ನಿಮ್ಮ PPF ಖಾತೆ ನಿಷ್ಕ್ರಿಯಗೊಂಡಿದ್ರೆ, ಈ ರೀತಿಯಾಗಿ ಸಕ್ರಿಯಗೊಳಿಸಿ..

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಅತ್ಯಂತ ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ತೆರಿಗೆ ಉಳಿತಾಯದ ಜೊತೆಗೆ ಪಿಪಿಎಫ್ ಮೇಲಿನ ಬಡ್ಡಿದರ ಕೂಡ ಉತ್ತಮವಾಗಿದೆ. ಹೀಗಾಗಿಯೇ ಬಹುತೇಕ ತೆರಿಗೆದಾರರು ಪಿಪಿಎಫ್ ಆಯ್ಕೆಯನ್ನು ಪರಿಗಣಿಸುತ್ತಾರೆ.

ಪಿಪಿಎಫ್ ಎನ್ನುವುದು ಸರ್ಕಾರದ ಖಾತರಿಯ ಯೋಜನೆಯಾಗಿದ್ದು, ಅದರ ಮೇಲೆ ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರವನ್ನು ಪರಿಶೀಲಿಸಲಾಗುತ್ತದೆ. ಪ್ರಸ್ತುತ, ಪಿಪಿಎಫ್ ಖಾತೆಯ ಬಡ್ಡಿದರವು ಶೇಕಡಾ 7.1ರಷ್ಟಿದೆ. ಹೂಡಿಕೆಯ ಮೇಲಿನ ಬಡ್ಡಿದರವನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಪ್ರತಿ ತಿಂಗಳ 5 ನೇ ಮತ್ತು ಕೊನೆಯ ದಿನಾಂಕದ ನಡುವಿನ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಆಧಾರದ ಮೇಲೆ ಇದನ್ನು ಲೆಕ್ಕಹಾಕಲಾಗುತ್ತದೆ.

ನೀವು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದ್ದು, ಕೆಲವು ಕಾರಣಗಳಿಂದ ಪಿಪಿಎಫ್ ಖಾತೆ ಮುಚ್ಚಲಾಗಿರುತ್ತದೆ ಅಂದರೆ ನಿಷ್ಕ್ರಿಯವಾಗುತ್ತದೆ . ಈ ಸಂದರ್ಭದಲ್ಲಿ ಆ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಈ ಕೆಳಗೆ ತಿಳಿಸಲಾಗಿದೆ.

PPF ನಲ್ಲಿ ಹೂಡಿಕೆಯ ಪ್ರಯೋಜನಗಳು

PPF ನಲ್ಲಿ ಹೂಡಿಕೆಯ ಪ್ರಯೋಜನಗಳು

ನೀವು ಪಿಪಿಎಫ್‌ನಲ್ಲಿ ಎರಡು ರೀತಿಯ ಲಾಭವನ್ನು ಪಡೆಯುತ್ತೀರಿ. ಮೊದಲನೆಯದಾಗಿ, ನಿಮ್ಮ ಹಣವು ಬಡ್ಡಿಗೆ ಬಡ್ಡಿಗೆ ಸೇರಿ ಬೆಳೆಯುತ್ತಿರುತ್ತದೆ. ಎರಡನೆಯದಾಗಿ, ಪಿಪಿಎಫ್‌ನಲ್ಲಿ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಒಬ್ಬರು ಪಿಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಪಿಪಿಎಫ್ ಒಂದು 'ವಿನಾಯಿತಿ, ವಿನಾಯಿತಿ, ವಿನಾಯಿತಿ' ಅಥವಾ ಇಇಇ ವರ್ಗದ ಹೂಡಿಕೆ ಆಯ್ಕೆಯಾಗಿದೆ, ಅಂದರೆ ಹೂಡಿಕೆಯ ಮೊತ್ತ, ಬಡ್ಡಿಯ ಮೇಲೆ ಗಳಿಸಿದ ಬಡ್ಡಿ ಮತ್ತು ಮುಕ್ತಾಯದ ಮೊತ್ತ ಎಲ್ಲವೂ ತೆರಿಗೆ ಮುಕ್ತವಾಗಿರುತ್ತದೆ.

ಮುಕ್ತಾಯ ಅವಧಿ 15 ವರ್ಷಗಳು

ಮುಕ್ತಾಯ ಅವಧಿ 15 ವರ್ಷಗಳು

ಪಿಪಿಎಫ್ ಉಳಿತಾಯ ಯೋಜನೆಯು 15 ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದೆ. ಆದರೆ ಹೂಡಿಕೆದಾರರು ಕೆಲವು ಷರತ್ತುಗಳಿಗೆ ಒಳಪಟ್ಟು ಖಾತೆ ತೆರೆದ 5 ವರ್ಷಗಳ ನಂತರ ಹಣವನ್ನು ಹಿಂಪಡೆಯಬಹುದು. ಆದಾಗ್ಯೂ, ನಿಮ್ಮ ಪಿಪಿಎಫ್ ಖಾತೆಯು ನಿಷ್ಕ್ರಿಯವಾಗಿದ್ದರೆ, ಅದನ್ನು ಪುನಶ್ಚೇತನಗೊಳಿಸಬಹುದು.

ಲಿಖಿತವಾಗಿ ಅರ್ಜಿ ಸಲ್ಲಿಸಿ

ಲಿಖಿತವಾಗಿ ಅರ್ಜಿ ಸಲ್ಲಿಸಿ

ಖಾತೆದಾರರು ಖಾತೆ ತೆರೆದಿರುವ ಸಂಬಂಧಿತ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಗೆ ಅರ್ಜಿ ಬರೆಯಬಹುದು. ಈ ಲಿಖಿತ ವಿನಂತಿಯನ್ನು 15 ವರ್ಷಗಳ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಮಾಡಬಹುದು. ಕೆಲವು ಕಾರಣಗಳಿಂದ ನಿಮ್ಮ ಖಾತೆ ನಿಷ್ಕ್ರಿಯವಾಗಿದ್ದರೆ, ಮೊದಲಿಗೆ, ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ.

ಸ್ವಲ್ಪ ಹಣವನ್ನು ಜಮಾ ಮಾಡಬೇಕು

ಸ್ವಲ್ಪ ಹಣವನ್ನು ಜಮಾ ಮಾಡಬೇಕು

ನಿಯಮಗಳ ಪ್ರಕಾರ, ಒಂದು ಪಿಪಿಎಫ್ ಖಾತೆಯನ್ನು ಒಂದು ಹಣಕಾಸು ವರ್ಷದಲ್ಲಿ ಕೇವಲ 500 ರೂ.ಗಳನ್ನು ಜಮಾ ಮಾಡುವ ಮೂಲಕ ಸಕ್ರಿಯವಾಗಿ ಇರಿಸಿಕೊಳ್ಳಬಹುದು. ಹಾಗೆ ಮಾಡಲು ವಿಫಲವಾದರೆ ಖಾತೆ ನಿಷ್ಕ್ರಿಯವಾಗುತ್ತದೆ. ಪಿಪಿಎಫ್ ಅನ್ನು ಸಕ್ರಿಯ ಕ್ರಮದಲ್ಲಿಡಲು ಪ್ರತಿ ಹಣಕಾಸು ವರ್ಷ ಮಾರ್ಚ್ 31 ರೊಳಗೆ ಪಿಪಿಎಫ್ ಖಾತೆಗೆ 500 ರೂ.ಗಳನ್ನು ಜಮಾ ಮಾಡಲು ಸೂಚಿಸಲಾಗಿದೆ.

ದಂಡ ವಿಧಿಸಲಾಗುವುದು

ದಂಡ ವಿಧಿಸಲಾಗುವುದು

ಒಂದು ಪಿಪಿಎಫ್ ಖಾತೆಯು ಹಲವು ವರ್ಷಗಳಿಂದ ನಿಷ್ಕ್ರಿಯವಾಗಿದ್ದರೆ, ಪ್ರತಿ ಪಾವತಿಸದ ವರ್ಷಕ್ಕೆ 500 ರೂ. ಇದರೊಂದಿಗೆ ವರ್ಷಕ್ಕೆ 50 ರೂಪಾಯಿ ದಂಡವನ್ನೂ ಪಾವತಿಸಬೇಕಾಗುತ್ತದೆ. ಇದರರ್ಥ ಒಂದು ಖಾತೆಯು ಮೂರು ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದರೆ, 1650 ರೂಪಾಯಿ ಠೇವಣಿ ಅಂದರೆ 1500 ರೂ (500x3) ಮತ್ತು 150 ರೂ (50x3) ದಂಡವನ್ನು ಜಮಾ ಮಾಡಬೇಕಾಗುತ್ತದೆ. ಠೇವಣಿದಾರರು 15 ವರ್ಷಗಳ ಮುಕ್ತಾಯ ಅವಧಿಯ ನಂತರ ಹಣವನ್ನು ಹಿಂಪಡೆಯಬಹುದು ಅಥವಾ ಇನ್ನೊಂದು 5 ವರ್ಷಗಳವರೆಗೆ ವಿಸ್ತರಿಸಬಹುದು. ಇಲ್ಲದಿದ್ದರೆ, ಪಿಪಿಎಫ್ 'ಕೊಡುಗೆ ಇಲ್ಲದೆ ವಿಸ್ತರಣೆ' ವ್ಯಾಪ್ತಿಗೆ ಬರುತ್ತದೆ.

ಪಿಪಿಎಫ್ ನಿಂದ ಕೋಟ್ಯಧಿಪತಿ ಆಗಬಹುದು

ಪಿಪಿಎಫ್ ನಿಂದ ಕೋಟ್ಯಧಿಪತಿ ಆಗಬಹುದು

ನೀವು ಪಿಪಿಎಫ್‌ನಲ್ಲಿ ಪ್ರತಿ ತಿಂಗಳು 12,500 ರೂ.ಗಳನ್ನು ಹೂಡಿಕೆ ಮಾಡಿದರೆ, ವರ್ಷಕ್ಕೆ 1.5 ಲಕ್ಷ ರೂ. ಈಗ ನೀವು ಇದರ ಮೇಲೆ 7.1 ಪ್ರತಿಶತ ಲಾಭವನ್ನು ಪಡೆಯುತ್ತೀರಿ. ಪಿಪಿಎಫ್ ಕ್ಯಾಲ್ಕುಲೇಟರ್ ಪ್ರಕಾರ, ನೀವು ಈ ಹೂಡಿಕೆಯನ್ನು 30 ವರ್ಷಗಳವರೆಗೆ ಮುಂದುವರಿಸಿದರೆ, ನೀವು ಮೆಚ್ಯೂರಿಟಿಯಲ್ಲಿ 1.54 ಕೋಟಿ ರೂ. ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+