For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ: ಪ್ರತಿ ತಿಂಗಳು 10 ಸಾವಿರ ಹೂಡಿಕೆ, 16 ಲಕ್ಷ ರೂ. ರಿಟರ್ನ್

|

ನಿಮ್ಮ ಹಣವನ್ನು ಸುರಕ್ಷಿತ ರೀತಿಯಲ್ಲಿ ಹೂಡಿಕೆ ಮಾಡಲು ನೀವು ಯೋಜಿಸುತ್ತಿದ್ದರೆ, ನಿಮಗಾಗಿ ಒಂದು ಉತ್ತಮ ಆಯ್ಕೆ ಇಲ್ಲಿದೆ. ನಿಶ್ಚಿತ ಠೇವಣಿ ಖಾತೆಗಳು ಅಥವಾ ಉಳಿತಾಯ ಖಾತೆಗಳನ್ನು ಹೊರತುಪಡಿಸಿ, ನೀವು ನಿಮ್ಮ ಹಣವನ್ನು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ಠೇವಣಿ ಬಡ್ಡಿದರಗಳು ತುಂಬಾನೆ ಇಳಿಕೆಯಾಗತೊಡಗಿದೆ. ಹೀಗಾಗಿ ಜನರು ಕಡಿಮೆ ಹಣದಲ್ಲಿ ಹೆಚ್ಚಿನ ಲಾಭ ಪಡೆಯಲು ಬಯಸಿದ್ದಲ್ಲಿ, ಅಂಚೆ ಕಚೇರಿ ಯೋಜನೆಗಳಲ್ಲಿನ ಹೂಡಿಕೆಗಳು ಭದ್ರತೆ ಮತ್ತು ಹೆಚ್ಚಿನ ಆದಾಯವನ್ನು ನೀಡುವಲ್ಲಿ ಯಶಸ್ವಿಯಾಗಿವೆ.

ಈ ಯೋಜನೆಯಲ್ಲಿ, ನಿಮ್ಮ ಹಣ ಮತ್ತು ಕಾಲಾನಂತರದಲ್ಲಿ ನೀವು ಗಳಿಸುವ ಬಡ್ಡಿ ಎರಡೂ ಸುರಕ್ಷಿತವಾಗಿರುತ್ತವೆ. ಹೆಚ್ಚು ಮುಖ್ಯವಾಗಿ, ಈ ಯೋಜನೆಯಲ್ಲಿ ಸಂಭಾವ್ಯ ಅಪಾಯವು ತುಲನಾತ್ಮಕವಾಗಿ ಅತ್ಯಲ್ಪವಾಗಿದೆ.

ಅಂಚೆ ಕಚೇರಿ ರಿಕರಿಂಗ್ ಡೆಪಾಸಿಟ್ ಖಾತೆ

ಅಂಚೆ ಕಚೇರಿ ರಿಕರಿಂಗ್ ಡೆಪಾಸಿಟ್ ಖಾತೆ

ಸರ್ಕಾರಿ ಖಾತರಿ ಯೋಜನೆ, ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ಖಾತೆಯು ಉತ್ತಮ ಬಡ್ಡಿದರಗಳನ್ನು ನೀಡುತ್ತದೆ. ನಿಮ್ಮ ಹೂಡಿಕೆಯನ್ನ ಕಡಿಮೆ ಮೊತ್ತದಿಂದ ಪ್ರಾರಂಭಿಸುವ ಅವಕಾಶವಿದೆ. ಇಲ್ಲಿ ಕನಿಷ್ಠ ಮೊತ್ತವು ರೂ 100 ರಷ್ಟಿರಬಹುದು ಮತ್ತು ಗರಿಷ್ಠ ಹೂಡಿಕೆಯ ಮೇಲೆ ಯಾವುದೇ ಮಿತಿ ಇಲ್ಲ.

ಹೀಗಾಗಿ ಈ ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ಖಾತೆಯಲ್ಲಿ ನಿಮಗೆ ಬೇಕಾದಷ್ಟು ಹಣವನ್ನು ನೀವು ಹೂಡಿಕೆ ಮಾಡಬಹುದು. ನೀವು ಠೇವಣಿ ಖಾತೆಯನ್ನು ಐದು ವರ್ಷಗಳ ಸ್ಥಿರ ಅವಧಿಗೆ ತೆರೆಯಬಹುದು.

 

ಬಡ್ಡಿ ದರ ಎಷ್ಟಿದೆ?

ಬಡ್ಡಿ ದರ ಎಷ್ಟಿದೆ?

ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ಖಾತೆಯು ಶೇಕಡಾ 5.8 ರ ಬಡ್ಡಿ ದರವನ್ನು ನೀಡುತ್ತದೆ. ಈ ಬಡ್ಡಿದರವು ಏಪ್ರಿಲ್ 1, 2020 ರಿಂದ ಜಾರಿಗೆ ಬಂದಿದ್ದು, ಕಾಂಪೌಂಡ್ ಬಡ್ಡಿದರವನ್ನು ಪ್ರತಿ ತ್ರೈಮಾಸಿಕದಲ್ಲಿ ಲೆಕ್ಕಹಾಕಲಾಗುತ್ತದೆ. ಇದು ಹೂಡಿಕೆದಾರರಿಗೆ ಹೆಚ್ಚಿನ ಗಳಿಕೆಗೆ ಸಹಾಯ ಮಾಡುತ್ತದೆ.

ಪೋಸ್ಟ್ ಆಫೀಸ್ RD ಯೋಜನೆ: 30 ವರ್ಷಗಳಲ್ಲಿ ಮಿಲಿಯನೇರ್ ಆಗುವುದು ಹೇಗೆ?ಪೋಸ್ಟ್ ಆಫೀಸ್ RD ಯೋಜನೆ: 30 ವರ್ಷಗಳಲ್ಲಿ ಮಿಲಿಯನೇರ್ ಆಗುವುದು ಹೇಗೆ?

ಪ್ರತಿ ತಿಂಗಳು 10,000 ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್

ಪ್ರತಿ ತಿಂಗಳು 10,000 ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್

ಉದಾಹರಣೆಗೆ, ನೀವು ಪ್ರತಿ ತಿಂಗಳು 10,000 ರೂ.ಗಳನ್ನು ಹೂಡಿಕೆ ಮಾಡಿದರೆ, ಪ್ರಸ್ತುತ ರೂ. 5.8 ರ ಬಡ್ಡಿದರದಲ್ಲಿ 10 ವರ್ಷಗಳಲ್ಲಿ ಆ ಮೊತ್ತವು ನಿಮಗೆ ಸುಮಾರು 16 ಲಕ್ಷ ರೂ.ಗಳನ್ನು ರಿಟರ್ನ್ಸ್ ನೀಡುತ್ತದೆ.

ಪ್ರತಿ ತಿಂಗಳು ಹಣ ಪಾವತಿಸಲೇಬೇಕು!

ಪ್ರತಿ ತಿಂಗಳು ಹಣ ಪಾವತಿಸಲೇಬೇಕು!

ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ ನೀವು ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಠೇವಣಿ ಮಾಡಬೇಕಾಗುತ್ತದೆ. ಒಂದು ವೇಳೆ ಆಕಸ್ಮಿಕವಾಗಿ, ನೀವು ಒಂದು ತಿಂಗಳು ಬಿಟ್ಟುಬಿಟ್ಟರೆ , ನಂತರ ನೀವು ಪ್ರತಿ ತಿಂಗಳು ಶೇಕಡಾ 1ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ, ನೀವು ಸತತವಾಗಿ ನಾಲ್ಕು ತಿಂಗಳು ತಪ್ಪಿಸಿಕೊಂಡರೆ, ನಂತರ ಖಾತೆ ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ. ಆದಾಗ್ಯೂ, ಡೀಫಾಲ್ಟ್ ದಿನಾಂಕದಿಂದ 2 ತಿಂಗಳೊಳಗೆ ನೀವು ಅದನ್ನು ಹಿಂಪಡೆಯಬಹುದು. ಆದರೆ ನೀವು ವಿಂಡೋವನ್ನು ಕಳೆದುಕೊಂಡರೆ, ಅದನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ.

ಗಮನಿಸಿ: ಅಂಚೆ ಕಚೇರಿ ಎಟಿಎಂ ಕಾರ್ಡ್ ನಿಯಮ ಅ. 1 ರಿಂದ ಬದಲಾವಣೆ, ಹೊಸದೇನು?ಗಮನಿಸಿ: ಅಂಚೆ ಕಚೇರಿ ಎಟಿಎಂ ಕಾರ್ಡ್ ನಿಯಮ ಅ. 1 ರಿಂದ ಬದಲಾವಣೆ, ಹೊಸದೇನು?

ಹಣ ಎಷ್ಟು ಹಿಂಪಡೆಯಬಹುದು?

ಹಣ ಎಷ್ಟು ಹಿಂಪಡೆಯಬಹುದು?

ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ಅಕೌಂಟ್ ಸ್ಕೀಮ್‌ನಲ್ಲಿ, ಅರ್ಜಿದಾರರು ಖಾತೆ ತೆರೆದ ಒಂದು ವರ್ಷದ ನಂತರ ಅವರ ಠೇವಣಿ ಬ್ಯಾಲೆನ್ಸ್‌ನ ಶೇಕಡಾ 50 ರಷ್ಟು ಹಣವನ್ನು ಹಿಂಪಡೆಯಲು ಅನುಮತಿಸುತ್ತದೆ. ಮುಂಗಡವಾಗಿ ನೀಡಿದ ಠೇವಣಿಗಳ ರಿಯಾಯಿತಿ ಸೌಲಭ್ಯವನ್ನು ಆರಿಸಿದರೆ, ಆರು ಕಂತುಗಳ ಮಿತಿಯನ್ನು ಮಾತ್ರ ಕಾಣಬಹುದು.

ಮಾಸಿಕ ಯೋಜನೆಗಳಲ್ಲಿ ಹಣಗಳಿಕೆಯ ಲಾಭ

ಮಾಸಿಕ ಯೋಜನೆಗಳಲ್ಲಿ ಹಣಗಳಿಕೆಯ ಲಾಭ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣ, ಅದರ ಮೇಲೆ ಪಡೆದ ಬಡ್ಡಿ ಮೊತ್ತವನ್ನು 12 ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ನಂತರ ನಿಮಗೆ ಪ್ರತಿ ತಿಂಗಳು ಹಣವನ್ನು ನೀಡಲಾಗುತ್ತದೆ. ಪ್ರಸ್ತುತ, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 6.6 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ.

English summary

Post Office: Invest Rs 10000 Every Month And Get Rs 16 Lakh Return

Fixed Deposit accounts or Savings accounts, you can invest your money in Post Office Savings Scheme, or more specifically, the Post Office Recurring Deposit Account scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X