For Quick Alerts
ALLOW NOTIFICATIONS  
For Daily Alerts

ಪೋಸ್ಟ್‌ ಆಫೀಸ್, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಎಲ್ಲಿ ಆರ್‌ಡಿಗೆ ಅಧಿಕ ಬಡ್ಡದರ?

|

ನಾವು ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ಯಾವಾಗಲೂ ಕೂಡಾ ಸುರಕ್ಷತೆಯನ್ನು ನೋಡಿಕೊಳ್ಳುತ್ತೇವೆ. ಹೆಚ್ಚಾಗಿ ನಾವು ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹಾಗೂ ರಿಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಅಲ್ಲಿ ಹೂಡಿಕೆ ಮಾಡುವುದು ಸೂಕ್ತ ಹಾಗೂ ಸುರಕ್ಷಿತ ಎಂದು ನಂಬಿದ್ದೇವೆ.

ನಮ್ಮ ಕೈಯಲ್ಲಿ ಅಧಿಕ ಹಣ ಇದೇ ಎಂದಾದರೆ ನಾವು ಫಿಕ್ಸಿಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಬಹುದು. ಆದರೆ ನಾವು ಪ್ರತಿ ತಿಂಗಳು ಹೂಡಿಕೆ ಮಾಡಿ ಹಣವನ್ನು ಉಳಿತಾಯ ಮಾಡಲು ಬಯಸಿದರೆ ಅದಕ್ಕೆ ಉತ್ತಮ ಆಯ್ಕೆ ಆರ್‌ಡಿ ಆಗಿದೆ. ನಾವು ಆರ್‌ಡಿಯಲ್ಲಿ ಮಾಸಿಕವಾಗಿ ಹೂಡಿಕೆ ಮಾಡಿ ಕೊನೆಗೆ ಅಧಿಕ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ ಹಲವಾರು ಬ್ಯಾಂಕುಗಳು ಆರ್‌ಡಿ ಮೇಲೆ ಅತೀ ಉತ್ತಮ, ಆಕರ್ಷಕ ಬಡ್ಡಿದರವನ್ನು ನೀಡುತ್ತದೆ. ನಾವು ಆರ್‌ಡಿಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ.

ಎಫ್‌ಡಿ, ಆರ್‌ಡಿ ಹಾಗೂ ಪಿಪಿಎಫ್​ ಬಡ್ಡಿ ಆದಾಯಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ?ಎಫ್‌ಡಿ, ಆರ್‌ಡಿ ಹಾಗೂ ಪಿಪಿಎಫ್​ ಬಡ್ಡಿ ಆದಾಯಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ?

ಈಗಿನ ಇಂಟರ್‌ನೆಟ್ ಯುಗದಲ್ಲಿ ಪ್ರತಿ ತಿಂಗಳು ನಮ್ಮ ಖಾತೆಯಿಂದಲೇ ಆರ್‌ಡಿ ಕಡಿತವಾಗುವಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ. ಮೆಚ್ಯೂರಿಟಿ ಬಳಿಕ ನಾವು ಹೂಡಿಕೆ ಮಾಡಿದ ಮೊತ್ತದ ಜೊತೆಯಲ್ಲಿ ನಮಗೆ ಬಡ್ಡಿದರವು ಕೂಡಾ ಲಭ್ಯವಾಗಲಿದೆ. ಆದರೆ ನಾವು ಎಲ್ಲಿ ಆರ್‌ಡಿ ಹೂಡಿಕೆ ಮಾಡುವುದು ಉತ್ತಮ, ಎಲ್ಲಿ ಅಧಿಕ ಬಡ್ಡಿದರ ಲಭ್ಯವಾಗಲಿದೆ ಎಂಬ ಬಗ್ಗೆ ಹಲವಾರು ಮಂದಿಗೆ ಗೊಂದಲಗಳು ಇದೆ. ಆದ್ದರಿಂದ ನಾವಿಲ್ಲಿ ಎಸ್‌ಬಿಐ, ಅಂಚೆ ಕಚೇರಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ ಆರ್‌ಡಿ ಬಡ್ಡಿದರವನ್ನು ವಿವರಿಸಿ, ಹೋಲಿಕೆ ಮಾಡಿದ್ದೇವೆ. ತಿಳಿಯಲು ಮುಂದೆ ಓದಿ......

 ಅಂಚೆ ಕಚೇರಿ ಆರ್‌ಡಿ ಬಡ್ಡಿದರ

ಅಂಚೆ ಕಚೇರಿ ಆರ್‌ಡಿ ಬಡ್ಡಿದರ

ಈ ಹಣಕಾಸು ವರ್ಷದಲ್ಲಿ ಜುಲೈ -ಸೆಪ್ಟೆಂಬರ್ ಅವಧಿಗೆ ಅಂಚೆ ಕಚೇರಿ ಆರ್‌ಡಿ ಲಭ್ಯವಿದೆ. ಈ ಆರ್‌ಡಿ 5 ವರ್ಷದ (60 ತಿಂಗಳು) ಆರ್‌ಡಿ ಆಗಿದೆ. ಇದು ಫಿಕ್ಸಿಡ್ ಅವಧಿ ಆರ್‌ಡಿ ಆಗಿದೆ. ಅಂಚೆ ಕಚೇರಿಯಲ್ಲಿ ಈ ಆರ್‌ಡಿ ಶೇಕಡ 5.8 ಬಡ್ಡಿದರ ನೀಡಲಾಗುತ್ತದೆ. ಸಂಬಂಧಿತ ಅಂಚೆ ಕಚೇರಿಗೆ ನಾವು ಅರ್ಜಿ ಸಲ್ಲಿಕೆ ಮಾಡುವ ಮೂಲಕ ಈ ಆರ್‌ಡಿಯನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಣೆ ಮಾಡಬಹುದಾಗಿದೆ. ಮೊದಲು ಈ ಆರ್‌ಡಿ ಖಾತೆಯನ್ನು ತೆರೆದ ಸಂದರ್ಭದಲ್ಲಿ ಎಷ್ಟು ಬಡ್ಡಿದರ ಇತ್ತೋ ಅದೇ ಬಡ್ಡಿದರವು ವಿಸ್ತರಣೆ ಅವಧಿಯಲ್ಲೂ ಅನ್ವಯವಾಗಲಿದೆ.

ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?

 ಎಚ್‌ಡಿಎಫ್‌ಸಿ ಬ್ಯಾಂಕ್ ಆರ್‌ಡಿ ಬಡ್ಡಿದರ

ಎಚ್‌ಡಿಎಫ್‌ಸಿ ಬ್ಯಾಂಕ್ ಆರ್‌ಡಿ ಬಡ್ಡಿದರ

ಆರು ತಿಂಗಳಿನಿಂದ 120 ತಿಂಗಳವರೆಗಿನ ಆರ್‌ಡಿಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಹೊಂದಿದೆ. ಇದರ ಬಡ್ಡಿದರವು ಶೇಕಡ 3.75ರಿಂದ ಶೇಕಡ 5.75ರ ನಡುವೆ ಇರಲಿದೆ. 5 ವರ್ಷದ (60 ತಿಂಗಳು) ಆರ್‌ಡಿ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಶೇಕಡ 6.70ರಷ್ಟು ಬಡ್ಡಿದರವನ್ನು ನೀಡುತ್ತದೆ.

6 ತಿಂಗಳು: ಶೇಕಡ 3.75, ಹಿರಿಯ ನಾಗರಿಕರು ಶೇಕಡ 4.25
9 ತಿಂಗಳು: ಶೇಕಡ 4.65, ಹಿರಿಯ ನಾಗರಿಕರು ಶೇಕಡ 5.15
12 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
15 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
24 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
27 ತಿಂಗಳು: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00
36 ತಿಂಗಳು: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00
39 ತಿಂಗಳು: ಶೇಕಡ 5.70, ಹಿರಿಯ ನಾಗರಿಕರು ಶೇಕಡ 6.20
48 ತಿಂಗಳು: ಶೇಕಡ 5.70, ಹಿರಿಯ ನಾಗರಿಕರು ಶೇಕಡ 6.20
60 ತಿಂಗಳು: ಶೇಕಡ 5.70, ಹಿರಿಯ ನಾಗರಿಕರು ಶೇಕಡ 6.20
90 ತಿಂಗಳು: ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.50
120 ತಿಂಗಳು: ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.50

 

 ಐಸಿಐಸಿಐ ಬ್ಯಾಂಕ್ ಆರ್‌ಡಿ ಬಡ್ಡಿದರ

ಐಸಿಐಸಿಐ ಬ್ಯಾಂಕ್ ಆರ್‌ಡಿ ಬಡ್ಡಿದರ

ಆರು ತಿಂಗಳಿನಿಂದ ಹತ್ತು ವರ್ಷದ ಅವಧಿವರೆಗಿನ ಆರ್‌ಡಿಯನ್ನು ಐಸಿಐಸಿಐ ಬ್ಯಾಂಕ್ ಹೊಂದಿದೆ. ಮೂರರಿಂದ ಐದು ವರ್ಷದ ಅವಧಿಯ ಆರ್‌ಡಿ ಮೇಲೆ ಐಸಿಐಸಿಐ ಬ್ಯಾಂಕ್‌ನಲ್ಲಿ ಶೇಕಡ 5.70ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಅದಕ್ಕಿಂತ ಅಧಿಕ ಅವಧಿಯ ಆರ್‌ಡಿ ಮೇಲೆ ಶೇಕಡ 5.75ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.

6 ತಿಂಗಳು: ಶೇಕಡ 3.75, ಹಿರಿಯ ನಾಗರಿಕರು ಶೇಕಡ 4.25
9 ತಿಂಗಳು: ಶೇಕಡ 4.65, ಹಿರಿಯ ನಾಗರಿಕರು ಶೇಕಡ 5.15
12 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
15 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
18 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
21 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
24 ತಿಂಗಳು: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85
27 ತಿಂಗಳು: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00
30 ತಿಂಗಳು: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00
33 ತಿಂಗಳು: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00
36 ತಿಂಗಳು: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00
3 ವರ್ಷದ ನಂತರ 5 ವರ್ಷದವರೆಗೆ: ಶೇಕಡ 5.70, ಹಿರಿಯ ನಾಗರಿಕರು ಶೇಕಡ 6.20
5 ವರ್ಷದ ನಂತರ 10 ವರ್ಷದವರೆಗೆ: ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.50

 

 ಎಸ್‌ಬಿಐ ಆರ್‌ಡಿ ಬಡ್ಡಿದರ

ಎಸ್‌ಬಿಐ ಆರ್‌ಡಿ ಬಡ್ಡಿದರ

7 ದಿನದಿಂದ 45 ದಿನ: ಶೇಕಡ 2.90, ಹಿರಿಯ ನಾಗರಿಕರು ಶೇಕಡ 3.40
46 ದಿನದಿಂದ 179 ದಿನ: ಶೇಕಡ 3.90, ಹಿರಿಯ ನಾಗರಿಕರು ಶೇಕಡ 4.40
180 ದಿನದಿಂದ 210 ದಿನ: ಶೇಕಡ 4.40, ಹಿರಿಯ ನಾಗರಿಕರು ಶೇಕಡ 4.90
211 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇಕಡ 4.60, ಹಿರಿಯ ನಾಗರಿಕರು ಶೇಕಡ 5.10
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: ಶೇಕಡ 5.30 ಹಿರಿಯ ನಾಗರಿಕರು ಶೇಕಡ 5.80
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: ಶೇಕಡ 5.35 ಹಿರಿಯ ನಾಗರಿಕರು ಶೇಕಡ 5.85
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: ಶೇಕಡ 5.45, ಹಿರಿಯ ನಾಗರಿಕರು ಶೇಕಡ 5.95
5 ವರ್ಷದಿಂದ 10 ವರ್ಷದವರೆಗೆ: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.30

English summary

Post Office RD vs SBI Vs ICICI Bank Vs HDFC Bank: Here's Highest recurring deposit interest rates

Post Office RD vs SBI Vs ICICI Bank Vs HDFC Bank: Which one gives Highest recurring deposit interest rates. Here;s a comparison Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X