ಪಂಜಾಬ್ ನ್ಯಾಷನಲ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಬಡ್ಡಿದರವನ್ನು ಡಿಸೆಂಬರ್ 19, 2022ರಿಂದ ಜಾರಿಗೆ ಬರುವಂತೆ ಪಿಎನ್‌ಬಿ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಶೇಕಡ 3.50ರಿಂದ ಶೇಕಡ 7.00ರ ನಡುವೆ ಇದೆ. ಇನ್ನು ಪಿಎನ್‌ಬಿಯ ಎಫ್‌ಡಿಯ ಅಧಿಕ ಬಡ್ಡಿದರ 2 ಕೋಟಿ ರೂಪಾಯಿಗೆ ಶೇಕಡ 6.50ರಷ್ಟಾಗಿದೆ.
2 ಕೋಟಿ ರೂಪಾಯಿಗಿಂತ ಕಡಿಮೆಯ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರಿಗೆ ಅಧಿಕವಾಗಿ 50 ಮೂಲಾಂಕ ಬಡ್ಡಿದರ ಲಭ್ಯವಾಗಲಿದೆ. ಈ ಎಫ್‌ಡಿಯ ಅವಧಿಯು ಏಳು ವರ್ಷದಿಂದ ಹತ್ತು ವರ್ಷಗಳು ಆಗಿರಲಿದೆ.
ಪಿಎನ್‌ಬಿಯಲ್ಲಿ ಸ್ಪರ್ಧಾತ್ಪಕ ಬಡ್ಡಿದರವಿದೆ. ಬೇರೆ ಬೇರೆ ಅವಧಿ, ನಾಮಿನೇಷನ್, ಸಾಲ ಇತರೆ ಆಯ್ಕೆಗಳು ಕೂಡಾ ಪಿಎನ್‌ಬಿ ಎಫ್‌ಡಿಯಲ್ಲಿದೆ. ಪಿಎನ್‌ಬಿಯಲ್ಲಿ ಬೇರೆ ಬೇರೆ ಅವಧಿಗಳು ಇದ್ದು, ಅವಧಿಗೆ ಅನುಸಾರವಾಗಿ ಬಡ್ಡಿದರವು ಲಭ್ಯವಾಗಲಿದೆ.

2 ಕೋಟಿಗಿಂತ ಕಡಿಮೆ ಪಿಎನ್‌ಬಿ ಎಫ್‌ಡಿ ಬಡ್ಡಿದರ
* ಪಿಎನ್‌ಬಿ ಎಫ್‌ಡಿ ಬಡ್ಡಿದರವು ವಾರ್ಷಿಕವಾಗಿ ಶೇಕಡ 3.5ರಿಂದ ಶೇಕಡ 7.0ರವರೆಗೆ ಇದೆ.
* ವಾರ್ಷಿಕವಾಗಿ ಅಧಿಕ ಪಿಎನ್‌ಬಿ ಎಫ್‌ಡಿ ದರ ಶೇಕಡ 7.00 ಆಗಿದೆ.
* ಪಿಎನ್‌ಬಿ ತೆರಿಗೆ ಉಳಿತಾಯ ಎಫ್‌ಡಿ ಮೇಲೆ ವಾರ್ಷಿಕವಾಗಿ ಶೇಕಡ 6.10ರಷ್ಟು ಬಡ್ಡಿದರವನ್ನು ನಾವು ಪಡೆಯಬಹುದು. ಹಿರಿಯ ನಾಗರಿಕರಾದರೆ ವಾರ್ಷಿಕವಾಗಿ ಶೇಕಡ 6.60ರಷ್ಟು ಬಡ್ಡಿದರವನ್ನು ಪಡೆಯಬಹುದು.
ಇನ್ನು ಸ್ಥಳೀಯವಾಗಿ 2 ಕೋಟಿ ರೂಪಾಯಿಗಿಂತ ಕಡಿಮೆ ಡೆಪಾಸಿಟ್ ಮೇಲೆ 60 ವರ್ಷಕ್ಕಿಂತ ಅಧಿಕ ವಯಸ್ಸಿನ ಹಿರಿಯ ನಾಗರಿಕರು ಹಾಗೂ 80 ವರ್ಷಕ್ಕಿಂತ ಅಧಿಕ ವಯಸ್ಸಿನವರಿಗೆ ಅಧಿಕ 50 ಮೂಲಾಂಕ ಬಡ್ಡಿದರವು ಲಭ್ಯವಾಗಲಿದೆ. 5 ವರ್ಷಗಳ ಅವಧಿಗೆ 50 ಬಿಪಿಎಸ್ ಅಧಿಕ ಬಡ್ಡಿದರ ಹಾಗೂ 5 ವರ್ಷಕ್ಕಿಂತ ಅಧಿಕ ಅವಧಿಗೆ 80 ಬಿಪಿಎಸ್‌ಗಿಂತ ಅಧಿಕ ಬಡ್ಡಿದರ ಲಭ್ಯವಾಗಲಿದೆ. 80 ವರ್ಷಕ್ಕಿಂತ ಅಧಿಕ ವಯಸ್ಸಿನ ಸೂಪರ್ ಸೀನಿಯರ್‌ಗಳಿಗೆ ಅಧಿಕವಾಗಿ 80 ಮೂಲಾಂಕ ಬಡ್ಡಿದರವು ಲಭ್ಯವಾಗಲಿದೆ.
ಆಗಸ್ಟ್‌ನಲ್ಲಿ ಎಷ್ಟಿತ್ತು ಬಡ್ಡಿದರ
ಈ ಹಿಂದೆ ಆಗಸ್ಟ್‌ನಲ್ಲಿ ಆರ್‌ಬಿಐ ರೆಪೋ ದರ ಹೆಚ್ಚಿಸಿದ ಬಳಿಕ ಪಿಎನ್‌ಬಿಯಲ್ಲಿ 1 ವರ್ಷ 2 ವರ್ಷದ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 5.45ರಷ್ಟು ಬಡ್ಡಿದರ, ಹಿರಿಯ ನಾಗರಿಕರಿಗೆ 5.95ರಷ್ಟು ಇದೆ. 2 ವರ್ಷದಿಂದ 3 ವರ್ಷದವರೆಗಿನ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 5.50ರಷ್ಟು ಹಾಗೂ ಹಿರಿಯ ನಾಗರಿಕರಿಗೆ 6.00ರಷ್ಟು ಬಡ್ಡಿದರವಿದೆ. 3 ವರ್ಷದಿಂದ 5 ವರ್ಷದವರೆಗಿನ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 5.75ರಷ್ಟು ಬಡ್ಡಿದರ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.25ರಷ್ಟು ಬಡ್ಡಿದರವಿದೆ. 5 ವರ್ಷದಿಂದ 10 ವರ್ಷದವರೆಗಿನ ಎಫ್‌ಡಿ ಮೇಲೆ ಶೇಕಡ 5.60ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.10ರಷ್ಟು ಬಡ್ಡಿದರವಿದೆ. 271 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 4.50ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.00ರಷ್ಟು ಬಡ್ಡಿದರವಿತ್ತು.


Click it and Unblock the Notifications