For Quick Alerts
ALLOW NOTIFICATIONS  
For Daily Alerts

ಪಿಪಿಎಫ್, ಎಸ್‌ಎಸ್‌ವೈ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಬದಲಾವಣೆ ಇಲ್ಲ

|

ಸಣ್ಣ ಉಳಿತಾಯ ಯೋಜನೆಯ ಬಡ್ಡಿದರಗಳನ್ನು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬದಲಾಗದೆ ಇರಿಸಲು ಕೇಂದ್ರ ಸರ್ಕಾರ ಬುಧವಾರ ನಿರ್ಧರಿಸಿದೆ.

ಹಣಕಾಸು ಸಚಿವಾಲಯ ಹೊರಡಿಸಿದ ಪ್ರಕಟಣೆಯ ಪ್ರಕಾರ, "2021-22ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ 2021-22ರ ಜುಲೈ 1 ರಿಂದ ಪ್ರಾರಂಭವಾಗಿ 2021 ರ ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳುವ ಅವಧಿಯಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವು ಮೊದಲಿನ ಅನ್ವಯವಾಗುವ ಪ್ರಸ್ತುತ ದರಗಳಿಂದ ಬದಲಾಗದೆ ಉಳಿಯುತ್ತದೆ '' ಎಂದು ತಿಳಿಸಿದೆ.

ಈ ಮೂಲಕ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಮತ್ತು ಇತರ ಅಂಚೆ ಕಚೇರಿ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಕೇಂದ್ರವು ಮೂರನೇ ಬಾರಿಗೆ ಬದಲಾಗದೆ ಇರಿಸಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಬದಲಾವಣೆ ಇಲ್ಲ

ಸುತ್ತೋಲೆಯ ಪ್ರಕಾರ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) 7.10% , ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) 6.8%, ಮತ್ತು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆ (POMIS) 6.6% ಬಡ್ಡಿ ಗಳಿಸುತ್ತದೆ.

ಇನ್ನು ಅಂಚೆ ಕಚೇರಿ ಉಳಿತಾಯ ಖಾತೆಯು 4% ಬಡ್ಡಿಯನ್ನು ಪಡೆಯುವುದನ್ನು ಮುಂದುವರಿಸುತ್ತದೆ. ಅಂಚೆ ಕಚೇರಿಯ 1 ವರ್ಷದ ಅವಧಿಯ ಠೇವಣಿ, 2 ವರ್ಷದ ಟಿಡಿ, 3 ವರ್ಷದ ಟಿಡಿ ಮತ್ತು 5 ವರ್ಷದ ಟಿಡಿ 5.5%, 5.5%, 5.5% ಮತ್ತು 6.7% ಬಡ್ಡಿದರವನ್ನು ಹೊಂದಿದೆ.

ಹಿರಿಯ ನಾಗರಿಕ ಉಳಿತಾಯ ಯೋಜನೆಯ ಬಡ್ಡಿದರವನ್ನು 7.4% ರಂತೆ ಬದಲಾಯಿಸಲಾಗಿಲ್ಲ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಠೇವಣಿ 7.6% ಬಡ್ಡಿಯನ್ನು ಪಡೆಯುತ್ತದೆ. ಕಿಸಾನ್ ವಿಕಾಸ್ ಪತ್ರ ಬಡ್ಡಿದರವನ್ನು 6.9% ರಂತೆ ಬದಲಾಯಿಸಲಾಗಿಲ್ಲ.

English summary

Interest rates of PPF, SCSS, SSY and other post office schemes kept unchanged by govt

The government on Wednesday decided to keep interest rates of small savings scheme unchanged for the July-September quarter as well.
Story first published: Thursday, July 1, 2021, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X