Trains Cancelled: ನವೆಂಬರ್ 18, 19 ಈ ಎಂಟು ರೈಲುಗಳು ರದ್ದು, ಇಲ್ಲಿದೆ ಸಂಪೂರ್ಣ ಪಟ್ಟಿ

ಈಗಾಗಲೇ ಭಾರತೀಯ ರೈಲ್ವೆಯು ಡಿಸೆಂಬರ್ 4 ರಿಂದ ಹಲವಾರು ರೈಲುಗಳನ್ನು ರದ್ದು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದೆ. ದಟ್ಟವಾದ ಮಂಜಿನ ಮುನ್ಸೂಚನೆ ಇರುವ ಕಾರಣದಿಂದಾಗಿ ರೈಲು ಕಾರ್ಯಾಚರಣೆಗೆ ಅಡ್ಡಿ ಉಂಟಾಗಲಿದೆ. ಈ ಕಾರಣ ಡಿಸೆಂಬರ್‌ನಲ್ಲಿ ಹಲವಾರು ರೈಲುಗಳನ್ನು ರದ್ದುಗೊಳಿಸುವುದಾಗಿ ಭಾರತೀಯ ರೈಲ್ವೆ ಹೇಳಿದೆ.

ಆದರೆ ಈಗ ಭಾರತೀಯ ರೈಲ್ವೆಯ ದಕ್ಷಿಣ ರೈಲ್ವೆ ವಿಭಾಗವು ತಿರುವನಂತಪುರಂ ವಿಭಾಗದ ಅಡಿಯಲ್ಲಿ ಒಟ್ಟು 8 ರೈಲುಗಳನ್ನು ನವೆಂಬರ್ 18 ಮತ್ತು 19 ರಂದು ರದ್ದುಗೊಳಿಸಿದೆ. ಈ ರೈಲುಗಳು ಕರ್ನಾಟಕದ ಕೆಲವು ಜಿಲ್ಲೆಗಳಿಗೂ ಕೂಡಾ ಆಗಮಿಸುವ ರೈಲಾಗಿದ್ದು, ನಾವು ಕೂಡಾ ಮಾಹಿತಿ ತಿಳಿದಿರುವುದು ಮುಖ್ಯವಾಗಿದೆ.

 ನವೆಂಬರ್ 18, 19 ಈ ಎಂಟು ರೈಲುಗಳು ರದ್ದು, ವಿವರ

ಕೆಲವು ಸೇವೆಗಳನ್ನು ಸಂಪೂರ್ಣ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ. ಈ ಎರಡು ದಿನಗಳಲ್ಲಿ ವಿವಿಧ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗುವುದು ಎಂದು ರೈಲ್ವೆ ಹೇಳಿದೆ. ಆದರೆ, ರೈಲುಗಳ ರದ್ದತಿಗೆ ಯಾವುದೇ ಕಾರಣವನ್ನು ರೈಲ್ವೆ ಸೂಚಿಸಿಲ್ಲ. ರದ್ದಾದ ರೈಲುಗಳ ವಿವರ ಇಲ್ಲಿದೆ ಮುಂದೆ ಓದಿ...

ನವೆಂಬರ್ 18 ರಂದು ರದ್ದಾದ ರೈಲುಗಳು

* ರೈಲು ಸಂಖ್ಯೆ 16603: ಮಂಗಳೂರು ಸೆಂಟ್ರಲ್- ತಿರುವನಂತಪುರಂ ಮಾವೇಲಿ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ 06018: ಎರ್ನಾಕುಲಂ- ಶೋರನೂರ್ ಮೆಮು
* ರೈಲು ಸಂಖ್ಯೆ 06448: ಎರ್ನಾಕುಲಂ- ಗುರುವಾಯೂರ್ ಎಕ್ಸ್‌ಪ್ರೆಸ್

ನವೆಂಬರ್ 19 ರಂದು ರದ್ದಾದ ರೈಲುಗಳು

* ರೈಲು ಸಂಖ್ಯೆ 16604: ತಿರುವನಂತಪುರಂ ಸೆಂಟ್ರಲ್- ಮಂಗಳೂರು ಮಾವೇಲಿ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ 06017: ಶೋರನೂರು- ಎರ್ನಾಕುಲಂ ಮೆಮು
* ರೈಲು ಸಂಖ್ಯೆ 06439: ಗುರುವಾಯೂರ್- ಎರ್ನಾಕುಲಂ ಎಕ್ಸ್‌ಪ್ರೆಸ್
* ರೈಲು ಸಂಖ್ಯೆ 06453: ಎರ್ನಾಕುಲಂ- ಕೊಟ್ಟಾಯಂ ಎಕ್ಸ್‌ಪ್ರೆಸ್ ಸ್ಪೆಷಲ್
* ರೈಲು ಸಂಖ್ಯೆ 06434: ಕೊಟ್ಟಾಯಂ- ಎರ್ನಾಕುಲಂ ಎಕ್ಸ್‌ಪ್ರೆಸ್ ಸ್ಪೆಷಲ್

ಭಾಗಶಃ ರದ್ದುಗೊಂಡ ರೈಲುಗಳ ಪಟ್ಟಿ

* ರೈಲು ಸಂಖ್ಯೆ 22656: ನವೆಂಬರ್ 17 ರಂದು ಹೊರಡುವ ಹಜರತ್ ನಿಜಾಮುದ್ದೀನ್- ಎರ್ನಾಕುಲಂ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಶೋರನೂರ್ ಮತ್ತು ಎರ್ನಾಕುಲಂ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16127: ನವೆಂಬರ್ 17 ರಂದು ಹೊರಡುವ ಚೆನ್ನೈ ಎಗ್ಮೋರ್- ಗುರುವಾಯೂರ್ ಎಕ್ಸ್‌ಪ್ರೆಸ್ ಎರ್ನಾಕುಲಂ ಮತ್ತು ಗುರುವಾಯೂರ್ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16128: ನವೆಂಬರ್ 18 ರಂದು ಹೊರಡುವ ಗುರುವಾಯೂರ್- ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ಗುರುವಾಯೂರ್ ಮತ್ತು ಎರ್ನಾಕುಲಂ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16630:ನವೆಂಬರ್ 18 ರಂದು ಹೊರಡುವ ಮಂಗಳೂರು ಸೆಂಟ್ರಲ್- ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ಶೋರನೂರ್ ಮತ್ತು ತಿರುವನಂತಪುರಂ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16629: ನವೆಂಬರ್ 19 ರಂದು ಹೊರಡುವ ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ತಿರುವನಂತಪುರಂ ಮತ್ತು ಶೋರನೂರ್ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 12978: ನವೆಂಬರ್ 17 ರಂದು ಹೊರಡುವ ಅಜ್ಮೀರ್- ಎರ್ನಾಕುಲಂ ಮರುಸಾಗರ್ ಎಕ್ಸ್‌ಪ್ರೆಸ್ ತ್ರಿಶೂರ್ ಮತ್ತು ಎರ್ನಾಕುಲಂ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16342: ನವೆಂಬರ್ 18 ರಂದು ಹೊರಡುವ ತಿರುವನಂತಪುರಂ ಸೆಂಟ್ರಲ್- ಗುರುವಾಯೂರ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಎರ್ನಾಕುಲಂ ಮತ್ತು ಗುರುವಾಯೂರ್ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16341: ನವೆಂಬರ್ 19 ರಂದು ಹೊರಡುವ ಗುರುವಾಯೂರ್- ತಿರುವನಂತಪುರಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಗುರುವಾಯೂರ್ ಮತ್ತು ಎರ್ನಾಕುಲಂ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16187: ನವೆಂಬರ್ 18 ರಂದು ಹೊರಡುವ ಕಾರೈಕಲ್-ಎರ್ನಾಕುಲಂ ಎಕ್ಸ್‌ಪ್ರೆಸ್ ಪಾಲಕ್ಕಾಡ್ ಮತ್ತು ಎರ್ನಾಕುಲಂ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16328: ನವೆಂಬರ್ 19 ರಂದು ಹೊರಡುವ ಗುರುವಾಯೂರ್- ಮಧುರೈ ಎಕ್ಸ್‌ಪ್ರೆಸ್ ಗುರುವಾಯೂರ್ ಮತ್ತು ಆಲುವಾ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16327: ನವೆಂಬರ್ 18 ರಂದು ಹೊರಡುವ ಮಧುರೈ- ಗುರುವಾಯೂರ್ ಎಕ್ಸ್‌ಪ್ರೆಸ್ ಆಲುವಾ ಮತ್ತು ಗುರುವಾಯೂರ್ ನಡುವೆ ಭಾಗಶಃ ರದ್ದು
* ರೈಲು ಸಂಖ್ಯೆ 16188: ನವೆಂಬರ್ 19 ರಂದು ಹೊರಡುವ ಎರ್ನಾಕುಲಂ- ಕಾರೈಕಲ್ ಎಕ್ಸ್‌ಪ್ರೆಸ್ ಎರ್ನಾಕುಲಂ ಮತ್ತು ಪಾಲಕ್ಕಾಡ್ ನಡುವೆ ಭಾಗಶಃ ರದ್ದು

ಮರುನಿಗದಿಪಡಿಸಲಾದ ರೈಲಿನ ಪಟ್ಟಿ

* ರೈಲು ಸಂಖ್ಯೆ 16348: ನವೆಂಬರ್ 18 ರಂದು ಮಧ್ಯಾಹ್ನ 2:25 ಕ್ಕೆ ಹೊರಡಲಿದ್ದ ಮಂಗಳೂರು ಸೆಂಟ್ರಲ್- ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು 7 ಗಂಟೆ ತಡವಾಗಿ ರಾತ್ರಿ 9:25 ಕ್ಕೆ ಹೊರಡಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+