ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್ (ಎಫ್ಡಿ) ಬಡ್ಡಿದರವನ್ನು ಏರಿಕೆ ಮಾಡಿದೆ. ಪಿಎನ್ಬಿ ಫೆಬ್ರವರಿ 20, 2023ರಿಂದ ಜಾರಿಗೆ ಬರುವಂತೆ ಎಫ್ಡಿಯನ್ನು ಹೆಚ್ಚಳ ಮಾಡಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಬ್ಯಾಂಕ್ ಹೆಚ್ಚಿಸಿದೆ.
ಇನ್ನು ಈ ಬ್ಯಾಂಕ್ನಲ್ಲಿ ಹಿರಿಯ ನಾಗರಿಕರಿಗೆ ಎಫ್ಡಿ ಮೇಲೆ ಬಡ್ಡಿದರ ಲಭ್ಯವಾಗಲಿದೆ. ಹಿರಿಯ ನಾಗರಿಕರಿಗೆ 2 ವರ್ಷದಿಂದ 3 ವರ್ಷದವರೆಗಿನ ಎಫ್ಡಿ ಮೇಲೆ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಹಿಂದೆ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತಿತ್ತು. ಅಂದರೆ 25 ಮೂಲಾಂಕ ಬಡ್ಡಿದರ ಹೆಚ್ಚಿಸಿದೆ.
ಇನ್ನು ಇದೇ ಅವಧಿಗೆ ಅಂದರೆ 2 ವರ್ಷದಿಂದ 3 ವರ್ಷದವರೆಗಿನ ಎಫ್ಡಿ ಮೇಲೆ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಹಿಂದೆ ಶೇಕಡ 6.75ರಷ್ಟು ಬಡ್ಡಿದರವನ್ನು ನೀಡುತ್ತಿತ್ತು. ಇನ್ನು 80 ವರ್ಷಕ್ಕಿಂತ ಅಧಿಕ ವಯಸ್ಸಿನ ಹಿರಿಯ ನಾಗರಿಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇಕಡ 7.80ರಷ್ಟು ಬಡ್ಡಿದರ ನೀಡುತ್ತದೆ. ಈ ಹಿಂದೆ ಶೇಕಡ 7.55ರಷ್ಟು ಬಡ್ಡಿದರ ಲಭ್ಯವಾಗುತ್ತಿತ್ತು.

ಪಿಎನ್ಬಿಯ ನೂತನ ಬಡ್ಡಿದರ ನೋಡಿ
7-14 ದಿನಗಳು: 3.50 ಶೇಕಡ ಬಡ್ಡಿದರ
15-29 ದಿನಗಳು: 3.50 ಶೇಕಡ ಬಡ್ಡಿದರ
30-45 ದಿನಗಳು: 3.5 ಶೇಕಡ ಬಡ್ಡಿದರ
46-90 ದಿನಗಳು: 4.50 ಶೇಕಡ ಬಡ್ಡಿದರ
91-179 ದಿನಗಳು: 4.50 ಶೇಕಡ ಬಡ್ಡಿದರ
180-270 ದಿನಗಳು: 5.50 ಶೇಕಡ ಬಡ್ಡಿದರ
271 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ದಿನಗಳು: 5.80 ಶೇಕಡ ಬಡ್ಡಿದರ
1 ವರ್ಷ: 6.80 ಶೇಕಡ ಬಡ್ಡಿದರ
1 ವರ್ಷಕ್ಕಿಂತ ಮೇಲ್ಪಟ್ಟು 665 ದಿನಗಳು: 6.80 ಶೇಕಡ ಬಡ್ಡಿದರ
666 ದಿನಗಳು: 7.25 ಶೇಕಡ ಬಡ್ಡಿದರ
667 ದಿನದಿಂದ 2 ವರ್ಷದವರೆಗೆ: 6.80 ಶೇಕಡ ಬಡ್ಡಿದರ
2 ವರ್ಷಕ್ಕಿಂತ ಮೇಲ್ಪಟ್ಟು 3 ವರ್ಷದವರೆಗೆ: 7 ಶೇಕಡ ಬಡ್ಡಿದರ
3 ವರ್ಷಕ್ಕಿಂತ ಮೇಲ್ಪಟ್ಟು 5 ವರ್ಷದವರೆಗೆ: 6.50 ಶೇಕಡ ಬಡ್ಡಿದರ
5 ವರ್ಷಕ್ಕಿಂತ ಮೇಲ್ಪಟ್ಟು 10 ವರ್ಷದವರೆಗೆ: 6.50 ಶೇಕಡ ಬಡ್ಡಿದರ
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications