ಬೆಂಗಳೂರು ಮತ್ತು ಹುಬ್ಬಳ್ಳಿಯ ಜನರಿಗೆ ಇಲ್ಲೊಂದು ಪ್ರಮುಖ ಅಪ್‌ಡೇಟ್ ಇದೆ. ಈ ನಗರದಲ್ಲಿರುವ ಜನರು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ರೈಲಿನಲ್ಲಿ ಸಂಚಾರ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರೆ ಮೊದಲು ಈ ಸುದ್ದಿಯನ್ನು ಓದಲೇಬೇಕು.
ಹೌದು ಬೆಂಗಳೂರು-ಹುಬ್ಬಳ್ಳಿ ಮಧ್ಯೆ ನೈಋತ್ಯ ರೈಲ್ವೆಯು ಎರಡು ದಿನಗಳ ಕಾಲ ರೈಲುಗಳನ್ನು ರದ್ದು ಮಾಡಿದೆ. ಈ ಎರಡು ದಿನಗಳ ಕಾಲ ಪ್ರಮುಖವಾಗಿ ಎರಡು ರೈಲುಗಳನ್ನು ತಾತ್ಕಾಲಿಕವಾಗಿ ನೈಋತ್ಯ ರೈಲ್ವೆಯು ರದ್ದು ಮಾಡಿದೆ. ಹಾಗಾದರೆ ಯಾವೆಲ್ಲ ದಿನ ರೈಲು ರದ್ದು, ಯಾವೆಲ್ಲ ರೈಲುಗಳು ರದ್ದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಯಾವೆಲ್ಲ ದಿನ, ಯಾವೆಲ್ಲ ರೈಲುಗಳು ರದ್ದು?
ಬೆಂಗಳೂರು-ಹುಬ್ಬಳ್ಳಿ ಮಧ್ಯೆ ನವೆಂಬರ್ 20 ಮತ್ತು 21 ರಂದು ಪ್ರಯಾಣಿಸುವ ಎರಡು ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಅಂದರೆ ಇಂದು ಮತ್ತು ನಾಳೆ ಎರಡು ದಿನ ನಿರ್ದಿಷ್ಟವಾಗಿ ಎರಡು ರೈಲುಗಳು ರದ್ದಾಗಿರುತ್ತದೆ. ರೈಲು ಸಂಖ್ಯೆ 07340 ಮತ್ತು ರೈಲು ಸಂಖ್ಯೆ 07339 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ರದ್ದು ಮಾಡಲಾಗಿದೆ.
ಯಾವ ಕಾರಣಕ್ಕೆ ರೈಲು ರದ್ದಾಗಿದೆ?
ಸಾಮಾನ್ಯವಾಗಿ ಯಾವುದೇ ದುರಸ್ತಿ ಕಾರ್ಯಗಳು ಇದ್ದರೆ ರೈಲುಗಳನ್ನು ರದ್ದು ಮಾಡಲಾಗುತ್ತದೆ. ಜೊತೆಗೆ ರೈಲು ಬುಕ್ ಮಾಡಿದವರ ಸಂಖ್ಯೆಯು ತೀರಾ ಕಡಿಮೆಯಾಗಿದ್ದರೂ ಕೂಡಾ ಪ್ರಯಾಣವನ್ನು ರದ್ದು ಮಾಡಲಾಗುತ್ತದೆ. ಈ ಕಾರಣವನ್ನೇ (poor occupancy) ರೈಲ್ವೆಯು ನೀಡಿದ್ದು, ಮುಂದಿನ ಸುತ್ತೋಲೆ ಹೊರಡಿಸುವವರೆಗು ರೈಲುಗಳು ರದ್ದಾಗಿರುತ್ತದೆ.
ಈ ರೈಲುಗಳು ಭಾಗಶಃ ರದ್ದು
ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ರೈಲು ನವೆಂಬರ್ 21 ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 17303 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಎಕ್ಸ್‌ಪ್ರೆಸ್ ರೈಲು ನವೆಂಬರ್ 21 ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
ಇನ್ನು ನವೆಂಬರ್ 21 ರಿಂದ 30 ರವರೆಗೆ ರೈಲು ಸಂಖ್ಯೆ 07381 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಪ್ಯಾಸೆಂಜರ್ ಸ್ಪೆಷಲ್ ರೈಲು ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗುತ್ತದೆ.
ಮಾರ್ಗ ಬದಲಾವಣೆ
ನವೆಂಬರ್ 22 ರಿಂದ ಡಿಸೆಂಬರ್ 1 ರವರೆಗೆ ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ಕಾರಟಗಿ ನಿಲ್ದಾಣದಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ. ನವೆಂಬರ್ 22 ರಿಂದ ಡಿಸೆಂಬರ್ 1 ರವರೆಗೆ ರೈಲು ಸಂಖ್ಯೆ 17304 ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಕಾರಟಗಿ ನಿಲ್ದಾಣದಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ. ಇನ್ನು ನವೆಂಬರ್ 21 ರಿಂದ 30 ರವರೆಗೆ ರೈಲು ಸಂಖ್ಯೆ 07382 ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ಕಾರಟಗಿ ನಿಲ್ದಾಣದಿಂದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ.
ಇತ್ತೀಚೆಗೆ ರದ್ದಾದ ರೈಲುಗಳಿವು
ಈ ಹಿಂದೆ ರೈಲು ಸಂಖ್ಯೆ 06246, 06245 ಹೊಸಪೇಟೆ-ಹರಿಹರ ಪ್ಯಾಸೆಂಜರ್ ರೈಲುಗಳನ್ನು ನವೆಂಬರ್ 17,18,19 ರದ್ದು ಮಾಡಲಾಗಿತ್ತು. ಆದರೆ ಈಗ ಮತ್ತೆ ಆರಂಭವಾಗಿದೆ. ಇನ್ನು ರೈಲು ಸಂಖ್ಯೆ 06521 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಾರ್ಮರ್ ವಿಶೇಷ ಎಕ್ಸ್‌ಪ್ರೆಸ್, ನವೆಂಬರ್ 21 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಸಂಜೆ 4.30 ಕ್ಕೆ ಹೊರಡಲಿದೆ. ನವೆಂಬರ್ 23 ರಂದು ಮಧ್ಯಾಹ್ನ 1.45 ಕ್ಕೆ ಬಾರ್ಮರ್ ತಲುಪುತ್ತದೆ.
ರೈಲು ಸಂಖ್ಯೆ 06522 ಬಾರ್ಮರ್-ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 24 ರಂದು ಬೆಳಿಗ್ಗೆ 3.45 ಕ್ಕೆ ಬಾರ್ಮರ್‌ನಿಂದ ಹೊರಟು, ನವೆಂಬರ್ 25 ರಂದು ಬೆಳಿಗ್ಗೆ 11.30 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ.
ಈ ರೈಲುಗಳು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ವಾಪಿ, ಸೂರತ್, ವಡೋದರಾ, ಅಹಮದಾಬಾದ್, ಮಹೇಶನ, ಪಟಾನ್, ಭಿಲ್ದಿ, ಧನೇರಾ, ರಾಣಿವಾರ, ಮರ್ವಾರ್ ಭಿನ್‌ಮಾಲ್, ಮೋದ್ರನ್, ಜಲೋರ್, ಮೊಕಲ್ಸರ್, ಸಂಧಾರಿ, ಬಲೋತ್ರಾ ಮತ್ತು ಬೈತು ಮಾರ್ಗವಾಗಿ ಪ್ರಯಾಣ ಮಾಡಲಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications