ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಮತ್ತೊಮ್ಮೆ ಸವರನ್ ಗೋಲ್ಡ್ ಬಾಂಡ್ ಯೋಜನೆಯ ಹೊಸ ಸರಣಿ ಆರಂಭಿಸುತ್ತಿದೆ. ಚಿನ್ನದ ಮೇಲೆ 10 ಗ್ರಾಂಗೆ 500 ರೂಪಾಯಿ ರಿಯಾಯಿತಿ ಸಿಗಬೇಕಾದರೆ, ಕೇಂದ್ರ ಸರ್ಕಾರದ ಸವರನ್ ಗೋಲ್ಡ್ ಬಾಂಡ್‌ಗಳು ಸರಿಯಾದ ಆಯ್ಕೆಯಾಗಿದೆ.
2022-23 ರ ಹಣಕಾಸು ವರ್ಷದ ಗೋಲ್ಡ್ ಬಾಂಡ್‌ಗಳ ಮೊದಲ ಕಂತಿನ ಬಿಡುಗಡೆ ಜೂನ್ 20 ರಿಂದ ಜೂನ್ 24ರ ಅವಧಿಯಲ್ಲಿ ಮಾಡಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ 10 ಗ್ರಾಂಗೆ ರೂ 5091 ನಿಗದಿಯಾಗಿದೆ.
ಆದರೆ, ನೀವು ಕೇವಲ ಶಾಪಿಂಗ್ ಮಾಡಿದರೆ, ನೀವು ಪ್ರತಿ ಗ್ರಾಂಗೆ 10 ರೂ ರಿಯಾಯಿತಿ ಪಡೆಯುತ್ತೀರಿ ಎಂದು ಘೋಷಿಸಲಾಗಿತ್ತು. ಈಗ ಎರಡನೇ ಕಂತು ಆಗಸ್ಟ್ 22 ರಿಂದ ಆಗಸ್ಟ್ 26ರ ಅವಧಿಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇಶ್ಯೂ ದರ ಇನ್ನೂ ಪ್ರಕಟವಾಗಬೇಕಿದೆ.
ಭೌತಿಕ ಚಿನ್ನದ ವಿಷಯದಲ್ಲಿ ಸುರಕ್ಷಿತ ಸಂಗ್ರಹಣೆಯನ್ನು ಕಂಡುಹಿಡಿಯುವ ಅಗತ್ಯವಿಲ್ಲ. ಚಿನ್ನದ ಬಾಂಡ್‌ಗೆ ಯಾವುದೇ ಮೇಕಿಂಗ್ ಶುಲ್ಕಗಳು ಮತ್ತು ಜಿಎಸ್‌ಟಿ ವಿಧಿಸಲಾಗುವುದಿಲ್ಲ.ಇವುಗಳನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ಖರೀದಿಸಬಹುದು.
ಸವರನ್ ಗೋಲ್ಡ್ ಬಾಂಡ್ ಯೋಜನೆ
ಸವರನ್ ಗೋಲ್ಡ್ ಬಾಂಡ್ ಯೋಜನೆ 2015ರಲ್ಲಿ ಮೊದಲ ಬಾರಿಗೆ ಈ ಭೌತಿಕ ಚಿನ್ನದ ಬೇಡಿಕೆ ಕಡಿಮೆ ಮಾಡಲು ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಲಾಯಿತು. SGB ಗಳು ಗ್ರಾಂ ಚಿನ್ನದಲ್ಲಿ ಗುರುತಿಸಲಾದ ಸರ್ಕಾರಿ ಭದ್ರತೆಗಳಾಗಿವೆ. ನೀವು ಈ ಬಾಂಡ್‌ಗಳನ್ನು ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ ಮತ್ತು ಈ ಯೋಜನೆಯಡಿಯಲ್ಲಿ ನೀವು ಹೂಡಿಕೆಯ ಮೇಲೆ ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯುತ್ತೀರಿ.
ಯಾರು ಹೂಡಿಕೆ ಮಾಡಬಹುದು?
ವಿದೇಶಿ ವಿನಿಮಯ ಮ್ಯಾನೇಜ್ಮೆಂಟ್ ಕಾಯ್ದೆ 1999 ಅನ್ವಯ ಹೂಡಿಕೆಗೆ ಅರ್ಹರಾದವರು ಈ ಚಿನ್ನದ ಯೋಜನೆಯಲ್ಲಿ ತೊಡಗಿಕೊಳ್ಳಬಹುದು. ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯು 1 ಗ್ರಾಂ ಆಗಿದ್ದು, ಆರ್ಥಿಕ ವರ್ಷದಲ್ಲಿ ಅರ್ಹ ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕೆಜಿವರೆಗೆ ಚಿನ್ನವನ್ನು ಪಡೆಯಬಹುದು. ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳು ಹಣಕಾಸು ವರ್ಷದಲ್ಲಿ 20 ಕಿ.ಗ್ರಾಂ ವರೆಗೆ ಖರೀದಿಸಬಹುದು.
ಖರೀದಿ ಬಗ್ಗೆ ವಿವರ
ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು. ಬಾಂಡ್‌ಗಳನ್ನು ಮೆಚ್ಯೂರಿಟಿಯಲ್ಲಿ ನಗದು ರೂಪದಲ್ಲಿ ರಿಡೀಮ್ ಮಾಡಲಾಗುತ್ತದೆ.
ಚಿನ್ನ ಸಂಗ್ರಹ: 2022ರ ಟಾಪ್ 10 ದೇಶಗಳ ಪಟ್ಟಿ, ಭಾರತಕ್ಕೆ ಎಷ್ಟನೇ ಸ್ಥಾನ?
ಮಾರಾಟ ವಿವರ
ಬಾಂಡ್ ಅನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ನೀಡುತ್ತದೆ. ಬಾಂಡ್‌ಗಳ ಅವಧಿ 8 ವರ್ಷಗಳ ತನಕ ಇರುತ್ತದೆ. ನೀವು ಈ ಬಾಂಡ್‌ಗಳನ್ನು ಖರೀದಿಸಿ ತಕ್ಷಣಕ್ಕೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ.
ಚಿನ್ನದ ಇಂದಿನ ದರ
ಆಗಸ್ಟ್ 18ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 47,900 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಪ್ರಸ್ತುತ 52,250 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 900 ರೂಪಾಯಿ ಕುಗ್ಗಿದ್ದು ಪ್ರಸ್ತುತ 56,700 ರೂಪಾಯಿ ಆಗಿದೆ.
ಸವರನ್ ಗೋಲ್ಡ್ ಬಾಂಡ್ ಅಥವಾ ಡಿಜಿಟಲ್ ಚಿನ್ನ: ಯಾವುದರಲ್ಲಿ ಹೂಡಿಕೆ ಮಾಡಬೇಕು?
ಆಗಸ್ಟ್ 18ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51830.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 57076.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.30ರಷ್ಟು ಏರಿಕೆಯಾಗಿದ್ದು 1,770 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.13ರಷ್ಟು ಹಿಗ್ಗಿದ್ದು, 19.85 ಯುಎಸ್ ಡಾಲರ್ ಆಗಿದೆ.


Click it and Unblock the Notifications