For Quick Alerts
ALLOW NOTIFICATIONS  
For Daily Alerts

ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತದೆ ಈ ಬ್ಯಾಂಕುಗಳು

|

ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಬಳಿಕ ಅದೇಷ್ಟೋ ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇನ್ನು ಹಲವಾರು ಮಂದಿ ಕೆಲಸವಿಲ್ಲದ ಕಾರಣ ಈಗಾಗಲೇ ಮಾಡಿಕೊಂಡಿರುವ ಸಾಲವನ್ನು ತೀರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಹಲವಾರು ಮಂದಿ ಅನಿವಾರ್ಯವಾಗಿ ಸಾಲವನ್ನು ಮಾಡಿಕೊಳ್ಳುತ್ತಿದ್ದಾರೆ.

 

ಕಳೆದ 18 ತಿಂಗಳುಗಳಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣದಿಂದಾಗಿ ಅಧಿಕ ಮಂದಿ ಸಾಲವನ್ನು ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅದರಲ್ಲೂ ಮುಖ್ಯವಾಗಿ ಹಲವಾರು ಮಂದಿ ಯಾವುದೇ ಸುರಕ್ಷಿತೆ ಇಲ್ಲದ ಸಾಲಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಕಳೆದ 18 ತಿಂಗಳುಗಳಲ್ಲಿ ಸಾಲ ಪಡೆಯುತ್ತಿರುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ. ಹಣಕಾಸಿನ ಒತ್ತಡದ ಹಿನ್ನೆಲೆಯಲ್ಲಿ ವೈಯಕ್ತಿಕ, ಗ್ರಾಹಕ ಮತ್ತು ದ್ವಿಚಕ್ರ ವಾಹನ ಸಾಲ ವಿಭಾಗದಲ್ಲಿ ಸಾಲದ ಬೇಡಿಕೆಗಳು ಅಧಿಕವಾಗಿದೆ ಎನ್ನಲಾಗಿದೆ.

ಮಕ್ಕಳ ಶಿಕ್ಷಣ ಭತ್ಯೆಯಡಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳ

ಇನ್ನು ಕೆಲವರು ತಮ್ಮ ದಿನ ಸಾಗಿಸಲು ಕೂಡಾ ವೈಯಕ್ತಿಕ ಸಾಲವನ್ನು ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅದೇನೇ ಆದರೂ ನಾವು ನಮ್ಮ ದಿನ ಸಾಗಿಸಲು ಸಾಲ ಮಾಡುವುದು ಅತೀ ಉತ್ತಮವಾದ ಆಯ್ಕೆಯಲ್ಲ. ಆದರೆ ಬೇರೆಲ್ಲ ಆಯ್ಕೆ ಇಲ್ಲದೆ ನೀವು ಕೊನೆಯದಾಗಿ ವೈಯಕ್ತಿಕ ಸಾಲವನ್ನೇ ಪಡೆಯಬೇಕು ಎಂದಾದರೆ ಮಾತ್ರ ವೈಯಕ್ತಿಕ ಸಾಲವನ್ನು ಪಡೆಯಿರಿ.

ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತದೆ ಈ ಬ್ಯಾಂಕುಗಳು

ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕುಗಳು

ವೈಯಕ್ತಿಕ ಸಾಲಕ್ಕೆ ಕೆಲವೊಂದು ಬ್ಯಾಂಕುಗಳು ಕಡಿಮೆ ಬಡ್ಡಿದರವನ್ನು ನೀಡುತ್ತದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇಕಡ 8.90 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಇಎಂಐ 10,355 ರೂಪಾಯಿ ಆಗಿದೆ. ಕೆನರಾ ಬ್ಯಾಂಕ್‌ ಆಫ್‌ ಇಂಡಿಯಾ ಶೇಕಡ 8.90 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಇಎಂಐ 10,355 ರೂಪಾಯಿ ಆಗಿದೆ. ಇನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಶೇಕಡ 8.95 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಇಎಂಐ 10,367 ರೂಪಾಯಿ ಆಗಿದೆ. ಇಂಡಿಯನ್‌ ಬ್ಯಾಂಕ್‌ ಶೇಕಡ 9.05 ಬಡ್ಡಿದರದಲ್ಲಿ ಸಾಲ ನೀಡುತ್ತದೆ. 10,391 ರೂಪಾಯಿ ಇಎಂಐ ಆಗಿದೆ. ಪಂಜಾಬ್‌ ಆಂಡ್‌ ಸಿಂಧ್‌ ಬ್ಯಾಂಕ್‌ ಶೇಕಡ 9.50 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಇಎಂಐ 10,501 ರೂಪಾಯಿ ಆಗಿದೆ. ಇನ್ನು ಐಡಿಬಿಐ ಬ್ಯಾಂಕ್‌ ಶೇಕಡ 9.50 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಇಎಂಐ 10, 501 ರೂಪಾಯಿ ಆಗಿದೆ. ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಶೇಕಡ 9.55 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಇಎಂಐ 10,513 ರೂಪಾಯಿ ಆಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇಕಡ 9.60 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಇಎಂಐ 10,525 ರೂಪಾಯಿ ಆಗಿದೆ. ಬ್ಯಾಂಕ್‌ ಆಫ್‌ ಬರೋಡಾ ಶೇಕಡ 10.00 ಬಡ್ಡಿದರದಲ್ಲಿ ಸಾಲ ನೀಡುತ್ತದೆ. 10,624 ರೂಪಾಯಿ ಇಎಂಐ ಆಗಿದೆ. ಯುಸಿಒ ಬ್ಯಾಂಕ್‌ ಶೇಕಡ 10.05 ಬಡ್ಡಿದರದಲ್ಲಿ ಸಾಲ ನೀಡುತ್ತದೆ. 10,636 ರೂಪಾಯಿ ಇಎಂಐ ಆಗಿದೆ.

 

ಆನ್‌ಲೈನ್‌ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಇನ್ನು ಹಲವಾರು ಬ್ಯಾಂಕುಗಳು ಕೋವಿಡ್‌ ಹಿನ್ನೆಲೆ ವಿಶೇಷ ವೈಯಕ್ತಿಕ ಸಾಲಗಳನ್ನು ನೀಡುತ್ತದೆ. ಬ್ಯಾಂಕ್‌ ಆಫ್‌ ಇಂಡಿಯಾದ ಕೋವಿಡ್‌ ವೈಯಕ್ತಿಕ ಸಾಲದ ಬಡ್ಡಿದರವು ಶೇಕಡ 6.85 ರಿಂದ ಆರಂಭವಾಗುತ್ತದೆ. ಇನ್ನು ನೀವು ಈ ಸಂದರ್ಭದಲ್ಲಿ ಸಾಲವನ್ನು ತೆಗೆದುಕೊಳ್ಳುವಾಗ ತೀರಾ ಸಂಕಷ್ಟವಿದ್ದರೆ ಮಾತ್ರ ಸಾಲವನ್ನು ಪಡೆಯಿರಿ. ಹಾಗೆಯೇ ಸಾಲ ಪಾವತಿ ಮಾಡದೇ ಸಂಕಷ್ಟಕ್ಕೆ ಸಿಲುಕುವ ಮುನ್ನವೇ ಸಾಲವನ್ನು ಪಾವತಿ ಮಾಡಿಬಿಡಿ.

ಇಲ್ಲಿ ನಾವು ನೀಡಿರುವ ವೈಯಕ್ತಿಕ ಸಾಲದ ಬಡ್ಡಿದರದ ಮಾಹಿತಿಯು ಯಾವ ಬ್ಯಾಂಕ್‌ಗಳ ವೆಬ್‌ಸೈಟ್‌ನಲ್ಲಿ ನೀಡಲಾಗಿದೆಯೋ ಅದನ್ನು ಉಲ್ಲೇಖ ಮಾಡಲಾಗಿದೆ. ಇನ್ನು ಬ್ಯಾಂಕುಗಳ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಆ ಬ್ಯಾಂಕುಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ. ಇನ್ನು ಬ್ಯಾಂಕುಗಳ ಕೆಲವೊಂದು ನಿಯಮಗಳ ಕಾರಣದಿಂದಾಗಿ ಈ ಬಡ್ಡಿದರವು ಬದಲಾಗುವ ಸಾಧ್ಯತೆಯೂ ಇದೆ.

English summary

Central Bank of India, Union Bank offer the lowest rates on personal loans

Union Bank, Central Bank of India offer the lowest rates on personal loans, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X