ರಷ್ಯಾ- ಉಕ್ರೇನ್ ನಡುವಿನ ಸಮರ ಸಂಘರ್ಷ ಆರಂಭವಾದ ಬೆನ್ನಲ್ಲೇ ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಚಿನ್ನ ಸಂಗ್ರಹಿಸುವಲ್ಲಿ ಪೈಪೋಟಿ ನೀಡುತ್ತಿವೆ. ಭಾರತವೂ ಕೂಡ ಪ್ರತಿ ವರ್ಷ ಚಿನ್ನದ ಸಂಗ್ರಹವನ್ನು ನಿಯಮಿತವಾಗಿ ಹೆಚ್ಚಿಸುತ್ತಾ ಸಾಗಿದೆ.
ಪ್ರತಿ ದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ ಹಳದಿ ಲೋಹ ರಕ್ಷಣೆಗೆ ಬರುತ್ತದೆ. ಯಾವುದೇ ರಾಷ್ಟ್ರಕ್ಕೆ ಪ್ರಮುಖ ಆಸ್ತಿಯಾಗಿ ಹೊರಹೊಮ್ಮುತ್ತದೆ. ಚಿನ್ನವನ್ನು ಸಾಮಾನ್ಯವಾಗಿ ದೇಶದ ಕೇಂದ್ರ ಬ್ಯಾಂಕುಗಳು ಚಿನ್ನದ ನಿಕ್ಷೇಪಗಳ ರೂಪದಲ್ಲಿ ಹಿಡಿದಿಟ್ಟುಕೊಳ್ಳುತ್ತವೆ. ಆರ್ಥಿಕ ಕುಸಿತಗಳು ಅಥವಾ ರಾಜಕೀಯ ವಿಚಲನಗಳಿಂದ ಪ್ರಭಾವಿತವಾಗದ ಚಿನ್ನ ಎಂದಿಗೂ ಸ್ಥಿರತೆ ಉಳ್ಳ ಮೌಲ್ಯಯುತ ಆಸ್ತಿಗಳೆನಿಸಿವೆ.
ಭಾರತವು ಅತೀ ಹೆಚ್ಚು ಬಂಗಾರ ಹೊಂದಿರುವ ಅಗ್ರ ಹತ್ತು ದೇಶಗಳಲ್ಲಿ ಒಂದಾಗಿದೆ. ಒಟ್ಟು ಚಿನ್ನದ ಸಂಗ್ರಹದ ದೃಷ್ಟಿಯಿಂದ 2022ರ ಟಾಪ್ 10 ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇಂದಿನ ಚಿನ್ನದ ದರ ವಿವರ ಇಲ್ಲಿದೆ
ಚಿನ್ನವು ಸುರಕ್ಷಿತ ಹೂಡಿಕೆ ವಿಧಾನ
ಚಿನ್ನವು ಸುರಕ್ಷಿತ ಹೂಡಿಕೆಯ ಪರ್ಯಾಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಮತ್ತು ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳಿಂದ ಪ್ರಭಾವಿತವಾಗದೆ ಉಳಿದಿದೆ ಮತ್ತು ಇದು ರಾಷ್ಟ್ರಗಳು ಜಾಗತಿಕವಾಗಿ ಹೆಚ್ಚಿನ ಚಿನ್ನದ ನಿಕ್ಷೇಪಗಳನ್ನು ನಿರ್ವಹಿಸಲು ಪ್ರಯತ್ನಿಸಲು ಕಾರಣವಾಗಿದೆ. ಇತರ ಅಂಶಗಳೆಂದರೆ ಚಿನ್ನವು ವಿಶ್ವಾದ್ಯಂತ ಅಂಗೀಕಾರವನ್ನು ಹೊಂದಿದೆ, ಆರ್ಥಿಕ ಕುಸಿತಗಳ ವಿರುದ್ಧ ವಿಮಾ ರಕ್ಷಣೆಯನ್ನು ಬಳಸಲಾಗಿದೆ ಮತ್ತು ಇತರರಲ್ಲಿ ಜನಪ್ರಿಯತೆಯನ್ನು ಹೊಂದಿದೆ.
1. ಅಮೆರಿಕ
ಅಮೆರಿಕ
ಟನ್ : 8,133
ವಿದೇಶಿ ವಿನಿಮಯ ಮೀಸಲು: 77 ಪರ್ಸೆಂಟ್
ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಮೊದಲಿನ ಸ್ಥಾನದಲ್ಲಿದೆ. ವಿಶ್ವದ ದೊಡ್ಡ ಆರ್ಥಿಕತೆಯಾಗಿರುವ ಅಮೆರಿಕಾ ಬಂಗಾರ ಸಂಗ್ರಹಣೆಯಲ್ಲಿಯು ಮೊದಲ ಸ್ಥಾನವನ್ನು ಹೊಂದಿದೆ. ಅಮೆರಿಕ ಒಟ್ಟಾರೆ 8,133 ಟನ್‌ಗಳಷ್ಟು ಬಂಗಾರವನ್ನು ಹೊಂದಿದ್ದು, ಇದರಲ್ಲಿ 77 ಪರ್ಸೆಂಟ್‌ನಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕಾಗಿ ಮೀಸಲಿರಿಸಿದೆ.
ಜೂನ್ 1ರಿಂದ ಎಲ್ಲಾ ರೀತಿಯ ಚಿನ್ನದ ಮೇಲೆ ಹಾಲ್‌ಮಾರ್ಕ್: ಇಲ್ಲಿದೆ ಪ್ರಮುಖ ಮಾಹಿತಿ
2. ಜರ್ಮನಿ
ಜರ್ಮನಿ
ಟನ್ : 3,359
ವಿದೇಶಿ ವಿನಿಮಯ ಮೀಸಲು: 73.2 ಪರ್ಸೆಂಟ್
ಜರ್ಮನಿ ದೇಶವು ವಿಶ್ವದಲ್ಲಿ ಅತಿ ಹೆಚ್ಚು ಚಿನ್ನವನ್ನು ಸಂಗ್ರಹಿಸುವ ರಾಷ್ಟ್ರಗಳಲ್ಲಿ 2ನೇ ಸ್ಥಾನವನ್ನು ಹೊಂದಿದೆ ಎಂದು ಗೋಲ್ಡ್ ಹಬ್ ವರದಿ ನೀಡಿದೆ. ಜರ್ಮನಿಯ ಒಟ್ಟು ಚಿನ್ನದ ಸಂಗ್ರಹವು 3,359 ಟನ್‌ಗಳಷ್ಟಿದ್ದು, ಈ ರಾಷ್ಟ್ರದ ವಿದೇಶಿ ವಿನಿಮಯ ಮೀಸಲಿನ ಪ್ರಮಾಣ ಭರ್ಜರಿ 73.2 ಪರ್ಸೆಂಟ್ ನಷ್ಟಿದೆ.
3. ಇಟಲಿ
ಇಟಲಿ
ಟನ್ : 2,451
ವಿದೇಶಿ ವಿನಿಮಯ ಮೀಸಲು: 68.4 ಪರ್ಸೆಂಟ್
ಚಿನ್ನದ ಮೀಸಲು ಗಾತ್ರವನ್ನು ನಿರಂತರವಾಗಿ ಕಾಪಾಡಿಕೊಂಡು ಬಂದಿದೆ. ಇಟಲಿಯಲ್ಲಿ ಈಗಾಗಲೇ 2,451 ಟನ್‌ಗಳಷ್ಟು ಚಿನ್ನವನ್ನು ಹೊಂದಲಾಗಿದ್ದು, ಶ್ರೀಮಂತ ರಾಷ್ಟ್ರವಾಗಿದೆ. ಇದರ ವಿದೇಶಿ ವಿನಿಮಯ ಮೀಸಲಿನ ಪ್ರಮಾಣ ಒಟ್ಟಾರೆ ಚಿನ್ನದಲ್ಲಿ 68.4 ಪರ್ಸೆಂಟ್ ನಷ್ಟಿದೆ.
4. ಫ್ರಾನ್ಸ್
ಫ್ರಾನ್ಸ್
ಟನ್ : 2,436
ವಿದೇಶಿ ವಿನಿಮಯ ಮೀಸಲು: 62.8 ಪರ್ಸೆಂಟ್
ಫ್ರಾನ್ಸಿನ ಸೆಂಟ್ರಲ್ ಬ್ಯಾಂಕ್ ಕಳೆದ ಹಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ತನ್ನ ಚಿನ್ನವನ್ನು ಮಾರಾಟ ಮಾಡಿದೆ. ಈಗಾಗಲೇ 2,436 ಟನ್‌ಗಳಷ್ಟು ಬಂಗಾರ ಹೊಂದಿರುವ ಫ್ರಾನ್ಸ್ ವಿದೇಶಿ ವಿನಿಮಯ ಮೀಸಲಿನ ಪ್ರಮಾಣ ಬರೋಬ್ಬರಿ 62.8 ಪರ್ಸೆಂಟ್‌ನಷ್ಟಿದೆ.
5. ರಷ್ಯಾ
ರಷ್ಯಾ
ಟನ್ : 2,298.53
ವಿದೇಶಿ ವಿನಿಮಯ ಮೀಸಲು: 20.2 ಪರ್ಸೆಂಟ್
ರಷ್ಯಾ ಕಳೆದ ಹಲವಾರು ವರ್ಷಗಳಿಂದ ಚಿನ್ನ ರಾಶಿ ಹಾಕುವ ಕಾರ್ಯದಲ್ಲಿ ತೊಡಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಇದರ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. 2019ರಲ್ಲಿ ರಷ್ಯಾ 2,252.1 ಟನ್‌ಗಳಷ್ಟು ಬಂಗಾರ ಹೊಂದಿತ್ತು, ಈಗ ಯುದ್ಧದ ನಡುವೆ 2,298.53 ಟನ್‌ಗಳಷ್ಟು ಬಂಗಾರ ಉಳಿಸಿಕೊಂಡಿದೆ. ಇದರಲ್ಲಿ ವಿದೇಶಿ ವಿನಿಮಯ ಮೀಸಲು 20.2 ಪರ್ಸೆಂಟ್ ನಷ್ಟಿದೆ.
6. ಚೀನಾ
ಚೀನಾ
ಟನ್: 1,948
ವಿದೇಶಿ ವಿನಿಮಯ ಮೀಸಲು: 2.9 ಪರ್ಸೆಂಟ್
ಯುಎಸ್-ಚೀನಾ ವಾಣಿಜ್ಯ ಸಮರ,ಕೋವಿಡ್ 19 ಸೋಂಕು ಭೀತಿ, ಆರ್ಥಿಕ ಬಿಕ್ಕಟ್ಟಿನ ನಡುವೆ ಚೀನಾ 6ನೇ ಸ್ಥಾನವನ್ನು ಉಳಿಸಿಕೊಂಡಿದೆ. ಚೀನಾದ ವಿದೇಶಿ ಮೀಸಲು ಕೇವಲ 2.9ರಷ್ಟಿದೆ. ಮುಂದಿನ ದಿನಗಳಲ್ಲಿ ಮೀಸಲು ಪ್ರಮಾಣ ಹೆಚ್ಚಿಸುವ ಸಾಧ್ಯತೆಯಿದೆ.
7. ಸ್ವಿಟ್ಜರ್ಲೆಂಡ್
ಸ್ವಿಟ್ಜರ್ಲೆಂಡ್
ಟನ್: 1,040.0
ವಿದೇಶಿ ವಿನಿಮಯ ಮೀಸಲು: 6 ಪರ್ಸೆಂಟ್
ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಸಂಗ್ರಹ ಹೊಂದಿರುವ ರಾಷ್ಟ್ರಗಳ ಪೈಕಿ ಸ್ವಿಟ್ಜರ್ಲೆಂಡ್ 7ನೇ ಸ್ಥಾನದಲ್ಲಿದೆ. ಹಾಂಕಾಂಗ್ ಮತ್ತು ಚೀನಾ ನಡುವೆ ಅತಿ ಹೆಚ್ಚು ಚಿನ್ನದ ವ್ಯಾಪಾರವನ್ನು ಹೊಂದಿರುವ ರಾಷ್ಟ್ರ ಸ್ವಿಟ್ಜರ್ಲೆಂಡ್ ಒಟ್ಟಾರೆ 1,040.0 ಟನ್‌ಗಳಷ್ಟು ಚಿನ್ನವನ್ನು ಹೊಂದಿದ್ದು, ಇದರಲ್ಲಿ ವಿದೇಶಿ ವಿನಿಮಯ ಮೀಸಲು 6 ಪರ್ಸೆಂಟ್ ನಷ್ಟಿದೆ.
8. ಜಪಾನ್
ಜಪಾನ್
ಟನ್: 845
ವಿದೇಶಿ ವಿನಿಮಯ ಮೀಸಲು: 2.8 ಪರ್ಸೆಂಟ್
ಜಪಾನ್ ಅತಿ ಹೆಚ್ಚು ಹಳದಿ ಲೋಹ ಹೊಂದಿರುವ 8ನೇ ಅತಿದೊಡ್ಡ ದೇಶ. ಜಪಾನ್ ಸತತವಾಗಿ ಬಂಗಾರದ ದಾಸ್ತಾನು ಹೆಚ್ಚಿಸುತ್ತಾ ಬಂದಿದೆ ಎಂದು ಐಎಂಎಫ್ ಹೇಳಿದೆ. ಐಎಂಎಫ್ ಹಾಗೂ ಗೋಲ್ಡ್ ಹಬ್ ಅಂಕಿ ಅಂಶಗಳ ಪ್ರಕಾರ 2019 ಡಿಸೆಂಬರ್‌ನಲ್ಲಿ ಜಪಾನ್ ಒಟ್ಟಾರೆ 765.2 ಟನ್ ಚಿನ್ನವನ್ನು ಹೊಂದಿತ್ತು. 2022ರಲ್ಲಿ 845 ಟನ್ ಚಿನ್ನ ಹೊಂದಿದೆ.
9. ಭಾರತ
ಭಾರತ
ಟನ್: 618.2
ವಿದೇಶಿ ವಿನಿಮಯ ಮೀಸಲು: 7 ಪರ್ಸೆಂಟ್
ಭಾರತೀಯರು ಚಿನ್ನಾಭರಣ ಪ್ರಿಯರು. ಚಿನ್ನದ ಬಳಕೆಯಲ್ಲಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಚಿನ್ನದ ಆಮದು ಅಧಿಕವಾಗಿದ್ದರೂ ಚಿನ್ನದ ಸಂಗ್ರಹವನ್ನು ಭಾರತ ಹೆಚ್ಚಿಸುತ್ತಾ ಬಂದಿದೆ. 2019ರಲ್ಲಿ ಭಾರತ 618.2 ಟನ್ ಚಿನ್ನವನ್ನು ಹೊಂದಿತ್ತು. 2022ರಲ್ಲಿ 743.83 ಟನ್ ಚಿನ್ನವನ್ನು ಹೊಂದಿದೆ.
10. ನೆದರ್ಲೆಂಡ್ಸ್
ನೆದರ್ಲೆಂಡ್ಸ್
ಟನ್: 612
ವಿದೇಶಿ ವಿನಿಮಯ ಮೀಸಲು: 68.3
ಪ್ರಸ್ತುತ ತನ್ನ ಚಿನ್ನವನ್ನು ಸಂಗ್ರಹಿಸಿಡಲು ಡಚ್ ಸೆಂಟ್ರಲ್ ಬ್ಯಾಂಕ್ ಸೂಕ್ತ ಸ್ಥಳವನ್ನು ಕೋರಿದೆ. ಅತಿ ಹೆಚ್ಚು ಚಿನ್ನವನ್ನು ಸಂಗ್ರಹಿಸಿರುವ ದೇಶಗಳ ಪೈಕಿ ನೆದರ್ಲೆಂಡ್ಸ್ ಜಾಗತಿಕವಾಗಿ 10ನೇ ಸ್ಥಾನದಲ್ಲಿದೆ. ಈ ರಾಷ್ಟ್ರ ಒಟ್ಟಾರೆ 612 ಟನ್‌ನಷ್ಟು ಬಂಗಾರವನ್ನು ಹೊಂದಿದೆ.
ಜೂನ್ 2022ರಿಂದ ಪ್ರಮುಖ 5 ವೈಯಕ್ತಿಕ ಹಣಕಾಸು ಬದಲಾವಣೆ ತಿಳಿಯಿರಿ

Click it and Unblock the Notifications