For Quick Alerts
ALLOW NOTIFICATIONS  
For Daily Alerts

Free Petrol : ದೀಪಾವಳಿ ಧಮಾಕ: 53 ಲೀಟರ್ ಪೆಟ್ರೋಲ್ ಉಚಿತ, ಹೇಗಪ್ಪ..!?

|

ದಿನದಿಂದ ದಿನಕ್ಕೆ ಪೆಟ್ರೋಲ್ ದರ ಏರಿಕೆಯಾಗಿ ಪ್ರಸ್ತುತ ಗಗನಕ್ಕೆ ಮುಟ್ಟಿದೆ. ಹಲವಾರು ದಿನಗಳಿಂದ ಇಂಧನ ದರ ಸ್ಥಿರವಾಗಿದೆ, ಆದರೆ ಈಗಾಗಲೇ ಭಾರೀ ದುಬಾರಿಯಾಗಿದೆ. ಈ ನಡುವೆ ಉಚಿತವಾಗಿ ಪೆಟ್ರೋಲ್ ಸಿಕ್ಕರೆ ಬಿಡುತ್ತೀರಾ? ಈ ಹಬ್ಬದ ಸಂದರ್ಭದಲ್ಲಿ ಈ ಒಂದು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಿಗೆ ಬಂಪರ್ ಧಮಾಕವಿದೆ.

 

ಹೌದು ಈ ಒಂದು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 53 ಲೀಟರ್‌ವರೆಗೆ ಪೆಟ್ರೋಲ್‌ ಅನ್ನು ಉಚಿತವಾಗಿ ಪಡೆಯಬಹುದು. ಈ ವರ್ಷದಲ್ಲಿ ಬಿಡುಗಡೆಯಾದ ಹಲವಾರು ಕ್ರೆಡಿಟ್ ಕಾರ್ಡ್‌ಗಳಲ್ಲಿ ಈ ಆಫರ್ ಲಭ್ಯವಿದೆ. ಬೇರೆ ಉಡುಗೊರೆ, ಆಫರ್‌ಗಳ ಜೊತೆಗೆ ಉಚಿತ ಪೆಟ್ರೋಲ್‌ ಪಡೆಯುವ ಆಫರ್ ಕೂಡಾ ಇದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 53 ಲೀಟರ್‌ವರೆಗೆ ಉಚಿತ ಪೆಟ್ರೋಲ್ ಪಡೆಯುವ ಆಫರ್ ಇದೆ.

ಹೊಸದಾಗಿ ಜಾರಿಯಾದ 7 ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ತಿಳಿಯಿರಿಹೊಸದಾಗಿ ಜಾರಿಯಾದ 7 ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ತಿಳಿಯಿರಿ

ಆಕ್ಸಿಸ್ ಬ್ಯಾಂಕ್ ಇಂಡಿಯನ್ ಆಯಿಲ್ ಸಹಭಾಗಿತ್ವದಲ್ಲಿ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಅನ್ನು ರಚಿಸಿದೆ. ಈ ಕ್ರೆಡಿಟ್ ಕಾರ್ಡ್‌ ಬಳಕೆದಾರರು ಹಲವಾರು ಕೊಡುಗೆಗಳನ್ನು ಪಡೆಯುತ್ತಾರೆ. ಆ ಕೊಡುಗೆಗಳಲ್ಲಿ ಉಚಿತ ಪೆಟ್ರೋಲ್ ಕೂಡಾ ಒಂದಾಗಿದೆ. ಆಕ್ಸಿಸ್ ಬ್ಯಾಂಕ್‌ನ ಈ ಕ್ರೆಡಿಟ್ ಕಾರ್ಡ್ ಬಳಕೆದಾರರು ವರ್ಷಕ್ಕೆ 53 ಲೀಟರ್ ಇಂಧನವನ್ನು ಉಚಿತವಾಗಿ ಪಡೆಯಬಹುದು ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಆದರೆ ಪೆಟ್ರೋಲ್ ದುಬಾರಿಯಾಗಿರುವಾಗ ಇಷ್ಟು ಪ್ರಮಾಣದಲ್ಲಿ ಇಂಧನವನ್ನು ಉಚಿತವಾಗಿ ಪಡೆಯುವುದು ಹೇಗೆ?, ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 53 ಲೀಟರ್ ಪೆಟ್ರೋಲ್ ಉಚಿತ ಹೇಗೆ?

53 ಲೀಟರ್ ಪೆಟ್ರೋಲ್ ಉಚಿತ ಹೇಗೆ?

ಪ್ರಸ್ತುತ ಪೆಟ್ರೋಲ್ ಬೆಲೆ ದುಬಾರಿಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರವು 109.66 ರೂಪಾಯಿ ಆಗಿದೆ. ಆದರೆ ಆಕ್ಸಿಸ್ ಬ್ಯಾಂಕ್‌ನ ಪೆಟ್ರೋಲ್ ಬೆಲೆ ಲೀಟರ್‌ಗೆ 70 ರೂಪಾಯಿಯಾಗಿದೆ. ಈ ಲೆಕ್ಕಾಚಾರದ ಪ್ರಕಾರ ನೀವು ಫುಲ್ 53 ಲೀಟರ್‌ನಷ್ಟು ಉಚಿತವಾಗಿ ಪೆಟ್ರೋಲ್ ಅನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿಕೊಂಡಿದೆ. ಒಂದು ಲೀಟರ್ ಪೆಟ್ರೋಲ್‌ನಲ್ಲೇ ನಾವು ಸುಮಾರು 40 ರೂಪಾಯಿಯಷ್ಟು ಉಳಿತಾಯ ಮಾಡಲು ಸಾಧ್ಯವಾಗಲಿದೆ. ಆದರೆ ನಾವು ಇದಕ್ಕಾಗಿ ಆಕ್ಸಿಸ್ ಬ್ಯಾಂಕ್‌ನ ಇಂಡಿಯನ್ ಆಯಿಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಬೇಕು ಮತ್ತು ಇಂಡಿಯನ್ ಆಯಿಲ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಬೇಕಾಗುತ್ತದೆ.

 ಈ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ

ಈ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ

ಇಂಡಿಯನ್ ಆಯಿಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಪಡೆಯಲು ರೂ.500 ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಎರಡನೇ ವರ್ಷದಿಂದ ವಾರ್ಷಿಕ ರೂ.500 ಶುಲ್ಕ ಪಾವತಿಸಬೇಕು. ವಾರ್ಷಿಕವಾಗಿ ರೂ.50,000ಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸಿದರೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಇನ್ನು ಈ ಕ್ರೆಡಿಟ್ ಕಾರ್ಡ್‌ನಿಂದ ಪಾವತಿಗಳನ್ನು ಮಾಡಿದರೆ ಮತ್ತು ಇಎಂಐ ಪಾವತಿಸಿದರೆ ವಾರ್ಷಿಕವಾಗಿ ಶೇಕಡ 49.36ರಷ್ಟು ಬಡ್ಡಿಯನ್ನು ಪಾವತಿ ಮಾಡಲಾಗುತ್ತದೆ. ಹಾಗಾಗಿ ನೀವು ಇಎಂಐ ಪಾವತಿ ಮಾಡದಿರುವುದು ಉತ್ತಮ.

 ಈ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ?
 

ಈ ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ?

ಇಂಡಿಯನ್ ಆಯಿಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಅನ್ನು ನೀವು ಕೂಡಾ ಪಡೆಯಬೇಕಾದರೆ ನೀವು ಸಮೀಪದ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್ ಮೂಲಕವು ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಅರ್ಜಿ ಸಲ್ಲಿಕೆ ಮಾಡಲು ಪ್ಯಾನ್ ಕಾರ್ಡ್, ಫಾರ್ಮ್ 60, ವಿಳಾಸ ಪುರಾವೆ, ಗುರುತಿನ ಪುರಾವೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದಕ್ಕೆ ವಯೋಮಿತಿ ಕೂಡಾ ಇದೆ. 18 ವರ್ಷದಿಂದ 70 ವರ್ಷದೊಳಗಿನವರು ಮಾತ್ರ ಈ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಿದೆ. 15 ವರ್ಷ ಮೇಲ್ಪಟ್ಟವರಿಗೆ ಆಡ್ ಆನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.

ಈ ಕ್ರೆಡಿಟ್ ಕಾರ್ಡ್‌ಗಿಲ್ಲ ಯುಪಿಐ ವಹಿವಾಟು ಶುಲ್ಕ!ಈ ಕ್ರೆಡಿಟ್ ಕಾರ್ಡ್‌ಗಿಲ್ಲ ಯುಪಿಐ ವಹಿವಾಟು ಶುಲ್ಕ!

English summary

Deepavali 2022: Indian Oil Axis Bank Credit Card Users Get 53 Litre Free Petrol, Check Details

Deepavali 2022: In this festival season many credit card companies released new credit with special benefits. Indian Oil Axis Bank Credit Card Users Get 53 Litre Free Petrol, Check Details. ದೀಪಾವಳಿ 2022:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X