For Quick Alerts
ALLOW NOTIFICATIONS  
For Daily Alerts

ನಿರಂತರ ಕುಸಿಯುತ್ತಿರುವ 15 ಷೇರುಗಳು: ನೀವು ಖರೀದಿಸಬಹುದೇ?

|

ಭಾರತೀಯ ಷೇರುಗಳು ಸತತವಾಗಿ ಆರು ದಿನಗಳಿಂದ ಕುಸಿತವನ್ನು ಕಾಣುತ್ತಿದೆ. ಪ್ರಮುಖವಾಗಿ ಹದಿನೈದು ಸೆನ್ಸೆಕ್ಸ್ ಕಂಪನಿಗಳು ನಿರಂತರವಾಗಿ ಕೆಳಕ್ಕೆ ಕುಸಿಯುತ್ತಿದೆ. ಈ ನಡುವೆ ನಾವು ಈ ಷೇರುಗಳನ್ನು ಖರೀದಿ ಮಾಡಬಹುದೇ ಎಂಬುವುದು ಪ್ರಶ್ನೆಯಾಗಿದೆ.

ಷೇರುಗಳು ಭಾರೀ ನೆಲಕಚ್ಚಿದೆ. ಬ್ಯಾಂಕಿಂಗ್, ಲೋಹ ಮತ್ತು ಹಣಕಾಸು ಕ್ಷೇತ್ರದ ಷೇರುಗಳು ದೊಡ್ಡ ನಷ್ಟವನ್ನು ಅನುಭವಿಸಿದೆ. ಹೂಡಿಕೆದಾರರು ನಿರಂತರವಾಗಿ ಹೆಚ್ಚಿನ ಹಣದುಬ್ಬರ ಮತ್ತು ಕೇಂದ್ರೀಯ ಬ್ಯಾಂಕುಗಳ ನೀತಿಯ ಪರಿಣಾಮದಿಂದಾಗಿ ಆತಂಕದಲ್ಲಿದ್ದು ಷೇರು ಪೇಟೆಯು ನಿರಂತರ ಕುಸಿತ ಕಾಣುತ್ತಿದೆ.

Closing Bell: ಆರನೇ ದಿನವೂ ನಷ್ಟದಲ್ಲಿ ಸೆನ್ಸೆಕ್ಸ್, ನಿಫ್ಟಿClosing Bell: ಆರನೇ ದಿನವೂ ನಷ್ಟದಲ್ಲಿ ಸೆನ್ಸೆಕ್ಸ್, ನಿಫ್ಟಿ

ಕೊನೆಯ ವಹಿವಾಟಿನಲ್ಲಿ ಪ್ರಮುಖವಾಗಿ ಹಿಂಡಾಲ್ಕೊ ಭಾರೀ ನಷ್ಟವನ್ನು ಕಂಡಿದೆ. ಷೇರುಗಳು ಶೇಕಡಾ 4.84 ರಿಂದ 386.20 ಕ್ಕೆ ತಲುಪಿದೆ. ಎಸ್‌ಬಿಐ, ಜೆಎಸ್‌ಡಬ್ಲ್ಯು ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಕೂಡ ನಷ್ಟ ಅನುಭವಿಸಿವೆ. ಬಿಎಸ್‌ಇಯಲ್ಲಿ 2,159 ಷೇರುಗಳು ಏರಿಕೆ ಕಂಡು, 1,178 ಕುಸಿತ ಕಂಡಿದ್ದರಿಂದ ಒಟ್ಟಾರೆ ಮಾರುಕಟ್ಟೆ ಉತ್ತಮವಾಗಿತ್ತು.

ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಮಾರುತಿ, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ವಿಪ್ರೋ, ಎಚ್‌ಡಿಎಫ್‌ಸಿ ಟ್ವಿನ್ಸ್ (ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್) ಮತ್ತು ಟೆಕ್ ಮಹೀಂದ್ರಾ ಭಾರೀ ಕುಸಿತ ಕಂಡಿದೆ. ಹಾಗಾದರೆ ಯಾವೆಲ್ಲಾ ಪ್ರಮುಖ 15 ಷೇರುಗಳು ಕುಸಿತ ಕಾಣುತ್ತಿದೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ....

 ನಷ್ಟ ಕಂಡ 15 ಸೆನ್ಸೆಕ್ಸ್ ಕಂಪನಿಗಳು

ನಷ್ಟ ಕಂಡ 15 ಸೆನ್ಸೆಕ್ಸ್ ಕಂಪನಿಗಳು

15 ಸೆನ್ಸೆಕ್ಸ್ ಕಂಪನಿಗಳು 52 ವಾರಗಳ ಗರಿಷ್ಠ ಮಟ್ಟದಿಂದ 20 ರಿಂದ 35ರಷ್ಟು ನಷ್ಟವನ್ನು ಅನುಭವಿಸಿದೆ.

ಐಸಿಐಸಿಐ ಬ್ಯಾಂಕ್: ಪ್ರಸ್ತುತ ಬೆಲೆ 676, ನಷ್ಟ ಶೇಕಡ -22.03
ಆಕ್ಸಿಸ್ ಬ್ಯಾಂಕ್: ಪ್ರಸ್ತುತ ಬೆಲೆ 636, ನಷ್ಟ ಶೇಕಡ -26.56
ಮಾರುತಿ: ಪ್ರಸ್ತುತ ಬೆಲೆ 7125, ನಷ್ಟ ಶೇಕಡ -21.27
ಟಾಟಾ ಸ್ಟೀಲ್ಸ್: ಪ್ರಸ್ತುತ ಬೆಲೆ 1098, ನಷ್ಟ ಶೇಕಡ -28.88
ಬಜಾಜ್ ಫಿನ್‌ಸೆರ್ವ್: ಪ್ರಸ್ತುತ ಬೆಲೆ 12585, ನಷ್ಟ ಶೇಕಡ -34.88
ಬಜಾಜ್ ಫಿನಾನ್ಸ್: ಪ್ರಸ್ತುತ ಬೆಲೆ 5521, ನಷ್ಟ ಶೇಕಡ -31.42
ಎಚ್‌ಡಿಎಫ್‌ಸಿ: ಪ್ರಸ್ತುತ ಬೆಲೆ 2131, ನಷ್ಟ ಶೇಕಡ -29.46
ಎಚ್‌ಡಿಎಫ್‌ಸಿ ಬ್ಯಾಂಕ್: ಪ್ರಸ್ತುತ ಬೆಲೆ 1292, ನಷ್ಟ ಶೇಕಡ -25.05
ಇನ್ಫೋಸಿಸ್: ಪ್ರಸ್ತುತ ಬೆಲೆ 1501, ನಷ್ಟ ಶೇಕಡ -23.14
ಇಂಡಸ್‌ಇಂಡ್ ಬ್ಯಾಂಕ್: ಪ್ರಸ್ತುತ ಬೆಲೆ 841, ನಷ್ಟ ಶೇಕಡ -32.29
ಕೋಟಕ್ ಬ್ಯಾಂಕ್: ಪ್ರಸ್ತುತ ಬೆಲೆ 1777, ನಷ್ಟ ಶೇಕಡ -21
ಡಾ ರೆಡ್ಡೀಸ್: ಪ್ರಸ್ತುತ ಬೆಲೆ 3918, ನಷ್ಟ ಶೇಕಡ -30.21
ಎಚ್‌ಯುಎಲ್: ಪ್ರಸ್ತುತ ಬೆಲೆ 2189, ನಷ್ಟ ಶೇಕಡ -23.43
ಟೈಟಾನ್: ಪ್ರಸ್ತುತ ಬೆಲೆ 2096, ನಷ್ಟ ಶೇಕಡ -24
ಎಸ್‌ಬಿಐ: ಪ್ರಸ್ತುತ ಬೆಲೆ 440, ನಷ್ಟ ಶೇಕಡ -20

 

 ಬ್ಯಾಂಕಿಂಗ್, ಹಣಕಾಸು ಷೇರು ಖರೀದಿಸಬೇಕೆ?

ಬ್ಯಾಂಕಿಂಗ್, ಹಣಕಾಸು ಷೇರು ಖರೀದಿಸಬೇಕೆ?

ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್‌ಸರ್ವ್‌ನ ಷೇರುಗಳಲ್ಲಿ ಕೆಟ್ಟ ಕುಸಿತ ಕಂಡುಬಂದಿದೆ. ಎರಡು ಷೇರುಗಳು ದುಬಾರಿ ಎಂದು ನಾವು ಇನ್ನೂ ನಂಬುತ್ತೇವೆ. ಆದರೆ ಕುಸಿತ ಮಾತ್ರ ಅಲ್ಲಗಳೆಯುವಂತಿಲ್ಲ. ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್‌ಸರ್ವ್ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಾಗಿದೆ. ಆದರೆ ಹೂಡಿಕೆದಾರರು ಬೆಳವಣಿಗೆಗೆ ಯಾವುದೇ ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ. ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳನ್ನು ಖರೀದಿ ಮಾಡಲು ಮುಂದಾದರೆ ಅವರು ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಷೇರುಗಳನ್ನು ಖರೀದಿಸಬಹುದು. ಎರಡೂ ಷೇರುಗಳು ಗರಿಷ್ಠದಿಂದ ಶೇಕಡ 22 ರಿಂದ ಶೇಕಡ 25ರಷ್ಟು ಕುಸಿತ ಕಂಡಿದೆ. ಇನ್ನು ಎಚ್‌ಡಿಎಫ್‌ಸಿ ತೀವ್ರ ಕುಸಿತದ ನಂತರ ಖರೀದಿಗೆ ಅಗ್ಗವಾಗಿದೆ.

 ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಷೇರುಗಳನ್ನು ಖರೀದಿಸಿ

ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಷೇರುಗಳನ್ನು ಖರೀದಿಸಿ

ಟಾಟಾ ಸ್ಟೀಲ್ ನಿಸ್ಸಂಶಯವಾಗಿ ಖರೀದಿಸಲು ಒಂದು ಉತ್ತಮ ಸ್ಟಾಕ್ ಆಗಿದೆ. ಏಕೆಂದರೆ ಕಂಪನಿಯ ಗಳಿಕೆಯ ಅನುಪಾತವು 4 ಪಟ್ಟು ಹೆಚ್ಚಾಗಿದೆ ಮತ್ತು ನೀವು ಈಗ ಷೇರುಗಳನ್ನು ಖರೀದಿಸಿದರೆ ಪ್ರತಿ ಷೇರಿಗೆ ರೂ 51 ಲಾಭಾಂಶವಿದೆ. ಷೇರಿನ ಬೆಲೆಯಲ್ಲಿ ಸುಮಾರು ಶೇಕಡ 29ರಷ್ಟು ಕುಸಿತವು ಷೇರುಗಳನ್ನು ಖರೀದಿಸಲು ಆಕರ್ಷಕವಾಗಿಸುತ್ತದೆ. ಕಂಪನಿಯು ಸ್ಟಾಕ್ ವಿಭಜನೆಯನ್ನು ನಿರ್ಧರಿಸಿದೆ, ಇದು ಷೇರುಗಳನ್ನು ಕೈಗೆಟುಕುವಂತೆ ಮಾಡುತ್ತದೆ. ಇನ್ನು ನಾವು ಬೆಳವಣಿಗೆಯ ದರವನ್ನು ನೋಡುವಾಗ ಇನ್ಫೋಸಿಸ್ ಕೂಡ ಆಯ್ಕೆ ಮಾಡಲು ಉತ್ತಮ ಸ್ಟಾಕ್ ಆಗಿದೆ.

 ಸಣ್ಣ ಪ್ರಮಾಣದಲ್ಲಿ ಖರೀದಿಸಿ

ಸಣ್ಣ ಪ್ರಮಾಣದಲ್ಲಿ ಖರೀದಿಸಿ

ಷೇರು ಮಾರುಕಟ್ಟೆ ಅಸ್ಥಿರವಾಗಿರುವಾಗ ಹೂಡಿಕೆ ಮತ್ತಷ್ಟು ಅಪಾಯಕಾರಿ ಹೌದು. ಆದರೆ ಈಗ ಕೆಲವು ಷೇರುಗಳು ಲಾಭದಾಯಕವಾಗಿದೆ. ಹೂಡಿಕೆದಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡುವುದು ಉತ್ತಮ ನಿರ್ಧಾರವಾಗಿದೆ. ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿಸುವ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೆಜ್ಜೆ ಇರಿಸಬಹುದು. ಉದಾಹರಣೆಗೆ, ನಾವು ಡಾ ರೆಡ್ಡೀಸ್ ಸ್ಟಾಕ್ ಅನ್ನು ಇಷ್ಟಪಡುತ್ತೇವೆ, ಆದರೆ, ಯುಎಸ್‌ ಫೆಡ್ ಎಚ್ಚರಿಕೆಗಳು ಯಾವಾಗ ಬರುತ್ತವೆ ಎಂಬುದು ನಮಗೆ ತಿಳಿದಿಲ್ಲ.

English summary

These Sensex companies that have lost 20 to 35% from 52-week highs

These Sensex companies that have lost 20 to 35% from 52-week highs; Should you buy these stocks. Know more.
Story first published: Saturday, May 14, 2022, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X