ಬಜೆಟ್ 2022: ಗೃಹ ಸಾಲಗಳ ಮೇಲಿನ ತೆರಿಗೆ ಕಡಿತ ಹೆಚ್ಚಳ ನಿರೀಕ್ಷೆ
ಪ್ರಸ್ತುತ, ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಇದು 2030 ರ ವೇಳೆಗೆ ಶೇಕಡಾ 50 ಕ್ಕೆ ಏರುತ್ತದೆ ಎಂದು ಅಂದಾಜಿಸಲಾಗಿದೆ. ಜನರು ಹೆಚ್ಚಾಗಿ ನಗರದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಅಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. 66 ಪ್ರತಿಶತ ಯುವ ಜನಸಂಖ್ಯೆಯು, 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಗೃಹ ಸಾಲಗಳನ್ನು ಪಡೆಯುತ್ತಿದ್ದಾರೆ. ಮುಂದಿನ ಕೇಂದ್ರ ಬಜೆಟ್‌ನಲ್ಲಿ ಗೃಹ ಸಾಲಗಾರರು ಕೆಲವು ನಿರೀಕ್ಷೆಗಳನ್ನು ಹೊಂದಿದ್ದಾರೆ. ಗೃಹ ಸಾಲದ ಮೇಲಿನ ತೆರಿಗೆ ಕಡಿತ ಹೆಚ್ಚಳ ಮಾಡುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಗೃಹ ಸಾಲವನ್ನು ಹೆಚ್ಚಾಗಿ 26-35 ವರ್ಷ ವಯಸ್ಸಿನ ಯುವಕರು ಪಡೆದುಕೊಂಡಿದ್ದಾರೆ. ಸುಮಾರು 25 ಪ್ರತಿಶತದಷ್ಟು 26-35 ವರ್ಷ ವಯಸ್ಸಿನವರು ಗೃಹ ಸಾಲವನ್ನು ಪಡೆದುಕೊಂಡಿದ್ದಾರೆ. 36-45 ವರ್ಷ ವಯಸ್ಸಿನ ಸುಮಾರು 28 ಪ್ರತಿಶತ ಜನರು ಗೃಹ ಸಾಲವನ್ನು ಪಡೆದುಕೊಂಡಿದ್ದಾರೆ. ಈ ವಯೋಮಾನದವರು ಶೇಕಡ 53ರಷ್ಟು ಗೃಹ ಸಾಲವನ್ನು ಪಡೆದುಕೊಂಡಿದ್ದಾರೆ.
ಜ.23: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು?
ಈ ನಡುವೆ ಗೃಹ ಸಾಲವು ಶೀಘ್ರವಾಗಿ ಏರಿಕೆ ಕಾಣುತ್ತಿದೆ. ನಗರದತ್ತ ಸಾಗುತ್ತಿರುವ ಜನರು ಗೃಹ ಸಾಲವನ್ನು ಪಡೆದು ನಗರದಲ್ಲಿಯೇ ಮನೆ ಖರೀದಿಸಿ ಅಥವಾ ನಿರ್ಮಾಣ ಮಾಡಿ ವಾಸಿಸುತ್ತಿದ್ದಾರೆ. ಈ ಯುವ ಸಾಲಗಾರರು ಗೃಹ ಸಾಲ ಮಾರುಕಟ್ಟೆಯಲ್ಲಿ ಬದಲಾವಣೆಗೆ ಕಾರಣರಾಗಿದ್ದಾರೆ.
ಜನವರಿ 22 ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಎಷ್ಟು ಮೌಲ್ಯದ ಗೃಹ ಸಾಲ ಹೆಚ್ಚಳ
ಕಳೆದ 4-5 ವರ್ಷಗಳಲ್ಲಿ ರೂ 15-35 ಲಕ್ಷದ ಗೃಹ-ಸಾಲಗಳಲ್ಲಿ ಬೆಳವಣಿಗೆಯು ಕಂಡು ಬಂದಿದೆ. ಕಳೆದ 5 ವರ್ಷಗಳಿಂದಲೂ ಮಧ್ಯಮ ಶ್ರೇಣಿಯ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ವಸತಿ ಬೇಡಿಕೆ ಹೆಚ್ಚುತ್ತಲೇ ಇದೆ. . ಕಳೆದ 5 ವರ್ಷಗಳಲ್ಲಿ 35-75 ಲಕ್ಷ ರೂ.ಗಳ ಸಾಲವು ಶೇಕಡ 4 ರಷ್ಟು ಹೆಚ್ಚಾಗಿದೆ. ಕಳೆದ 5 ವರ್ಷಗಳಲ್ಲಿ 75 ಲಕ್ಷ ರೂ ಸಾಲದ ಪ್ರಮಾಣವು ಶೇಕಡ ಶೇಕಡಾ 0.37 ರಿಂದ ಶೇಕಡಾ 0.87 ಕ್ಕೆ ಹೆಚ್ಚಾಗಿದೆ. ಕಳೆದ 5 ವರ್ಷಗಳಲ್ಲಿ ರೂ 15 ಲಕ್ಷದ ಸಾಲವು ಕಡಿಮೆ ಆಗಿದೆ. ಇನ್ನು ಎರಡು ಲಕ್ಷ ರೂಪಾಯಿ ಸಾಲವು ಕೂಡಾ ಕಡಿಮೆ ಆಗುತ್ತಿದೆ.

ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಳ
ಜನರಲ್ಲಿ ಉಳಿತಾಯ ಆದಾಯ ಕಡಿತ ಆದ ಕಾರಣ ಮನೆ-ಸಾಲವನ್ನು ತೆಗೆದುಕೊಂಡು ರಿಯಲ್ ಎಸ್ಟೇಟ್ ಅನ್ನು ಖರೀದಿಸುವ ಜನರು ಅಧಿಕವಾಗಲು ಕಾರಣವಾಗಿದೆ. ರಿಯಲ್ ಎಸ್ಟೇಟ್‌ನ ಮೌಲ್ಯ ಹೆಚ್ಚಳವಾದ ಕಾರಣ ಸಂಬಳ ಪಡೆಯುವ ವರ್ಗವು ಹಣಕಾಸು ಸಂಸ್ಥೆಗಳಿಂದ ಗೃಹ-ಸಾಲಗಳನ್ನು ಪಡೆಯಲು ಬೇರೆ ಆಯ್ಕೆಯಿಲ್ಲ. ತೂಹಲಕಾರಿಯಾಗಿ, ಗೃಹ ಸಾಲದ ಮರುಪಾವತಿಯ ಅವಧಿಯು 11-30 ವರ್ಷಗಳ ನಡುವೆ ಏರಿಳಿತಗೊಳ್ಳುತ್ತದೆ.

ಇಎಂಐಗಳಲ್ಲಿ ಸಿಲುಕುವ ಸಾಲಗಾರರು
ಗೃಹ ಸಾಲಗಳು ಮತ್ತು ಇಎಂಐಗಳ ನಡುವೆ ಈ ಗೃಹ ಸಾಲ ಪಡೆದ ಜನರು ಸಿಲುಕುವಂತೆ ಆಗಿದೆ. ಹಣಕಾಸು ಸಂಸ್ಥೆಗಳು ಮೊದಲು ಮೊದಲು ಇಎಂಐ ಬಗ್ಗೆ ಆಕರ್ಷಕ ಜಾಹೀರಾತುಗಳನ್ನು ನೀಡುತ್ತದೆ. ಆದರೆ ಬಳಿಕ ಇಎಂಐ ಪಾವತಿ ಮಾಡುವುದೇ ಸಾಲಗಾರರಿಗೆ ಸಂಕಷ್ಟದ ವಿಚಾರವಾಗಿದೆ. ಇಎಂಐ ಪೂರ್ಣಗೊಳ್ಳುತ್ತಿದ್ದಂತೆ, ಬಡ್ಡಿಯೂ ಕೂಡಾ ಅಧಿಕವಾಗುತ್ತದೆ. ಖರೀದಿದಾರರು ಗೃಹ ಸಾಲದ ಪೂರ್ವ-ಪಾವತಿಯ ಅವಕಾಶವನ್ನು ಹೊಂದಿದ್ದರೂ ಸಹ, ಅಸಲಿಗಿಂತ ಅಧಿಕ ಬಡ್ಡಿಯನ್ನೇ ಪಾವತಿ ಮಾಡಬೇಕಾಗುತ್ತದೆ. ಇದಲ್ಲದೆ, ಹಣಕಾಸು ಸಂಸ್ಥೆಗಳು ಸಾಲಗಳನ್ನು ಶೀಘ್ರ ಕ್ಲೋಸ್ ಮಾಡಲುಭಾರೀ ಶುಲ್ಕವನ್ನು ವಿಧಿಸುತ್ತವೆ.

ಗೃಹ ಸಾಲಗಳ ಮೇಲಿನ ತೆರಿಗೆ ಕಡಿತ ಹೆಚ್ಚಳ ನಿರೀಕ್ಷೆ
ಕೇಂದ್ರ ಬಜೆಟ್‌ನಲ್ಲಿ ಗೃಹ ಸಾಲಗಳ ಮೇಲಿನ ತೆರಿಗೆ ಕಡಿತ ಹೆಚ್ಚಳ ನಿರೀಕ್ಷೆಯನ್ನು ಗೃಹ ಸಾಲಗಾರರು ಹೊಂದಿದ್ದಾರೆ. ಹೋಮ್-ಲೋನ್‌ನಲ್ಲಿ ಅಸಲು ಮೊತ್ತದ ಮರುಪಾವತಿಯು ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿದೆ. ಇದು ವಾರ್ಷಿಕ ರೂ 1.50 ಲಕ್ಷದ ಗರಿಷ್ಠ ಮಿತಿಯನ್ನು ಹೊಂದಿದೆ. ಅದೇ ವಿಭಾಗ - 80C, PF, PPF ಮತ್ತು ಜೀವ ವಿಮಾ ಪಾಲಿಸಿಗಳು ಸೇರಿದಂತೆ ಹಲವಾರು ಇತರ ಹೂಡಿಕೆಗಳನ್ನು ಖಾತೆಗೆ ಒಳಪಡಿಸುವುದರಿಂದ, ಖರೀದಿದಾರರಿಗೆ ಈ ವಿಭಾಗದಿಂದ ಯಾವುದೇ ಪ್ರಯೋಜನವನ್ನು ಪಡೆಯಲು ಅಸಾಧ್ಯವಾಗುತ್ತದೆ. ಕಳೆದ ಹಲವು ವರ್ಷಗಳಿಂದ ಈ ಮಿತಿಯನ್ನು ಹೆಚ್ಚಿಸದ ಕಾರಣ ಖರೀದಿದಾರರು ಕೇಂದ್ರ ಬಜೆಟ್-2022 ರಲ್ಲಿ ಈ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.