For Quick Alerts
ALLOW NOTIFICATIONS  
For Daily Alerts

ಅವಧಿ ಪೂರ್ವ ನಿವೃತ್ತಿ ಪಡೆಯಲಿದ್ದೀರಿಯೇ?, ಈ ತಯಾರಿಯನ್ನು ಮಾಡಿಕೊಳ್ಳಿ

|

ಅವಧಿ ಪೂರ್ವ ನಿವೃತ್ತಿ ನಾವು ಈ ದಿನಗಳಲ್ಲಿ ಹೆಚ್ಚಾಗಿ ಕೇಳುವ ಸುದ್ದಿಯಾಗಿದೆ. ತಮ್ಮ 30 ರ ವಯಸ್ಸಿನಲ್ಲಿಯೇ ಯುವಕರಿಗೆ ಇನ್ನೂ ಕೂಡಾ 30 ವರ್ಷ ಕೆಲಸ ಮಾಡುವುದು ಕಷ್ಟಕರವಾಗಿರುವಂತಹ ಪರಿಸ್ಥಿತಿ ಈಗ ಉಂಟಾಗಿದೆ. ಹಾಗೆಯೇ ಜೀವನದುದ್ದಕ್ಕೂ ನಾವು ಒಂದೇ ಸಂಸ್ಥೆಯಡಿ ಕೆಲಸ ಮಾಡಲಾರೆವು ಅಥವಾ ಒಂದೇ ರೀತಿಯ ಕೆಲಸವನ್ನು ಮಾಡಲಾರೆವು ಎಂದು ಯುವಕರು ಮಾನಸಿಕವಾಗಿ ದೃಢವಾಗಿದ್ದಾರೆ. ಆದರೆ ಕೆಲಸ ಮಾಡಲು ಇಷ್ಟವಿಲ್ಲದಿರುವುದು ಹೊಸದಾದ ವಿಚಾರವು ಹೌದು ಎನ್ನಬಹುದು.

ಈ ದಿನಗಳಲ್ಲಿ ಅವಧಿ ಪೂರ್ವ ನಿವೃತ್ತಿಯು ಕೇವಲ ಒಂದು ಪದವಲ್ಲ. ಇದು ಆರಾಮವಾಗಿರಲು ಜನರು ಮಾಡುವ ಒಂದು ನಿರ್ಧಾರವು ಹೌದು. ಆದರೆ ಆರಾಮವಾಗಿರಲು ಅವಧಿ ಪೂರ್ವ ನಿವೃತ್ತಿಗೂ ಮುನ್ನ ಹಲವಾರು ಸಿದ್ದತೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕೂಡಾ ಮುಖ್ಯ.

ಸೆಪ್ಟೆಂಬರ್‌ನಲ್ಲಿ ಆಗಲಿದೆ ವೈಯಕ್ತಿಕ ಹಣಕಾಸಿನಲ್ಲಿ ಈ ಪ್ರಮುಖ ಬದಲಾವಣೆಸೆಪ್ಟೆಂಬರ್‌ನಲ್ಲಿ ಆಗಲಿದೆ ವೈಯಕ್ತಿಕ ಹಣಕಾಸಿನಲ್ಲಿ ಈ ಪ್ರಮುಖ ಬದಲಾವಣೆ

ಅವಧಿ ಪೂರ್ವ ನಿವೃತ್ತಿ ಪಡಯಲು ಮೊದಲೇ ಯೋಜನೆಯನ್ನು ಮಾಡಿಕೊಳ್ಳುವುದು ಕೂಡಾ ಒಂದು ಕಲೆಯಾಗಿದೆ. ಅವಧಿ ಪೂರ್ವ ನಿವೃತ್ತಿಯ ಬಳಿಕದ ಜೀವನ ಹೇಗೆ ಇರುತ್ತದೆ ಎಂಬುವುದು ನೀವು ಹಣಕಾಸು ನಿರ್ವಹಣೆ ಮಾಡಲು ಯಾವೆಲ್ಲಾ ಸಿದ್ದತೆ ಮಾಡಿದ್ದೀರಿ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಏರುತ್ತಿರುವ ಹಣದುಬ್ಬರ ಮತ್ತು ಯಾವುದೇ ಹಣ ಸಂಪಾದನೆಯ ಮೂಲಗಳು ಇಲ್ಲದೆ ಇರುವ ಸಂದರ್ಭದಲ್ಲಿ ಜೀವನ ಸಾಗಿಸಲು ನಿಮ್ಮಲ್ಲಿ ಇರುವ ಉಳಿತಾಯ ಮಾತ್ರ ಸಾಕಾಗುವುದಿಲ್ಲ. ನೀವು ಬೇಗನೆ ನಿವೃತ್ತಿ ಹೊಂದಬೇಕು ಎಂದು ಬಯಸಿದರೆ, ಕೆಲವೊಂದು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ. ಅದನ್ನು ತಿಳಿಯಲು ಮುಂದೆ ಓದಿ.

 ನಿಮ್ಮ ಮಾಸಿಕ ಖರ್ಚಿನ ಅಂದಾಜು ಮಾಡಿಕೊಳ್ಳಿ

ನಿಮ್ಮ ಮಾಸಿಕ ಖರ್ಚಿನ ಅಂದಾಜು ಮಾಡಿಕೊಳ್ಳಿ

ಈಗ ನೀವು ಎಷ್ಟು ಖರ್ಚು ಮಾಡುತ್ತೀರಿ ಎನ್ನುವುದಕ್ಕಿಂತ ನೀವು ನಿವೃತ್ತರಾದ ನಂತರ ಪ್ರತಿ ತಿಂಗಳು ಎಷ್ಟು ಹಣ ಬೇಕಾಗುತ್ತದೆ ಎಂಬುವುದು ಮುಖ್ಯವಾಗಿದೆ. ಆಹಾರ, ಬಾಡಿಗೆ, ಬಿಲ್‌ಗಳು, ಬಟ್ಟೆ, ಸಾರಿಗೆ, ವಿಮಾ ಕಂತುಗಳು ಮತ್ತು ಇತರ ಖರ್ಚಿಗೆ ತಿಂಗಳಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುವುದನ್ನು ಲೆಕ್ಕ ಹಾಕಿಕೊಳ್ಳಿ. ಹಾಗೆಯೇ ನೀವು ತೆಗೆದುಕೊಂಡಿರುವ ಸಾಲಗಳನ್ನು ನಿರ್ಲಕ್ಷ್ಯ ಮಾಡುವುದು ಕೂಡಾ ಬೇಡ. ನಿಮ್ಮ ಕ್ರೆಡಿಟ್ ಕಾರ್ಡ್ ಸಾಲ ಎಷ್ಟಿದೆ ಎಂಬುವುದನ್ನು ಪರಿಶೀಲನೆ ನಡೆಸಿ. ನಿಮ್ಮ ಎಲ್ಲಾ ಬಿಲ್‌ಗಳು, ಸಾಲಗಳನ್ನು ಪಾವತಿಸಲು ಬೇಕಾದ ಕಾರ್ಯವನ್ನು ಮಾಡಿ. ನೀವು ಸಾಲ ಮುಕ್ತ ನಿವೃತ್ತಿಯನ್ನು ಯೋಜನೆ ಮಾಡುವುದು ಅತ್ಯಗತ್ಯ. ನೀವು ಸಾಲವನ್ನು ಹೊಂದಿದ್ದರೆ ನಿಮಗೆ ನಿವೃತ್ತಿ ಬಳಿಕ ಸಾಲ ಪಾವತಿ ಮಾಡುವುದು ಕಷ್ಟವಾಗುತ್ತದೆ. ಆದರೆ ನೀವು ನಿವೃತ್ತಿ ನಂತರ ಯಾವುದೇ ಸಾಲವನ್ನು ಹೊಂದಿಲ್ಲದ್ದಿದ್ದರೆ ಜೀವನ ಸಾಗಿಸುವುದು ಕೊಂಚ ಸುಲಭವಾಗುತ್ತದೆ. ಆದರೆ ಇವೆಲ್ಲವೂ ಕೂಡಾ ನೀವು ಎಷ್ಟು ಬೇಗನೆ ನಿವೃತ್ತರಾಗಲು ಬಯಸುತ್ತೀರಿ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ನೀವು ನಿವೃತ್ತರಾದ ಬಳಿಕವೂ ನಿಮ್ಮನ್ನು ಅವಲಂಬಿಸಿರುವ ಮಕ್ಕಳನ್ನು ಹೊಂದಿದ್ದರೆ ನಿಮಗೆ ಮಾಸಿಕ ಖರ್ಚು ವೆಚ್ಚ ನಿಭಾಯಿಸುವುದು ಕೊಂಚ ಕಷ್ಟವಾದೀತು. ಹಾಗೆಯೇ ನೀವು

 ಹಣದ ಅವಶ್ಯಕತೆ ಎಷ್ಟಿದೆ ಲೆಕ್ಕ ಹಾಕಿಕೊಳ್ಳಿ

ಹಣದ ಅವಶ್ಯಕತೆ ಎಷ್ಟಿದೆ ಲೆಕ್ಕ ಹಾಕಿಕೊಳ್ಳಿ

ನೀವು ನಿಮ್ಮ ಮಾಸಿಕ ಖರ್ಚಿನ ಅಂದಾಜು ಮಾಡಿಕೊಂಡ ಬಳಿಕ ನಿವೃತ್ತಿ ಬಳಿಕ ನಿಮಗೆ ಎಷ್ಟು ಹಣ ಬೇಕಾಗುತ್ತದೆ ಎಂಬುವುದನ್ನು ಕೂಡಾ ಲೆಕ್ಕ ಹಾಕಿಕೊಳ್ಳಿ. ಆದರೆ ಇದನ್ನು ಲೆಕ್ಕ ಹಾಕಲು ಯಾವುದೇ ಮಾರ್ಗಗಳಿಲ್ಲ. ನಿಮ್ಮ ವಾರ್ಷಿಕ ವೆಚ್ಚದ ಕನಿಷ್ಠ 25-30 ಪಟ್ಟು ಹಣವನ್ನು ಪ್ರತಿ ವರ್ಷವು ನಿವೃತ್ತಿ ಜೀವನಕ್ಕಾಗಿ ಬ್ಯಾಂಕ್‌ನಲ್ಲಿ ಉಳಿತಾಯ ಮಾಡಿಟ್ಟು ಕೊಳ್ಳುವುದು ಇದಕ್ಕೆ ಉತ್ತಮ ಮಾರ್ಗ. ಹಾಗೆಯೇ ಕನಿಷ್ಠ ಒಂದು ವರ್ಷದ ಖರ್ಚನ್ನು ನಿಭಾಯಿಸಲು ಬೇಕಾದ ನಗದನ್ನು ನೀವು ಹೊಂದಿರಬೇಕಾಗುತ್ತದೆ. ನೀವು 40 ಅಥವಾ 50 ವರ್ಷ ವಯಸ್ಸಿನಲ್ಲೇ ನಿಮ್ಮ ಪ್ರತಿದಿನ ಜೀವನದ ಅಗತ್ಯಗಳನ್ನು ಅಂದಾಜು ಮಾಡಿ, ಹಣದುಬ್ಬರವು ದೈನಂದಿನ ಜೀವನ ವೆಚ್ಚದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದನ್ನು ನೀವು ಕಂಡುಹಿಡಿಯಬೇಕು. ಉದಾಹರಣೆಗೆ, ನಿಮ್ಮ ಮಾಸಿಕ ವೆಚ್ಚಗಳು ಪ್ರಸ್ತುತ 20,000 ರೂಪಾಯಿ ಆಗಿದ್ದರೆ, ಪ್ರತಿ ವರ್ಷಕ್ಕೆ 2,40,000 ರೂಪಾಯಿ ಬೇಕಾಗುತ್ತದೆ. 2,40,000 ರೂಪಾಯಿಯನ್ನು ನಾಲ್ಕು ಪ್ರತಿಶತದಿಂದ ಭಾಗಿಸುವಾಗ ವರ್ಷಕ್ಕೆ 60,00,000 ಗೆ ಸಮಾನವಾಗಿರುತ್ತದೆ. ಇದರರ್ಥ ನೀವು ನಿವೃತ್ತರಾದ ನಂತರ ಪ್ರತಿ ವರ್ಷ ನಿಮಗೆ ₹ 60, 00,000 ಬೇಕಾಗುತ್ತದೆ.

ಇದ್ದಕ್ಕಿದ್ದಂತೆ ನಿಮ್ಮ ಪ್ರೀತಿ ಪಾತ್ರರು ಕೋವಿಡ್‌ಗೆ ಬಲಿಯಾದರೆ, ಮೊದಲು ಇದನ್ನು ಮಾಡಿ..ಇದ್ದಕ್ಕಿದ್ದಂತೆ ನಿಮ್ಮ ಪ್ರೀತಿ ಪಾತ್ರರು ಕೋವಿಡ್‌ಗೆ ಬಲಿಯಾದರೆ, ಮೊದಲು ಇದನ್ನು ಮಾಡಿ..

 ಉಳಿಕೆ ಮಾಡಿ ಜೊತೆಗೆ ಹೂಡಿಕೆ ಮಾಡಿ

ಉಳಿಕೆ ಮಾಡಿ ಜೊತೆಗೆ ಹೂಡಿಕೆ ಮಾಡಿ

ನೀವು ಯಾವುದೇ ಯೋಜನೆಯನ್ನು ಮಾಡದೆಯೇ ಉಳಿಕೆ ಮಾಡದೆಯೇ ನಿವೃತ್ತಿ ಪಡೆಯುವುದು ನಿಮ್ಮ ಮುಂದಿನ ಜೀವನಕ್ಕೆ ಭಾರೀ ಸಂಕಷ್ಟವನ್ನು ತಂದುಕೊಡಬಹುದು. ನೀವು ನಿವೃತ್ತರಾದಾಗ ಬೇಕಾದ ಸಾಕಷ್ಟು ಹಣವನ್ನು ನೀವು ಈಗಲೇ ಉಳಿತಾಯ ಮಾಡಿಕೊಳ್ಳಿ. ಆದರೆ ಉಳಿತಾಯ ಮಾತ್ರ ನಿಮ್ಮ ನಿವೃತ್ತಿ ಜೀವನದಲ್ಲಿ ಸಹಾಯ ಮಾಡುವುದಿಲ್ಲ. ಅದಕ್ಕಾಗಿ ನೀವು ವಿವಿಧ ಹೂಡಿಕೆಗಳಲ್ಲಿ ಯಾವುದಾದರೂ ಒಂದರಲ್ಲಿ ಹೂಡಿಕೆ ಮಾಡುವುದು ಕೂಡಾ ಮುಖ್ಯ. ಷೇರುಗಳು, ಮ್ಯೂಚುವಲ್ ಫಂಡ್‌ಗಳು, ವಿನಿಮಯ-ವ್ಯಾಪಾರ ನಿಧಿಗಳು, ಸವರನ್‌ ಗೋಲ್ಡ್‌, ಕ್ರಿಪ್ಟೋ ಕರೆನ್ಸಿಗಳು, ರಿಯಲ್ ಎಸ್ಟೇಟ್, ಫಿಕ್ಸಿಡ್‌ ಡೆಪಾಸಿಟ್‌, ಪೋಸ್ಟ್ ಕಚೇರಿ ಯೋಜನೆಗಳು, ಕಾರ್ಪೊರೇಟ್ ಬಾಂಡ್‌ಗಳ ಮೇಲೆ ನಿಮ್ಮ ಹಣವನ್ನು ಹೂಡಿಕೆ ಮಾಡಿಕೊಳ್ಳಿ. ಇವೆಲ್ಲವೂ ನಿಮಗೆ ಅಗತ್ಯವಿದ್ದಾಗ ಹಣವನ್ನು ದೊರಕಿಸುವ ಮೂಲಗಳಾಗಿವೆ.

ಆರ್ಥಿಕ ಸಂಕಷ್ಟದಲ್ಲಿದ್ದಾಗ ನಮ್ಮ ಖರ್ಚು ಸರಿದೂಗಿಸುವುದು ಹೇಗೆ?ಆರ್ಥಿಕ ಸಂಕಷ್ಟದಲ್ಲಿದ್ದಾಗ ನಮ್ಮ ಖರ್ಚು ಸರಿದೂಗಿಸುವುದು ಹೇಗೆ?

 ಹೂಡಿಕೆಯನ್ನು ಸರಿಯಾಗಿ ನಿರ್ವಹಣೆ ಅಗತ್ಯವಾಗಿ ಮಾಡಿ

ಹೂಡಿಕೆಯನ್ನು ಸರಿಯಾಗಿ ನಿರ್ವಹಣೆ ಅಗತ್ಯವಾಗಿ ಮಾಡಿ

ನಾವು ಹಣವನ್ನು ಹೂಡಿಕೆ ಮಾಡುವುದು ಮತ್ತು ನಂತರ ಅದನ್ನು ಮರೆತು ಬಿಡುವುದು ಸರಿಯಲ್ಲ. ನಿಮ್ಮ ಹೂಡಿಕೆ ಯಾವ ಸ್ಥಿತಿಯಲ್ಲಿ ಇದೆ, ಲಾಭವಿದೆಯೇ ಎಂಬುವುದನ್ನು ನೀವು ನೋಡಿಕೊಳ್ಳಿ. ಉದಾಹರಣೆಗೆ, ನೀವು ಭವಿಷ್ಯದಲ್ಲಿ ಅಂದರೆ 15-20 ವರ್ಷಗಳ ನಂತರ ಹೆಚ್ಚಿನ ಹಣವನ್ನು ಪಡೆಯಲು ಬಯಸಿದರೆ ನಿಮ್ಮ ಹಣವನ್ನು ಮ್ಯೂಚುವಲ್ ಫಂಡ್‌ಗಳು ಅಥವಾ ಸ್ಟಾಕ್‌ಗಳಿಗೆ ಹೂಡಿಕೆ ಮಾಡಿ. ನೀವು ಸಂಪ್ರದಾಯವಾದಿ ಹೂಡಿಕೆದಾರರಾಗಿದ್ದರೆ ಹಾಗೂ ಸ್ಟಾಕ್‌ ಅನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಡೆಪ್ಟ್‌ ಫಂಡ್‌ಗಳ ಮೇಲೆ ಹೂಡಿಕೆ ಮಾಡಿ. ಇದು ನಿಮಗೆ ಬ್ಯಾಂಕ್‌ನಲ್ಲಿ ಹಣವನ್ನು ಇಡುವುದಕ್ಕಿಂತ ಅಧಿಕ ಬಡ್ಡಿಯನ್ನು ನೀಡುತ್ತದೆ. ಹಾಗೆಯೇ ಲಾಭವು ಆಗುತ್ತದೆ. ಕೊರೊನಾ ವೈರಸ್‌ ಸಾಂಕ್ರಾಮಿಕ ಸೋಂಕಿನ ನಂತರ ಮಾರುಕಟ್ಟೆಯು ಈಗ ಹೊಸ ವ್ಯಾಪಾರ ಮತ್ತು ಉದ್ಯೋಗಾವಕಾಶಗಳಿಗೆ ತೆರೆದುಕೊಳ್ಳುವುದರೊಂದಿಗೆ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಏರಿಕೆಯಾಗುವ ನಿರೀಕ್ಷೆಯಿದೆ. ಹಾಗೆಯೇ ಗೃಹ ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆಯಾಗಿರುವುದರಿಂದ, ಭವಿಷ್ಯದಲ್ಲಿ ಹೆಚ್ಚಿನ ಬೆಲೆ ಮಾರಾಟ ಮಾಡುವ ಉದ್ದೇಶದಿಂದ ನೀವು ಭೂಮಿ ಖರೀದಿಗೆ ಹೂಡಿಕೆ ಮಾಡುವುದು ಉತ್ತಮ ಮಾರ್ಗವಾಗಿದೆ. ಇನ್ನು ವೈದ್ಯಕೀಯ ಬಿಲ್‌ಗಳ ಪಾವತಿ ಮತ್ತು ಆಸ್ಪತ್ರೆಯ ವೆಚ್ಚವನ್ನು ಉಳಿಸಲು, ನಿಮ್ಮ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳುವ ಸರಿಯಾದ ಆರೋಗ್ಯ ವಿಮೆಯನ್ನು ನೀವು ಖರೀದಿಸಬೇಕು. ಇನ್ನು ಮುಖ್ಯವಾಗಿ ನೀವು ನಿಮ್ಮ ಮರಣದ ನಂತರ ನಿಮ್ಮ ಕುಟುಂಬದವರಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಟರ್ಮ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಹೂಡಿಕೆ ಮಾಡಿಕೊಳ್ಳಿ. ಹಾಗೆಯೇ ವಿಮೆಯನ್ನು ಕೂಡಾ ಮಾಡಿಕೊಳ್ಳಿ.

English summary

How to plan for an early retirement, Explained in Kannada

If you want to retire early, here are some thumb rules. How to plan for an early retirement, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X