For Quick Alerts
ALLOW NOTIFICATIONS  
For Daily Alerts

ಎಚ್ಚರ: ಹಬ್ಬದ ಸಂದೇಶ ನೆಪದಲ್ಲಿ ಬ್ಯಾಂಕಿಂಗ್ ಮಾಹಿತಿ ಕದಿಯುತ್ತೆ ಚೀನಾ ವೆಬ್‌ಸೈಟ್!

|

ದೀಪಾವಳಿ ಮುಂದಿನ ವಾರದಲ್ಲಿಯೇ ಆರಂಭವಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ನಾವು ನಮ್ಮ ಪ್ರೀತಿಪಾತ್ರರಿಗೆ, ಕುಟುಂಬಸ್ಥರಿಗೆ ಉಡುಗೊರೆ ನೀಡುವುದು, ವಾಟ್ಸಾಪ್ ಮೂಲಕ ಶುಭಾಶಯ ಸಂದೇಶಗಳನ್ನು ಕಳುಹಿಸುವುದು ಸಹಜವಾಗಿದೆ. ಆದರೆ ದೀಪಾವಳಿ ಸಂದೇಶ ನೆಪನಲ್ಲಿ ಚೀನಾದ ವೆಬ್‌ಸೈಟ್ ಒಂದು ಬ್ಯಾಂಕಿಂಗ್ ಮಾಹಿತಿ ಕದಿಯುತ್ತಿದೆ.

ಈ ಹಬ್ಬದ ಸೀಸನ್‌ ಅನ್ನೇ ವಂಚಕರು ತಮ್ಮ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಕಲಿ ದೀಪಾವಳಿ ಕೊಡುಗೆಗಳು ಮತ್ತು ಸಂದೇಶಗಳ ಮೂಲಕ ಜನರನ್ನು ವಂಚನೆ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ತಂಡ ಎಚ್ಚರಿಕೆ ನೀಡಿದೆ.

ಚೀನಾ ಸಾಲ ಆಪ್ ಪ್ರಕರಣ: 46.67 ಕೋಟಿ ವಶಕ್ಕೆ ಪಡೆದ ಇಡಿಚೀನಾ ಸಾಲ ಆಪ್ ಪ್ರಕರಣ: 46.67 ಕೋಟಿ ವಶಕ್ಕೆ ಪಡೆದ ಇಡಿ

ಭಾರತೀಯ ಸರ್ಕಾರದ ಸೈಬರ್ ಸೆಕ್ಯುರಿಟಿ ತಂಡವು ನೀಡಿದ ಸಲಹೆಯ ಪ್ರಕಾರ, ಕೆಲವು ದೀಪಾವಳಿಯ ಶುಭಾಶಯ ಸಂದೇಶಗಳು ವೈರಲ್ ಆಗಿದೆ. ಈ ಸಂದೇಶದ ಮೂಲಕವೇ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯಲಾಗುತ್ತಿದೆ. ವೈರಲ್ ಸಂದೇಶಗಳಲ್ಲಿನ ಲಿಂಕ್‌ ಅನ್ನು ಕ್ಲಿಕ್ ಮಾಡಿದರೆ ಚೀನಿ ವೆಬ್‌ಸೈಟ್ ನಿಮ್ಮ ಬ್ಯಾಂಕಿಂಗ್ ವಿವರವನ್ನು ಕದಿಯುತ್ತದೆ. ಹಾಗಾದರೆ ನಾವು ಕ್ಲಿಕ್ ಮಾಡುವ ಲಿಂಕ್ ವಂಚಕರ ಜಾಲಕ್ಕೆ ನಮ್ಮನ್ನು ಎಳೆಯುವ ಲಿಂಕ್ ಎಂದು ನಾವು ತಿಳಿಯುವುದು ಹೇಗೆ? ಇಲ್ಲಿದೆ ವಿವರ ಮುಂದೆ ಓದಿ.....

 ನಕಲಿ ಲಿಂಕ್ ಪತ್ತೆಹಚ್ಚುವುದು ಹೇಗೆ?

ನಕಲಿ ಲಿಂಕ್ ಪತ್ತೆಹಚ್ಚುವುದು ಹೇಗೆ?

ನಾವು ನಕಲಿ ಲಿಂಕ್ ಅನ್ನು ಹೇಗೆ ಪತ್ತೆಹಚ್ಚಬಹುದು ಎಂದು ಕೂಡಾ ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ತಂಡ ಮಾಹಿತಿ ನೀಡಿದೆ. ಲಿಂಕ್ .cn, .xyz ಅಥವಾ .top ಅನ್ನು ಹೊಂದಿದ್ದರೆ ಅದು ನಕಲಿ ಲಿಂಕ್ ಆಗಿದೆ. ಅದನ್ನು ಎಂದಿಗೂ ಕೂಡಾ ಕ್ಲಿಕ್ ಮಾಡಬೇಡಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇನ್ನು ಕಳೆದ ಕೆಲವು ದಿನಗಳಿಂದ ಈ ಸಂದೇಶವು ಹರಿದಾಡುತ್ತಿದೆ. ಈ ಲಿಂಕ್ ಅನ್ನು ನಾವು ನೋಡಿದಾಗ ಜನಪ್ರಿಯ ಭಾರತೀಯ ಆಭರಣ ಬ್ರ್ಯಾಂಡ್ ತನಿಷ್ಕ್‌ನ ಲಿಂಕ್‌ನಂತೆಯೇ ಕಾಣುತ್ತದೆ.

 ಸರ್ಕಾರ ಹೇಳುವುದು ಏನು?

ಸರ್ಕಾರ ಹೇಳುವುದು ಏನು?

"ನಕಲಿ ಸಂದೇಶಗಳು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ (ವಾಟ್ಸಾಪ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್ ಇತ್ಯಾದಿ) ಹರಿದಾಡುತ್ತಿದೆ. ಹಬ್ಬದ ಸಂದರ್ಭದಲ್ಲಿ ಬಳಕೆದಾರರಿಗೆ ಉಡುಗೊರೆಯನ್ನು ನೀಡಲಾಗುತ್ತದೆ ಮತ್ತು ಬಹುಮಾನ ಲಭ್ಯವಾಗಲಿದೆ ಎಂದು ಆಮಿಷವನ್ನು ಈ ಸಂದೇಶದಲ್ಲಿ ಒಡ್ಡಲಾಗುತ್ತಿದೆ. ಇದು ಹೆಚ್ಚಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. ನೀವು ಈ ಲಿಂಕ್ ಅನ್ನು ನಿಮ್ಮ ವಾಟ್ಸಾಪ್/ಟೆಲಿಗ್ರಾಮ್/ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಸ್ನೇಹಿತರಿಗೆ ಹಂಚಿಕೊಳ್ಳಿ ಎಂದು ಹೇಳಲಾಗುತ್ತದೆ," ಎಂದು ಸರ್ಕಾರದ ಸೈಬರ್ ತಂಡ ತಿಳಿಸಿದೆ.

 ಈ ಸ್ಕ್ಯಾಮ್ ಯಾವ ರೀತಿ ನಡೆಯುತ್ತದೆ?

ಈ ಸ್ಕ್ಯಾಮ್ ಯಾವ ರೀತಿ ನಡೆಯುತ್ತದೆ?

ಮೊದಲು ನಿಮಗೆ ಈ ಲಿಂಕ್ ಬರಲಿದೆ. ಗ್ರೂಪ್‌ಗಳಲ್ಲಿ ವೈರಲ್ ಆಗಿ ನಿಮಗೂ ಬರಲಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಜನಪ್ರಿಯ ಬ್ರಾಂಡ್‌ನ ನಕಲಿ ವೆಬ್‌ಸೈಟ್‌ ತೆರೆಯಲಿದೆ. ವಿಶೇಷ ಉಡುಗೊರೆಯನ್ನು ಪಡೆಯುವ ಸಲುವಾಗಿ ವಿವರವನ್ನು ಭರ್ತಿ ಮಾಡಲು ಕೇಳಲಾಗುತ್ತದೆ. ಈ ವಿಶೇಷ ಉಡುಗೊರೆಯನ್ನು ಪಡೆಯಲು ನಿಮ್ಮ ಕಾಂಟಾಕ್ಟ್, ಮೆಸೇಜ್, ಕರೆಗೆ ಆಕ್ಸಸ್ ನೀಡುವಂತೆ ಕೇಳಲಾಗುತ್ತದೆ. ಮಾಹಿತಿಯನ್ನು ಸ್ವೀಕರಿಸಿದ ನಂತರ, ವಿಶೇಷ ದೀಪಾವಳಿ ಉಡುಗೊರೆಯನ್ನು ಪಡೆಯಲು ನಿರ್ದಿಷ್ಟ ಸಂಖ್ಯೆಯ ಸ್ನೇಹಿತರು ಮತ್ತು ಅವರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಸಂದೇಶವನ್ನು ಹಂಚಿಕೊಳ್ಳಲು ಕೂಡಾ ಹೇಳಲಾಗುತ್ತದೆ.

 ಈ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?

ಈ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?

ಅಂತಹ ವಂಚನೆಗಳಿಂದ ಸುರಕ್ಷಿತವಾಗಿರಲು, ನೀವು ಎಂದಿಗೂ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ವಿಶೇಷವಾಗಿ ಆನ್‌ಲೈನ್‌ನಲ್ಲಿ ಪರಿಶೀಲಿಸದ ಮೂಲದಿಂದ ಲಿಂಕ್ ಅನ್ನು ಸ್ವೀಕರಿಸಿದಾಗ ಅದರಲ್ಲಿ ಬ್ಯಾಂಕಿಂಗ್ ವಿವರ ಹಂಚಿಕೊಳ್ಳಬಾರದು. ಯಾವುದೇ ವೆಬ್‌ಸೈಟ್ ತೆರೆಯುವ ಮೊದಲು, ನೀವು URL ಅನ್ನು ಎಚ್ಚರಿಕೆಯಿಂದ ಓದಬೇಕು. ಅನುಮಾಸ್ಪದವಾಗಿರುವ ಲಿಂಕ್ ಅನ್ನು ಎಂದಿಗೂ ಕ್ಲಿಕ್ ಮಾಡಬೇಡಿ.

Best Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನBest Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

English summary

Deepavali 2022: Chinese Website Stealing your Bank Details, Follow this to Stay Safe

Deepavali 2022: Diwali wish message scam, Chinese Website Stealing your Bank Details, Follow this to Stay Safe. read on.
Story first published: Friday, October 21, 2022, 16:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X