For Quick Alerts
ALLOW NOTIFICATIONS  
For Daily Alerts

ಉಳಿತಾಯ ಖಾತೆಗೆ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತದೆ ಈ ಐದು ಬ್ಯಾಂಕುಗಳು!

|

ಉಳಿತಾಯ ಖಾತೆಗಳು ಕಡಿಮೆ ಅವಧಿಯ ಹೂಡಿಕೆಯಾಗಿದೆ. ಇಲ್ಲಿ ನಾವು ನಮ್ಮ ಉಳಿತಾಯ ಖಾತೆಯಲ್ಲಿ ಜಮೆ ಮಾಡಿದ ಹಣಕ್ಕೆ ಬಡ್ಡಿ ಪಡೆಯುವುದು ಮಾತ್ರವಲ್ಲದೇ ಈ ಹಣವನ್ನು ಎಲ್ಲಿ ಯಾವ ಹೊತ್ತಿನಲ್ಲಿ ಬೇಕಾದರೂ ಹಿಂದಕ್ಕೆ ಪಡೆಯಬಹುದು. ಅಂದರೆ ವಿಡ್ರಾ ಮಾಡಿಕೊಳ್ಳಬಹುದು. ಆದರೆ ಪಿಕ್ಸಿಡ್‌ ಡೆಪಾಸಿಟ್‌ನಲ್ಲಿ ಇದು ಸಾಧ್ಯವಿಲ್ಲ. ಫಿಕ್ಸಿಡ್‌ ಡೆಪಾಸಿಟ್‌ನಲ್ಲಿ ನಮಗೆ ಉತ್ತಮ ಬಡ್ಡಿ ದೊರೆಯುತ್ತದೆ ಆದರೂ ನಾವು ಆ ಹಣವನ್ನು ಬೇಕಾದಾಗ ತೆಗೆಯಲು ಸಾಧ್ಯವಿಲ್ಲ. ಈ ಫಿಕ್ಸಿಡ್‌ ಡೆಪಾಸಿಟ್‌ಗೆ ಕಾಲಾವಧಿ ನಿಗದಿಯಾಗಿರುತ್ತದೆ. ನೀವು ಹಣವನ್ನು ಹಿಂಪಡೆಯಬೇಕಾದರೂ ಅದಕ್ಕೆ ದಂಡ ವಿಧಿಸಲಾಗುತ್ತದೆ.

ಮಾರುಕಟ್ಟೆ ಏರಿಳಿತದಿಂದಾಗಿ ಬಡ್ಡಿದರದ ಮೇಲೆ ಯಾವುದೇ ಪರಿಣಾಮ ಬೀರದ ಕಾರಣದಿಂದಾಗಿ ಉಳಿತಾಯ ಖಾತೆ ಹಾಗೂ ಫಿಕ್ಸಿಡ್‌ ಡೆಪಾಸಿಟ್‌ ಎರಡೂ ಕೂಡಾ ಉತ್ತಮ ಹೂಡಿಕೆ ವಿಧವಾಗಿದೆ. ಆದರೆ ಫಿಕ್ಸಿಡ್‌ ಡೆಪಾಸಿಟ್‌ಗಳಲ್ಲಿ ಹೆಚ್ಚುವರಿ ಬಡ್ಡಿಯು ದೊರೆಯುತ್ತದೆ. ಹಿರಿಯ ನಾಗರಿಕರು, ತೆರಿಗೆ ಪಾವತಿದಾರರು ಮೊದಲಾದವರಿಗೆ ಈ ಫಿಕ್ಸಿಡ್‌ ಡೆಪಾಸಿಟ್‌ ಉತ್ತಮ ಆಯ್ಕೆಯಾಗಿದೆ. ಈ ವಿಭಾಗದ ಜನರಿಗೆ ಅಧಿಕ ಬಡ್ಡಿದರವನ್ನು ಬ್ಯಾಂಕುಗಳು ನೀಡುತ್ತದೆ.

''ಜನ್ ಧನ್ ಪ್ಲಸ್''ಯೋಜನೆ ವೇಗವರ್ಧನೆಗೆ ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ಶಿಫಾರಸು''ಜನ್ ಧನ್ ಪ್ಲಸ್''ಯೋಜನೆ ವೇಗವರ್ಧನೆಗೆ ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ಶಿಫಾರಸು

ಆದರೆ ಇದಕ್ಕೆ ಬದಲಾಗಿ ಫಿಕ್ಸಿಡ್‌ ಡೆಪಾಟಿಟ್‌ಗೂ ಅಧಿಕ ಬಡ್ಡಿದರವನ್ನು ನೀಡಲು ಹಲವಾರು ಬ್ಯಾಂಕುಗಳು ಈಗ ಮುಂದೆ ಬಂದಿದೆ. ಉಳಿತಾಯ ಖಾತೆಗಳಲ್ಲಿ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕ ಬಡ್ಡಿದರವನ್ನು ಕೆಲವು ಬ್ಯಾಂಕುಗಳು ನೀಡಲು ಮುಂದಾಗಿದೆ. ಅಗತ್ಯವಿದ್ದಾಗ ಹಣ ತಕ್ಷಣಕ್ಕೆ ಬೇಕಾಗಬಹುದು ಎಂದು ನೀವು ಬಹಳ ಜಾಣ್ಮೆಯಿಂದ ಯೋಚಿಸುವುದಾದರೆ ಈ ಉಳಿತಾಯ ಖಾತೆಗಳು ನಿಮಗೆ ಹೆಚ್ಚು ಸಹಕಾರಿಯಾಗಿದೆ. ನಿಮಗೆ ಈ ಉಳಿತಾಯ ಖಾತೆಗಳಲ್ಲಿ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕ ಬಡ್ಡಿ ದರ ದೊರಕುವುದು ಮಾತ್ರವಲ್ಲದೇ ನೀವು ಅಗತ್ಯವಿದ್ದಾಗ ಈ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಉಳಿತಾಯ ಖಾತೆಗಳಿಗೆ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕ ಬಡ್ಡಿದರವನ್ನು ನೀಡುವ ಬ್ಯಾಂಕುಗಳು ಯಾವುದು? ತಿಳಿಯಲು ಮುಂದೆ ಓದಿ...

 ಉತ್ಕರ್ಷ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಉತ್ಕರ್ಷ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ನಾವಿಲ್ಲಿ ಒದಗಿಸುವ ಉತ್ಕರ್ಷ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ಉಳಿತಾಯ ಖಾತೆಯ ಬಡ್ಡಿದರವು ಪ್ರಸ್ತುತ ಚಾಳ್ತಿಯಲ್ಲಿರುವ ಬಡ್ಡಿದರವಾಗಿದೆ. ಈ ಬಡ್ಡಿದರವನ್ನು ಬ್ಯಾಂಕ್‌ ದೈನಂದಿನ ಲೆಕ್ಕದಲ್ಲಿ ಹಾಗೂ ತ್ರೈಮಾಸಿಕ ಲೆಕ್ಕದಲ್ಲಿ ನೀಡುತ್ತದೆ ಎಂದು ಉತ್ಕರ್ಷ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ತಿಳಿಸಿದೆ. 2021 ರ ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಈ ಬಡ್ಡಿದರವು ಜಾರಿಗೆ ಬರುತ್ತದೆ. ಕೆಳಗೆ ಉಲ್ಲೇಖಿಸಿದ ಬಡ್ಡಿದರವು ಬ್ಯಾಂಕಿನ ವೆಬ್‌ಸೈಟ್‌ ಮೂಲಕ ದೊರೆತ ಮಾಹಿತಿಯಾಗಿದೆ.

ಒಂದು ಲಕ್ಷದವರೆಗಿನ ಹಣಕ್ಕೆ ವರ್ಷಕ್ಕೆ ಶೇ. 5.00 ಬಡ್ಡಿದರ
ಒಂದು ಲಕ್ಷಕ್ಕಿಂತ ಅಧಿಕ 25 ಲಕ್ಷಕ್ಕಿಂತ ಒಳಗೆ: ವರ್ಷಕ್ಕೆ ಶೇ. 6.00 ಬಡ್ಡಿದರ
25 ಲಕ್ಷದಿಂದ ಹತ್ತು ಕೋಟಿವರೆಗಿನ ಠೇವಣಿಗೆ ವರ್ಷಕ್ಕೆ ಶೇ. 7.00 ಬಡ್ಡಿದರ
ಹತ್ತು ಕೋಟಿಗಿಂತ ಅಧಿಕ ಠೇವಣಿಗೆ ವರ್ಷಕ್ಕೆ ಶೇ. 6.75 ಬಡ್ಡಿದರ

 ಉಜ್ಜೀವನ್‌ ಸ್ಮಾಲ್‌  ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಉಜ್ಜೀವನ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಉಜ್ಜೀವನ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ಉಳಿತಾಯ ಖಾತೆಗೆ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕ ಬಡ್ಡಿದರವನ್ನು ನೀಡುತ್ತದೆ. ಉಜ್ಜೀವನ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ನ ಡೊಮೆಸ್ಟಿಕ್‌ ಹಾಗೂ ಅನಿವಾಸಿ ಉಳಿತಾಯ ಖಾತೆಗಳಿಗೆ ಮಾರ್ಚ್ 6, 2021 ರಿಂದ ಈ ಕೆಳಗಿನ ಬಡ್ಡಿದರ ಅನ್ವಯವಾಗುತ್ತದೆ. ಕೆಳಗೆ ಉಲ್ಲೇಖಿಸಿದ ಬಡ್ಡಿದರವು ಬ್ಯಾಂಕಿನ ವೆಬ್‌ಸೈಟ್‌ ಮೂಲಕ ದೊರೆತ ಮಾಹಿತಿಯಾಗಿದೆ.

ಡಿಜಿಟಲ್ ಗೋಲ್ಡ್ vs ಫಿಸಿಕಲ್ ಗೋಲ್ಡ್: ಹೂಡಿಕೆಗೆ ಯಾವುದು ಉತ್ತಮ?ಡಿಜಿಟಲ್ ಗೋಲ್ಡ್ vs ಫಿಸಿಕಲ್ ಗೋಲ್ಡ್: ಹೂಡಿಕೆಗೆ ಯಾವುದು ಉತ್ತಮ?

ಒಂದು ಲಕ್ಷದವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 4.00 ಬಡ್ಡಿ
ಒಂದು ಲಕ್ಷದಿಂದ 25 ಲಕ್ಷದವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 7.00 ಬಡ್ಡಿ
25 ಲಕ್ಷದಿಂದ ಹತ್ತು ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 6.00 ಬಡ್ಡಿ
ಹತ್ತು ಕೋಟಿಗಿಂತ ಅಧಿಕ ಠೇವಣಿಗೆ ವರ್ಷಕ್ಕೆ ವರ್ಷಕ್ಕೆ ಶೇ. 6.75 ಬಡ್ಡಿ

 

 ಎಯು ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಎಯು ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಎಯು ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ಉಳಿತಾಯ ಖಾತೆಗೆ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕ ಬಡ್ಡಿದರವನ್ನು ನೀಡುತ್ತದೆ. ಉಳಿತಾಯ ಖಾತೆಗಳಿಗೆ ಎಯು ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ನೀಡುವ ಬಡ್ಡಿದರವನ್ನು ಈ ಕೆಳಗೆ ಉಲ್ಲೇಖ ಮಾಡಲಾಗಿದ್ದು ಇದು ಜುಲೈ 16, 2021 ರಿಂದ ಅನ್ವಯವಾಗುತ್ತದೆ. ಹಾಗೆಯೇ ಕೆಳಗೆ ಉಲ್ಲೇಖಿಸಿದ ಬಡ್ಡಿದರವು ಬ್ಯಾಂಕಿನ ವೆಬ್‌ಸೈಟ್‌ ಮೂಲಕ ದೊರೆತ ಮಾಹಿತಿಯಾಗಿದೆ.

ಒಂದು ಲಕ್ಷಕ್ಕಿಂತ ಕಡಿಮೆ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 3.50 ಬಡ್ಡಿ
ಒಂದು ಲಕ್ಷದಿಂದ ಹತ್ತು ಲಕ್ಷದವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 5.00 ಬಡ್ಡಿ
ಹತ್ತು ಲಕ್ಷದಿಂದ 25 ಲಕ್ಷದವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 6.00 ಬಡ್ಡಿ
25 ಲಕ್ಷದಿಂದ 2 ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 7.00 ಬಡ್ಡಿ
2 ಕೋಟಿಯಿಂದ ಹತ್ತು ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 6.00 ಬಡ್ಡಿ

 

 ಇಕ್ವಿಟಾಸ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಇಕ್ವಿಟಾಸ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಇಕ್ವಿಟಾಸ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ಉಳಿತಾಯ ಖಾತೆಗೆ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕ ಬಡ್ಡಿದರವನ್ನು ನೀಡುತ್ತದೆ. ಈ ಕೆಳಗೆ ನೀಡಲಾದ ಇಕ್ವಿಟಾಸ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ನ ಬಡ್ಡಿದರವು ಆಗಸ್ಟ್‌ 16, 2021 ರಿಂದ ಅನ್ವಯವಾಗುತ್ತದೆ. ಹಾಗೆಯೇ ಕೆಳಗೆ ಉಲ್ಲೇಖಿಸಿದ ಬಡ್ಡಿದರವು ಬ್ಯಾಂಕಿನ ವೆಬ್‌ಸೈಟ್‌ ಮೂಲಕ ದೊರೆತ ಮಾಹಿತಿಯಾಗಿದೆ.

SBIನ ಹೊಸ ಪ್ಲಾಟಿನಂ ಠೇವಣಿ ಯೋಜನೆ: ಬಡ್ಡಿದರ ಹಾಗೂ ಪ್ರಮುಖ ಮಾಹಿತಿ ಇಲ್ಲಿದೆSBIನ ಹೊಸ ಪ್ಲಾಟಿನಂ ಠೇವಣಿ ಯೋಜನೆ: ಬಡ್ಡಿದರ ಹಾಗೂ ಪ್ರಮುಖ ಮಾಹಿತಿ ಇಲ್ಲಿದೆ

ಒಂದು ಲಕ್ಷದವರೆಗಿನ ಡೆಪಾಸಿಟ್‌ಗೆ ದೈನಂದಿನ ಬಡ್ಡಿದರ ಶೇ. 3.50 ಬಡ್ಡಿ
ಒಂದು ಲಕ್ಷದಿಂದ ಒಂದು ಕೋಟಿವರೆಗಿನ ಡೆಪಾಸಿಟ್‌ಗೆ ದೈನಂದಿನ ಬಡ್ಡಿದರ ಶೇ. 7.00 ಬಡ್ಡಿ
ಒಂದು ಕೋಟಿಗಿಂತ ಅಧಿಕ ಡೆಪಾಸಿಟ್‌ಗೆ ದೈನಂದಿನ ಬಡ್ಡಿದರ ಶೇ. 6.00 ಬಡ್ಡಿ

 

 ಫಿನ್‌ಕೇರ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಫಿನ್‌ಕೇರ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌: ಉಳಿತಾಯ ಖಾತೆ

ಫಿನ್‌ಕೇರ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ ಉಳಿತಾಯ ಖಾತೆಗೆ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕ ಬಡ್ಡಿಯನ್ನು ನೀಡುತ್ತದೆ. ಈ ಕೆಳಗೆ ಉಲ್ಲೇಖ ಮಾಡಲಾದ ಫಿನ್‌ಕೇರ್‌ ಸ್ಮಾಲ್‌ ಫಿನಾನ್ಸ್‌ ಬ್ಯಾಂಕ್‌ನ ಬಡ್ಡಿದರವು ಜುಲೈ 1, 2021 ರಿಂದ ಅನ್ವಯವಾಗುತ್ತದೆ. ಹಾಗೆಯೇ ಕೆಳಗೆ ಉಲ್ಲೇಖಿಸಿದ ಬಡ್ಡಿದರವು ಬ್ಯಾಂಕಿನ ವೆಬ್‌ಸೈಟ್‌ ಮೂಲಕ ದೊರೆತ ಮಾಹಿತಿಯಾಗಿದೆ.

ಒಂದು ಲಕ್ಷದವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 4.50 ಬಡ್ಡಿ
ಒಂದು ಲಕ್ಷದಿಂದ ಐದು ಲಕ್ಷದವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 6.00 ಬಡ್ಡಿ
ಐದು ಲಕ್ಷದಿಂದ ಒಂದು ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 7.00 ಬಡ್ಡಿ
ಒಂದು ಕೋಟಿಯಿಂದ ಎರಡು ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 6.00 ಬಡ್ಡಿ
ಎರಡು ಕೋಟಿಯಿಂದ ಐದು ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 5.75 ಬಡ್ಡಿ
ಐದು ಕೋಟಿಯಿಂದ 15 ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 4.50 ಬಡ್ಡಿ
15 ಕೋಟಿಯಿಂದ 20 ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 4.00 ಬಡ್ಡಿ
20 ಕೋಟಿಯಿಂದ 30 ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 3.25 ಬಡ್ಡಿ
30 ಕೋಟಿಯಿಂದ 50 ಕೋಟಿವರೆಗಿನ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 3.00 ಬಡ್ಡಿ
50 ಕೋಟಿಗಿಂತ ಅಧಿಕ ಡೆಪಾಸಿಟ್‌ಗೆ ವರ್ಷಕ್ಕೆ ಶೇ. 3.00 ಬಡ್ಡಿ

 

English summary

Banks Promising Higher Interest Rates Than FD On Savings Accounts, Explained in Kannada

Banks Promising Higher Interest Rates Than FD On Savings Accounts, Explained in Kannada.
Story first published: Wednesday, August 18, 2021, 19:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X