'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 2019 ರಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ದೆಹಲಿಯಿಂದ ವಾರಣಾಸಿಯ ಮಾರ್ಗದ ಸಂಚಾರ ಉದ್ಘಾಟನೆ ಮಾಡಲಾಗಿದೆ.
ಕೆಲವು ತಿಂಗಳುಗಳ ಹಿಂದೆ, ಸೆಪ್ಟೆಂಬರ್‌ನಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಒಂಬತ್ತು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಉದ್ಘಾಟಿಸಿದರು. ಹಬ್ಬದ ಸೀಸನ್‌ಗೂ ಮೊದಲು ಭಾರತದಾದ್ಯಂತ 34 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಆರಂಭ ಮಾಡಲಾಗಿದೆ.

ಈ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ ವೈಫೈ ಸಂಪರ್ಕ, ಮನರಂಜನೆಗಾಗಿ ಸ್ಕ್ರೀನ್, ವಿಸ್ತಾರವಾದ ಗಾಜಿನ ಕಿಟಕಿಗಳು ಮತ್ತು ಹಲವಾರು ಇತರ ಅತ್ಯಾಕರ್ಷಕ ಫೀಚರ್‌ಗಳನ್ನು ಹೊಂದಿದೆ. ಭಾರತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 15 ಅತ್ಯಂತ ಜನಪ್ರಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾರ್ಗಗಳ ವಿವರ ಇಲ್ಲಿದೆ.
ತಿರುನಲ್ವೇಲಿ-ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್‌ಪ್ರೆಸ್
ತಿರುನಲ್ವೇಲಿಯಿಂದ ಹೊರಡುವ ರೈಲು ವಿರುದುನಗರ, ಮಧುರೈ, ದಿಂಡಿಗಲ್, ತಿರುಚ್ಚಿರಾಪಳ್ಳಿ, ವಿಲ್ಲುಪುರಂ ಮತ್ತು ತಾಂಬರಂ ಸೇರಿದಂತೆ 14 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಇದು ಸರಿಸುಮಾರು 630 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಏಳು ಗಂಟೆ 50 ನಿಮಿಷಗಳಲ್ಲಿ ಚೆನ್ನೈ ತಲುಪುತ್ತದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ. ಟಿಕೆಟ್ ದರ 1,610 ರೂಪಾಯಿಯಿಂದ 3,055 ರೂಪಾಯಿ ನಡುವೆಯಿದೆ.
ಎಂಜಿಆರ್ ಚೆನ್ನೈ-ವಿಜಯವಾಡ ವಂದೇ ಭಾರತ್ ಎಕ್ಸ್‌ಪ್ರೆಸ್
ರೈಲು ಪ್ರಯಾಣವು ಚೆನ್ನೈನಿಂದ ಆರಂಭವಾಗಿ ರೇಣಿಗುಂಟಾ, ನೆಲ್ಲೂರು, ಓಂಗೋಲ್ ಮತ್ತು ತೆನಾಲಿ ಜಂಕ್ಷನ್ ಮೂಲಕ 516 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಆರು ಗಂಟೆ 40 ನಿಮಿಷಗಳಲ್ಲಿ ವಿಜಯವಾಡ ತಲುಪುತ್ತದೆ. ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. ಟಿಕೆಟ್ ದರ 1,420 ರೂಪಾಯಿಯಿಂದ 2,630 ರೂಪಾಯಿ ನಡುವೆ ಇದೆ.
ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
ಪಾಟ್ನಾದಿಂದ ನಿರ್ಗಮಿಸುವ ಈ ರೈಲು ಪಾಟ್ನಾ ಸಾಹೇಬ್, ಮೊಕಾಮೆಹ್ ಜಂಕ್ಷನ್, ಲಕ್ಕಿಸರೈ ಜಂಕ್ಷನ್, ಜಸಿದಿಹ್ ಜಂಕ್ಷನ್, ಜಮ್ತಾರಾ, ಅಸನ್ಸೋಲ್ ಜಂಕ್ಷನ್ ಮತ್ತು ದುರ್ಗಾಪುರದಲ್ಲಿ ಸಂಚರಿಸುತ್ತದೆ. ಈ ರೈಲು ಸುಮಾರು ಆರು ಗಂಟೆ 35 ನಿಮಿಷಗಳಲ್ಲಿ 535 ಕಿಲೋಮೀಟರ್ ದೂರವನ್ನು ಕ್ರಮಿಸಲು ಸಜ್ಜಾಗಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ. ಟಿಕೆಟ್ ದರ 1,505 ರೂಪಾಯಿಯಿಂದ 2,725 ರೂಪಾಯಿ ನಡುವೆ ಇದೆ.
ಸಿಕಂದರಾಬಾದ್ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್
ಸಿಕಂದರಾಬಾದ್‌ನಿಂದ (ಕಾಚೆಗುಡ) ಪ್ರಯಾಣ ಪ್ರಾರಂಭಿಸುವ ಈ ರೈಲು ಮಹೆಬೂಬ್‌ನಗರ, ಕರ್ನೂಲ್ ಸಿಟಿ, ಅನತಾಪುರ ಮತ್ತು ಧರ್ಮಾವರಂ ಜಂಕ್ಷನ್ ಮೂಲಕ 609 ಕಿಲೋಮೀಟರ್ ಪ್ರಯಾಣಿಸುತ್ತದೆ. ಬೆಂಗಳೂರಿಗೆ (ಯಶವಂತಪುರ) ಎಂಟೂವರೆ ಗಂಟೆಗಳಲ್ಲಿ ತಲುಪುತ್ತದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ. ಟಿಕೆಟ್ ದರ 1,540 ರೂಪಾಯಿಯಿಂದ 2,915 ರೂಪಾಯಿ ನಡುವೆ ಇದೆ.
ರೂರ್ಕೆಲಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್
ಪುರಿಯಿಂದ ಹೊರಡುವ ಈ ರೈಲು ಖುರ್ದಾ ರಸ್ತೆ, ಭುವನೇಶ್ವರ, ಕಟಕ್, ಧೆಂಕನಲ್, ತಾಲ್ಚೆರ್ ರಸ್ತೆ, ಅಂಗುಲ್, ರೈರಾಖೋಲ್, ಸಂಬಲ್ಪುರ್ ಸಿಟಿ ಮತ್ತು ಝಾರ್ಸುಗುಡಾ ಮೂಲಕ ಸಂಚಾರ ಮಾಡುತ್ತದೆ. ಇದು ಏಳು ಗಂಟೆ 45 ನಿಮಿಷಗಳ ಅವಧಿಯಲ್ಲಿ ರೂರ್ಕೆಲಾವನ್ನು ತಲುಪುತ್ತದೆ. ಸುಮಾರು 505 ಕಿಲೋಮೀಟರ್ ಸಂಚಾರ ಮಾಡುತ್ತದೆ. ಶನಿವಾರ ಹೊರತುಪಡಿಸಿ, ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತವೆ. ಟಿಕೆಟ್ ದರಗಳು 1,245 ರೂಪಾಯಿಯಿಂದ 2,595 ರೂಪಾಯಿವರೆಗೆ ಇದೆ.
ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಕಾಸರಗೋಡಿನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಈ ರೈಲು ಕಣ್ಣೂರು, ಕೋಝಿಕ್ಕೋಡ್, ಶೋರನೂರು, ತಿರೂರ್, ತ್ರಿಶೂರ್, ಎರ್ನಾಕುಲಂ, ಆಲಪ್ಪುಳ ಮತ್ತು ಕೊಲ್ಲಂ ಮೂಲಕ 573 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಇದು ಸರಿಸುಮಾರು ಎಂಟು ಗಂಟೆಗಳಲ್ಲಿ ತಿರುವನಂತಪುರಂ ತಲುಪುತ್ತದೆ. ಮಂಗಳವಾರ ಹೊರತುಪಡಿಸಿ ಪ್ರತಿದಿನ ಕಾರ್ಯನಿರ್ವಹಿಸುತ್ತದೆ. ಆದರೆ ಹಿಂದಿರುಗುವ ರೈಲು ಸೋಮವಾರ ಹೊರತುಪಡಿಸಿ ಪ್ರತಿದಿನ ಕಾರ್ಯನಿರ್ವಹಿಸುತ್ತದೆ. ರೈಲು ಟಿಕೆಟ್ ದರ 1,555 ರೂಪಾಯಿಯಿಂದ 2,835 ರೂಪಾಯಿ ಆಗಿದೆ.
ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್
ಉದಯಪುರದಿಂದ ಪ್ರಾರಂಭವಾಗುವ ರಾಜಸ್ಥಾನದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರಾಣಾಪ್ರತಾಪ್‌ನಗರ, ಮಾವ್ಲಿ ಜಂಕ್ಷನ್, ಚಿತ್ತೋರ್‌ಗಢ, ಭಿಲ್ವಾರಾ, ಬಿಜೈನಗರ್, ಅಜ್ಮೀರ್ ಜಂಕ್ಷನ್ ಮತ್ತು ಕಿಶನ್‌ಗಡ್ ಮೂಲಕ ಜೈಪುರವನ್ನು ತಲುಪುತ್ತದೆ. ಅಜ್ಮೀರ್ ಜಂಕ್ಷನ್ ಮತ್ತು ಕಿಶನ್‌ಗಡ್ ಮೂಲಕ ಜೈಪುರವನ್ನು ತಲುಪುತ್ತದೆ. ಆರು ಗಂಟೆ 15 ನಿಮಿಷಗಳ ಅವಧಿಯಲ್ಲಿ 435 ಕಿಲೋಮೀಟರ್‌ಗಳ ದೂರವನ್ನು ಕ್ರಮಿಸುವ ಈ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ. ಟಿಕೆಟ್ ದರ 1,275 ರೂಪಾಯಿಯಿಂದ 2,350 ರೂಪಾಯಿ ಆಗಿದೆ.
ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್
ಕೆಎಸ್‌ಆರ್ ಬೆಂಗಳೂರು ಜಂಕ್ಷನ್‌ನಿಂದ ಹೊರಡುವ ಈ ರೈಲು ಯಶವಂತಪುರ ಜಂಕ್ಷನ್, ದಾವಣಗೆರೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್ ಮೂಲಕ ಆರು ಗಂಟೆ 25 ನಿಮಿಷಗಳ ಅವಧಿಯಲ್ಲಿ ಧಾರವಾಡ ತಲುಪುತ್ತದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. ಈ ರೈಲಿನ ಟಿಕೆಟ್ ದರ 1,185 ರೂಪಾಯಿಯಿಂದ 2,265 ರೂಪಾಯಿ ಆಗಿದೆ.
ಇತರೆ ರೈಲು ಮಾರ್ಗಗಳು
* ಜಾಮ್‌ನಗರ-ಅಹಮದಾಬಾದ್ (ಸಾಬರಮತಿ) ವಂದೇ ಭಾರತ್ ಎಕ್ಸ್‌ಪ್ರೆಸ್
* ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
* ಮುಂಬೈ - ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್
* ಪಾಟ್ನಾ - ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್
* ರಾಣಿ ಕಮಲಾಪತಿ - ಜಬಲ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್
* ಇಂದೋರ್ - ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್
* ಜೋಧಪುರ - ಸಬರಮತಿ (ಅಹಮದಾಬಾದ್) ವಂದೇ ಭಾರತ್ ಎಕ್ಸ್‌ಪ್ರೆಸ್
* ಗೋರಖ್‌ಪುರ - ಲಕ್ನೋ ಚಾರ್‌ಬಾಗ್ ವಂದೇ ಭಾರತ್ ಎಕ್ಸ್‌ಪ್ರೆಸ್
* ತಿರುವನಂತಪುರಂ ಸೆಂಟ್ರಲ್ - ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ (ಕೊಟ್ಟಾಯಂ ಮೂಲಕ)
* ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್
* ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್
* ಅಜ್ಮೀರ್ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್
* ದೆಹಲಿ-ಡೆಹ್ರಾಡೂನ್ ವಂದೇ ಭಾರತ್ ಎಕ್ಸ್‌ಪ್ರೆಸ್
* ಹಜರತ್ ನಿಜಾಮುದ್ದೀನ್ - ರಾಣಿ ಕಮಲಪತಿ ವಂದೇ ಭಾರತ್ ಎಕ್ಸ್‌ಪ್ರೆಸ್
* ನವದೆಹಲಿ - ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್
* ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಜೆ&ಕೆ) ವಂದೇ ಭಾರತ್ ಎಕ್ಸ್‌ಪ್ರೆಸ್
* ನವದೆಹಲಿ - ಹಿಮಾಚಲ ಪ್ರದೇಶದ ಅಂಬ್ ಅಂಡೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
* ಚೆನ್ನೈ - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್
* ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್
* ನಾಗ್ಪುರ - ಬಿಲಾಸ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್
* ಹೊಸ ಜಲ್ಪೈಗುರಿ - ಗುವಾಹಟಿ ವಂದೇ ಭಾರತ್ ಎಕ್ಸ್‌ಪ್ರೆಸ್
* ಹೌರಾ - ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್
* ಹೌರಾ-ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
* ಗಾಂಧಿನಗರ - ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್
* ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್
* ಮುಂಬೈ- ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್


Click it and Unblock the Notifications