For Quick Alerts
ALLOW NOTIFICATIONS  
For Daily Alerts

ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ದಾರರಿಗೆ ಟೂ ವ್ಹೀಲರ್ ಖರೀದಿಗೆ ಇಎಂಐ ಸ್ಕೀಮ್

|

ಇನ್ನೇನು ಹಬ್ಬದ ಸೀಸನ್ ಹತ್ತಿರ ಬರುತ್ತಿದೆ. ಮತ್ತೆ ಡಿಸ್ಕೌಂಟ್ ಗಳು, ಆಫರ್ ಗಳು ಬರುತ್ತಿವೆ. ಇದೀಗ ಫೆಡರಲ್ ಬ್ಯಾಂಕ್ ಗ್ರಾಹಕರಿಗಾಗಿ ಸಂಪೂರ್ಣವಾಗಿ ಕಾಗದರಹಿತವಾದ, ಡೆಬಿಟ್ ಕಾರ್ಡ್ ಗೆ ಲಿಂಕ್ ಆದ ದ್ವಿಚಕ್ರ ವಾಹನ ಸಾಲ ಸೌಲಭ್ಯ ನೀಡಲಾಗುತ್ತಿದೆ. ಟೂ ವ್ಹೀಲರ್ ಖರೀದಿ ಮಾಡುವುದಕ್ಕೆ ಇಎಂಐನಲ್ಲಿ ಸಾಲ ದೊರೆಯಲಿದೆ.

 

ಹರ್ಯಾಣದಲ್ಲಿನ ಉತ್ಪಾದನೆ ಘಟಕ ಮುಚ್ಚಲಿದೆ ಹಾರ್ಲೆ ಡೇವಿಡ್ ಸನ್

ಯಾರ ಬಳಿ ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಇರುತ್ತದೋ ಅಂಥವರು ಕನಿಷ್ಠ 1 ರುಪಾಯಿ ಪಾವತಿಸಿ, ದ್ವಿಚಕ್ರ ವಾಹನ ಬುಕ್ ಮಾಡಬಹುದು. ಬಾಕಿ ಮೊತ್ತವನ್ನು ಡೆಬಿಟ್ ಕಾರ್ಡ್ ಇಎಂಐ ಮೂಲಕವಾಗಿ ಪಾವತಿಸಬಹುದು. ಈ ಇಎಂಐ ಸ್ಕೀಮ್ ಹೋಂಡಾ ಮೋಟಾರ್ ಸೈಕಲ್, ಟಿವಿಎಸ್ ಮೋಟಾರ್ ಹಾಗೂ ಹೀರೋ ಮೋಟಾರ್ ಕಾರ್ಪ್ ಬ್ರ್ಯಾಂಡ್ ಗಳ ಬೈಕ್ ಖರೀದಿಗೆ ಅನ್ವಯಿಸುತ್ತದೆ.

ಬಡ್ಡಿ ದರ ಎಷ್ಟು?

ಬಡ್ಡಿ ದರ ಎಷ್ಟು?

500cc ಸಾಮರ್ಥ್ಯದ ಒಳಗಿನ ದ್ವಿಚಕ್ರ ವಾಹನಗಳಿಗೆ ಬಡ್ಡಿ ದರವು ವಾರ್ಷಿಕ 17% ಆಗುತ್ತದೆ. ಮಾಮೂಲಿಯಂತೆ ದ್ವಿಚಕ್ರ ವಾಹನ ಖರೀದಿಯನ್ನು ಸಾಲ ಮಾಡಿ, ಖರೀದಿಸಿದರೆ ಬ್ಯಾಂಕ್ ಹೆಸರಲ್ಲಿ ಅಡಮಾನ ಮಾಡಬೇಕಾಗುತ್ತದೆ. ಆದರೆ ಈ ಸಾಲಕ್ಕೆ ಅಡಮಾನದ ಅಗತ್ಯವಿಲ್ಲ. ಜತೆಗೆ ಈ ಸ್ಕೀಮ್ ನಲ್ಲಿ ಯಾವುದೇ ಪ್ರೊಸೆಸಿಂಗ್ ಶುಲ್ಕ ಇಲ್ಲ. ಇನ್ನು ಅವಧಿಯನ್ನು ಗಮನಿಸುವುದಾದರೆ 3, 6, 9 ಹಾಗೂ ಗರಿಷ್ಠ 12 ತಿಂಗಳ ಕಾಲ ಮರುಪಾವತಿಗೆ ಅವಕಾಶ ನೀಡಲಾಗುತ್ತದೆ.

ಅರ್ಹತಾ ಮಾನದಂಡ ಏನು?

ಅರ್ಹತಾ ಮಾನದಂಡ ಏನು?

ಈ ಹೊಸ ಸ್ಕೀಮ್ ಫೆಡರಲ್ ಬ್ಯಾಂಕ್ ನ ಆಯ್ದ ಡೆಬಿಟ್ ಕಾರ್ಡ್ ದಾರರಿಗೆ ಅನ್ವಯವಾಗುತ್ತದೆ. ಅದು ಅವರ ಮರುಪಾವತಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಅರ್ಹತೆಯ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬೇಕಿದ್ದಲ್ಲಿ DCEMI ಫಾರ್ಮಾಟ್ ನಲ್ಲಿ ಎಸ್ಸೆಮ್ಮೆಸ್ ಅನ್ನು 5676762ಗೆ ಕಳುಹಿಸಬೇಕು ಅಥವಾ 7812900900ಗೆ ಮಿಸ್ಡ್ ಕಾಲ್ ನೀಡಬೇಕು. ಇನ್ನು ಯಾರೆಲ್ಲ ಫೆಡರಲ್ ಬ್ಯಾಂಕ್ ಖಾತೆದಾರರು ಈ ಹಬ್ಬದ ಸೀಸನ್ ನಲ್ಲಿ ಡೆಬಿಟ್ ಕಾರ್ಡ್ ಇಎಂಐ ಬಳಸಿ ಹೋಂಡಾ ಮೋಟಾರ್ ಸೈಕಲ್ ಡೀಲರ್ ಷಿಪ್ ನಿಂದ ಟೂ ವ್ಹೀಲರ್ ಖರೀದಿ ಮಾಡುತ್ತಾರೋ ಅವರಿಗೆ 5% ಕ್ಯಾಶ್ ಬ್ಯಾಕ್ ದೊರೆಯುತ್ತದೆ.

ಈ ಸಾಲ ಪಡೆಯುವುದು ಲಾಭವೆ?
 

ಈ ಸಾಲ ಪಡೆಯುವುದು ಲಾಭವೆ?

ಈ ಇಎಂಐ ವಾಹನ ಸಾಲವು ಪರ್ಸನಲ್ ಲೋನ್ ರೀತಿಯಲ್ಲೇ ಇದೆ. ಏಕೆಂದರೆ ಸಾಲಗಾರರು ತಮ್ಮ ವಾಹನವನ್ನು ಬ್ಯಾಂಕ್ ಹೆಸರಿಗೆ ಅಡಮಾನ ಮಾಡುವುದಿಲ್ಲ. ಇನ್ನು 17% ಬಡ್ಡಿ ಅನ್ನೋದು ಹೆಚ್ಚಾಯಿತು. ಒಂದು ವೇಳೆ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಹಾಗೂ ಮರುಪಾವತಿ ಇತಿಹಾಸ ಉತ್ತಮವಾಗಿದ್ದಲ್ಲಿ ಇದಕ್ಕಿಂತ ಕಡಿಮೆ ಬಡ್ಡಿ ದರ ಹಾಗೂ ಹೆಚ್ಚಿನ ಮರುಪಾವತಿ ಅವಧಿ ದೊರೆಯುತ್ತದೆ. ಆದ್ದರಿಂದ ಡೆಬಿಟ್ ಕಾರ್ಡ್ ಇಎಂಐ ಸ್ಕೀಮ್ ಆರಿಸಿಕೊಳ್ಳುವ ಮುನ್ನ ಇತರ ಎಲ್ಲ ಆಯ್ಕೆಗಳನ್ನು ಮೌಲ್ಯಮಾಪನ ಮಾಡಬೇಕು.

English summary

Federal Bank Offers Two Wheeler Loan Linked To Debit Card EMI

Private bank Federal bank offers two wheeler loan linked to debit card EMI. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X