For Quick Alerts
ALLOW NOTIFICATIONS  
For Daily Alerts

ಐಟಿಆರ್ ಫೈಲಿಂಗ್ ಗಡುವು ಜನವರಿ 10, 2021ಕ್ಕೆ ವಿಸ್ತರಣೆ

By ಅನಿಲ್ ಆಚಾರ್
|

ಹಣಕಾಸು ವರ್ಷ 2019- 20ನೇ ಸಾಲಿಗೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡುವುದಕ್ಕೆ ಸರ್ಕಾರದಿಂದ ಗಡುವು ವಿಸ್ತರಣೆ ಮಾಡಲಾಗಿದೆ. ಸದ್ಯಕ್ಕೆ ಇದ್ದ ಡಿಸೆಂಬರ್ 31, 2020ರ ಗಡುವನ್ನು ಜನವರಿ 10, 2021ಕ್ಕೆ ವಿಸ್ತರಣೆ ಮಾಡಲಾಗಿದೆ. ಯಾರ ಖಾತೆಯನ್ನು ಆಡಿಟ್ (ಲೆಕ್ಕ ಪರಿಶೋಧನೆ) ಮಾಡುವ ಅಗತ್ಯ ಇಲ್ಲವೋ ಹಾಗೂ ಯಾರು ಐಟಿಆರ್ -1 ಅಥವಾ ಐಟಿಆರ್- 4 ಫೈಲ್ ಮಾಡುತ್ತಾರೋ ಅಂಥವರಿಗೆ ಇದು ಅನ್ವಯ ಆಗುತ್ತದೆ.

ಈ ಬಗ್ಗೆ ಡಿಸೆಂಬರ್ 30, 2020ಕ್ಕೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಮೂರನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಮೊದಲಿಗೆ ಜುಲೈ 31ರಿಂದ ನವೆಂಬರ್ 30ಕ್ಕೆ ಮತ್ತು ನಂತರ ಡಿಸೆಂಬರ್ 31, 2020ಕ್ಕೆ ವಿಸ್ತರಿಸಲಾಗಿತ್ತು.

ಡಿಸೆಂಬರ್ 31ರೊಳಗೆ ಐಟಿಆರ್ ಫೈಲಿಂಗ್ ಮಾಡದಿದ್ದಲ್ಲಿ 10,000 ರು. ದಂಡಡಿಸೆಂಬರ್ 31ರೊಳಗೆ ಐಟಿಆರ್ ಫೈಲಿಂಗ್ ಮಾಡದಿದ್ದಲ್ಲಿ 10,000 ರು. ದಂಡ

ಪತ್ರಿಕಾ ಹೇಳಿಕೆ ಪ್ರಕಾರ, ಯಾವ ಖಾತೆಯ ಆಡಿಟ್ ಮಾಡಬೇಕೋ ಅಂತರರಾಷ್ಟ್ರೀಯ ಹಣಕಾಸು ವ್ಯವಹಾರಗಳು ಇದ್ದಲ್ಲಿ ಫೆಬ್ರವರಿ 15, 2021ಕ್ಕೆ ವಿಸ್ತರಣೆ ಮಾಡಲಾಗಿದೆ. ಆಡಿಟ್ ವರದಿ ಸಲ್ಲಿಸುವುದಕ್ಕೆ ಸದ್ಯದ ಡಿಸೆಂಬರ್ 31, 2020ರಿಂದ ಜನವರಿ 31, 2021ಕ್ಕೆ ವಿಸ್ತರಣೆ ಮಾಡಲಾಗಿದೆ.

ಐಟಿಆರ್ ಫೈಲಿಂಗ್ ಗಡುವು ಜನವರಿ 10, 2021ಕ್ಕೆ ವಿಸ್ತರಣೆ

ಕೊರೊನಾ ಕಾರಣದಿಂದಾಗಿ ಐಟಿಆರ್ ಫೈಲಿಂಗ್ ಗಡುವು ವಿಸ್ತರಣೆಗಾಗಿ ತೆರಿಗೆದಾರರು ಮನವಿ ಮಾಡಿದ್ದರು.

English summary

ITR Filing For FY 2019- 20 Deadline Extended To January 10, 2021

ITR filing for FY 2019- 20 deadline extended to January 10, 2021 by government. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X