ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರಗಳನ್ನು ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಪರಿಷ್ಕರಿಸಿದೆ. ಪರಿಷ್ಕರಣೆಯ ಬಳಿಕ ಹಿರಿಯ ನಾಗರಿಕರು 444 ದಿನಗಳ ಅವಧಿಯ ಎಫ್‌ಡಿಗೆ 7.75% ವರೆಗೆ ಬಡ್ಡಿ ಗಳಿಸಬಹುದು. ಆದರೆ ಸಾಮಾನ್ಯ ನಾಗರಿಕರು 7.25% ವರೆಗೆ ಬಡ್ಡಿ ಪಡೆಯಬಹುದು.
ಕೆನರಾ ಬ್ಯಾಂಕ್ ಈಗ ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಇರುವ ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಶೇಕಡ 4.00 ರಿಂದ ಶೇಕಡ 6.70 ನಡುವೆ ನೀಡುತ್ತದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಕೆನರಾ ಬ್ಯಾಂಕ್ ನೀಡುವ ಇತ್ತೀಚಿನ ಎಫ್‌ಡಿ ದರಗಳು ಅಕ್ಟೋಬರ್ 27, 2023 ರಿಂದ ಜಾರಿಗೆ ಬರುತ್ತದೆ.

ಕೆನರಾ ಬ್ಯಾಂಕ್ ಎಫ್‌ಡಿ ದರಗಳು
ಕೆನರಾ ಬ್ಯಾಂಕ್ 7 ರಿಂದ 45 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 4ರಷ್ಟು ಬಡ್ಡಿದರವನ್ನು ನೀಡುತ್ತದೆ. ಕೆನರಾ ಬ್ಯಾಂಕ್ 46 ರಿಂದ 90 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 5.25 ಬಡ್ಡಿದರವನ್ನು ನೀಡುತ್ತದೆ.
91 ಮತ್ತು 179 ದಿನಗಳ ನಡುವಿನ ಅವಧಿಯ ಡೆಪಾಸಿಟ್‌ಗಳಿಗೆ ಕೆನರಾ ಬ್ಯಾಂಕ್ 5.50% ಬಡ್ಡಿದರವನ್ನು ನೀಡುತ್ತಿದೆ. 180 ಮತ್ತು 269 ದಿನಗಳ ನಡುವೆ ಮಾಡಿದ ಡೆಪಾಸಿಟ್‌ಗಳಿಗೆ ದರವು 6.15% ಆಗಿದೆ. 270 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವು 6.25% ಆಗಿದ್ದರೆ, ಒಂದು ವರ್ಷದಲ್ಲಿ ಕೊನೆಯಾಗುವ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವು ಕೇವಲ 6.90% ಆಗಿದೆ.
444 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿಗಳ ಮೇಲೆ ಬ್ಯಾಂಕ್ ಗರಿಷ್ಠ 7.25% ಆದಾಯವನ್ನು ಪಾವತಿಸುತ್ತಿದೆ. ಕೆನರಾ ಬ್ಯಾಂಕ್ 1 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ ಡೆಪಾಸಿಟ್‌ಗೆ 6.85% ಬಡ್ಡಿದರವನ್ನು ನೀಡುತ್ತಿದೆ. 3 ವರ್ಷ ಮತ್ತು ಮೇಲ್ಪಟ್ಟ ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಶೇಕಡ 6.80 ರಷ್ಟು ಬಡ್ಡಿದರ ನೀಡುತ್ತದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದರೆ 10 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಕೆನರಾ ಬ್ಯಾಂಕ್ 6.70% ಬಡ್ಡಿದರವನ್ನು ಜಮೆ ಮಾಡುತ್ತದೆ.
ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರ
ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡ 0.50ರಷ್ಟು ಹೆಚ್ಚವರಿ ಬಡ್ಡಿದರವನ್ನು ನೀಡುತ್ತದೆ. 2 ಕೋಟಿ ಮತ್ತು 180 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗೆ ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ ಅಧಿಕ ಬಡ್ಡಿದರವನ್ನು ನೀಡುತ್ತದೆ.
444 ದಿನಗಳ ಎಫ್‌ಡಿ ಮೇಲೆ ಕೆನರಾ ಬ್ಯಾಂಕ್ 80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಹೆಚ್ಚವರಿಯಾಗಿ ಶೇಕಡ 0.60 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ ಕಾಲೇಬಲ್ ಡೆಪಾಸಿಟ್‌ಗಳ ಮೇಲೆ ಶೇಕಡ 7.85 ಮತ್ತು ನಾನ್ ಕಾಲೇಬಲ್ ಡೆಪಾಸಿಟ್‌ಗಳ ಮೇಲೆ ಶೇಕಡ 8 ರಷ್ಟು ಬಡ್ಡಿದರವನ್ನು ನೀಡುತ್ತದೆ.
ಕೆನರಾ ಬ್ಯಾಂಕ್ ನಿವ್ವಳ ಲಾಭ ಜಿಗಿತ
ಕೆನರಾ ಬ್ಯಾಂಕ್ ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಮತ್ತು ಅರ್ಧ ವರ್ಷದ ತನ್ನ ಹಣಕಾಸು ವರದಿಗಳನ್ನು ಅಕ್ಟೋಬರ್ 26ರಂದು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 2023 ರ ನಿವ್ವಳ ಲಾಭವು 3,606 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ವರ್ಷ ಅಂದರೆ ಸೆಪ್ಟೆಂಬರ್ 2022 ರ ನಿವ್ವಳ ಲಾಭವು 2,525 ಕೋಟಿ ರೂಪಾಯಿ ಆಗಿದೆ.
ಕಾರ್ಯಾಚರಣಾ ಲಾಭವು 7,616 ಕೋಟಿ ರೂಪಾಯಿಗಳಷ್ಟಿದ್ದು, ಇದು ಹಣಕಾಸು ವರ್ಷ 2024ರ ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 10.30 ರಷ್ಟು ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ಆದಾಯವು ಶೇಕಡ 19.76 ರಷ್ಟು ಏರಿಕೆಯಾಗಿ 8,903 ಕೋಟಿ ರೂಪಾಯಿಗೆ ತಲುಪಿದೆ. ಈ ನಡುವೆ ನಿವ್ವಳ ಬಡ್ಡಿಯ ಮಾರ್ಜಿನ್ 19 ಮೂಲಾಂಕ ಏರಿಕೆಯಾಗಿ, ಶೇಕಡ 3.02ಕ್ಕೆ ಸುಧಾರಿಸಿದೆ.


Click it and Unblock the Notifications