For Quick Alerts
ALLOW NOTIFICATIONS  
For Daily Alerts

ಉಕ್ರೇನ್‌-ರಷ್ಯಾ ಯುದ್ಧ: ಮುಂದಿನ ಹಣಕಾಸು ವರ್ಷದವರೆಗೆ ವಿಳಂಬವಾಗುತ್ತಾ ಎಲ್‌ಐಸಿ ಐಪಿಒ?

|

ಸರ್ಕಾರಿ ವಿಮಾ ದೈತ್ಯ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಯ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಮುಂದಿನ ಹಣಕಾಸು ವರ್ಷದಲ್ಲಿ ಮಾಡುವ ಸಾಧ್ಯತೆ ಇದೆ. ರಷ್ಯಾ ಹಾಗೂ ಉಕ್ರೇನ್‌ ಬಿಕ್ಕಟ್ಟಿನ ಕಾರಣದಿಂದಾಗಿ ಎಲ್‌ಐಸಿ ಐಪಿಒ ಸಮಯವನ್ನು ಮರು ಮೌಲ್ಯಮಾಪನ ಮಾಡಲು ಸರ್ಕಾರವು ಸಭೆಯನ್ನು ನಡೆಸುವ ಸಾಧ್ಯತೆಯಿದೆ.

ಎಲ್ಐಸಿ ಪಟ್ಟಿಯ ಮರುಮೌಲ್ಯಮಾಪನಕ್ಕಾಗಿ ಸಭೆಯು "ಈ ವಾರ" ನಡೆಯಲಿದೆ ಎಂದು ಗೌಪ್ಯ ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ವಾಹಿನಿಗೆ ತಿಳಿಸಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯದ ಬಗ್ಗೆ ಸರ್ಕಾರದ ನಿಲುವನ್ನು ಈಗಾಗಲೇ ತಿಳಿಸಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ ನಡುವೆ ಎಲ್‌ಐಸಿ ಐಪಿಒ ವಿಳಂಬ ಆಗುವ ಸಾಧ್ಯತೆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸುಳಿವು ನೀಡಿದ್ದಾರೆ. ಆದರೆ ಈ ವಿಳಂಬವು ಸರಿಸುಮಾರು ಮುಂದಿನ ಹಣಕಾಸು ವರ್ಷದವರೆಗೆ ಆಗಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

ರಷ್ಯಾ-ಉಕ್ರೇನ್‌ ಯುದ್ಧದ ನಡುವೆ ಎಲ್‌ಐಸಿ ಐಪಿಒ ವಿಳಂಬವಾಗುತ್ತಾ?ರಷ್ಯಾ-ಉಕ್ರೇನ್‌ ಯುದ್ಧದ ನಡುವೆ ಎಲ್‌ಐಸಿ ಐಪಿಒ ವಿಳಂಬವಾಗುತ್ತಾ?

ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ ಆರಂಭಿಕ ಷೇರು ಮಾರಾಟದ (ಐಪಿಒ) ಸಮಯವನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಬೇಕಾಗಬಹುದು ಎಂದು ಹೇಳಿದ್ದಾರೆ.

 ಮುಂದಿನ ಹಣಕಾಸು ವರ್ಷದವರೆಗೆ ವಿಳಂಬವಾಗುತ್ತಾ ಎಲ್‌ಐಸಿ ಐಪಿಒ?

"ತಾತ್ವಿಕವಾಗಿ, ನಾನು ಈ ಹಿಂದಿನ ದಿನಾಂಕದಂದೇ ಎಲ್‌ಐಸಿ ಐಪಿಒ ನಡೆಸಲು ಬಯಸುತ್ತೇನೆ. ಏಕೆಂದರೆ ನಾವು ಅದನ್ನು ಸಂಪೂರ್ಣವಾಗಿ ಭಾರತೀಯ ಪರಿಗಣನೆಗಳ ಆಧಾರದ ಮೇಲೆ ಸ್ವಲ್ಪ ಸಮಯದವರೆಗೆ ಯೋಜಿಸಿದ್ದೇವೆ," ಎಂದು ಬಿಸಿನೆಸ್ ಲೈನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಆದರೆ ಜಾಗತಿಕ ಪರಿಗಣನೆಗಳನ್ನು ಕೂಡಾ ನಾವು ನೋಡಬೇಕಾಗಿದೆ ಎಂದು ತಿಳಿಸಿದರು.

ಎಷ್ಟು ವಿಳಂಬವಾಗಬಹುದು ಎಲ್‌ಐಸಿ ಐಪಿಒ

ಎಲ್‌ಐಸಿ ಐಪಿಒ ಬಿಡುಗಡೆಯ ಪರಿಶೀಲನೆಯು ಭಾರತದ ಅತಿದೊಡ್ಡ ಮೆಗಾ ಸಾರ್ವಜನಿಕ ಕೊಡುಗೆಯ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ. ಮುಂದಿನ ಹಣಕಾಸು ವರ್ಷದವರೆಗೆ ಎಲ್‌ಐಸಿ ಐಪಿಒ ನಡೆಯದೆ ಇರುವ ಸಾಧ್ಯತೆ ಇದೆ. ಪ್ರಮುಖವಾಗಿ ಎಲ್‌ಐಸಿ ಐಪಿಒ ಬಿಡುಗಡೆಗೆ ಕೇಂದ್ರವು ಈ ಹಿಂದೆ ಮಾರ್ಚ್ ಅನ್ನು ಗಡುವು ಎಂದು ನಿಗದಿಪಡಿಸಿತ್ತು. ಅದರ ಐಪಿಒ ದಾಖಲೆಯನ್ನು ಫೆಬ್ರವರಿ 13 ರಂದು ಸಲ್ಲಿಸಲಾಗಿದೆ.

"ಖಾಸಗಿ ವಲಯದ ಪ್ರವರ್ತಕರು ಈ ಕರೆಯನ್ನು ತೆಗೆದುಕೊಂಡಾಗ, ಅವರು ಇದನ್ನು ಕಂಪನಿಯ ಮಂಡಳಿಗೆ ಮಾತ್ರ ವಿವರಿಸಬೇಕು. ಆದರೆ ನಾನು ಅದನ್ನು ಇಡೀ ಜಗತ್ತಿಗೆ ವಿವರಿಸಬೇಕಾಗಿದೆ," ಎಂದು ಹೇಳಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಎಲ್‌ಐಸಿ ಐಪಿಒ ದಿನಾಂಕ ಪರಿಷ್ಕರಣೆಯ ಬಗ್ಗೆ ಹೇಳಿದ್ದಾರೆ.

ಭಾರತದ ಸರ್ಕಾರಿ ಸ್ವಾಮ್ಯದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC)ಯಿಂದ ಷೇರುಗಳ ಸಾರ್ವಜನಿಕ ಕೊಡುಗೆ(IPO)ಯನ್ನು ಮಾರ್ಚ್ 11ರಂದು ಹೂಡಿಕೆದಾರರಿಗೆ ತೆರೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ ಈಗ ಇನ್ನೂ ತಡವಾಗುವ ಸಾಧ್ಯತೆ ಇದೆ. ದೇಶದಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಅಂದರೆ 8 ಬಿಲಿಯನ್ ಡಾಲರ್ ಮೌಲ್ಯದ ಐಪಿಓ ಅನ್ನು ಹೂಡಿಕೆದಾರರಿಗೆ ನೀಡಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ದೇಶದ ಅತಿದೊಡ್ಡ ಐಪಿಒಗಾಗಿ ವೇದಿಕೆಯನ್ನು ಸಿದ್ಧಪಡಿಸಿದ ಜೀವ ವಿಮಾ ನಿಗಮವು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಅಂದಾಜು 63,000 ಕೋಟಿಗೆ ಸರ್ಕಾರದಿಂದ ಶೇಕಡಾ 5 ರಷ್ಟು ಪಾಲನ್ನು ಮಾರಾಟ ಮಾಡಲು ಕರಡು ಪತ್ರಗಳನ್ನು ಸಲ್ಲಿಸಿದೆ. 31.6 ಕೋಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಥವಾ 5 ಪ್ರತಿಶತ ಸರ್ಕಾರಿ ಪಾಲು ಐಪಿಒ ಆಗಿ ಹೊರಹೊಮ್ಮಲಿದೆ. (ಒನ್‌ಇಂಡಿಯಾ ಸುದ್ದಿ)

English summary

Ukraine-Russia War May Delay LIC IPO to Next FY

Ukraine-Russia War may delay LIC IPO to next FY, likely reassessment of March listing this week.
Story first published: Thursday, March 3, 2022, 12:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X