ಆದಾಯ ತೆರಿಗೆಯನ್ನು ಪಾವತಿ ಮಾಡಲು ಇನ್ನು ಕೆಲವೇ ವಾರಗಳು ಇದೆ. ಈಗಾಗಲೇ ಎಲ್ಲರೂ ಆದಾಯ ತೆರಿಗೆಯನ್ನು ಪಾವತಿಸುವ, ರಿಟರ್ನ್ ಫೈಲ್ ಮಾಡುವುದರಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ತೆರಿಗೆ ಉಳಿತಾಯ ಮಾಡಲು ಎಲ್ಲಿ ಸಾಧ್ಯ ಎಂದು ನೋಡುತ್ತಿದ್ದಾರೆ. ತೆರಿಗೆ ಉಳಿತಾಯ ಮಾಡಲು ಹಲವಾರು ಯೋಜನೆಗಳು ನಮಗಿದೆ. ಅದರಲ್ಲಿ ಫಿಕ್ಸಿಡ್ ಡೆಪಾಸಿಟ್ ಕೂಡಾ ಒಂದಾಗಿದೆ. ಜನರು ಎಫ್‌ಡಿಯಲ್ಲಿ ಹೂಡಿಕೆ ಮಾಡಿ ತೆರಿಗೆಯನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹೂಡಿಕೆಯನ್ನು ನಾವು ಮಾಡುವ ಮೂಲಕ ತೆರಿಗೆಯನ್ನು ಉಳಿತಾಯ ಮಾಡುವುದು ಮಾತ್ರವಲ್ಲದೆ, ಹೂಡಿಕೆಯಲ್ಲಿ ಯಾವುದೇ ಅಪಾಯವಿರುವುದಿಲ್ಲ. ಸಾಮಾನ್ಯವಾಗಿ ಹೂಡಿಕೆ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಫಿಕ್ಸಿಡ್ ಡೆಪಾಸಿಟ್ ಅನ್ನು ಕೊಂಚ ಕಡಿಮೆ ಅಪಾಯಕಾರಿಯಾಗಿದೆ. ಎಂದರೆ ಸುರಕ್ಷಿತ ಹೂಡಿಕೆಯಾಗಿದೆ. ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80C ಅಡಿಯಲ್ಲಿ ನೀವು 5 ವರ್ಷಗಳ ಎಫ್‌ಡಿ ಮೇಲೆ ಹೂಡಿಕೆ ಮಾಡಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ತೆರಿಗೆ ಉಳಿತಾಯ ಎಫ್‌ಡಿ ಖಾತೆ ಎಂದರೇನು?
ತೆರಿಗೆ ಉಳಿತಾಯ ಮಾಡುವ ಫಿಕ್ಸಿಡ್ ಡೆಪಾಸಿಟ್, ಎಫ್‌ಡಿಯ ಒಂದು ವಿಭಾಗವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ನಾವು ತೆರಿಗೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಡೆಪಾಸಿಟ್ ಅನ್ನು ಎರಡು ರೀತಿಯ ಅಕೌಂಟ್ ಅನ್ನು ಬಳಸಿಕೊಂಡು ಮಾಡಬಹುದಾಗಿದೆ. ಸಿಂಗಲ್ ಹೋಲ್ಡರ್ ಅಕೌಂಟ್ ಮತ್ತು ಜಾಯಿಂಟ್ ಹೋಲ್ಡರ್ ಅಕೌಂಟ್ ಈ ಎರಡು ಖಾತೆಗಳು ಆಗಿದೆ. ಪ್ರತಿ ಹೂಡಿಕೆದಾರರು ಈ ತೆರಿಗೆ ಉಳಿತಾಯ ಎಫ್‌ಡಿಯಲ್ಲಿ ಹೂಡಿಕೆ ಮಾಡಿ ಪ್ರತಿ ವರ್ಷ 1.5 ಲಕ್ಷ ರೂಪಾಯಿಯಷ್ಟು ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ತೆರಿಗೆ ಉಳಿತಾಯ ಎಫ್‌ಡಿ ಬಗ್ಗೆ ಅಧಿಕ ಮಾಹಿತಿ
ಫೀಚರ್: ಎಫ್‌ಡಿ ಹೂಡಿಕೆ ಮೂಲಕ ನಾವು ತೆರಿಗೆ ಉಳಿತಾಯ ಮಾಡಬೇಕಾದರೆ ನಾವು 5 ವರ್ಷಗಳ ಲಾಕಿನ್ ಅವಧಿಯ ಹೂಡಿಕೆ ಮಾಡಬೇಕಾಗುತ್ತದೆ. ನಾವು ಎಫ್‌ಡಿ ಹೂಡಿಕೆಗೆ ತೆರಿಗೆ ಇಲ್ಲವಾದರೂ ಕೂಡಾ ಅದರಿಂದ ಲಭ್ಯವಾಗುವ ಬಡ್ಡಿಗೆ ತೆರಿಗೆ ಇದೆ. ಬಡ್ಡಿದರವು ಶೇಕಡ 5.5ರಿಂದ ಶೇಕಡ 7.75ರಷ್ಟು ಇರುತ್ತದೆ.
ಪ್ರಯೋಜನಗಳು ಏನು?: ಉಳಿತಾಯ ಖಾತೆಗಳಿಗಿಂತ ಎಫ್‌ಡಿಗಳು ಅಧಿಕ ಬಡ್ಡಿದರವನ್ನು ನೀಡುತ್ತದೆ. ಒಂದು ಬಾರಿಯೇ ದೊಡ್ಡ ಮೊತ್ತವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ. ಫಿಕ್ಸಿಡ್ ಡೆಪಾಸಿಟ್‌ನಿಂದ ಪಡೆಯುವ ಬಡ್ಡಿದರದ ಮೇಲೆ ಟಿಡಿಎಸ್ ವಿಧಿಸಲಾಗುತ್ತದೆ. ತೆರಿಗೆ ವಿನಾಯಿತಿಯನ್ನು ಪಡೆಯಲು ನಾವು ಕನಿಷ್ಠ 5 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ಎಫ್‌ಡಿಯನ್ನು ದೀರ್ಘಕಾಲದವರೆಗೆ ನಾವು ವಿಸ್ತರಣೆ ಮಾಡಬಹುದು. ಹೂಡಿಕೆದಾರರಿಗೆ ಎಷ್ಟು ಸಾಧ್ಯವೋ ಅಷ್ಟು ಮೊತ್ತವನ್ನು ಡೆಪಾಸಿಟ್ ಮಾಡಬಹುದಾಗಿದೆ.
ಅಗತ್ಯ ದಾಖಲೆಗಳು: ಆಧಾರ್, ಪ್ಯಾನ್, ಡೈವಿಂಗ್ ಲೈಸೆನ್ಸ್, ಇತರೆ ಗುರುತಿನ ಪುರಾವೆಗಳನ್ನು ನೀಡಬೇಕಾಗುತ್ತದೆ. ಹಾಗೆಯೇ ವಿಳಾಸ ಪುರಾವೆಯಾಗಿ ಟೆಲಿಫೋನ್/ ಎಲೆಕ್ಟ್ರಿಸಿಟಿ ಬಿಲ್, ರೇಷನ್ ಕಾರ್ಡ್, ಚೆಕ್ ಜೊತೆಗೆ ಬ್ಯಾಂಕ್ ಸ್ಟೇಟ್‌ಮೆಂಟ್ ನೀಡಬೇಕಾಗುತ್ತದೆ.
ಇತರೆ ತೆರಿಗೆ ಉಳಿತಾಯ ಯೋಜನೆಗಳೊಂದಿಗೆ ಹೋಲಿಕೆ
ಎಫ್‌ಡಿ ಮಾತ್ರವಲ್ಲದೇ ಹಲವಾರು ತೆರಿಗೆ ಉಳಿತಾಯ ಮಾಡು ಹೂಡಿಕೆ ಯೋಜನೆ, ವಿಧಾನಗಳು ಇದೆ. ಇಎಲ್‌ಎಸ್‌ಎಸ್ ತೆರಿಗೆ ಉಳಿತಾಯ ಮ್ಯೂಚುವಲ್ ಫಂಡ್, ಪಿಪಿಎಫ್, ಎನ್‌ಎಸ್‌ಸಿ ಈ ತೆರಿಗೆ ಉಳಿತಾಯ ಯೋಜನೆಯಾಗಿದೆ. ಫಿಕ್ಸಿಡ್ ಡೆಪಾಸಿಟ್‌ಗಳನ್ನು ಲಭ್ಯವಿರುವ ಸುರಕ್ಷಿತ ಉಳಿತಾಯ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ಫಿಕ್ಸಿಡ್ ಡೆಪಾಸಿಟ್ ಒಂದು ಸುರಕ್ಷಿತ ಹೂಡಿಕೆಯಾಗಿದೆ.


Click it and Unblock the Notifications