ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಪಿಎನ್‌ಬಿ ತನ್ನ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡುತ್ತಿದೆ. ಬ್ಯಾಂಕ್ ಮತ್ತೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಹೊಸ ಪರಿಷ್ಕೃತ ದರವು ಇಂದಿನಿಂದಲೇ ಜಾರಿಗೆ ಬರಲಿದೆ.
ಸಾಮಾನ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿದಾಗ ಸಾಲದ ಬಡ್ಡಿದರವನ್ನು ಎಲ್ಲಾ ಬ್ಯಾಂಕ್‌ಗಳು ಶೀಘ್ರವೇ ಏರಿಕೆ ಮಾಡುತ್ತದೆ. ಆದರೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಮಾತ್ರ ಶೀಘ್ರ ಏರಿಕೆ ಮಾಡುವುದಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಪಿಎನ್‌ಬಿ ಈ ತಿಂಗಳಿನಲ್ಲೇ ಎರಡು ಬಾರಿ ಬಡ್ಡಿದರವನ್ನು ಏರಿಕೆ ಮಾಡಿದೆ.
ಇನ್ನು ಈ ತಿಂಗಳ ಆರಂಭದಲ್ಲಿ ಪಂಜಾಬ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಹಾಗಾದರೆ ಈ ಹಿಂದೆ ಪಿಎನ್‌ಬಿ ಎಫ್‌ಡಿ ಬಡ್ಡಿದರವನ್ನು ಎಷ್ಟು ಏರಿಕೆ ಮಾಡಿದೆ ಹಾಗೂ ಈಗ ಎಷ್ಟು ಏರಿಕೆ ಮಾಡಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

ನೂತನ ಬಡ್ಡಿದರ ಎಷ್ಟಿದೆ ನೋಡಿ
ಪ್ರಸ್ತುತ ಪಿಎನ್‌ಬಿಯಲ್ಲಿ ಎಫ್‌ಡಿ ಬಡ್ಡಿದರವು ಸುಮಾರು ಶೇಕಡ 3-5.75ರ ನಡುವೆ ಇರಲಿದೆ. ಇನ್ನು ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರವು ಶೇಕಡ 6.25ರಷ್ಟು ಇರಲಿದೆ. 2 ಕೋಟಿ ರೂಪಾಯಿಯಿಂದ 10 ಕೋಟಿ ರೂಪಾಯಿವರೆಗಿನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವು ಶೇಕಡ 4.5-6.05ರ ನಡುವೆ ಇರಲಿದೆ.
ಇನ್ನು ಎರಡು ಕೋಟಿಗಿಂತ ಕಡಿಮೆ ಮೊತ್ತದ ಎನ್‌ಆರ್‌ಇ ಟರ್ಮ್ ಡೆಪಾಸಿಟ್ ಮೇಲಿನ ಗರಿಷ್ಠ ಬಡ್ಡಿದರವು ಶೇಕಡ 6 ಆಗಿದೆ. ಇನ್ನು 2 ವರ್ಷ ಅವಧಿಯ ಎರಡು ಕೋಟಿಯಿಂದ ಹತ್ತು ಕೋಟಿವರೆಗಿನ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವು ಶೇಕಡ 6.3ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.
* 7-14 ದಿನ: ಶೇಕಡ 3 ಬಡ್ಡಿದರ
* 15-29 ದಿನ: ಶೇಕಡ 3 ಬಡ್ಡಿದರ
* 30-45 ದಿನ: ಶೇಕಡ 3 ಬಡ್ಡಿದರ
* 46-90 ದಿನ: ಶೇಕಡ 3.25 ಬಡ್ಡಿದರ
* 91-179 ದಿನ: ಶೇಕಡ 4 ಬಡ್ಡಿದರ
* 180-270 ದಿನ: ಶೇಕಡ 4.53 ಬಡ್ಡಿದರ
* 271 ದಿನದಿಂದ- 1 ವರ್ಷಕ್ಕಿಂತ ಕಡಿಮೆ: ಶೇಕಡ 4.55 ಬಡ್ಡಿದರ
* 1 ವರ್ಷ: ಶೇಕಡ 5.41 ಬಡ್ಡಿದರ
* 1 ವರ್ಷಕ್ಕಿಂತ ಅಧಿಕ 2 ವರ್ಷದವರೆಗೆ: ಶೇಕಡ 5.56 ಬಡ್ಡಿದರ
* 2 ವರ್ಷಕ್ಕಿಂತ ಅಧಿಕ 3 ವರ್ಷದವರೆಗೆ: ಶೇಕಡ 5.77 ಬಡ್ಡಿದರ
* 3 ವರ್ಷಕ್ಕಿಂತ ಅಧಿಕ 5 ವರ್ಷದವರೆಗೆ: ಶೇಕಡ 6.23 ಬಡ್ಡಿದರ
* 5 ವರ್ಷಕ್ಕಿಂತ ಅಧಿಕ 10 ವರ್ಷದವರೆಗೆ: ಶೇಕಡ 6.41 ಬಡ್ಡಿದರ
* 1111 ದಿನ: ಶೇಕಡ 6.23 ಬಡ್ಡಿದರ
ಹಿರಿಯ ನಾಗರಿಕರಿಗೆ ಬಡ್ಡಿದರ ಎಷ್ಟಿದೆ?
* 7-14 ದಿನ: ಶೇಕಡ 3.50 ಬಡ್ಡಿದರ
* 15-29 ದಿನ: ಶೇಕಡ 3.50 ಬಡ್ಡಿದರ
* 30-45 ದಿನ: ಶೇಕಡ 3.50 ಬಡ್ಡಿದರ
* 46-90 ದಿನ: ಶೇಕಡ 3.75 ಬಡ್ಡಿದರ
* 91-179 ದಿನ: ಶೇಕಡ 4.50 ಬಡ್ಡಿದರ
* 180-270 ದಿನ: ಶೇಕಡ 5.00 ಬಡ್ಡಿದರ
* 271 ದಿನದಿಂದ- 1 ವರ್ಷಕ್ಕಿಂತ ಕಡಿಮೆ: ಶೇಕಡ 5.00 ಬಡ್ಡಿದರ
* 1 ವರ್ಷ: ಶೇಕಡ 5.80 ಬಡ್ಡಿದರ
* 1 ವರ್ಷಕ್ಕಿಂತ ಅಧಿಕ 2 ವರ್ಷದವರೆಗೆ: ಶೇಕಡ 5.95 ಬಡ್ಡಿದರ
* 2 ವರ್ಷಕ್ಕಿಂತ ಅಧಿಕ 3 ವರ್ಷದವರೆಗೆ: ಶೇಕಡ 6.00 ಬಡ್ಡಿದರ
* 3 ವರ್ಷಕ್ಕಿಂತ ಅಧಿಕ 5 ವರ್ಷದವರೆಗೆ: ಶೇಕಡ 6.25 ಬಡ್ಡಿದರ
* 5 ವರ್ಷಕ್ಕಿಂತ ಅಧಿಕ 10 ವರ್ಷದವರೆಗೆ: ಶೇಕಡ 6.10 ಬಡ್ಡಿದರ
* 1111 ದಿನ: ಶೇಕಡ 6.25 ಬಡ್ಡಿದರ


Click it and Unblock the Notifications