For Quick Alerts
ALLOW NOTIFICATIONS  
For Daily Alerts

ಫೆ. 1ರಿಂದ ಈ ಎಟಿಎಂಗಳಲ್ಲಿ PNB ಗ್ರಾಹಕರು ಹಣ ಡ್ರಾ ಮಾಡಲು ಆಗಲ್ಲ

By ಅನಿಲ್ ಆಚಾರ್
|

ವಂಚನೆಯನ್ನು ತಡೆಯುವ ಉದ್ದೇಶದಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ದೊಡ್ಡ ಹೆಜ್ಜೆಯನ್ನು ಇರಿಸಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 1, 2021ರಿಂದ ನಾನ್ EMV ಆಟೋಮೆಟೆಡ್ ಟೆಲ್ಲರ್ ಮಶೀನ್ಸ್ ನಿಂದ (ATM) ಗ್ರಾಹಕರು ಹಣ ವಿಥ್ ಡ್ರಾ ಮಾಡಲು ಅವಕಾಶ ನೀಡುವುದಿಲ್ಲ. ಪಿಎನ್ ಬಿ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದೆ. ಹಣಕಾಸು ಹಾಗೂ ಹಣಕಾಸು ಹೊರತಾದ ಎರಡೂ ಬಗೆಯ ನಾನ್ EMV ಎಟಿಎಂ ವಹಿವಾಟನ್ನು ಫೆಬ್ರವರಿ 1ರಿಂದ ನಿರ್ಬಂಧಿಸುವುದಾಗಿ ಬ್ಯಾಂಕ್ ತಿಳಿಸಿದೆ.

"ಎಟಿಎಂಗಳಲ್ಲಿ ವಂಚನೆ ವ್ಯವಹಾರಗಳಿಂದ ನಮ್ಮ ಗೌರವಾನ್ವಿತ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ನಾನ್ EMV ಎಟಿಎಂಗಳಲ್ಲಿ ಫೆಬ್ರವರಿ 1, 2021ರಿಂದ ವಹಿವಾಟು ನಿರ್ಬಂಧಿಸಲಾಗುವುದು. ಸುರಕ್ಷಿತವಾಗಿರಿ!" ಎಂದು ಬ್ಯಾಂಕ್ ನಿಂದ ಟ್ವೀಟ್ ಮಾಡಲಾಗಿದೆ.

ನಾನ್ EMV ಎಟಿಎಂ ಅಂದರೇನು?
ನಾನ್ EMV ಎಟಿಎಂಗಳು ಅಂದರೆ ಮ್ಯಾಗ್ನೆಟಿಕ್ ಸ್ಟ್ರಿಪ್ಸ್ ಮೂಲಕ ಡೇಟಾವನ್ನು ಗ್ರಹಿಸುತ್ತದೆ. ಆ ವ್ಯವಹಾರ ನಡೆಯುವ ವೇಳೆ ಎಟಿಎಂ ಕಾರ್ಡ್ ಅನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. 2020ರ ಡಿಸೆಂಬರ್ ಬ್ಯಾಂಕ್ ನಿಂದ ಎಟಿಎಂ ಹಣ ವಿಥ್ ಡ್ರಾ ನಿಯಮ ಬದಲಾಗಿದೆ. ಪಿಎನ್ ಬಿ ಖಾತೆದಾರರು ಬೆಳಗ್ಗೆ 8ರಿಂದ ರಾತ್ರಿ 8ರ ಮಧ್ಯೆ ರು. 10,000 ಮತ್ತು ಮೇಲ್ಪಟ್ಟ ವಿಥ್ ಡ್ರಾ ಮಾಡುವಂತಿದಲ್ಲಿ ಒನ್ ಟೈಮ್ ಪಾಸ್ ವರ್ಡ್ (OTP) ಬರುತ್ತದೆ.

ಬಜೆಟ್ 2021: ಏನಾಗಬಹುದು ಷೇರುಪೇಟೆ ಹಾದಿ? ಇಲ್ಲಿದೆ ಇತಿಹಾಸದ ಉದಾಹರಣೆಬಜೆಟ್ 2021: ಏನಾಗಬಹುದು ಷೇರುಪೇಟೆ ಹಾದಿ? ಇಲ್ಲಿದೆ ಇತಿಹಾಸದ ಉದಾಹರಣೆ

ಒಟಿಪಿ ಬಾರದೆ ನಗದು ವಿಥ್ ಡ್ರಾ ಸಾಧ್ಯವಾಗುವುದಿಲ್ಲ. ಒಟಿಪಿ ಆಧಾರಿತ ನಗದು ವಿಥ್ ಡ್ರಾ ಪರಿಚಯಿಸುವ ಮೂಲಕ ಪಿಎನ್ ಬಿ ಎಟಿಎಂನಲ್ಲಿ ಮತ್ತೊಂದು ಸುರಕ್ಷತಾ ಕವಚ ಪರಿಚಯಿಸಿದಂತಾಗುತ್ತದೆ.

ಫೆ. 1ರಿಂದ ಈ ಎಟಿಎಂಗಳಲ್ಲಿ PNB ಗ್ರಾಹಕರು ಹಣ ಡ್ರಾ ಮಾಡಲು ಆಗಲ್ಲ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂನಲ್ಲಿ ಒಟಿಪಿ ಆಧಾರಿತ ವಿಥ್ ಡ್ರಾ ಹೇಗೆ?
-ಪಿಎನ್ ಬಿ ಎಟಿಎಂನಿಂದ ನಗದು ವಿಥ್ ಡ್ರಾ ಮಾಡಲು ಒಟಿಪಿ ಬೇಕಾಗುತ್ತದೆ.

-ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.

-ಒಟಿಪಿಯು ಸಿಸ್ಟಮ್ ಜನರೇಟ್ ಮಾಡುತ್ತದೆ. ಅದನ್ನು ಒಂದು ವಹಿವಾಟಿಗೆ ಮಾತ್ರ ಬಳಸಬಹುದು.

-ಪಿಎನ್ ಬಿ ಎಟಿಎಂ ಪ್ರವೇಶಿಸಬೇಕು.

-ಡೆಬಿಟ್/ಎಟಿಎಂ ಕಾರ್ಡ್ ಒಳ ಹಾಕಬೇಕು.

- ಅಗತ್ಯ ಮಾಹಿತಿಗಳನ್ನು ನಮೂದಿಸಬೇಕು.

- 10,000 ರುಪಾಯಿಗಿಂತ ಹೆಚ್ಚು ಮೊತ್ತವನ್ನು ಒಂದು ಸಲಕ್ಕೆ ವಿಥ್ ಡ್ರಾ ಮಾಡುವಂತಿದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

-ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕು.

-ಒಟಿಪಿಯನ್ನು ಹಾಕಿದ ಮೇಲೆ ನಗದು ಪಡೆಯುತ್ತೀರಿ.

English summary

Punjab National Bank Will Not Allow Customer To Withdraw Money From These ATM's From February 1st

PNB will not allow customers to withdraw money from non EMV ATM's from February 1, 2021.
Story first published: Sunday, January 31, 2021, 15:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X