For Quick Alerts
ALLOW NOTIFICATIONS  
For Daily Alerts

ಸವರನ್ ಗೋಲ್ಡ್ ಬಾಂಡ್ ಅಥವಾ ಡಿಜಿಟಲ್ ಚಿನ್ನ: ಯಾವುದರಲ್ಲಿ ಹೂಡಿಕೆ ಮಾಡಬೇಕು?

By ಶಾರ್ವರಿ
|

ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಸ್ಟಾಕ್ ಮಾರುಕಟ್ಟೆಯಲ್ಲಿ ಮಾಡಿದರೆ ಚೆನ್ನಾಗಿರುತ್ತದೋ ಅಥವಾ ಚಿನ್ನದ ಮೇಲೆ ಮಾಡಿದರೂ ಉತ್ತಮವೋ ಎಂಬ ಜಿಜ್ಞಾಸೆ ಎಲ್ಲರ ಮನಸ್ಸಿನಲ್ಲಿ ಇರುತ್ತದೆ. ಚಿನ್ನದ ಬಗ್ಗೆ ಮಾತನಾಡುವುದಾದರೆ, ಭಾರತದಲ್ಲಿ ಹೂಡಿಕೆ ಮಾಡಲು ಸವರನ್ ಗೋಲ್ಡ್ ಬಾಂಡ್ ಮತ್ತು ಡಿಜಿಟಲ್ ಗೋಲ್ಡ್ ನಂತಹ ಆಯ್ಕೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಇವೆರಡೂ ಉತ್ತಮ ಹೂಡಿಕೆ ವಿಧಾನಗಳಾದರೂ ಯಾವುದು ಸುರಕ್ಷಿತ? ನೀವು ಎಲ್ಲಿ ಹೂಡಿಕೆ ಮಾಡಬೇಕು? ಎಂಬುದು ತಿಳಿಯದಿದ್ದರೆ ತೊಡಕುಗಳು ಸಹಜವಾಗಿಯೇ ಉದ್ಭವಿಸುತ್ತವೆ. ಬಜೆಟ್ 2022ಗೂ ಮುನ್ನ ಚಿನ್ನದ ಮೇಲಿನ ಹೂಡಿಕೆಯ ಬಗ್ಗೆ ತಿಳಿಯುವುದು ಒಳ್ಳೆಯದು.

 

ಸವರನ್ ಗೋಲ್ಡ್ ಬಾಂಡ್ ಎಂದರೇನು?:

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಾರ ಗ್ರಾಂಗಳ ಲೆಕ್ಕದಲ್ಲಿ ನೀವು ಚಿನ್ನವನ್ನು ಖರೀದಿ ಮಾಡುವುದಾದರೆ ಸವರನ್ ಗೋಲ್ಡ್ ಬಾಂಡ್‌ಗಳಿಗೆ (ಎಸ್‌ಬಿಜಿ) ಭಾರತ ಸರ್ಕಾರದ ಭದ್ರತೆ ಇರುತ್ತದೆ. ಅಂದರೆ ನಿಮ್ಮ ಆಭರಣಗಳು ಅಥವಾ ಚಿನ್ನವನ್ನು ಭೌತಿಕವಾಗಿ ಇಟ್ಟು ಪಡೆಯುವಂತಹ ಬಾಂಡ್ ಇದ್ದಲ್ಲ. ಬದಲಿಗೆ ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಇದನ್ನು ಬಿಡುಗಡೆ ಮಾಡುತ್ತದೆ.

ಸವರನ್ ಗೋಲ್ಡ್ ಬಾಂಡ್‌ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಒಂದು ಗ್ರಾಂನಿಂದ ಹಿಡಿದು 500 ಗ್ರಾಂವರೆಗೆ ಚಿನ್ನದ ಬಾಂಡ್ ಅನ್ನು ಖರೀದಿ ಮಾಡಬಹುದು. ಯಾವುದೇ ವ್ಯಕ್ತಿಗೆ ಬಾಂಡ್‌ನಲ್ಲಿ ಕನಿಷ್ಠ ಹೂಡಿಕೆಯು ಒಂದು ಗ್ರಾಂ ಆಗಿದ್ದು, ಗರಿಷ್ಠ ಮಿತಿ 500 ಗ್ರಾಂ ಆಗಿದೆ. ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ 4 ಕೆಜಿ ಇದ್ದರೆ, ಟ್ರಸ್ಟ್‌ಗಳಿಂದ 20 ಕೆಜಿವರೆಗೆ ಖರೀದಿ ಮಿತಿ ನಿಗದಿಪಡಿಸಲಾಗಿದೆ. ಪ್ರತಿ ವರ್ಷ ಭಾರತ ಸರಕಾರವೇ ಗ್ರಾಂಗೆ ಎಷ್ಟು ದರ ಎಂಬುದನ್ನು ನಿಗದಿಪಡಿಸುತ್ತದೆ.

ಚಿನ್ನದ ಬಾಂಡ್‌

ಚಿನ್ನದ ಬಾಂಡ್‌

ಚಿನ್ನದ ಬಾಂಡ್‌ಗಳನ್ನು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ನಿಗದಿಪಡಿಸಿದ ಅಂಚೆ ಕಚೇರಿ, ಶೆಡ್ಯೂಲ್ಡ್ ಫಾರಿನ್ ಬ್ಯಾಂಕ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್) ಮತ್ತು ಪರವಾನಗಿ ಪಡೆದ ಸ್ಟಾಕ್ ಎಕ್ಸಚೇಂಜರ್‌ಗಳಿಂದ ನೇರವಾಗಿ ಅಥವಾ ಏಜೆಂಟ್‌ಗಳ ಮೂಲಕ ಖರೀದಿಸಬಹುದು. ಆರ್‌ಬಿಒ ಅಧಿಸೂಚನೆಯ ಪ್ರಕಾರ, ಎಸ್‌ಬಿಜಿ ಸ್ಕೀಮ್ ಅಡಿ 2021-22 ರ ವಿತರಣಾ ಬೆಲೆಯನ್ನು ಪ್ರತಿ ಗ್ರಾಂಗೆ 4,791 ರೂ.ಗೆ ನಿಗದಿಪಡಿಸಲಾಗಿದೆ.

ಮೆಚ್ಯೂರಿಟಿ ಅವಧಿ

ಮೆಚ್ಯೂರಿಟಿ ಅವಧಿ

ಈ ಬಾಂಡ್‌ಗಳದ್ದು ಸೀಮಿತ ಅವಧಿಯಾಗಿದ್ದು, ಕನಿಷ್ಠ ಐದು ವರ್ಷಗಳವರೆಗೆ ಇಡಬೇಕು. ಒಂದು ವೇಳೆ ಐದು ವರ್ಷಗಳ ಅವಧಿ ಮುಗಿದರೂ, ಬಾಂಡ್‌ಗಳು ಎಂಟು ವರ್ಷಗಳವರೆಗೆ ಮೆಚ್ಯೂರಿಟಿ ಆಗುವುದಿಲ್ಲ. ಕೊರೊನಾ ವೈರಸ್‌ನಿಂದಾಗಿ ಎಲ್ಲ ಕ್ಷೇತ್ರಗಳೂ ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತವಾಗಿದೆ. ವಿಶ್ವದ ಅತ್ಯಂತ ಸಕ್ರಿಯ ಹಾಗೂ ಚಟುವಟಿಕೆಯ ಹೂಡಿಕೆ ಮಾರುಕಟ್ಟೆಯಲ್ಲಿ ಇದು ಒಂದು. ಡಿಜಿಟಲ್ ಚಿನ್ನವನ್ನು ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ಯಾವುದೇ ಸಮಯದಲ್ಲಿ ಬೇಕಾದರೂ ಸ್ವೀಕರಿಸಬಹುದು.

ಡಿಜಿಟಲ್ ಚಿನ್ನ ಎಂದರೇನು?
 

ಡಿಜಿಟಲ್ ಚಿನ್ನ ಎಂದರೇನು?

ಡಿಜಿಟಲ್ ಚಿನ್ನ ಎಂದರೆ ನೀವು ಬಾಂಡ್‌ಗಳನ್ನು ಖರೀದಿಸದೆ ಅಂತರ್ಜಾಲದ ಮೂಲಕವೇ ಚಿನ್ನ ಖರೀದಿ ಮಾಡಬಹುದು. ಹೀಗೆ ಖರೀದಿಸಿದ ಚಿನ್ನವನ್ನು ಬ್ಯಾಂಕ್ ಲಾಕರ್ ಅಥವಾ ಇನ್ಯಾವುದೋ ಸುರಕ್ಷಿತ ಜಾಗದಲ್ಲಿಡಬೇಕಾಗಿಲ್ಲ. ಏಕೆಂದರೆ ಇದು ಡಿಜಿಟಲ್ ಗೋಲ್ಡ್‌. ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ನಿಮಗೆ ಅನುಮತಿ ಇದೆ. ನೀವು ಭೌತಿಕವಾಗಿ ಚಿನ್ನ ಖರೀದಿಸದೆ ಡಿಜಿಟಲ್ ರೂಪದಲ್ಲಿ ಖರೀದಿ ಮಾಡಿರುವುದರಿಂದ ಕನಿಷ್ಠ 100 ರೂಪಾಯಿ ಚಿನ್ನವನ್ನೂ ಕೊಳ್ಳಬಹುದು.

ಮಾರಾಟ ಸಂಸ್ಥೆ ನಿಮ್ಮ ಹೆಸರಿನಲ್ಲಿ ಆ ಚಿನ್ನವನ್ನು ಖರೀದಿಸಿ ಸುರಕ್ಷಿತವಾಗಿಡುತ್ತದೆ. ಆದಾಗ್ಯೂ, ಇದರ ಮೇಲೆ ಆರ್‌ಬಿಐ ಅಥವಾ ಸೆಕ್ಯುರಿಟಿ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಂತಹ ಸಂಸ್ಥೆಯಿಂದ ಯಾವುದೇ ನಿಯಂತ್ರಣ ಮೇಲ್ವಿಚಾರಣೆ ಇರುವುದಿಲ್ಲ. ಹೂಡಿಕೆದಾರರು ಜಿ-ಪೇ, ಫೋನ್ ಪೇ, ಡಿಮ್ಯಾಟ್ ಖಾತೆ ಅಥವಾ ಇತರ ಆಯ್ಕೆಗಳ ಮೂಲಕ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು. ನಿಜವಾದ ಡಿಜಿಟಲ್ ಚಿನ್ನವು ಸಂಪೂರ್ಣವಾಗಿ ಶೂನ್ಯವಾಗಿರುತ್ತದೆ. ಜೊತೆಗೆ ಇದು ನಿಜವಾದ ಚಿನ್ನವಾಗಿದೆ.

ನೀವು ಯಾವುದನ್ನು ಖರೀದಿಸಬೇಕು?

ನೀವು ಯಾವುದನ್ನು ಖರೀದಿಸಬೇಕು?

ಹಲವು ವ್ಯಾಪಾರ ಸಂಸ್ಥೆಗಳು ನಿಮ್ಮ ಹೆಸರಿನಲ್ಲಿ ನೈಜ ಚಿನ್ನವನ್ನು ಖರೀದಿಸುತ್ತವೆ ಮತ್ತು ಅದನ್ನು ಸುರಕ್ಷಿತವಾಗಿಡುತ್ತವೆ. ಇಂತಹ ಸಂಸ್ಥೆಗಳು ಇದಕ್ಕಾಗಿ ಪರವಾನಗಿಯನ್ನೂ ಪಡೆದಿರುತ್ತದೆ. ನೀವು ಚಿನ್ನದ ನಾಣ್ಯಗಳು ಮತ್ತು ಆಭರಣಗಳ ಮೇಲೆ ಹೂಡಿಕೆ ಮಾಡಿದರೆ, ನೀವು ಬಹಳಷ್ಟು ಹಣವನ್ನು ಗಳಿಸುವ ಅದ್ಭುತ ಅವಕಾಶವನ್ನು ಹಾಳುಮಾಡಿಕೊಳ್ಳುತ್ತೀರಾ ಎಂದೇ ಅರ್ಥ. ಬ್ಯಾಂಕ್ ಸ್ಥಿರ ಠೇವಣಿಗಳಂತೆಯೇ ಸೆಟ್ ಬಡ್ಡಿದರವನ್ನು ಪಾವತಿಸುವಾಗ ಬೆಲೆ ಏರಿಳಿತದಿಂದ ಲಾಭ ಪಡೆಯಲು ನಿಮಗೆ ಚಿನ್ನದ ಬಾಂಡ್‌ಗಳಲ್ಲೂ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಚಿನ್ನದ ಬಾಂಡ್ ಕಡಿಮೆ ವೆಚ್ಚದ ಉತ್ತಮ-ಗುಣಮಟ್ಟದ ಪರ್ಯಾಯ ಮಾರ್ಗವಾಗಿದೆ. ಆದರೆ, ಖರೀದಿ ನಿರ್ಧಾರವು ಸಂಪೂರ್ಣವಾಗಿ ನಿಮ್ಮದೇ ವೈಯಕ್ತಿಕ ಅಭಿಪ್ರಾಯವಾಗಿದೆ. ಹೂಡಿಕೆದಾರರು ಎರಡೂ ಹೂಡಿಕೆಯ ಆಯ್ಕೆಗಳ ಎಲ್ಲಾ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಬೇಕು.

English summary

Sovereign Gold Bonds Or Digital Gold: Which Should You Invest In?

Budget 2022: Sovereign Gold Bonds Or Digital Gold: These two are good investment instruments, the complications arise when you don't know where should you invest? And which one is safe to invest?
Story first published: Thursday, January 13, 2022, 20:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X