿಯ ನಾಗರಿಕರಿಗೆ ಎಷ್ಟಿದೆ ಎಫ್‌ಡಿ ಬಡ್ಡಿದರ?
 

ಹಿರಿಯ ನಾಗರಿಕರಿಗೆ ಎಷ್ಟಿದೆ ಎಫ್‌ಡಿ ಬಡ್ಡಿದರ?

ಹಿರಿಯ ನಾಗರಿಕರು ರೂ. 2 ಕ್ಕಿಂತ ಕಡಿಮೆ ನಿಶ್ಚಿತ ಠೇವಣಿಗಳ ಮೇಲೆ ಸಾಮಾನ್ಯ ಜನರಿಗೆ ಶೇ. 0.50 ಮತ್ತು ಅದಕ್ಕಿಂತ ಹೆಚ್ಚಿನ ಹೆಚ್ಚುವರಿ ಬಡ್ಡಿ ದರವನ್ನು ಪಡೆಯುತ್ತಾರೆ. 7 ದಿನದಿಂದ14 ದಿನಕ್ಕೆ ಶೇ. 3.35, 15 ರಿಂದ 30 ದಿನಕ್ಕೆ ಶೇ. 3.35, 31 ರಿಂದ 45 ದಿನಕ್ಕೆ ಶೇ. 3.35, 46 ದಿನದಿಂದ 90 ದಿನದವರೆಗೆ ಶೇ. 4.35, 91 ರಿಂದ 179 ದಿನಗಳವರೆಗೆ ಶೇ. 4.35, 180 ರಿಂದ 269 ದಿನಗಳವರೆಗೆ ಶೇ. 4.85, 270 ರಿಂದ 1 ವರ್ಷದವರೆಗೆ ಶೇ. 4.85, 1 ವರ್ಷಕ್ಕಿಂತ ಮೇಲ್ಪಟ್ಟು ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ. 5.50, 2 ವರ್ಷಕ್ಕಿಂತ ಮೇಲ್ಪಟ್ಟು 3 ವರ್ಷಕ್ಕಿಂತ ಕೆಳಗಿನ ಅವಧಿಗೆ ಶೇ. 5.55, 3 ವರ್ಷದಿಂದ ಮೇಲ್ಪಟ್ಟು 5 ವರ್ಷಕ್ಕಿಂತ ಕೆಳಗಿನ ಅವಧಿಗೆ ಶೇ. 5.55, 5 ವರ್ಷಕ್ಕಿಂತ ಮೇಲ್ಪಟ್ಟು 8 ವರ್ಷಕ್ಕಿಂತ ಕೆಳಗಿನ ಅವಧಿಗೆ ಶೇ. 5.55, 8 ವರ್ಷಗಳು ಮತ್ತು 10 ವರ್ಷಕ್ಕಿಂತ ಮೇಲ್ಪಟ್ಟ ಅವಧಿಗೆ ಶೇ. 5.55 ಬಡ್ಡಿ ದರ ವಿಧಿಸಲಾಗುವುದು ಎಂದು ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ವೆಬ್‌ಸೈಟ್‌ ಮೂಲಕ ಮಾಹಿತಿ ನೀಡಿದ್ದಾರೆ.

 ಅಕಾಲಿಕವಾಗಿ ಹಿಂಪಡೆದರೆ ಎಷ್ಟು ಬಡ್ಡಿದರ?

ಅಕಾಲಿಕವಾಗಿ ಹಿಂಪಡೆದರೆ ಎಷ್ಟು ಬಡ್ಡಿದರ?

ಅಕಾಲಿಕವಾಗಿ ಠೇವಣಿ ಹಿಂಪಡೆಯುವ ಸಂದರ್ಭದಲ್ಲಿ, ಬ್ಯಾಂಕ್ ಆಫ್ ಇಂಡಿಯಾ ಠೇವಣಿದಾರರಿಗೆ ದಂಡವನ್ನು ವಿಧಿಸುತ್ತದೆ. ರು. 5 ಲಕ್ಷಕ್ಕಿಂತ ಕಡಿಮೆ ಠೇವಣಿಗಳನ್ನು 12 ತಿಂಗಳು ಪೂರ್ಣಗೊಂಡ ನಂತರ ಅಥವಾ ನಂತರ ಹಿಂಪಡೆದರೆ, ಆ ವ್ಯಕ್ತಿಗೆ ಠೇವಣಿಯ ಅಕಾಲಿಕ ಹಿಂತೆಗೆತದ ಮೇಲೆ ದಂಡ ವಿಧಿಸಲಾಗುವುದಿಲ್ಲ. ರು. 5 ಲಕ್ಷಕ್ಕಿಂತ ಕಡಿಮೆ ಠೇವಣಿಗಳನ್ನು 12 ತಿಂಗಳ ಪೂರ್ಣಗೊಳಿಸುವ ಮೊದಲು ಅಕಾಲಿಕವಾಗಿ ಹಿಂಪಡೆದರೆ ಶೇ. 0.50 ದಂಡವನ್ನು ಬ್ಯಾಂಕ್‌ ಆಫ್‌ ಇಂಡಿಯಾ ವಿಧಿಸುತ್ತದೆ. ರು. 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಠೇವಣಿಗಳನ್ನು ಬೇಗನೇ ಅಕಾಲಿಕವಾಗಿ ಹಿಂಪಡೆದರೆ, ಶೇ. 1 ರಷ್ಟು ದಂಡವನ್ನು ಬ್ಯಾಂಕ್‌ ಎಫ್‌ಡಿ ದಾರರಿಗೆ ವಿಧಿಸುತ್ತದೆ.

ಎಲ್ಐಸಿ ಸರಳ ಪಿಂಚಣಿ ಯೋಜನೆ: ಮಾಸಿಕ 1000 ರು. ಸ್ಥಿರ ಆದಾಯ ಪಡೆಯುವುದು ಹೇಗೆ?ಎಲ್ಐಸಿ ಸರಳ ಪಿಂಚಣಿ ಯೋಜನೆ: ಮಾಸಿಕ 1000 ರು. ಸ್ಥಿರ ಆದಾಯ ಪಡೆಯುವುದು ಹೇಗೆ?

 ಯಾವ ಸಂದರ್ಭದಲ್ಲಿ ದಂಡವಿಲ್ಲ?

ಯಾವ ಸಂದರ್ಭದಲ್ಲಿ ದಂಡವಿಲ್ಲ?

ಗ್ರಾಹಕರಿಗೆ ಪ್ರಮುಖ ಮಾಹಿತಿ ನೀಡಿರುವ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ "ಮೂಲ ಒಪ್ಪಂದದ ಅವಧಿಯ ಉಳಿದ ಅವಧಿಗಿಂತ ಹೆಚ್ಚಿನ ಅವಧಿಗೆ ನವೀಕರಣಕ್ಕಾಗಿ ಅಕಾಲಿಕವಾಗಿ ಮುಚ್ಚಿದ ಠೇವಣಿಗಳ ಸಂದರ್ಭದಲ್ಲಿ, ಠೇವಣಿಯ ಮೊತ್ತವನ್ನು ಲೆಕ್ಕಿಸದೆ ಅಕಾಲಿಕ ವಾಪಸಾತಿಗೆ " ದಂಡವಿಲ್ಲ" ಎಂದು ಉಲ್ಲೇಖಿಸಿದೆ. ಹಾಗೆಯೇ ಠೇವಣಿದಾರರ ಸಾವಿನಿಂದ ಅವಧಿ ಠೇವಣಿಗಳನ್ನು ಅಕಾಲಿಕವಾಗಿ ಹಿಂತೆಗೆದುಕೊಳ್ಳುವುದಕ್ಕೆ ಯಾವುದೇ ದಂಡವಿಲ್ಲ. ಸಿಬ್ಬಂದಿ, ಮಾಜಿ ಸಿಬ್ಬಂದಿ, ಸಿಬ್ಬಂದಿ/ಮಾಜಿ ಸಿಬ್ಬಂದಿ ಹಿರಿಯ ನಾಗರಿಕರು ಮತ್ತು ಮೊದಲ ಖಾತೆದಾರರಾಗಿ ಮೃತ ಸಿಬ್ಬಂದಿಯ ಸಂಗಾತಿಗಳು ಅವಧಿಪೂರ್ವ ಠೇವಣಿಗಳನ್ನು ಅಕಾಲಿಕವಾಗಿ ಹಿಂತೆಗೆದುಕೊಳ್ಳುವುದಕ್ಕೆ ಯಾವುದೇ ದಂಡವಿಲ್ಲ ಎಂದು ಕೂಡಾ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

English summary

Bank of India Revises Interest Rates On Fixed Deposit: Check Current Rates Here

With effect from 1 August 2021, the public sector lender Bank of India has revised interest rates on its fixed deposits of less than Rs 2 Cr. Check Current Rates Here.
Story first published: Monday, August 9, 2021, 16:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X