For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ: ಪಿಪಿಎಫ್, ಸುಕನ್ಯ ಯೋಜನೆ, ಎನ್‌ಎಸ್‌ಸಿ ಬಡ್ಡಿದರ ಶೀಘ್ರ ಏರಿಕೆ

|

ಸ್ಟಾಕ್ ಮಾರುಕಟ್ಟೆಯು ಕೆಳಕ್ಕೆ ಕುಸಿದಿದೆ. ಕ್ರಿಪ್ಟೋಕರೆನ್ಸಿ ಕೂಡಾ ಕುಸಿತ ಕಂಡಿದೆ. ಈ ನಡುವೆ ಜನರ ಮೊಗದಲ್ಲಿ ನಗು ಮೂಡಿಸಲಿದೆ ಅಂಚೆ ಕಚೇರಿ ಯೋಜನೆಗಳು. ಅಂಚೆ ಕಚೇರಿಯ ಪ್ರಮುಖ ಯೋಜನೆಗಳಾದ ಪಿಪಿಎಫ್, ಸುಕನ್ಯ ಯೋಜನೆ, ಎನ್‌ಎಸ್‌ಸಿ ಬಡ್ಡಿದರವು ಶೀಘ್ರವೇ ಏರಿಕೆಯಾಗಲಿದೆ.

ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಬಾಂಡ್‌ಗಳ ಬಡ್ಡಿದರವು ತೀವ್ರ ಏರಿಕೆಯಾಗಿದೆ. ಈ ನಡುವೆ ಈ ಬಾಂಡ್‌ಗಳಿಗೆ ಲಿಂಕ್ ಆಗಿರುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವು ಕೂಡಾ ಏರಿಕೆಯಾಗುವ ಸಾಧ್ಯತೆ ಇದೆ.

 ಬ್ಯಾಂಕ್‌ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತೆ ಈ ಯೋಜನೆ! ಬ್ಯಾಂಕ್‌ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತೆ ಈ ಯೋಜನೆ!

2011ರ ಗೋಪಿನಾಥ್ ಸಮಿತಿಯು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವು ಅದೇ ಸಂದರ್ಭದ ಸರ್ಕಾರಿ ಸೆಕ್ಯುರಿಟಿಗಳಿಗಿಂತ ಸುಮಾರು 25-100 ಮೂಲಾಂಕಗಳು ಹೆಚ್ಚಳವಿರಬೇಕು ಎಂದು ಹೇಳಿದೆ. ಹತ್ತು ವರ್ಷದ ಬಾಂಡ್ ಕಳೆದ 12 ತಿಂಗಳಿನಲ್ಲಿ ಸುಮಾರು 140 ಮೂಲಾಂಕ ಏರಿದ್ದು, ಶೇಕಡ 6.04ರಿಂದ ಶೇಕಡ 7.46ಕ್ಕೆ ತಲುಪಿದೆ. ಏಪ್ರಿಲ್-ಜೂನ್ ತಿಂಗಳಿನಲ್ಲಿ ಶೇಕಡ 7.31ರಷ್ಟಿತ್ತು.

 ಸಿಹಿಸುದ್ದಿ: ಪಿಪಿಎಫ್, ಸುಕನ್ಯ ಯೋಜನೆ ಬಡ್ಡಿದರ ಶೀಘ್ರ ಏರಿಕೆ

ಇನ್ನು ಈ ವಿಧಾನವನ್ನು ನಾವು ನೋಡಿದಾಗ ಪಿಪಿಎಫ್ ಬಡ್ಡಿದರವು ಶೇಕಡ 7.81ಕ್ಕೆ ಏರಿಕೆಯಾಗಬೇಕಾಗಿದೆ. ಇನ್ನು ಈ ಸಂದರ್ಭದಲ್ಲೇ ಸುಕನ್ಯ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವು ಶೇಕಡ 8ಕ್ಕಿಂತ ಅಧಿಕವಾಗಬೇಕಾಗಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಏರಿಕೆ ಮಾಡಿದರೆ, ಆರ್‌ಬಿಐ ಬಾಂಡ್‌ಗಳ ಬಡ್ಡಿದರವು ಕೂಡಾ ಹೆಚ್ಚಳವಾಗಬೇಕಾಗಿದೆ. ಈ ಬಡ್ಡಿದರವು ಎನ್‌ಎಸ್‌ಸಿಗೆ ಲಿಂಕ್ ಆಗಿದೆ. ಎನ್‌ಎಸ್‌ಸಿ ಮೇಲೆ ಮೂಲಾಂಕ 35ಕ್ಕಿಂತ ಅಧಿಕ ಬಡ್ಡಿದರ ನೀಡಲಾಗುತ್ತದೆ.

ಅಂಚೆ ಕಚೇರಿ ಯೋಜನೆಗಳ ಬಡ್ಡಿದರ ಎಷ್ಟು ಹೆಚ್ಚಾಗಬಹುದು?

ಪಿಪಿಎಫ್: 50 ಬಿಪಿಎಸ್, ಪ್ರಸ್ತುತ ಬಡ್ಡಿದರ ಶೇಕಡ 7.10, ನಿರೀಕ್ಷಿತ ಬಡ್ಡಿದರ ಶೇಕಡ 7.81
ಸುಕನ್ಯ ಸಮೃದ್ಧಿ ಯೋಜನೆ: 75 ಬಿಪಿಎಸ್, ಪ್ರಸ್ತುತ ಬಡ್ಡಿದರ ಶೇಕಡ 7.60, ನಿರೀಕ್ಷಿತ ಬಡ್ಡಿದರ ಶೇಕಡ 8.06
ಹಿರಿಯ ನಾಗರಿಕರ ಉಳಿತಾಯ ಯೋಜನೆ: 100 ಬಿಪಿಎಸ್, ಪ್ರಸ್ತುತ ಬಡ್ಡಿದರ ಶೇಕಡ 7.40, ನಿರೀಕ್ಷಿತ ಬಡ್ಡಿದರ ಶೇಕಡ 8.31

2021ರ ಮಾರ್ಚ್‌ನಲ್ಲಿ ಬಡ್ಡಿದರವು ಇಳಿಕೆಯಾಗಿದೆ. ಪಿಪಿಎಫ್ ಬಡ್ಡಿದರವನ್ನು ಶೇಕಡ 6.4ಕ್ಕೆ ಇಳಿಕೆ ಮಾಡಲಾಗಿದ್ದರೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿದರವನ್ನು ಶೇಕಡ 6.5ಕ್ಕೆ ಇಳಿಸಲಾಗಿದೆ. ಇನ್ನು ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿದರವನ್ನು ಶೇಕಡ 6.7ಕ್ಕೆ ಇಳಿಸಲಾಗಿದೆ. ಆ ಬಳಿಕ ಸಣ್ಣ ಉಳಿತಾಯ ಯೋಜನೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಆದರೆ ಈಗ ಬಡ್ಡಿದರವನ್ನು ಶೀಘ್ರದಲ್ಲೇ ಏರಿಕೆ ಮಾಡುವ ಸಾಧ್ಯತೆ ಇದೆ.

English summary

PPF, Sukanya Samriddhi Yojana and NSC Interest Rates to be Hiked Soon

Government bond yields have risen sharply in the past one year, raising hopes that the interest rates of PPF, Sukanya Samriddhi Yojana and NSC will be hiked soon.
Story first published: Thursday, June 30, 2022, 17:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X