ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಚಂದಾದಾರಿಕೆಗೆ ಲಭ್ಯವಾಗಿದೆ. ಆಫರ್ ಬೆಲೆ 902 ರು ನಿಂದ 949 ರು ಎಂದು ನಿಗದಿ ಪಡಿಸಲಾಗಿದೆ, ಮೇ 4-9 ರಿಂದ 3.5% ಈಕ್ವಿಟಿಯೊಂದಿಗೆ ಚಂದಾದಾರಿಕೆ ಲಭ್ಯವಿದೆ. ಭಾರತದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮದ ಐಪಿಒ ಬಗ್ಗೆ ಗ್ರಾಹಕರು ಗಮನಿಸಬೇಕಾದ ಸಂಗತಿಗಳು ಇಲ್ಲಿವೆ.
ಈ ವಿಮಾ ಸಂಸ್ಥೆಯಲ್ಲಿ ಸಂಪೂರ್ಣ ಪಾಲುದಾರಿಕೆಯನ್ನು ಹೊಂದಿರುವ ಸರ್ಕಾರವು ಸುಮಾರು 22 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ 21,000 ಕೋಟಿ ರೂಪಾಯಿ($2.74 billion)ಗಳನ್ನು ಸಂಗ್ರಹಿಸಲು ಯೋಜಿಸಿದೆ. ಅಂದರೆ ಸರ್ಕಾರವು ಎಲ್‌ಐಸಿಯ ಸುಮಾರು ಶೇಕಡ 3.5 ಪಾಲನ್ನು ಮಾರಾಟ ಮಾಡಲು ಮುಂದಾಗಿದೆ.
- ಎಲ್ಐ ಸಿ ಐಪಿಒ ಮೇ 2ಕ್ಕೆ ಓಪನ್ ಆಗಲಿದೆ. ಆದರೆ, ಚಂದಾದಾರಿಕೆಗೆ ಮೇ 4ರಿಂದ ಹೂಡಿಕೆಗೆ ಅವಕಾಶ, ಮೇ 9ಕ್ಕೆ ಆಫರ್ ಕ್ಲೋಸ್ ಆಗಲಿದೆ. ಐಪಿಒ issue ಪ್ರಮಾಣ 20,557 ಕೋಟಿ ರು ಎಂದು ಅಂದಾಜಿಸಲಾಗಿದೆ.
- ಎಲ್‌ಐಸಿ ಉದ್ಯೋಗಿಗಳು ಮತ್ತು ರೀಟೇಲ್ ಹೂಡಿಕೆದಾರರಿಗೆ ರೂ.45/ಷೇರಿನಂತೆ ರಿಯಾಯಿತಿ ಹಾಗೂ ಎಲ್ಐಸಿ ಪಾಲಿಸಿದಾರರಿಗೆ ರೂ.60/ಷೇರಿನಂತೆ ರಿಯಾಯಿತಿ ಸಿಕ್ಕಿದೆ.
- ಎಲ್‌ಐಸಿ ಮಾರುಕಟ್ಟೆಯಲ್ಲಿ ಶೇಕಡ 66.2ರಷ್ಟು ದೈತ್ಯ ಪಾಲನ್ನು ಹೊಂದಿದೆ. ನೀವು ಈ ಐಪಿಒಗೆ ಅರ್ಜಿ ಸಲ್ಲಿಸಿದರೆ ದೇಶದ ದೊಡ್ಡ ಕಂಪನಿಯಲ್ಲಿ ಪಾಲುದಾರರಾಗುವ ಅವಕಾಶ ದೊರೆಯಲಿದೆ.

ಪಾಲಿಸಿದಾರರು ಮತ್ತು ಷೇರುದಾರರಲ್ಲದೆ, ಉಳಿದ ಷೇರುಗಳನ್ನು ಹೀಗೆ ಹಂಚಲಾಗುತ್ತದೆ:
- 50 ಪ್ರತಿಶತ ಅರ್ಹ ಸಾಂಸ್ಥಿಕ ಖರೀದಿದಾರರಿಗೆ (QIBs), 35 ಪ್ರತಿಶತ ಚಿಲ್ಲರೆ ಖರೀದಿದಾರರಿಗೆ ಮತ್ತು 15 ಪ್ರತಿಶತ ಸಾಂಸ್ಥಿಕ ಹೂಡಿಕೆದಾರರಿಗೆ. 50 ಪ್ರತಿಶತ QIB ಹಂಚಿಕೆಯಲ್ಲಿ, 60 ಪ್ರತಿಶತವನ್ನು ಆಂಕರ್ ಹೂಡಿಕೆದಾರರಿಗೆ ಮೀಸಲಿಡಲಾಗುತ್ತದೆ.
- ಎಲ್ಐಸಿ 6 ಟ್ರಿಲಿಯನ್ ರೂಪಾಯಿ ಮೌಲ್ಯದ್ದಾಗಿದೆ. ಇದು ಸರ್ಕಾರದ ಪರಿಷ್ಕೃತ ಅಂದಾಜಿನ ಪ್ರಕಾರ 5.39 ಟ್ರಿಲಿಯನ್‌ನ ಮೂಲ ಮೌಲ್ಯದ ಕೇವಲ 1.1 ಪಟ್ಟು ಹೆಚ್ಚಾಗಿದೆ.
- ಕೊರೊನಾ ಸಾಂಕ್ರಾಮಿಕದಿಂದ ಹೊಡೆತ ತಿಂದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ ಖಾಸಗೀಕರಣದತ್ತ ಮುಖ ಮಾಡಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ.
- ಭಾರತದಲ್ಲಿ ವಿಮಾ ಪ್ರೀಮಿಯಂ ಮತ್ತು ಜಿಡಿಪಿ ಅನುಪಾತವು ಪ್ರಸ್ತುತ ಶೇಕಡ 3.7ರಷ್ಟಿದೆ. ಇದು ಜಾಗತಿಕ ಸರಾಸರಿ ಶೇಕಡ 7.23 ಕ್ಕಿಂತ ಕಡಿಮೆಯಾಗಿದೆ. ಅಂದರೆ ಭಾರತದಲ್ಲಿ ವಿಮಾ ಕಂಪನಿಗಳಿಗೆ ವ್ಯಾಪಾರಕ್ಕೆ ದೊಡ್ಡ ಅವಕಾಶವಿದೆ
ಎಲ್‌ಐಸಿ ಐಪಿಒ ಹಂಚಿಕೆ ಪರಿಶೀಲನೆ ಮಾಡುವುದು ಹೇಗೆ?
ಅರ್ಜಿ ಸಲ್ಲಿಸುವುದು ಹೇಗೆ?
ನೆಟ್ ಬ್ಯಾಂಕಿಂಗ್, ಎಸ್ ಬಿಐ ಯೋನೋ ಆಪ್ ಮೂಲಕ ಎಲ್ಐಸಿ ಐಪಿಒ ಚಂದಾದಾರರಾಗಬಹುದು.
- ಹೂಡಿಕೆದಾರರ ವಿಭಾಗಕ್ಕೆ ತೆರಳಿ IPO/ e-IPO ಆಯ್ಕೆ ಮಾಡಿಕೊಳ್ಳಿ
- ಬ್ಯಾಂಕ್ ಖಾತೆ ವಿವರ, ಹೂಡಿಕೆ ಇನ್ನಿತರ ಅಗತ್ಯ ಮಾಹಿತಿಯನ್ನು ನೀಡಬೇಕು
- ಖಾತೆ ಪರಿಶೀಲನೆ ಬಳಿಕ, ಹೂಡಿಕೆದಾರರು 'Invest in IPO' ವಿಭಾಗಕ್ಕೆ ತೆರಳಬೇಕು.
- ನೀವು ಖರೀದಿಸಲಿರುವ ಷೇರುಗಳ ಸಂಖ್ಯೆ ಹಾಗೂ ಅದರ ಮೌಲ್ಯವನ್ನು ದಾಖಲಿಸಿ
- ಬಿಡ್ ಸಲ್ಲಿಸುವ ಮೊದಲು ನಿಬಂಧನೆಗಳು ಹಾಗೂ ನಿಯಮಗಳನ್ನು ಓದಿ ಅರ್ಥ ಮಾಡಿಕೊಂಡು ಮುಂದುವರೆಯಿರಿ
- ಬಿಡ್ ಮೊತ್ತ, ಷೇರುಗಳ ಸಂಖ್ಯೆ ಅಗತ್ಯ ದಾಖಲೆ ಎಲ್ಲವೂ ಸೂಕ್ತವೆನಿಸಿದ ಬಳಿಕ Apply now ಒತ್ತಿ
ಇದಾದ ಬಳಿಕ ಎಲ್‌ಐಸಿ ಐಪಿಒ ಚಂದಾದಾರರಾದ ನಂತರ, ಹೂಡಿಕೆದಾರರು ಷೇರುಗಳನ್ನು ಹಂಚಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಅದಕ್ಕಾಗಿ ನೀವು ನಾಲ್ಕು ಹಂತಗಳನ್ನು ಪಾಲನೆ ಮಾಡಬೇಕು. ಐಪಿಒ ಹಂಚಿಕೆ ಪರಿಶೀಲನೆ ಮಾಡಲು ಬಿಎಸ್ಇಇಂಡಿಯಾ ವೆಬ್ ತಾಣದಕ್ಕೆ ಹೋಗಿ ನಿಮ್ಮ ಅರ್ಜಿ ಸಂಖ್ಯೆ, ಪ್ಯಾನ್ ವಿವರ ಸಲ್ಲಿಸಿ ನಿಮ್ಮ ಚಂದಾದಾರಿಕೆಯನ್ನು ಪರಿಶೀಲಿಸಬಹುದು.


Click it and Unblock the Notifications