ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲ ಬಡ್ಡಿದರವನ್ನು ಕಡಿತಗೊಳಿಸಿದ ನಂತರ, ಖಾಸಗಿ ಬ್ಯಾಂಕ್‌ಗಳಾದ ಹೆಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಗೃಹ ಸಾಲ ಬಡ್ಡಿ ದರ ಇಳಿಕೆ ಮಾಡಿವೆ.
ಐಸಿಐಸಿಐ ಬ್ಯಾಂಕ್ ಶುಕ್ರವಾರ ಗೃಹ ಸಾಲ ಬಡ್ಡಿದರವನ್ನು ಶೇಕಡಾ 6.70 ಕ್ಕೆ ಇಳಿಸಿದೆ. ಮಿಂಟ್‌ನಲ್ಲಿನ ವರದಿಯ ಪ್ರಕಾರ, ಬ್ಯಾಂಕಿನ ಪರಿಷ್ಕೃತ ಬಡ್ಡಿದರವು 10 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದ್ದು. ಹೊಸ ಬಡ್ಡಿದರಗಳು 5 ಮಾರ್ಚ್ 2021 ರಿಂದ ಜಾರಿಯಲ್ಲಿರುತ್ತವೆ.
ಐಸಿಐಸಿಐ ಬ್ಯಾಂಕ್ ಬಡ್ಡಿದರಗಳ ಬದಲಾವಣೆ ಏನು?
ಪ್ರಸ್ತುತ ಬಡ್ಡಿದರಗಳನ್ನು 75 ಲಕ್ಷ ರೂಪಾಯಿವರೆಗಿನ ಗೃಹ ಸಾಲಗಳ ವಿರುದ್ಧ ಪಡೆಯಬಹುದು. 75 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲಗಳಿಗೆ ಬಡ್ಡಿದರಗಳನ್ನು ಶೇಕಡಾ 6.75ರಷ್ಟು ಎಂದು ನಿಗದಿಪಡಿಸಲಾಗಿದೆ. ಆದಾಗ್ಯೂ, ಪರಿಷ್ಕೃತ ದರಗಳು 31 ಮಾರ್ಚ್ 2021 ರವರೆಗೆ ಲಭ್ಯವಿರುತ್ತವೆ.
ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಬ್ಯಾಂಕಿನಲ್ಲಿ ಖಾತೆ ಇಲ್ಲದವರು ಸೇರಿದಂತೆ ಬ್ಯಾಂಕಿನ ಗ್ರಾಹಕರು ಗೃಹ ಸಾಲಕ್ಕೆ ಡಿಜಿಟಲ್ ರೂಪದಲ್ಲಿ ಅರ್ಜಿ ಸಲ್ಲಿಸಬಹುದು. ಬ್ಯಾಂಕಿನ ವೆಬ್‌ಸೈಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ 'ಐಮೊಬೈಲ್ ಪೇ' ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಹೆಚ್‌ಡಿಎಫ್‌ಸಿ ಬ್ಯಾಂಕ್ ಗೃಹ ಸಾಲ ಬಡ್ಡಿದರ
ಹೆಚ್‌ಡಿಎಫ್‌ಸಿ ಬ್ಯಾಂಕ್ ಗೃಹಸಾಲದ ದರ 5 ಬೇಸಿಸ್ ಅಂಶ ತಗ್ಗಿಸುತ್ತಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಗೃಹ ಸಾಲ ದರವನ್ನು ಶೇ 6.7 ಮತ್ತು ಶೇ 6.75 ಕ್ಕೆ ಇಳಿಸಿದೆ.
ಸಾಲದ ಮೊತ್ತ ಹಾಗೂ ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ. ಉತ್ತಮ ರಿಪೇಮೆಂಟ್ ಇತಿಹಾಸ ಹೊಂದಿರುವ ಗ್ರಾಹಕರಿಗೆ ಉತ್ತಮ ದರದಲ್ಲಿ ಸೌಲಭ್ಯ ನೀಡುವುದು ಉದ್ದೇಶ ಎಂದು ಸಂಸ್ಥೆ ಹೇಳಿದೆ. 75 ಲಕ್ಷ ರು ತನಕದ ಸಾಲಕ್ಕೆ ಶೇ 6.7 ರಿಂದ ಬಡ್ಡಿದರ ಹಾಗೂ 75 ಲಕ್ಷ ರು ಗೂ ಅಧಿಕ ಮೊತ್ತಕ್ಕೆ ಶೇ 6.75 ರಂತೆ ಬಡ್ಡಿದರ ವಿಧಿಸಲಾಗುತ್ತಿದೆ.
ಇತರೆ ಬ್ಯಾಂಕ್‌ಗಳ ಗೃಹ ಸಾಲ ಬಡ್ಡಿದರ
ಕೋಟಕ್ ಮಹೀಂದ್ರಾ ಬ್ಯಾಂಕ್- 6.65%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- 6.70%
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- 6.80%
ಪಂಜಾಬ್ ನ್ಯಾಷನಲ್ ಬ್ಯಾಂಕ್- 6.80%
ಸೆಂಟ್ರಲ್ ಬ್ಯಾಂಕ್- 6.85%
ಬ್ಯಾಂಕ್ ಆಫ್ ಬರೋಡಾ- 6.85%
ಯುಸಿಒ ಬ್ಯಾಂಕ್- 6.90%
ಪಂಜಾಬ್&ಸಿಂದ್ ಬ್ಯಾಂಕ್- 6.90%
ಬ್ಯಾಂಕ್ ಆಫ್ ಮಹಾರಾಷ್ಟ್ರ- 6.90%
ಆ್ಯಕ್ಸಿಸ್ ಬ್ಯಾಂಕ್- 6.90%
ಕೆನರಾ ಬ್ಯಾಂಕ್- 6.90%
ಐಡಿಬಿಐ ಬ್ಯಾಂಕ್- 6.90%
ಬ್ಯಾಂಕ್ ಆಫ್ ಇಂಡಿಯಾ- 6.95%
ಇಂಡಿಯನ್ ಬ್ಯಾಂಕ್- 7.00%
ಇಂಡಿಯನ್ ಓವರ್‌ಸಿಸ್ ಬ್ಯಾಂಕ್- 7.05%
ಜಮ್ಮು&ಕಾಶ್ಮೀರ ಬ್ಯಾಂಕ್- 7.20%
ಡಿಬಿಎಸ್ ಬ್ಯಾಂಕ್- 7.30%
ಕರೂರ್ ವೈಶ್ಯ ಬ್ಯಾಂಕ್- 7.45%
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications