For Quick Alerts
ALLOW NOTIFICATIONS  
For Daily Alerts

Budget 2022: ಆರ್ಥಿಕ ವಲಯಕ್ಕೆ ಸಿಕ್ಕಿದ್ದೇನು? ಮುಖ್ಯಾಂಶ ಇಲ್ಲಿದೆ

|

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮೋದಿ 2.0 ರ ನಾಲ್ಕನೇ ಬಜೆಟ್ 2022 ರ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಆರ್ಥಿಕ ಉತ್ತೇಜನಕ್ಕೆ ಕೆಲವು ಪ್ರಸ್ತಾಪಗಳನ್ನು ಮಾಡಿದ್ದಾರೆ. ಆದರೆ ಈ ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿರುವ ಸಾಮಾನ್ಯ ಜನರ ಜೀವನಕ್ಕೆ ಅನುಕೂಲಕರವಾದ ಯಾವ ಅಂಶವು ಈ ಬಜೆಟ್‌ನಲ್ಲಿ ಕಂಡು ಬಂದಿಲ್ಲ.

ಹೆಚ್ಚುತ್ತಿರುವ ಹಣದುಬ್ಬರ ಮತ್ತು ಮುಂದುವರಿದ ಕೋವಿಡ್ ಬಿಕ್ಕಟ್ಟಿನ ನಡುವೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ರಮಗಳನ್ನು ಸರ್ಕಾರ ಕೊಂಚ ಕೈಗೊಳ್ಳುವ ಪ್ರಯತ್ನ ಮಾಡಿದಂತೆ ಕಂಡು ಬಂದಿದೆ. ಆದರೆ ಆದಾಯ ತೆರಿಗೆ ವಿನಾಯಿತಿ ಹೆಚ್ಚಳವನ್ನು ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ವೈಯಕ್ತಿಕ ಆದಾಯ ತೆರಿಗೆ ರಚನೆಯಲ್ಲಿ ಗಮನಾರ್ಹವಾದ ಕೆಲವು ಬದಲಾವಣೆಗಳು ಕಂಡುಬಂದಿವೆ. ಈ ನಿಟ್ಟಿನಲ್ಲಿ ಈ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ತೆರಿಗೆ ವಿನಾಯಿತಿ ಮೊದಲಾದ ಬೇಡಿಕೆಗಳು ಕೇಳಿ ಬಂದಿದ್ದವು.

 Budget 2022: ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕ ಶೇ.5ಕ್ಕೆ ಇಳಿಕೆ Budget 2022: ವಜ್ರಗಳು ಮತ್ತು ರತ್ನದ ಮೇಲಿನ ಆಮದು ಸುಂಕ ಶೇ.5ಕ್ಕೆ ಇಳಿಕೆ

ಡಿಜಿಟಲ್ ಆಸ್ತಿ ವರ್ಗಾವಣೆಗಳ ತೆರಿಗೆ ಸ್ವೀಕರಿಸುವವರಿಗೆ ಹೆಚ್ಚಿನ ಶೇಕಡ 30ರಷ್ಟು ತೆರಿಗೆ ವಿಧಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಹಾಗಾದರೆ ಯಾವ ಆರ್ಥಿಕ ಕ್ಷೇತ್ರಕ್ಕೆ ಯಾವೆಲ್ಲಾ ಘೋಷಣೆಗಳನ್ನು ಕೇಂದ್ರ ಬಕೆಟ್‌ನಲ್ಲಿ ಮಾಡಲಾಗಿದೆ ಎಂಬ ಬಗ್ಗೆ ತಿಳಿಯೋಣ, ಮುಂದೆ ಓದಿ...

 Budget 2022: ಆರ್ಥಿಕ ವಲಯಕ್ಕೆ ಸಿಕ್ಕಿದ್ದೇನು? ಮುಖ್ಯಾಂಶ ಇಲ್ಲಿದೆ

ಕೇಂದ್ರ ಬಜೆಟ್‌: ಆರ್ಥಿಕ ಕ್ಷೇತ್ರ

* ಕ್ಯಾಪೆಕ್ಸ್ ಗುರಿಯು 35.4 ಪ್ರತಿಶತದಷ್ಟು ವಿಸ್ತರಿಸಿದೆ. ರೂ 5.54 ಲಕ್ಷ ಕೋಟಿಯಿಂದ ರೂ 7.50 ಲಕ್ಷ ಕೋಟಿಗೆ ವಿಸ್ತಾರ ಮಾಡಲಾಗಿದೆ. ಹಣಕಾಸು ವರ್ಷದ 2023ರ ರಿಣಾಮಕಾರಿ ಕ್ಯಾಪೆಕ್ಸ್ 10.7 ಲಕ್ಷ ಕೋಟಿ ರೂ ಆಗಿದೆ.
* ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಭಾರತದ ಬೆಳವಣಿಗೆ ಅತ್ಯಧಿಕ. ನಾವು ಈಗ ಸವಾಲುಗಳನ್ನು ಎದುರಿಸಬಲ್ಲ ಪ್ರಬಲ ಸ್ಥಾನದಲ್ಲಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
* ಮೈಕ್ರೋ-ಆಲ್‌-ಇಂಕ್ಲೂಸಿವ್‌ ವೆಲ್ಫೇರ್‌, ಡಿಜಿಟಲ್ ಆರ್ಥಿಕತೆ ಮತ್ತು ಫಿನ್‌ಟೆಕ್, ತಾಂತ್ರಿಕ ಅಭಿವೃದ್ಧಿಯೊಂದಿಗೆ ಆರ್ಥಿಕತೆಯ ಸ್ಥೂಲ ಬೆಳವಣಿಗೆ
* ಎಮರ್ಜನ್ಸಿ ಕ್ರೆಡಿಟ್‌ ಲೈನ್‌ ಗ್ಯಾರಂಟಿ ಸ್ಕೀಮ್‌ (ECLGS) 50,000 ರೂ.ಗಳಿಂದ 5 ಲಕ್ಷ ಕೋಟಿ ರೂವರೆಗೆ ವಿಸ್ತರಣೆ
* ಈ ವರ್ಷದ ಬಜೆಟ್‌ನ ಪ್ರಮುಖ ಅಂಶಗಳು: ಪ್ರಧಾನಮಂತ್ರಿ ಗತಿ ಶಕ್ತಿ, ಅಂತರ್ಗತ ಅಭಿವೃದ್ಧಿ, ಉತ್ಪಾದಕತೆ ವರ್ಧನೆ, ಅವಕಾಶಗಳು, ಶಕ್ತಿ ಪರಿವರ್ತನೆ, ಹವಾಮಾನ ಕ್ರಮ, ಹೂಡಿಕೆಗಳ ಹಣಕಾಸು
* 14 ವಲಯಗಳಲ್ಲಿ ಉತ್ಪಾದಕತೆ-ಸಂಯೋಜಿತ ಪ್ರೋತ್ಸಾಹ ಯೋಜನೆಗಳು ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. 30 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಸ್ವೀಕಾರವಾಗಿದೆ.
* ಸಾರ್ವಜನಿಕ ಹೂಡಿಕೆ ಮತ್ತು ಬಂಡವಾಳ ವೆಚ್ಚದಿಂದ ಆರ್ಥಿಕ ಚೇತರಿಕೆ ಲಾಭ ಉಂಟಾಗಿದೆ. ಈ ಬಜೆಟ್ ಬೆಳವಣಿಗೆಗೆ ಉತ್ತೇಜನ ನೀಡಲಿದೆ.

 Budget 2022: ಶೀಘ್ರದಲ್ಲೇ ಎಲ್‌ಐಸಿ ಐಪಿಒ ಎಂದ ವಿತ್ತ ಸಚಿವೆ Budget 2022: ಶೀಘ್ರದಲ್ಲೇ ಎಲ್‌ಐಸಿ ಐಪಿಒ ಎಂದ ವಿತ್ತ ಸಚಿವೆ

2022ರ ಬಜೆಟ್ ಭಾರತೀಯ ಇತಿಹಾಸದಲ್ಲಿ ಬಹಳ ಮುಖ್ಯವಾದ ಸಮಯದಲ್ಲಿ ಬಂದಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ಉಂಟಾದ ಆರ್ಥಿಕ ಸಮಸ್ಯೆಯಿಂದ ಚೇತರಿಸಿಕೊಳ್ಳಲು ವಿಶ್ವವೇ ಹೆಣಗಾಡುತ್ತಿದೆ. ಕೋವಿಡ್‌ ನಿರುದ್ಯೋಗ ಹಾಗೂ ದೊಡ್ಡ ಪ್ರಮಾಣದಲ್ಲಿ ಸಂಬಳ ಕಡಿತಕ್ಕೆ ಕಾರಣವಾಗಿದೆ. ಭಾರತದಲ್ಲಿಯೂ ಇದೇ ಸಮಸ್ಯೆ ಇದೆ. ಈ ನಡುವೆ ಭಾರತದಲ್ಲಿ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ಜನರು ಪ್ರಸ್ತುತ, ವಾರ್ಷಿಕ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳು ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಆದರೆ ಆದಾಯ ತೆರಿಗೆದಾರರು ಈ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಸೂಚಿಸಿದ್ದಾರೆ. ಹಣದುಬ್ಬರವನ್ನು ನಿಭಾಯಿಸಲು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಳ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಕೊನೆಯ ಬಾರಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಪರಿಷ್ಕರಣೆ ಮಾಡಿ ಹಲವಾರು ವರ್ಷಗಳು ಆಗಿದೆ.

English summary

Budget 2022: Highlights of Economy Sectors

Budget 2022: Highlights of Economy sectors.
Story first published: Tuesday, February 1, 2022, 16:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X