ಪ್ರಸ್ತುತ ದಿನ ನಿತ್ಯದ ಎಲ್ಲ ಕಾರ್ಯಗಳಿಗೆ ನಾವು ಡಿಜಿಟಲ್ ಪಾವತಿಯನ್ನು ಬಳಕೆ ಮಾಡುತ್ತೇವೆ. ಅಂಗಡಿಗಳಲ್ಲಿ ಏನು ಖರೀದಿ ಮಾಡಿದರೂ ಕೂಡಾ ನಾವು ಅದಕ್ಕೆ ಡಿಜಿಟಲ್ ಪಾವತಿ ಮಾಡುತ್ತೇವೆ. ಪ್ರತಿ ದಿನವೂ ಡಿಜಿಟಲ್ ಪಾವತಿ ಬಳಕೆ ಅಧಿಕವಾಗುತ್ತಾ ಸಾಗುತ್ತಿದೆ. ಹೀಗಿರುವಾಗ ನಾವು ಸಾಮಾನ್ಯವಾಗಿ ಡಿಜಿಟಲ್ ಪಾವತಿ ವೇಳೆ ನಡೆಯುವ ವಂಚನೆಗಳ ಬಗ್ಗೆಯೂ ತಿಳಿದಿರಬೇಕಾಗುತ್ತದೆ.
ಇಂತಹ ವಂಚನೆಗಳಿಂದ ನಮ್ಮನ್ನು ನಾವು ರಕ್ಷಣೆ ಮಾಡಬೇಕಾದರೆ, ನಾವು ಎಂದಿಗೂ ಕೂಡಾ ವಿಶಿಷ್ಟ, ವಿಭಿನ್ನವಾದ ಪಾಸ್‌ವರ್ಡ್‌ಗಳನ್ನು ನಮ್ಮ ಪಾವತಿ ಆಪ್‌ಗೆ ಹಾಕುವುದು ಮುಖ್ಯವಾಗುತ್ತದೆ. ಹಾಗೆಯೇ ಎರಡು ಹಂತದ ಅಥೆಂಟಿಫಿಕೇಷನ್ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಯಾವುದೇ ವ್ಯಕ್ತಿಯೊಂದಿಗೂ ವೈಯಕ್ತಿಕ ಹಾಗೂ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ.

ವಂಚನೆ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ
ಹಾಗೆಯೇ ಗ್ರಾಹಕರು ಆಗಾಗೇ ತಮ್ಮ ಖಾತೆಯಲ್ಲಿ ನಡೆಯುವ ವಹಿವಾಟುಗಳ ಬಗ್ಗೆ ಪರಿಶೀಲನೆ ಮಾಡುತ್ತಿರಬೇಕಾಗುತ್ತದೆ. ಯಾವುದೇ ವಹಿವಾಟಿನ ಬಗ್ಗೆ ಸಂದೇಹ ಉಂಟಾದರೆ ಅದರ ಬಗ್ಗೆ ಹಣಕಾಸು ಸಂಸ್ಥೆ (ಬ್ಯಾಂಕ್) ಅಥವಾ ಪಾವತಿ ಸೇವೆ ನೀಡುವವರಿಗೆ ದೂರನ್ನು ಅಥವಾ ರಿಪೋರ್ಟ್ ಮಾಡಬೇಕಾಗುತ್ತದೆ. ಡಿಜಿಟಲ್ ಪಾವತಿ ಹೆಚ್ಚಾಗುತ್ತಾ ಹೋದಂತೆ ವಂಚನೆಗಳು ಕೂಡಾ ಹೆಚ್ಚಳವಾಗುತ್ತಿದೆ.
ಡಿಜಿಟಲ್ ಪಾವತಿ ವೇಳೆ ವಂಚನೆಯಿಂದ ತಪ್ಪಿಸಿಕೊಳ್ಳಲು, ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಮೊದಲನೆಯದಾಗಿ, ನಿಮ್ಮ ಮೊಬೈಲ್ ಮತ್ತು ಅಪ್ಲಿಕೇಷನ್ ಅನ್ನು ಅಪ್‌ಡೇಟ್ ಮಾಡುತ್ತಿರಬೇಕಾಗುತ್ತದೆ. ಎರಡನೆಯದಾಗಿ, ವಿಶ್ವಾಸಾರ್ಹ ಮತ್ತು ಉತ್ತಮ ಸುರಕ್ಷತೆಯನ್ನು ಹೊಂದಿರುವ ಆಪ್‌ಗಳನ್ನು ಮಾತ್ರ ನೀವು ಬಳಕೆ ಮಾಡಬೇಕಾಗುತ್ತದೆ.
ವಂಚನೆಗಳ ಬಗ್ಗೆ ನೀವು ಅತೀ ಎಚ್ಚರವಾಗಿರಬೇಕಾಗುತ್ತದೆ. ಯಾವುದೇ ವೆಬ್‌ಸೈಟ್, ಆನ್‌ಲೈನ್ ಆಪ್‌ಗಳಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸುವ ವೇಳೆ ಆ ಆಪ್ ಅಧಿಕೃತವೇ ಎಂದು ತಿಳಿದುಕೊಳ್ಳಿ. ಯಾವುದೇ ಪಾವತಿ ಮಾಡುವುದಕ್ಕೂ ಮುನ್ನ ವಹಿವಾಟು ಮಾಹಿತಿಯನ್ನು ಪರಿಶೀಲನೆ ಮಾಡಿಕೊಳ್ಳಿ. ಪಾವತಿ ಮೊತ್ತ ಮತ್ತು ಸ್ವೀಕರಿಸುವವರ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಡಿಜಿಟಲ್ ಪಾವತಿಗಳನ್ನು ಮಾಡುವ ಸಂದರ್ಭದಲ್ಲಿ ಎಂದಿಗೂ ನೀವು ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಕೆ ಮಾಡಬೇಡಿ. ಬಳಕೆ ಮಾಡುವುದಾದರೂ ನಿಮ್ಮ ಇಂಟರ್ನೆಟ್ ಟ್ರಾಫಿಕ್ ಅನ್ನು ಎನ್‌ಕ್ರಿಪ್ಟ್ ಮಾಡಲು ಮತ್ತು ನಿಮ್ಮ ಡೇಟಾವನ್ನು ಹ್ಯಾಕರ್‌ಗಳಿಂದ ರಕ್ಷಿಸಲು ವರ್ಚುವಲ್ ಖಾಸಗಿ ನೆಟ್‌ವರ್ಕ್ (VPN) ಅನ್ನು ಬಳಸುವುದು ಮುಖ್ಯವಾಗುತ್ತದೆ.
ಈ ಸಲಹೆಗಳನ್ನು ಅನುಸರಿಸುವ ಮೂಲಕ, ಡಿಜಿಟಲ್ ಪಾವತಿ ವಂಚನೆಯನ್ನು ತಡೆಯಲು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಸಹಾಯವಾಗಬಹುದು. ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಕೆಲವು ವಂಚನೆ ಬಗ್ಗೆಯೂ ಮಾಹಿತಿ ನೀಡಿದೆ. ಈ ಬಗ್ಗೆ ತಿಳಿದುಕೊಂಡು ಬಳಕೆದಾರರು ಜಾಗರೂಕರಾಗಿರಬೇಕು.
ಡಿಜಿಟಲ್ ಪಾವತಿ ವೇಳೆ ಈ ತಪ್ಪು ಮಾಡದಿರಿ
* ನಿಮ್ಮ ಬ್ಯಾಂಕ್ ಅಥವಾ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಯಾವುದೇ ಮಾಹಿತಿಯನ್ನು ಕೇಳಿದರೆ ಮಾಹಿತಿಯನ್ನು ನೀವು ನೀಡದಿರಿ.
* ಡೆಬಿಟ್ ಕಾರ್ಡ್ ಪಿನ್ ಮತ್ತು ಯುಪಿಐ ಪಿನ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ
* ರಿಮೋಟ್ ಆಕ್ಸಸ್/ ಸ್ಕ್ರೀನ್ ಶೇರಿಂಗ್ ಆಪ್‌ಗಳನ್ನು ವಂಚಕರು ಬಳಕೆ ಮಾಡಬಹುದು, ಅದಕ್ಕಾಗಿ ಎಂದಿಗೂ ಕೂಡಾ ಸ್ಕ್ರೀನ್ ಶೇರಿಂಗ್ ಆಪ್ ಬಳಕೆ ಮಾಡುವಾಗ ಎಚ್ಚರವಾಗಿರಿ. ಹಣಕಾಸು ವಹಿವಾಟು ನಡೆಸುವಾಗ ಸ್ಟ್ರೀನ್ ಶೇರಿಂಗ್ ಆಪ್ ಬಳಕೆ ಮಾಡಬೇಡಿ
* ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವಹಿವಾಟಿನ ವಿವರಗಳನ್ನು ಎಂದಿಗೂ ಪೋಸ್ಟ್ ಮಾಡಬೇಡಿ
* ಕರೆ ಮಾಡಿ ಮೂರನೇ ವ್ಯಕ್ತಿಯೊಂದಿಗೆ ಮಾತನಾಡುವಾಗ ವಹಿವಾಟು ನಡೆಸುವುದನ್ನು ತಪ್ಪಿಸಿ
ಡಿಜಿಟಲ್ ಪಾವತಿ: ಇದನ್ನು ಖಂಡಿತ ಮಾಡಿ
* ನಿಮ್ಮ ಬ್ಯಾಂಕ್ ಖಾತೆಗೆ ರಿಜಿಸ್ಟಾರ್ ಮಾಡಲಾಗಿರುವ ಅಪ್‌ಡೇಟೆಡ್ ಮೊಬೈಲ್ ಸಂಖ್ಯೆ ಬಳಕೆ ಮಾಡಿ
* ಪಾವತಿ ಸಂದರ್ಭದಲ್ಲಿ ಮಾತ್ರ ಯುಪಿಐ ಪಿನ್ ಅನ್ನು ಬಳಕೆ ಮಾಡಿ
* ವಹಿವಾಟು ಮಾಡುವಾಗ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಪರಿಶೀಲನೆ ಮಾಡಿ
* ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಬ್ಯಾಂಕ್‌ನ ಸಂಪರ್ಕ ವಿವರಗಳನ್ನು ಹುಡುಕಿ
* ದೂರುಗಳಿದ್ದಲ್ಲಿ, ಬಳಕೆದಾರರು ಅದನ್ನು ಬ್ಯಾಂಕ್ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ವರದಿ ಮಾಡಬೇಕು


Click it and Unblock the Notifications